ರಂಜಾನ್ ಸಮಯದಲ್ಲಿ ಮಾಡುವ ಉಪವಾಸದ ಮಹತ್ವ

By Vishvanath

ಉಪವಾಸ ಒಂದು ಪರಿಕಲ್ಪನೆಯಂತೆ ಸಾಮಾನ್ಯವಾಗಿ ಎಲ್ಲಾ ಧರ್ಮದಲ್ಲೂ ಇರುತ್ತದೆ. ಉದಾಹರಣೆಗೆ, ಹಿಂದೂ ಧರ್ಮದಲ್ಲಿ ಬಹುತೇಕ ಸಂದರ್ಭಗಳಲ್ಲಿ ಉಪವಾಸ ಆಚರಿಸುವುದು ಸಾಮಾನ್ಯ. ಹಾಗೆಯೇ, ಕ್ರಿಶ್ಚಿಯನ್ ಜನಾಂಗದಲ್ಲೂ ಲೆಂಟ್ ಅವಧಿಯಲ್ಲಿ, ಅಂದರೆ ಆಶ್ ಬುಧವಾರದ 40 ದಿನಗಳ ಹಿಂದಿನಿಂದ, ಉಪವಾಸದ ಆಚರಣೆಯಿರುತ್ತದೆ. ಆದರೆ ಮುಸ್ಲಿಂ ಜನಾಂಗದಲ್ಲಿ ಉಪವಾಸದ ಆಚರಣೆಯು ವಿಭಿನ್ನವಾಗಿರುತ್ತದೆ. ರಂಜಾನ್ ಉಪವಾಸದ ಆಚರಣೆ ಕೇವಲ ಆಹಾರಗಳಿಂದ ದೂರವಿರುವುದಲ್ಲದೆ ತಮ್ಮ ಜೀವಮಾನದ ಅವಧಿಯಲ್ಲಿ ಪ್ರತಿ ಮಾನವನು ಎದುರಿಸಬೇಕಾದ ಪಿಡುಗುಗಳು ಮತ್ತು ಅನಿಷ್ಟಗಳಿಂದ ದೂರವಿರಬೇಕೆಂಬುದಾಗಿದೆ.

ಬಹಳ ಕಾಲ ಆಚರಿಸುವ ರಂಜಾನ್ ಉಪವಾಸ ಒಂದು ತಿಂಗಳಕಾಲ ಇರುತ್ತದೆ. ರಂಜಾನಿನ ಅರ್ಥ ಮನುಷ್ಯನ ಆಹಾರಗಳು ಮತ್ತು ಪಾನೀಯಗಳ ಮೇಲೆ ಸಂಯಮ ಗಮನಿಸುವುದು. ಇದರಲ್ಲಿ ಬಹಳ ಮುಖ್ಯವಾದದ್ದೆಂದರೆ ಈ ಇಂದ್ರಿಯನಿಗ್ರಹದಿಂದ ನಕಾರಾತ್ಮಕ ಅಂಶಗಳನ್ನು ಗಮನಿಸುವುದು. ಈ ಸಮಯದಲ್ಲಿ ಮನುಷ್ಯನು ಎಲ್ಲಾ ರೀತಿಗಳ ದುರಭ್ಯಾಸಗಳು, ಲೈಂಗಿಕ ಚಟುವಟಿಕೆಗಳಿಂದ ದೂರವಿದ್ದು ತನ್ನ ಜೀವನದಲ್ಲಿ ಶೋಚನೀಯ ಪರಿಸ್ಥಿತಿಯು ಉಂಟಾಗಬಹುದನ್ನು ತಡೆಯುವುದು. ರಂಜಾನ್ ಸಮಯದಲ್ಲಿ ದೇವರಮೇಲೆ ತೀವ್ರ ಪ್ರೀತಿಯಿಟ್ಟು ಉಪವಾಸವನ್ನು ಆಚರಣೆಮಾಡುವುದು.

