Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಗಣರಾಜ್ಯೋತ್ಸವ 2021: ದೇಶದ ನಾಯಕರ ಸ್ಪೂರ್ತಿದಾಯಕ ನುಡಿಮುತ್ತುಗಳು
ಜನವರಿ ೨೬, ಗಣರಾಜ್ಯ ದಿನ. ದೇಶದೆಲ್ಲೆಡೆ ಬಹಳ ಸಂಭ್ರಮ ಹಾಗೂ ಹೆಮ್ಮೆಯಿಂದ ಆಚರಣೆ ಮಾಡಲಾಗುತ್ತದೆ. ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ಗಣರಾಜ್ಯೋತ್ಸವ ಯಾವ ಕಾರಣಕ್ಕೆ ಆಚರಿಸುತ್ತಾರೆ ಎಂದು ಗೊತ್ತಿಲ್ಲ. ಅಂಥವರು ಒಮ್ಮೆ ಇಲ್ಲಿ ಕಣ್ಣಾಯಿಸಿ.
ಭಾರತದ ಸಂವಿಧಾನವನ್ನು 1949ರಲ್ಲಿ ರಚಿಸಲಾಗಿದ್ದರೂ ಅದನ್ನು ಜನವರಿ 26, 1950ರಂದು ಜಾರಿಗೊಳಿಸಲಾಯಿತು. ಆದ್ದರಿಂದ ಈ ದಿನವನ್ನು ಗಣರಾಜ್ಯೋತ್ಸವದ ದಿನವನ್ನಾಗಿ ಆಚರಿಸಲಾಗುತ್ತದೆ.
ನಾವೆಲ್ಲರೂ ಭಾರತೀಯರು. ಒಂದೇ ತಾಯಿಯ ಮಕ್ಕಳು. ನಮ್ಮಲ್ಲಿ ಭೇದವಿಲ್ಲದೇ ಈ ದಿನದಂದು ಎಲ್ಲರೂ ಒಟ್ಟಾಗಿ ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಹಾಗಾಗಿ ನಾವಿಲ್ಲಿ ಈ ದಿನದ ವಿಶೇಷತೆಯನ್ನು ಸಾರಿದ ದೇಶದ ನಾಯಕರ ನುಡಿಮುತ್ತುಗಳನ್ನು ಹೇಳಿದ್ದೇವೆ.
ದೇಶದ ನಾಯಕರ ಸ್ಪೂರ್ತಿದಾಯಕ ನುಡಿಮುತ್ತುಗಳು ಇಲ್ಲಿವೆ.

1. ''ನಾವು ಭಾರತೀಯರು, ಮೊದಲನೆಯದಾಗಿ ಮತ್ತು ಕೊನೆಯದಾಗಿ.'' - ಬಿ.ಆರ್.ಅಂಬೇಡ್ಕರ್
2. ''ಪ್ರಜಾಪ್ರಭುತ್ವ ಎಂಬುದು ನೀವು ಜಗತ್ತಿನಲ್ಲಿ ನೋಡಲು ಬಯಸುವ ಬದಲಾವಣೆಯಾಗಬೇಕು'' - ಮಹಾತ್ಮ ಗಾಂಧಿ
3. ''ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ.''- ಬಾಲಗಂಗಾಧರ್ ತಿಲಕ್
4. ''ನಾನು ರಾಷ್ಟ್ರದ ಸೇವೆಯಲ್ಲಿ ಮರಣಹೊಂದಿದ್ದರೂ ಸಹ, ನಾನು ಅದರ ಬಗ್ಗೆ ಹೆಮ್ಮೆಪಡುತ್ತೇನೆ. ನನ್ನ ರಕ್ತದ ಪ್ರತಿ ಹನಿ ಈ ರಾಷ್ಟ್ರದ ಬೆಳವಣಿಗೆಗೆ ಮತ್ತು ಅದನ್ನು ಬಲವಾದ ಮತ್ತು ಕ್ರಿಯಾತ್ಮಕವಾಗಿಸಲು ಸಹಾಯ ಮಾಡುತ್ತದೆ.''- ಇಂದಿರಾ ಗಾಂಧಿ
5. "ನೀವು ಸಾಮಾಜಿಕ ಸ್ವಾತಂತ್ರ್ಯವನ್ನು ಸಾಧಿಸದಿದ್ದಾಗ, ಕಾನೂನಿನಿಂದ ಯಾವುದೇ ಸ್ವಾತಂತ್ರ್ಯವನ್ನು ಒದಗಿಸಿದರೂ ನಿಮಗೆ ಯಾವುದೇ ಪ್ರಯೋಜನವಿಲ್ಲ." -ಬಿ.ಆರ್ ಅಂಬೇಡ್ಕರ್
6.''ಜನರ ಇಚ್ಛಾಶಕ್ತಿಯ ಅಭಿವ್ಯಕ್ತಿಯಾಗಿರುವವರೆಗೂ ಮಾತ್ರ ಕಾನೂನಿನ ಪಾವಿತ್ರ್ಯವನ್ನು ಕಾಪಾಡಿಕೊಳ್ಳಬಹುದು.''- ಭಗತ್ ಸಿಂಗ್
7. "ಒಂದು ರಾಷ್ಟ್ರದ ಸಂಸ್ಕೃತಿ ಜನರ ಹೃದಯ ಮತ್ತು ಆತ್ಮದಲ್ಲಿ ನೆಲೆಸಿದೆ." - ಮಹಾತ್ಮ ಗಾಂಧಿ
8."ಕ್ರಾಂತಿಯು ಮನುಕುಲದ ಅಳಿಸಲಾಗದ ಹಕ್ಕು. ಸ್ವಾತಂತ್ರ್ಯವು ಎಲ್ಲರ ಜನ್ಮಸಿದ್ಧ ಹಕ್ಕು." - ಭಗತ್ ಸಿಂಗ್
9. "ನಿಮ್ಮ ರಕ್ತವು ಕುದಿಯದಿದ್ದರೆ, ಅದು ನಿಮ್ಮ ರಕ್ತನಾಳಗಳಲ್ಲಿ ಹರಿಯುವ ನೀರು. ಇದು ಮಾತೃಭೂಮಿಗೆ ಸೇವೆ ಸಲ್ಲಿಸದೇ ಇರುವ ಯುವಜನರಲ್ಲಿ ಹರಿಯುತ್ತದೆ.'' - ಚಂದ್ರಶೇಖರ್ ಆಜಾದ್
10.'' ಸಂವಿಧಾನದ ದುರ್ಬಳಕೆಯಾಗುತ್ತಿದೆ ಎಂದು ಗೊತ್ತಾದರೆ ಅದನ್ನು ಸುಡುವ ಮೊದಲಿಗ ನಾನಾಗಿರುತ್ತೇನೆ!''- ಡಾ. ಬಿಆರ್. ಅಂಬೇಡ್ಕರ್



Click it and Unblock the Notifications









