ಶ್ರಾವಣ ಸೋಮವಾರ: ಶಿವ ಪೂಜೆಯ ವಿಧಿವಿಧಾನ ಹೀಗಿರಲಿ

By

ಈ ಮಾಸವು ಶ್ರಾವಣ ಮಾಸವಾಗಿದ್ದು ಈ ಮಾಸದಲ್ಲಿ ಹೆಚ್ಚಾಗಿ ಶಿವನನ್ನು ಪೂಜಿಸಿ ದೇವರ ಅನುಗ್ರಹವನ್ನು ಭಕ್ತರು ಪಡೆದುಕೊಳ್ಳುತ್ತಾರೆ. ಶ್ರಾವಣ ಮಾಸ ಬಂದಾಗ ಆನಂದ ತಂದಾಗ ಗಿಡಗಳ ಮರಗಳೂ ಹೊಸ ಚಿಗುರಿನಿಂದ ಹೊಸ ಆರಂಭದಿಂದ ಲವಲವಿಕೆಯಿಂದ ತೊಡಗಿಕೊಳ್ಳುತ್ತವೆ. ಇನ್ನಂತೂ ಹಬ್ಬಗಳಿಗೆ ಶ್ರಾವಣ ಮಾಸದಲ್ಲಿಯೇ ಚಾಲನೆ ದೊರೆಯುತ್ತದೆ. ಈ ಮಾಸದಲ್ಲಿ ಶಿವನನ್ನು ಪೂಜಿಸಿದರೆ ಅವರು ಬೇಡಿದ ವರಗಳನ್ನು ನೀಡುತ್ತಾರೆ ಎಂಬ ನಂಬಿಕೆ ಇದೆ.

ಶ್ರಾವಣ ಸೋಮವಾರವನ್ನು ಉಪವಾಸದ ದಿನವಾಗಿ ಪರಿಗಣಿಸುತ್ತಾರೆ. ಇದಂತೂ ಹಿಂದೂಗಳಿಗೆ ಹೆಚ್ಚು ಪವಿತ್ರವಾಗಿರುವ ಹಬ್ಬವಾಗಿದೆ. ಈ ತಿಂಗಳ ಎಲ್ಲಾ ಸೋಮವಾರವನ್ನು ವ್ರತಚಾರಣೆಯ ದಿನವಾಗಿ ಪರಿಗಣಿಸಲಾಗಿದೆ. ಸಂಪೂರ್ಣ ತಿಂಗಳನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಹಾಗಿದ್ದರೆ ಶ್ರಾವಣ ಸೋಮವಾರದಂದು ನೀವು ಪೂಜಾವಿಧಿಗಳನ್ನು ಹೇಗೆ ಮಾಡಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಶ್ರಾವಣ ಮಾಸದಂದು ಶಿವನನ್ನು ಪೂಜಿಸಲು ಹೆಚ್ಚಿನ ನೇಮ ನಿಷ್ಟೆಗಳೇನಿಲ್ಲ. ಏಕೆಂದರೆ ಸರಳ ಪೂಜೆಗೆ ಒಲಿಯುವ ಶಿವ ಭಕ್ತರ ಸಂಕಷ್ಟಗಳನ್ನು ನಮಃ ಶಿವಾಯ ಎಂಬ ಮಂತ್ರದಿಂದಲೇ ಪರಿಹರಿಸುವವರಾಗಿದ್ದಾರೆ. ಒಬ್ಬ ಮನುಷ್ಯ ಎಷ್ಟೇ ಪಾಪಗಳನ್ನು ಮಾಡಿದ್ದರೂ ನಮಃ ಶಿವಾಯ ಮಂತ್ರವನ್ನು ಪಠಿಸಿದಲ್ಲಿ ಆ ಪಾಪಗಳೆಲ್ಲಾ ವಿನಾಶವಾಗುತ್ತದೆ ಎಂಬುದು ನಂಬಿಕೆಯಾಗಿದೆ. ಅದರಂತೆ ನೀವು ಏನೇ ಮಾಡದೇ ಇದ್ದರೂ ನಮಃ ಶಿವಾಯ ಮಂತ್ರವನ್ನು ಪಠಿಸಿ ದೇವರನ್ನು ಬಹುದಾಗಿದೆ....

