Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಇತಿಹಾಸ ಪುರಾಣಗಳಲ್ಲಿಯೇ 'ವೃಕ್ಷಾರಾಧನೆ' ಬೇರೂರಿದೆ...
ಭಾರತವು ವಿಭಿನ್ನ ಪರಂಪರೆ ಮತ್ತು ಸಂಸ್ಕೃತಿಗಳ ತವರೂರು. ಆದರೆ ಕೆಲವೊಂದು ಸಂಪ್ರದಾಯಗಳು ಮತ್ತು ಆಚರಣೆಗಳು, ಇಡೀ ಭಾರತದಾದ್ಯಂತ ಒಂದೇ ರೀತಿ ಪಾಲಿಸಿಕೊಂಡು ಬರಲಾಗುತ್ತದೆ. ಅದರಲ್ಲಿಯೂ ಪ್ರಕೃತಿಯನ್ನು ಆರಾಧಿಸುವ ಬಗೆಯಂತು ಇಡೀ ದೇಶದಲ್ಲಿ ನಾವು ಎಲ್ಲಾ ಕಡೆಯಲ್ಲೂ ಸಹ ಕಾಣಬಹುದು.
ಅಂತಹ ಆಚರಣೆಗಳಲ್ಲಿ ಮರಗಳ ಅಥವಾ ವೃಕ್ಷಗಳ ಆರಾಧನೆ. ಮರಗಳನ್ನು ಪೂಜಿಸುವುದರ ಹಿಂದೆ ಹಲವಾರು ಕಥೆಗಳನ್ನು ನಾವು, ವಿವಿಧ ಪ್ರಾಂತ್ಯಗಳಲ್ಲಿ ಕಾಣಬಹುದು. ಕೆಲವೊಂದು ಆಯಾ ರಾಜ್ಯ ಹಾಗೂ ಪ್ರಾಂತ್ಯಗಳಿಗೆ ಸೀಮಿತವಾಗಿದ್ದರೆ ಕೆಲವು ದೇಶದಾದ್ಯಂತ ಸಮಾನವಾಗಿವೆ. ಪೂಜನೀಯ ಸ್ಥಾನ ಪಡೆದಿರುವ ಹಲವು ವೃಕ್ಷಗಳು ನಾಡಿನಾದ್ಯಂತ ಜನರಿಗೆ ಪವಿತ್ರವಾಗಿವೆ.

ಅಷ್ಟೇ ಅಲ್ಲದೆ 'ಕಲ್ಪವೃಕ್ಷ' ಎಂದು ನಂಬಲಾಗುವ ಈ ವೃಕ್ಷಗಳು ಕೇವಲ ಧಾರ್ಮಿಕ ಮಹತ್ವ ಮಾತ್ರವಲ್ಲದೇ ತಮ್ಮ ರೋಗಪರಿಹಾರಕ ಗುಣಗಳಿಂದಲೂ ಜನರಿಗೆ ಆಪ್ತವಾಗಿವೆ. ಈ ಪಟ್ಟಿಯಲ್ಲಿ ಪ್ರಮುಖವಾಗಿರುವುದನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಮುಂದೆ ಓದಿ... ದೈವಿಕ ಶಕ್ತಿ ಹೊಂದಿರುವ ಭಾರತದ ಆರು ವೃಕ್ಷಗಳು
ವೃಕ್ಷಗಳು-ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನಿಗೆ ಸಮಾನ
ಕೆಲವರ ಪ್ರಕಾರ ಪವಿತ್ರ ವೃಕ್ಷಗಳು, ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ರೂಪವಂತೆ. ಇವುಗಳ ಆರಾಧನೆಯು ಈ ಮೂವರ ಆರಾಧನೆಗೆ ಸಮ. ಅದಕ್ಕಾಗಿಯೇ "ಮೂಲತಃ ಬ್ರಹ್ಮ ರೂಪಾಯ:, ಮಧ್ಯತಃ ವಿಷ್ಣು ರೂಪಯೇ,ಅಗ್ರತಃ ಶಿವ ರೂಪಾಯಃ ಶ್ರೀ ವೃಕ್ಷ ರಾಜಯೇ ನಮಃ" ಎನ್ನುವ ಮಂತ್ರವು ಹುಟ್ಟಿಕೊಂಡಿತು. ಇದನ್ನು ಪಠಿಸುವುದರಿಂದ ಆಧ್ಯಾತ್ಮಿಕ ಮೋಕ್ಷ ದೊರೆಯುತ್ತದೆ.