Significance Of Fasting During Ramzan

ರಂಜಾನ್ ಉಪವಾಸದಾಚರಣೆ 30 ದಿನಗಳಕಾಲ ಇರುತ್ತದೆ. ಇದು ಅಮಾವಾಸ್ಯೆಯ ನಂತರ ಕಾಣುವ ಮೊದಲನೇ ಚಂದ್ರದರ್ಶನದಿಂದ ಆರಂಭವಾಗಿ ಮತ್ತೆ ಬರುವ ಅಮಾವಾಸ್ಯೆಯ ನಂತರ ಕಾಣುವ ಮೊದಲನೇ ಚಂದ್ರದರ್ಶನವಾದ ನಂತರ ಕೊನೆಗೊಳ್ಳುತ್ತದೆ. ರಂಜಾನ್ ಮಾಸದ ಸಮಯದಲ್ಲಿ ಮುಂಜಾನೆ ಸೂರ್ಯೋದಯದ ನಂತರದಿಂದ ಸೂರ್ಯಾಸ್ತಮವಾಗುವವರೆಗೆ ಉಪವಾಸ ಮಾಡಬೇಕು. ತದನಂತರ ದೇವರಲ್ಲಿ ಪ್ರಾರ್ಥನೆ ಮಾಡಿದ ಮೇಲೆಯೇ ಅಂದಿನ ದಿನದ ಆಹಾರದ ಮೊದಲ ತುತ್ತನ್ನು ತಿನ್ನಬೇಕು. ರಂಜಾನ್ ಉಪವಾಸದ ಪ್ರಾಮುಖ್ಯತೆಗೆ ಹಲವಾರು ಕಾರಣಗಳಿವೆ. ಆ ಪ್ರಾಮುಖ್ಯತೆಗೆ ಕಾರಣಗಳೇನೆಂದು ನೋಡೋಣ ಬನ್ನಿ:

ಪವಿತ್ರ ಖುರಾನ್:
ಪ್ರವಾದಿ ಮೊಹಮ್ಮದ್ ಅವನಿಗೆ ರಂಜಾನ್ ಮಾಸದಲ್ಲಿ ಪವಿತ್ರ ಖುರಾನ್ ಗೋಚರವಾಯಿತು. ದೇವರು ಪ್ರವಾದಿ ಮೊಹಮ್ಮದ್ದನನ್ನು ತನ್ನ ಪ್ರತಿನಿಧಿಯೆಂದು ಆಯ್ಕೆಮಾಡಿ ಪವಿತ್ರ ಖುರಾನ್ ಗ್ರಂಥವನ್ನು ಸಂಗ್ರಹಿಸಿದನು. ರಂಜಾನ್ ಮಾಸದ ಕೊನೆಯ ಹತ್ತು ದಿನಗಳು ಲಾಯಿಲತುಲ್ ಕದಿರ್ (ಶಕ್ತಿಯ ರಾತ್ರಿ) ಎಂದು ಗಮನಾರ್ಹವಾಗಿ ವಿಶೇಷವಾದದ್ದು. ಈ ಸಮಯದಲ್ಲಿಯೇ ಪ್ರವಾದಿಗೆ ಖುರಾನಿನ ಪುಸ್ತಕ ಪೂರ್ಣವಾದದ್ದು.

ಪ್ರವಾದಿ ಮೊಹಮ್ಮದ್ ಮೋಕ್ಷವನ್ನು ಪಡೆದಿದ್ದು:
ಪ್ರವಾದಿ ಮೊಹಮ್ಮದ್ ಅವನು ಒಂದು ಸಂತನಾಗಿ ಜನಿಸಿದನು. ಆದರೆ ಅವನ ಸಮಯದಲ್ಲಿ ಹಿಂಸಾಚಾರಗಳು ನಡೆಯುತ್ತಿತ್ತು. ಆ ಸಮಯದಲ್ಲಿ ಜನಗಳು ನಡೆದುಕೊಳ್ಳುತ್ತಿದ್ದ ರೀತಿಯಿಂದ ಅವನಿಗೆ ಬಹಳವಾಗಿ ಅಪಮಾನವಾಯಿತು. ತನ್ನ ಸುತ್ತಮುತ್ತ ಇದ್ದ ಪರಿಸ್ಥಿತಿಯಿಂದ ಜುಗುಪ್ಸೆಗೊಂಡ ಪ್ರವಾದಿಯು ಏಕಾಂತವಾಗಿ ನಿರ್ಜನ ಪ್ರದೇಶಗಳಲ್ಲಿ ಓಡಾಡಲು ಪ್ರಾರಂಭಿಸಿದನು. ಹೀಗೆ ಮಾಡುತ್ತಿದ್ದಾಗ ಹಿಜ್ರಾ ಬೆಟ್ಟದಲ್ಲಿ ಉಪವಾಸ ಮಾಡುತ್ತಾ ಮತ್ತು ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಹಗಲು ರಾತ್ರಿಗಳನ್ನು ಕಳೆದನು. ಅಂತಿಮವಾಗಿ ದೇವರು ಅವನಿಗೆ ಬೆಳಕಿನ ಮಾರ್ಗವನ್ನು ತೋರಿದನು. ದೇವರು ಅವನ ಮುಖಾಂತರ ಜನಗಳಿಗೆ ನೈಜ ಜ್ಞಾನದ ಬೆಳಕನ್ನು ಹರಡಿಸಿದನು. ಈ ಕಾರಣದಿಂದ ಜನರು ರಂಜಾನ್ ಸಮಯದಲ್ಲಿ ಉಪವಾಸವನ್ನು ಆಚರಿಸಿ ಎಲ್ಲಾ ದುಷ್ಟ ಕೃತ್ಯಗಳಿಂದ ದೂರವಿರುತ್ತಾರೆ.

