Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಸ್ಪೂರ್ತಿ ಸೆಲೆ ತುಂಬುವ ವಿವೇಕಾನಂದರ ಮಾತುಗಳಿವು
ಸ್ವಾಮಿ ವಿವೇಕಾನಂದರ ಬಗ್ಗೆ ಭಾರತದ ಪ್ರತಿಯೊಬ್ಬ ನಾಗರೀಕನೂ ತಿಳಿದುಕೊಳ್ಳಲೇಬೇಕು. ಭಾರತದ ಆಧ್ಯಾತ್ಮಿಕ ಪಿತಾಮಹ ಸ್ವಾಮಿ ವಿವೇಕಾನಂದರು ಎಂದರೆ ತಪ್ಪಾಗಲಾರದು. ಅವರು ಭಾರತದ ಯುವ ಜನಾಂಗಕ್ಕೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಇಂದು ಅವರನ್ನು ನೆನಪಿಸಿಕೊಳ್ಳುವ ಕರ್ತವ್ಯ ಎಲ್ಲಾ ಭಾರತೀಯರದ್ದಾಗಿದೆ.
ಈ ದಿನ ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನದ ಜಯಂತ್ಯೋತ್ಸವವನ್ನು ದೇಶದಾದ್ಯಂತ ವಿನಮ್ರಪೂರ್ವಕವಾಗಿ ಆಚರಿಸಲಾಗುತ್ತಿದೆ.

ಅವರ ಉಪದೇಶಗಳು ಭಾರತೀಯರನ್ನು ಮೈಮನ ನವಿರೇಳಿಸುವಂತೆ ಮಾಡಿ ದೇಶ ಪ್ರೇಮ ಮತ್ತು ಅವರು ಕೈಗೊಳ್ಳಬೇಕಾದ ಜೀವನದ ಸಾಧನೆಗಳ ಬಗ್ಗೆ ಅನೇಕ ಮಾರ್ಗದರ್ಶನಗಳನ್ನು ನಮಗಾಗಿ ನೀಡಿದ್ದಾರೆ. ಇಡೀ ಭಾರತದ ಹೆಮ್ಮೆಯ ಪ್ರತೀಕ ಸ್ವಾಮಿ ವಿವೇಕಾನಂದರು. ಅವರ ಸ್ಫೂರ್ತಿಧಾಯಕ ಉಪದೇಶಗಳ ಕೆಲವು ಮುನ್ನೋಟವನ್ನು ನಿಮಗಾಗಿ ನೀಡಲಾಗಿದೆ. ಮುಂದೆ ಓದಿ.
*ನಿಮ್ಮ ಆತ್ಮವೇ ನಿಮ್ಮ ನಿಜವಾದ ಗುರು. ನೀವು ಮೊದಲು ನಿಮ್ಮನ್ನು ನೀವು ಅರಿಯುವುದನ್ನು ಪ್ರಯತ್ನಿಸಿ. ನಿಮ್ಮನ್ನು ಯಾರಿಂದಲೂ ಕಲಿಸಲು ಸಾಧ್ಯವಿಲ್ಲ. ನಿಮಗೆ ನೀವೇ ಗುರು.
*ನಿಮ್ಮನ್ನು ನೀವು ನಂಬದ ಹೊರತು ದೇವರನ್ನು ನಂಬಲು ಸಾಧ್ಯವಿಲ್ಲ.
*ಈ ಪ್ರಪಂಚವೇ ಒಂದು ವ್ಯಾಯಾಮ ಶಾಲೆಯಿದ್ದಂತೆ. ಎಲ್ಲರನ್ನೂ ಸದೃಢಗೊಳಿಸುವ ಸಂಘಟಿತ ಕೇಂದ್ರವಾಗಿದೆ.
*ನಿಮ್ಮ ಮನಸ್ಸು ಮತ್ತು ಬುದ್ಧಿಯ ಹೊಡೆದಾಟದಲ್ಲಿ ಮೊದಲು ಮನಸ್ಸಿನ ಮಾತನ್ನು ಅನುಸರಿಸಿ.
*ನಿಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಕುಂಠಿತಗೊಳಿಸುವ ಯಾವುದೇ ಸಾಧನವನ್ನು ವಿಷವೆಂದು ದೂರವಿಡಿ.
*ಸಂಬಂಧಗಳು ನಿಮ್ಮ ಜೀವನಕ್ಕಿಂತ ಅಮೂಲ್ಯವಾದದ್ದು. ಈ ಗುಣಾತ್ಮಕ ಸಂಬಂಧಗಳನ್ನು ನಿಮ್ಮ ಜೀವನದಲ್ಲಿ ಹೊಂದಲು ಪ್ರಯತ್ನಿಸಿ.
*ಪ್ರೀತಿಸಿ ಅಥವಾ ದ್ವೇಷಿಸಿ, ಎರಡೂ ನಮ್ಮಲ್ಲೇ ಇವೆ. ಪ್ರೀತಿಸಿದರೆ ಅದು ಮನಸ್ಸಿನಿಂದ ಮತ್ತು ದ್ವೇಷಿಸಿದರೆ ಅದು ಬುದ್ಧಿಯಿಂದ ಎಂಬುದನ್ನು ತಿಳಿದುಕೊಳ್ಳಿ.
*ನಿಮಗೆ ಸಹಾಯಹಸ್ತ ಚಾಚಿದವರನ್ನು ಮರೆಯಬೇಡಿ, ನಿಮ್ಮನ್ನು ಪ್ರೀತಿಸಿದವರನ್ನು ದ್ವೇಷಿಸಬೇಡಿ, ನಿಮ್ಮನ್ನು ನಂಬಿದವರಿಗೆ ಮೋಸ ಮಾಡಬೇಡಿ.
*ಮೊದಲು ಒಂದು ಕಲ್ಪನೆಯನ್ನು ಮಾಡಿಕೊಳ್ಳಿ. ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಲು ಪ್ರಯತ್ನಿಸಿ. ಅದನ್ನು ಸಾಕಾರಗೊಳಿಸಲು ನಿಮ್ಮ ಇಡೀ ಜೀವನವನ್ನೇ ಮುಡಿಪಾಗಿಸಿ.
*ನಿಮ್ಮ ಮೆದುಳು, ಮಾಂಸಖಂಡಾ, ನರಗಳು, ನಿಮ್ಮ ದೇಹದ ಎಲ್ಲಾ ಅಂಗಗಳು ನಿಮ್ಮ ಕಲ್ಪನೆಯನ್ನು ಸಾಕಾರಗೊಳಿಸಲು ಒಂಟಿಯಾಗಿ ಸರ್ವಪ್ರಯತ್ನ ಮಾಡಿ. ಇದೊಂದೇ ಯಶಸ್ಸಿನ ಮೆಟ್ಟಿಲು. ಈ ಸಂದರ್ಭದಲ್ಲಿ ನಿಮಗೆಲ್ಲರಿಗೂ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವದ ಹಾರ್ದಿಕ ಶುಭಾಶಯಗಳು.



Click it and Unblock the Notifications