ಮೂರು ಲೋಕಗಳನ್ನು ಸೇರಿಸುವ ಕೊಂಡಿ
ಹಿಂದೂ ಧರ್ಮದಲ್ಲಿ ಮರಗಳು ಸ್ವರ್ಗ, ಭೂಮಿ ಮತ್ತು ಪಾತಾಳಗಳೆಂಬ ಮೂರು ಲೋಕಗಳನ್ನು ಸಂಪರ್ಕಿಸುವ ಕೊಂಡಿ ಎಂದು ಪರಿಗಣಿಸಲಾಗಿದೆ. ಈ ಮರಗಳಿಗೆ ನಾವು ಸಮರ್ಪಿಸುವ ನೈವೇಧ್ಯವು ಮೂರು ಲೋಕಗಳಿಗೆ ಸಲ್ಲುತ್ತದೆ ಎಂಬ ಪ್ರತೀತಿ ಮನೆ ಮಾಡಿದೆ.
ದೇವತೆಗಳೇ ಮರಗಳನ್ನು ಪೂಜಿಸುತ್ತಿದ್ದರು!
ಇಂದ್ರನ ಉದ್ಯಾನವನದಲ್ಲಿ ಮಂದಾರ, ಪಾರಿಜಾತ, ಶಮಂತಕ, ಹರಿಚಂದನ ಮತ್ತು ಕಲ್ಪ ವೃಕ್ಷ ಅಥವಾ ಕಲ್ಪತರು ಎಂಬ ಐದು ವೃಕ್ಷಗಳು ಇವೆಯಂತೆ. ಭಾರತದಲ್ಲಿ ಜನರು ಏಕೆ ಮರಗಳನ್ನು ಪೂಜಿಸುತ್ತಾರೆ ಎಂಬ ಪ್ರಶ್ನೆ ಎದ್ದಾಗ, ಪುರಾಣಗಳಲ್ಲಿ ದೇವತೆಗಳೇ ಮರಗಳನ್ನು ಪೂಜಿಸುತ್ತಿದ್ದ ಉಲ್ಲೇಖಗಳು ನಮಗೆ ದೊರೆಯುತ್ತವೆ.
ಶ್ರೀಗಂಧದ- ಪಾರ್ವತಿಯ ನೆಚ್ಚಿನ ಮರ
ಸುವಾಸನೆ ಹಾಗೂ ಸೌಂದರ್ಯವರ್ಧಕವಾಗಿರುವ ಶ್ರೀಗಂಧದ ಮರವನ್ನು ಪಾರ್ವತಿಯ ನೆಚ್ಚಿನ ಮರವೆಂದು ಹೇಳಲಾಗಿದೆ. ಪಾರ್ವತಿ ಶ್ರೀಗಂಧದ ಕೊರಡನ್ನು ತನ್ನ ಬೆವರಿನೊಂದಿಗೆ ತೇದ ಬಳಿಕ ಪ್ರಾಪ್ತವಾದ ಅರೆಘನರೂಪದ ದ್ರಾವಣದಿಂದ ಗಣೇಶನನ್ನು ಸೃಷ್ಟಿಸಿದಳು ಎನ್ನಲಾಗುತ್ತದೆ. ಈ ನಂಬಿಕೆಯಿಂದ ಇಂದಿಗೂ ಶ್ರೀಗಂಧದ ದ್ರಾವಣವನ್ನು ಹಲವು ದೇವದೇವತೆಗಳ ಪೂಜೆಯಲ್ಲಿ ಬಳಸಲಾಗುತ್ತಿದೆ.
ಬಿಲ್ವಪತ್ರೆ
ಶಿವನಿಗೆ ಅತ್ಯಂತ ಪ್ರಿಯವಾದ ಈ ವೃಕ್ಷದ ಎಲೆಯನ್ನು ಅರ್ಪಿಸುವುದರಿಂದ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು ಎಂಬ ನಂಬಿಕೆಯಿದೆ. ಈ ಮರದ ಎಲೆಯಲ್ಲಿ ಮೂರು ದಳಗಳಿವೆ. ಸೃಷ್ಟಿ, ಸಂರಕ್ಷಣೆ ಹಾಗೂ ವಿನಾಶವನ್ನು ಈ ದಳಗಳು ಪ್ರತಿನಿಧಿಸುತ್ತವೆ ಎಂದು ನಂಬಲಾಗಿದೆ.



Click it and Unblock the Notifications



