Latest Updates
-
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ?
ಬೆಚ್ಚಿಬೀಳಿಸುವ ಸಂಗತಿ: ಗಾಂಧಾರಿಗೆ ನಿಜವಾಗಿಯೂ 101 ಮಕ್ಕಳು ಇದ್ದರೇ?
ಮಹಾಭಾರತವು ಒಂದು ಅದ್ಭುತವಾದ ಮಹಾಕಾವ್ಯವಾಗಿದ್ದು, ಇದನ್ನು ಪ್ರತಿ ಸಲ ಓದಿದಾಗಲು ಅದು ನಮ್ಮನ್ನು ಮತ್ತಷ್ಟು ಆಳಕ್ಕೆ ಕರೆದುಕೊಂಡು ಹೋಗುತ್ತದೆ. ಹೀಗೆ ನಾವು ಆಳಕ್ಕೆ ಹೋದಾಗಲೆಲ್ಲ ನಮಗೆ ಹಲವಾರು ರಹಸ್ಯಗಳು, ಹೊಸ ವಿಚಾರಗಳು ತಿಳಿಯುತ್ತ ಹೋಗುತ್ತವೆ.
ಇದರ ಸಾಧ್ಯಾಸಾಧ್ಯತೆಗಳನ್ನು ನಾವು ಯೋಚಿಸಿದಾಗಲೆಲ್ಲ ಮತ್ತೆ ಈ ಮಹಾಕಾವ್ಯವು ಕಣ್ಣಮುಂದೆ ಹರಿದು ಹೋಗುತ್ತದೆ. ಈ ಮಹಾಕಾವ್ಯವನ್ನು ಓದಿದ ಮೇಲೆ ನಮ್ಮ ಮುಂದೆ ನಿಲ್ಲುವ ಮೊತ್ತ ಮೊದಲ ಪ್ರಶ್ನೆ ಎಂದರೆ ಅದು ಗಾಂಧಾರಿಗೆ ನಿಜವಾಗಿ 101 ಮಕ್ಕಳು ಇದ್ದರೆ? ಎಂಬುದು.
ಈ ಮಹಾಕಾವ್ಯವು ಪಾಂಡವರು ಐದು ಜನ ಅಣ್ಣ-ತಮ್ಮಂದಿರು, ಅದರಲ್ಲಿ ಮೂರು ಜನ ಕುಂತಿಗೆ ಜನಿಸಿದರೆ, ಮತ್ತಿಬ್ಬರು ಪಾಂಡುವಿನ ಎರಡನೆಯ ಹೆಂಡತಿ ಮಾದ್ರಿಗೆ ಜನಿಸದರು ಎಂದು ಹೇಳುತ್ತದೆ. ಆದರೆ ಕೌರವರ ವಿಚಾರಕ್ಕೆ ಬಂದರೆ, ಅವರು 100 ಜನ ಅಣ್ಣ- ತಮ್ಮಂದಿರು ಮತ್ತು ಒಬ್ಬ ಸಹೋದರಿಯನ್ನು ಅವರು ಹೊಂದಿದ್ದರು. ಈ ವಿಚಾರ ಸ್ವಲ್ಪ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ.
ಒಂದು ವೇಳೆ ನಾವು ಪ್ರಕೃತಿಯ ನಿಯಮಗಳಿಗನ್ವಯ ಹೋದರೆ, ನಮಗೆ ಒಂದು ಮಗುವನ್ನು ಪಡೆಯಲು ಒಂಭತ್ತು ತಿಂಗಳುಗಳ ಕಾಲ ಬೇಕಾಗುತ್ತದೆ. ಹಾಗಾಗಿ ಒಂದು ಮಗುವನ್ನು ಒಮ್ಮೆಗೆ ಪಡೆಯುತ್ತ ಹೋದರೆ, 100ನೇ ಮಗು ಹುಟ್ಟುವಷ್ಟರಲ್ಲಿ ಮೊದಲನೆಯ ಮಗುವಿಗೆ 75 ವರ್ಷ ವಯಸ್ಸಾಗಿರುತ್ತದೆ. ಇದೇ ನಮಗೆ ಅಚ್ಚರಿಯನ್ನುಂಟು ಮಾಡುವುದು ಗಾಂಧಾರಿಗೆ 101ನೇ ಮಗುವು ಜನಿಸುವಾಗ ಎಷ್ಟು ವಯಸ್ಸಾಗಿತ್ತು? ಎಂಬುದು.
ಒಂದು ವೇಳೆ ಆಕೆಗೆ ಅವಳಿಗಳೋ, ತ್ರಿವಳಿಗಳೋ ಹುಟ್ಟಿದ್ದಲ್ಲಿ, ಆಕೆಯು ಮಹಾಭಾರತದ ಅಂತ್ಯದವರೆಗೆ ಜೀವಿಸುವುದು ಅಸಾಧ್ಯವಾಗಿತ್ತು. ಒಂದು ವೇಳೆ ಆಕೆ ನಿಜವಾಗಿ 101 ಮಕ್ಕಳನ್ನು ಹಡೆದಿದ್ದರು, ಅವುಗಳೆಲ್ಲವು ಬದುಕುವ ಅವಕಾಶ ತುಂಬಾ ಕ್ಷೀಣವಾಗಿತ್ತು. ಹಾಗಾದರೆ ಇದು ಹೇಗಾಯಿತು?
100 ಜನ ಕೌರವರ ಕಥೆಯು ಕೇವಲ ಒಂದು ಕಟ್ಟು ಕಥೆಯೇ? ಇಲ್ಲವೆ ನಮಗೆ ಗೊತ್ತಿಲ್ಲದ ಒಂದು ಆಧುನಿಕ ತಂತ್ರಜ್ಞಾನವು ಆಗ ಚಾಲ್ತಿಯಲ್ಲಿತ್ತೆ? ಈ ಪ್ರಶ್ನೆಗಳು ನಮ್ಮನ್ನು ಸಂಪೂರ್ಣವಾಗಿ ಕಾಡುತ್ತದೆ. ಬನ್ನಿ ಈ ಮಹಾಕಾವ್ಯವು ನಮಗೆ ಏನು ಹೇಳುತ್ತದೆ ಗಾಂಧಾರಿಯ 101 ಮಕ್ಕಳ ಬಗ್ಗೆ ಎಂಬುದನ್ನು ತಿಳಿಯೋಣ. ಮಹಾಭಾರತದಲ್ಲಿ ನಿಮ್ಮನ್ನು ಬೆಚ್ಚಿ ಬೀಳಿಸುವ ಸತ್ಯಗಳು!