ಶ್ರಾವಣ ಸೋಮವಾರ ಪೂಜಾ ಸಾಮಾಗ್ರಿ

ಶ್ರಾವಣ ಸೋಮವಾರ ಪೂಜಾ ಸಾಮಾಗ್ರಿ

ಶಿವಲಿಂಗ, ಟ್ರೇ, ಐದು ಹಣ್ಣುಗಳು, ಪುಷ್ಪಮಾಲಾ (ಹೂವುಗಳ ಮಾಲೆ), ವೀಳ್ಯದೆಲೆ, ಬಿಲ್ವಪತ್ರ, ದತ್ತೂರ, ಹೂವುಗಳು, ಹತ್ತಿ, ಮಣ್ಣಿನ ಹಣತೆ, ಕುಂಬಳಕಾಯಿ, ಶಿವಲಿಂಗ, ತಟ್ಟೆ, ಜೇನುತುಪ್ಪ, ಗಂಗಾಜಲ,ಸಕ್ಕರೆ, ಹಸುವಿನ ಹಾಲು, ಮೊಸರು, ಹಸುವಿನ ತುಪ್ಪ ದೀಪದ ಬೆಳಕು, ಮೊಲಿ (ಪವಿತ್ರ ಕೆಂಪು ದಾರ), ಮತ್ತು ಶೃಂಗಾರರ್ ಪೆಟ್ಟಿಗೆ, ಅಕ್ಕಿ ಕೆಲವು ಧಾನ್ಯಗಳು ಭಗವಾನ್ ಶಿವನನ್ನು ಆರಾಧಿಸುವಾಗ ಪಾರ್ವತಿ ದೇವತೆಗೆ ಅರ್ಪಿಸಬಹುದು.

ಪೂಜಾ ವಿಧಿ ವಿಧಾನ ಹೀಗಿರಲಿ...

ಪೂಜಾ ವಿಧಿ ವಿಧಾನ ಹೀಗಿರಲಿ...

* ಶಿವಲಿಂಗವನ್ನು ತೆಗೆದುಕೊಳ್ಳಿ ಮತ್ತು ಅದನ್ನು ತಟ್ಟೆಯಲ್ಲಿ ಇರಿಸಿ. ಶಿವನಿಗೆ ಅಭಿಷೇಕವನ್ನು ಮಾಡಲು ಈ ತಟ್ಟೆಯನ್ನು ಬಳಸಿ, ನೀರು ಇಲ್ಲವೇ ಇತರ ಪದಾರ್ಥಗಳು ತಟ್ಟೆಯಿಂದ ಹರಿದು ಹೋಗದಂತೆ ನೋಡಿಕೊಳ್ಳಿ

* ಈಗ ತಟ್ಟೆಯಲ್ಲಿ ಶಿವಲಿಂಗವನ್ನು ಇರಿಸಿ. ಶಿವಲಿಂಗವನ್ನು ತೊಳೆಯಿರಿ. ಹೂವಿನ ದಳಗಳು ಮತ್ತು ಗಂಗಾಜಲವನ್ನು ಸೇರಿಸಿ

* ಪಂಚಾಮೃತವನ್ನು ಸಿದ್ಧಮಾಡಿ. ಒಂದು ಚಮಚ ಮೊಸರು, ಇದಕ್ಕೆ ಎರಡು ಚಮಚ ಹಾಲು ಸೇರಿಸಿ. ಸಕ್ಕರೆ, ಅರ್ಧ ಚಮಚ ಜೇನು ಮತ್ತು ಒಂದು ಚಮಚ ಗಂಗಾಜಲ ಸೇರಿಸಿ. ಚೆನ್ನಾಗಿ ಕಲಸಿಕೊಳ್ಳಿ.

* ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಿ. ಈ ಸಮಯದಲ್ಲಿ ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿ.

ಪೂಜೆಯ ವಿಧಿ

ಪೂಜೆಯ ವಿಧಿ

*ಗಂಗಾಜಲದಿಂದ ಲಿಂಗಕ್ಕೆ ಸ್ನಾನ ಮಾಡಿಸಿ

*ಈ ಸ್ನಾನವನ್ನು ಮಾಡಿಸಿದ ನಂತರ ಐದು ಹಣ್ಣುಗಳಿರುವ ತಟ್ಟೆಯನ್ನು ಲಿಂಗದ ಮುಂದೆ ಇರಿಸಿ

*ಈಗ ವೀಳ್ಯದೆಲೆ, ಬಿಲ್ವಪತ್ರೆಯನ್ನು ಲಿಂಗಕ್ಕೆ ಅರ್ಪಿಸಿ ಮತ್ತು ದತ್ತೂರವನ್ನು ತಟ್ಟೆಯಲ್ಲಿ ಇರಿಸಿ ಲಿಂಗಕ್ಕೆ ಅರ್ಪಿಸಿ

*ಅಡಿಕೆ ಮತ್ತು ಲವಂಗವನ್ನು ಅರ್ಪಿಸಿದ ನಂತರ ಹೂವಿನ ಮಾಲೆಯನ್ನು ದೇವರಿಗೆ ಅರ್ಪಿಸಿ.