ಉಪವಾಸ ಮಾಡುವುದಕ್ಕೆ ಮುಖ್ಯ ವಾದ(ತರ್ಕ):
ಪ್ರತಿ ಧರ್ಮದಲ್ಲಿಯೂ ಒಂದು ರೀತಿಯ ಪ್ರಾಪಂಚಿಕ ವಿನೋದಗಳನ್ನು ತ್ಯಜಿಸಿ ದೇವರ ಕೃಪೆಯನ್ನು ಪಡೆಯುವುದಕ್ಕೆ ಉಪವಾಸದ ಆಚರಣೆ ಒಂದು ವಿಧಾನವಾಗಿದೆ. ಒಬ್ಬ ಸಾಧಾರಣ ಮನುಷ್ಯನು ಸದಾ ತನ್ನ ಲೌಕಿಕ ಕರ್ತವ್ಯಗಳ ಮಧ್ಯೆ ಕಟ್ಟಿಹಾಕಿಕೊಂಡು, ದೇವರ ಬಗ್ಗೆ ಯೋಚನೆ ಮಾಡಲು ಸಮಯವೇ ಇರುವುದಿಲ್ಲ. ಉಪವಾಸವು ಒಂದು ರೀತಿಯ ತಪಸ್ಸಿನಂತೆ ಆಹಾರವನ್ನು ತ್ಯಜಿಸಿ ದೇವರಲ್ಲಿ ಸಂಪೂರ್ಣವಾಗಿ ಗಮನವನ್ನು ಕೇಂದ್ರೀಕೃತಮಾಡುವುದು. ಹಗಲಿನಲ್ಲಿ ಉಪವಾಸ ಮಾಡುವವನು ದೇವರಲ್ಲಿ ಪ್ರಾರ್ಥನೆ ಮಾಡುತ್ತ ಸಂಪೂರ್ಣವಾಗಿ ಮುಳುಗಿಹೋಗಿದ್ದರೆ ಪ್ರಪಂಚದಲ್ಲಿ ಇತರರಿಗೆ ಒಂದು ಸತ್ತ ಮನುಷ್ಯನಂತೆ ಸಂಕೇತಿಸುತ್ತದೆ. ಹಾಗೆಯೇ, ರಾತ್ರಿ ವೇಳೆ ಆಹಾರ ತೆಗೆದುಕೊಳ್ಳುವುದು ತನ್ನ ಜೀವಕ್ಕೆ ಆಧಾರದ ಸಂಕೇತವಾಗಿರುವುದು ಮತ್ತು ಕಾಣುವ ಪ್ರಪಂಚದಿಂದ ದೂರವಿರುವುದು. ಹೀಗೆ ಮಾಡುವುದರಿಂದ ಆಂತರಿಕ ಆಧ್ಯಾತ್ಮಿಕ ಪ್ರಪಂಚದ ಪುಷ್ಟಿಯನ್ನು ಸೆಳೆಯಬಹುದಾಗಿದೆ.

ಚಂದ್ರನು ದೇವರಿಂದ ಜ್ಞಾನದ ಬೆಳಕನ್ನು ಕೊಡುವ ಒಂದು ಸಂಕೇತ:
ಹೀಗಾಗಿ ಚಂದ್ರನಿಂದ ರಂಜಾನ್ ಮಾಸದ ಉಪವಾಸದ ಆಚರಣೆಗೆ ಒಂದು ನಿರ್ದಿಷ್ಟ ಪಾತ್ರವಿದೆ. ಮನುಷ್ಯನು ಪ್ರಾಪಂಚಿಕ ವಿನೋದಗಳಿಂದ ದೂರವಿದ್ದು, ತನ್ನನ್ನು ತಾನೇ ಅರಿತುಕೊಳ್ಳುವುದಕ್ಕೆ ರಂಜಾನ್ ಒಂದು ಸಮಯವಾಗಿದೆ. ರಂಜಾನ್ ಉಪವಾಸ ಮಾಡುವುದು ದೇವರಿಗೋಸ್ಕರ ಮಾತ್ರವೇ ಅಲ್ಲ, ಅದು ನಮಗಾಗಿ ಸುಧಾರಿಸಲೂ ಹೌದು. ಇದು ವಾಸ್ತವವಾಗಿ ಪ್ರತಿ ಮನುಷ್ಯನೂ ಅಜ್ಞಾನದ ಅಂಧಕಾರದಿಂದ ನಿಜವಾದ ಜ್ಞಾನದ ಬೇಳಕಿನೆಡೆಗೆ ತೆರಳಲು ಅನುಸರಿಸುವ ಒಂದು ರೀತಿಯ ಜೀವನದ ದಾರಿಯಾಗಿದೆ.

X
Desktop Bottom Promotion