ವ್ಯಾಸರ ವರ
ಮಹಾಭಾರತದ ಕರ್ತೃ ಮಹಾರ್ಷಿ ವ್ಯಾಸರು ಗಾಂಧಾರಿಯ ಸೇವೆಗಳಿಂದ ಪುನೀತರಾಗಿ ಒಂದು ವರವನ್ನು ನೀಡಿದರು. ಅದೇನೆಂದರೆ ಗಾಂಧಾರಿಯು 100 ಜನ ಮಕ್ಕಳ ತಾಯಿಯಾಗಲಿ ಎಂದಾಗಿತ್ತು.
ಚಿತ್ರ ಕೃಪೆ: ರಾಮ್ನದಯನ್‍ದತ್ತ ಶಾಸ್ತ್ರೀ ಪಾಂಡೆ

ವ್ಯಾಸರ ವರ
ಆ ಕಾಲದಲ್ಲಿ ಇಂತಹ ಹಾರೈಕೆಗಳು ಸಾಮಾನ್ಯವಾಗಿತ್ತು. ಆದರೆ ವ್ಯಾಸರು ನೀಡಿದ್ದು ಹಾರೈಕೆಯಲ್ಲ, ವರವಾಗಿತ್ತು. ಈ ವಿಚಾರದಲ್ಲಿ ಈ ವರವು ನಿಜವಾಗಿ "101 ಮಕ್ಕಳನ್ನು ನೀಡಿತು".

ಗಾಂಧಾರಿಯ ಹತಾಶೆ
ಗಾಂಧಾರಿಯು ಕುರು ಕುಲ ಸಾಮ್ರಾಜ್ಯದ ಹಿರಿಯನಾದ ಧೃತರಾಷ್ಟ್ರನನ್ನು ಮದುವೆಯಾದಳು. ಆದರೆ ಈತನು ಜನ್ಮತಃ ಅಂಧನಾಗಿದ್ದನು. ಹೀಗಾಗಿ ಸಾಮ್ರಾಜ್ಯವನ್ನು ಆತನ ಸೋದರ ಪಾಂಡುವು ಆಳುವಂತಾಯಿತು. ಈ ವಿಚಾರವು ದೃತರಾಷ್ಟ್ರನನ್ನು ಮತ್ತು ಗಾಂಧಾರಿಯನ್ನು ಬಹುವಾಗಿ ಕಾಡಿತು. ಅದಕ್ಕಾಗಿ ಅವರಿಬ್ಬರಿಗು ಕುಂತಿಗೆ ಜನಿಸುವ ಮೊದಲೆ ಒಂದು ಮಗುವು ತಮಗೆ ಜನಿಸಲಿ ಎಂಬ ಆಸೆ ಇತ್ತು. ಹೀಗೆ ಮಾಡುವುದರಿಂದ ಅವರ ಮಗನು, ಕಾನೂನಿನ ಪ್ರಕಾರ ಸಾಮ್ರಾಜ್ಯದ ಉತ್ತರಾಧಿಕಾರಿಯಾಗುತ್ತಾನೆ ಎಂಬ ದೂರಾಲೋಚನೆ ಇತ್ತು.
ಚಿತ್ರ ಕೃಪೆ: ರಾಮ್ನದಯನ್‍ದತ್ತ ಶಾಸ್ತ್ರೀ ಪಾಂಡೆ