*ಕೆಂಪು ದಾರವನ್ನು ತೆಗೆದುಕೊಳ್ಳಿ. ಈ ದಾರ ಎಷ್ಟು ಉದ್ದವಿರಬೇಕೆಂದರೆ ನಿಮ್ಮ ನಾಲ್ಕು ಬೆರಳುಗಳಲ್ಲಿ ಐದುಬಾರಿ ಸುತ್ತುವಷ್ಟು ಉದ್ದವಿರಬೇಕು. ವೀಡಿಯೊದಲ್ಲಿ ಇದನ್ನು ತೋರಿಸಲಾಗಿದೆ. ಇದನ್ನು ಶಿವಲಿಂಗಕ್ಕೆ ಅರ್ಪಿಸಿ.

* ಪಾರ್ವತಿ ದೇವರಿಗೆ ಅರ್ಪಿಸಲು ಶೃಂಗಾರ ಪೆಟ್ಟಿಗೆಯನ್ನು ತಟ್ಟೆಯಲ್ಲಿರಿಸಲು ಮರೆಯದಿರಿ.

*ಇನ್ನೊಂದು ತಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ದೀಪವನ್ನು ಇರಿಸಿ. ಕುಂಕುಮವನ್ನು ತೆಗೆದುಕೊಂಡು ಅದಕ್ಕೆ ನೀರು ಸೇರಿಸಿ ಕಲಸಿಕೊಳ್ಳಿ. ಅಕ್ಕಿ ಕಾಳು ಹಾಕಿ.

*ತುಪ್ಪದ ದೀಪವನ್ನು ಶಿವನಿಗೆ ಹಚ್ಚಿ, ತಿಲಕವನ್ನು ಹಚ್ಚಿ. ಈಗ ಆರತಿಯನ್ನು ಬೆಳಗಿ.

*ಓಂ ನಮಃ ಶಿವಾಯ ಮಂತ್ರ ಪಠಿಸಿ ಶ್ರಾವಣ ಸೋಮವಾರದಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಆಚರಿಸಿ. ಈ ಅವಧಿಯಲ್ಲಿ ಮಹಾ ಮೃತ್ಯುಂಜಯ ಮಂತ್ರ ಅಥವಾ ಓಂ ನಮಃ ಶಿವಾಯ ಮಂತ್ರವನ್ನು ಇಡಿಯದಿನ ಸಾಧ್ಯವಾದಷ್ಟು ಪಠಿಸಿರಿ

*ಶಿವನು ದೇಹ ಮತ್ತು ಮನಸ್ಸಿನ ಶುದ್ಧತೆಗೆ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಆದ್ದರಿಂದ ಸ್ನಾನವನ್ನು ಮಾಡದೆಯೇ ಶಿವನ ಪೂಜೆಯನ್ನು ಮಾಡಬಾರದು

* ಬಿಲ್ವ ಪತ್ರೆಯನ್ನು ಶಿವನು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ. ಇದನ್ನು ಭಕ್ತರು ಶಿವನಿಗೆ ನೀಡಲು ಮರೆಯಬಾರದು. ಶಿವನ ಮೂರು ಕಣ್ಣುಗಳನ್ನು ಈ ಬಿಲ್ವ ಪತ್ರೆ ಪ್ರತಿನಿಧಿಸುತ್ತದೆ.

*ಶಿವನಿಗೆ ಚಿನ್ನದಂತಹ ಬೆಲೆಬಾಳುವ ವಸ್ತುವನ್ನು ಅರ್ಪಿಸಬೇಕಾಗಿಲ್ಲ. ಅಂತೆಯೇ ಸರಳ ವಸ್ತುಗಳನ್ನು ದೇವರಿಗೆ ಅರ್ಪಸಿಕೊಂಡು ನೀವು ಭಗವಂತನ ಪೂಜೆಯನ್ನು ನಡೆಸಬಹುದಾಗಿದೆ. ಅವರನ್ನು ಮೆಚ್ಚಿಸಲು ಹಾಲು, ಮೊಸರನ್ನು ಅರ್ಪಿಸಬಹುದಾಗಿದೆ.