ಗಾಂಧಾರಿಯ ಹತಾಶೆ
ಗಾಂಧಾರಿಯು ಕುರು ಕುಲ ಸಾಮ್ರಾಜ್ಯದ ಹಿರಿಯನಾದ ಧೃತರಾಷ್ಟ್ರನನ್ನು ಮದುವೆಯಾದಳು. ಆದರೆ ಈತನು ಜನ್ಮತಃ ಅಂಧನಾಗಿದ್ದನು. ಹೀಗಾಗಿ ಸಾಮ್ರಾಜ್ಯವನ್ನು ಆತನ ಸೋದರ ಪಾಂಡುವು ಆಳುವಂತಾಯಿತು. ಈ ವಿಚಾರವು ದೃತರಾಷ್ಟ್ರನನ್ನು ಮತ್ತು ಗಾಂಧಾರಿಯನ್ನು ಬಹುವಾಗಿ ಕಾಡಿತು. ಅದಕ್ಕಾಗಿ ಅವರಿಬ್ಬರಿಗು ಕುಂತಿಗೆ ಜನಿಸುವ ಮೊದಲೆ ಒಂದು ಮಗುವು ತಮಗೆ ಜನಿಸಲಿ ಎಂಬ ಆಸೆ ಇತ್ತು. ಹೀಗೆ ಮಾಡುವುದರಿಂದ ಅವರ ಮಗನು, ಕಾನೂನಿನ ಪ್ರಕಾರ ಸಾಮ್ರಾಜ್ಯದ ಉತ್ತರಾಧಿಕಾರಿಯಾಗುತ್ತಾನೆ ಎಂಬ ದೂರಾಲೋಚನೆ ಇತ್ತು.
ಚಿತ್ರ ಕೃಪೆ: ರಾಮ್ನದಯನ್‍ದತ್ತ ಶಾಸ್ತ್ರೀ ಪಾಂಡೆ

ಮಾಂಸದ ಮುದ್ದೆ
ರೋಷಾವೇಶದಲ್ಲಿ ತನ್ನ ಗರ್ಭಕ್ಕೆ ತಾನೇ ಹೊಡೆದುಕೊಂಡ ಕಾರಣಕ್ಕಾಗಿ ಗಾಂಧಾರಿಯು ಮಾಂಸದ ಮುದ್ದೆಗಳಿಗೆ ಜನ್ಮವನ್ನಿತ್ತಳು. ಮಹಾರ್ಷಿ ವ್ಯಾಸರು ಈ ಸಂದರ್ಭದಲ್ಲಿ ಧಾವಿಸಿ ಬಂದರು. ಅವರು ತತ್‍ಕ್ಷಣವೇ ತುಪ್ಪಗಳಿಂದ ತುಂಬಿದ ನೂರು ಮಡಿಕೆಗಳನ್ನು ತರುವಂತೆ ಹೇಳಿದನು.

ಮಾಂಸದ ಮುದ್ದೆ
ಈ ಸಂದರ್ಭದಲ್ಲಿ ಗಾಂಧಾರಿಯು ಒಂದು ಹೆಣ್ಣು ಮಗು ಸಹ ತನಗೆ ಬೇಕೆಂದು ಕೇಳಿಕೊಂಡಳು. ಆಗ ವ್ಯಾಸರು ಈ ಪಿಂಡಗಳನ್ನು ನೂರು ಭಾಗ ಮಾಡಿ ಅವುಗಳಲ್ಲಿ ಹಾಕಿದರು. ನಂತರ ಗಾಂಧಾರಿಗೆ ಆ ಮಡಿಕೆಗಳನ್ನು ಮುಚ್ಚಿ ಬಿಡುವಂತೆ ಹೇಳಿದನು. ಹೀಗೆ ಮಾಡಿದ ಕೂಡಲೆ ಆಕೆಯು 100 ಜನ ಗಂಡು ಮಕ್ಕಳಿಗೆ ಮತ್ತು ಒಂದು ಹೆಣ್ಣು ಮಗುವಿಗೆ (ದುಶ್ಯಲಾ) ತಾಯಿಯಾದಳು.