ಶ್ರಾವಣ ಸೋಮವಾರದ ಪೂಜೆಯ ಪ್ರಯೋಜನಗಳು

ಶ್ರಾವಣ ಸೋಮವಾರದ ಪೂಜೆಯ ಪ್ರಯೋಜನಗಳು

ಈ ವ್ರತವನ್ನು ಹೆಚ್ಚಾಗಿ ಮಹಿಳೆಯರು ಅದರಲ್ಲಿ ಹುಡುಗಿಯರು ಮಾಡುತ್ತಾರೆ. ತಮ್ಮ ನೆಚ್ಚಿನ ವರನನ್ನು ಪಡೆದುಕೊಳ್ಳಲು ಹುಡುಗಿಯರು ಈ ವ್ರತಾಚರಣೆಯನ್ನು ಮಾಡುತ್ತಾರೆ. ಇನ್ನು ವಿವಾಹಿತ ಮಹಿಳೆಯರು ತಮ್ಮ ಪತಿಯ ಆರೋಗ್ಯ ಮತ್ತು ಕುಟುಂಬದ ರಕ್ಷೆಗಾಗಿ ವೃತಾಚರಣೆಯನ್ನು ಮಾಡುತ್ತಾರೆ. ಇನ್ನು ವೃತ್ತಿಯಲ್ಲಿ ಉತ್ತಮ ಸ್ಥಾನ ಪಡೆಯಲು ಮತ್ತು ತಮ್ಮ ಕುಟುಂಬಕ್ಕಾಗಿ ಪುರುಷರೂ ಕೂಡ ವ್ರತವನ್ನು ಆಚರಿಸುತ್ತಾರೆ.

*ಶ್ರಾವಣ ಸೋಮವಾರದಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಆಚರಿಸಿ. ಈ ಅವಧಿಯಲ್ಲಿ ಮಹಾ ಮೃತ್ಯುಂಜಯ ಮಂತ್ರ ಅಥವಾ ಓಂ ನಮಃ ಶಿವಾಯ ಮಂತ್ರವನ್ನು ಇಡಿಯದಿನ ಸಾಧ್ಯವಾದಷ್ಟು ಪಠಿಸಿರಿ.

ಶ್ರಾವಣ ಸೋಮವಾರದ ಪೂಜೆಯ ಪ್ರಯೋಜನಗಳು

ಶ್ರಾವಣ ಸೋಮವಾರದ ಪೂಜೆಯ ಪ್ರಯೋಜನಗಳು

*ಈ ತಿಂಗಳಿನ ಎಲ್ಲಾ ದಿನಗಳಲ್ಲಿ ನಿಮ್ಮ ಊರಿಗೆ ಸಮೀಪದ ನದಿತಟಕ್ಕೆ ಬಂದು ಮೀನುಗಳಿಗೆ ಹಿಟ್ಟಿನುಂಡೆಗಳ ಆಹಾರ ನೀಡಿ. ನಿಮ್ಮಲ್ಲಿರುವ ಅಷ್ಟೂ ಆಹಾರವನ್ನು ಮೀನುಗಳು ತಿನ್ನುವವರೆಗೆ ಶಿವನನ್ನು ಆರಾಧಿಸಿ. ಈ ಮೂಲಕ ನಿಮ್ಮ ಜೀವನದಲ್ಲಿ ಹೆಚ್ಚಿನ ಧನಾಗಮನಕ್ಕೆ ಶಿವನ ಅನುಗ್ರಹ ದೊರಕುತ್ತದೆ.

*ಪ್ರತಿ ಸೋಮವಾರ ಇಪ್ಪತ್ತೊಂದು ಬಿಲ್ವಪತ್ರೆ ಎಲೆಗಳ ಮೇಲೆ ಚಂದನದ ಕಡ್ಡಿಯಿಂದ ಓಂನಮಃಶಿವಾಯ ಮಂತ್ರ ಬರೆದು ಶಿವಲಿಂಗಕ್ಕೆ ಅರ್ಪಿಸಿ.

English summary

Sawan Somvaar Vrat Vidhi

Shiva is the destroyer of the evil, the transformer, the Supreme being who has immense power, yet the one who is the easiest to please. Lord Shiva can be pleased with minimal offerings, more so in the month of Shravana, which started on July 28, 2018. Shravana is the fourth month in the Hindu calendar, most popular because of the number of festivals which are celebrated during the month. Among these festivals the most popular one is the Sawan Somvaar.
X
Desktop Bottom Promotion