ಪವಾಡವೋ ಅಥವಾ ಮುಂದುವರಿದ ವಿಜ್ಞಾನವೋ?
ಬಹುತೇಕ ಜನ ಈ ಪವಾಡ ಸದೃಶ್ಯ ಜನನಕ್ಕೆ ಹಲವು ಸಿದ್ಧಾಂತಗಳನ್ನು ಮುಂದಿಡುತ್ತಾರೆ. ಆದರೆ ಇವುಗಳಲ್ಲಿ ಕೆಲವೊಂದು ಮಾತ್ರ ನೈಜತೆಯ ಸಮೀಪಕ್ಕೆ ಬರುತ್ತವೆ. ಇವುಗಳಲ್ಲಿ ಒಂದು ಸಿದ್ಧಾಂತವು ಇನ್-ವಿಟ್ರೊ ಫರ್ಟಿಲೈಸೇಷನ್ (ಐವಿಎಫ್) ಆಗಿದೆ. ಇದು ಈಗ ಮಕ್ಕಳನ್ನು ಪಡೆಯಲು ಇರುವ ಒಂದು ಮಾರ್ಗವಾಗಿದೆ.
ಚಿತ್ರ ಕೃಪೆ 2: ಕೋರ್ ಬಾಗನ್ ಆರ್ಟ್ ಸ್ಟುಡಿಯೋ

ಪವಾಡವೋ ಅಥವಾ ಮುಂದುವರಿದ ವಿಜ್ಞಾನವೋ?
ಇದರ ಪ್ರಕಾರ ವ್ಯಾಸರಿಗೆ ಒಂದು ಆಧುನಿಕ ತಂತ್ರಙ್ಞಾನವು ಗೊತ್ತಿತ್ತು. ಹೀಗಾಗಿ ಅವರು ಕೃತಕವಾಗಿ ಪಿಂಡಗಳನ್ನು ಜಾಡಿಗಳಲ್ಲಿ, ಅಂದರೆ ಮಡಿಕೆಗಳಲ್ಲಿ ಸರಿಯಾದ ಸ್ಥಿತಿಯಲ್ಲಿ ಇಟ್ಟು ಶಿಶುವು ಅದರಲ್ಲಿ ಬೆಳೆಯುವಂತೆ ಮಾಡಿದರು ಎಂದು ಹೇಳಲಾಗುತ್ತದೆ. ಈ ಸಿದ್ಧಾಂತವನ್ನು ಹಲವಾರು ಜನರು, ಬಹುತೇಕ ಕಡೆಗಳಲ್ಲಿ ಉಲ್ಲೇಖ ಮಾಡಿದ್ದಾರೆ.

ಪವಾಡವೋ ಅಥವಾ ಮುಂದುವರಿದ ವಿಜ್ಞಾನವೋ?
ಇನ್ನೊಂದು ಸಿದ್ಧಾಂತದ ಪ್ರಕಾರ ಈ ನೂರೊಂದು ಜನರಲ್ಲಿ ದುರ್ಯೋಧನ ಮತ್ತು ದುಶ್ಯಾಸನ ಮಾತ್ರವೇ ನಿಜವಾದ ಮಕ್ಕಳು ಎಂದು ಹೇಳುತ್ತದೆ. ಇದಕ್ಕೆ ಪುರಾವೆಯು ಸಹ ಇದೆ. ಏಕೆಂದರೆ ಇಡೀ ಮಹಾಕಾವ್ಯದ ಉದ್ದಕ್ಕು ನಾವು ಈ ಇಬ್ಬರು ಪಾತ್ರಗಳನ್ನು ಮಾತ್ರ ಕೇಳುತ್ತೇವೆ.

ಪವಾಡವೋ ಅಥವಾ ಮುಂದುವರಿದ ವಿಜ್ಞಾನವೋ?
ಆದರೂ, ನಾವು ವಿಕರ್ಣ, ಯುಯುತ್ಸುರವರನ್ನು ಕೌರವರಾಗಿದ್ದರು, ಪಾಂಡವರ ಪಕ್ಷಪಾತಿಗಳು ಎಂಬ ಕಾರಣಕ್ಕಾಗಿ ಮಹಾಭಾರತದಲ್ಲಿ ಕೇಳಿದ್ದೇವೆ. ಹೀಗೆ ಈ ಸಿದ್ಧಾಂತವು ಪರಿಪೂರ್ಣವಾಗುವುದಿಲ್ಲ.



Click it and Unblock the Notifications











