ಜಗತ್ ಪ್ರಸಿದ್ದ ಪುರಿ ರಥಯಾತ್ರೆಯ ವೈಭವನ್ನು ಕಣ್ತುಂಬಿಕೊಳ್ಳಿ!

By Hamanth p

ಪುರಿಯಲ್ಲಿ 2014ರ ರಥಯಾತ್ರೆಯು ಆರಂಭವಾಗಿದೆ. ಪ್ರತೀ ವರ್ಷದಂತೆ ಈ ವರ್ಷ ಕೂಡ ಜಗನ್ನಾಥ ರಥಯಾತ್ರೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳಲಿದ್ದಾರೆ. ವರ್ಷದ ಅತ್ಯಂತ ವೈಭವದ ಉತ್ಸವ ಇದಾಗಿರುವ ಕಾರಣ 2014ರ ರಥಯಾತ್ರೆಗೆ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಜನರು ಪುರಿ ಜಗನ್ನಾಥ ಮಂದಿರ ಹೊರಗೆ ಬಾಗಿಲು ತೆರೆಯುವುದನ್ನೇ ಕಾಯುತ್ತಿದ್ದಾರೆ.

ಮೂರ್ತಿಗಳ ಮೆರವಣಿಗೆಗಾಗಿ ಮೂರು ರಥಗಳನ್ನು ಶೃಂಗರಿಸಲಾಗಿದೆ. ರಥಯಾತ್ರೆಯ ಇತಿಹಾಸವನ್ನು ತಿರುವಿ ನೋಡಿದರೆ ಒಡಿಸ್ಸಾದಲ್ಲಿ ಕಳೆದ 5000 ವರ್ಷಗಳಿಂದ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಭಾರತದಲ್ಲಿರುವ ಎಲ್ಲಾ ಜಗನ್ನಾಥ ಮಂದಿರಗಳಲ್ಲಿ ಪ್ರತೀ ವರ್ಷ ಈ ರಥಯಾತ್ರೆ ಆಚರಿಸಲಾಗುತ್ತದೆ. ಆದರೆ ಪುರಿಯಲ್ಲಿ ಆಚರಿಸಲ್ಪಡುವ ರಥಯಾತ್ರೆಗೆ ಭಾರೀ ಜನಪ್ರಿಯತೆಯಿದೆ.

ಜಗನ್ನಾಥ, ಬಾಲಭದ್ರ ಮತ್ತು ಸುಭದ್ರಾಳ ಮೂರು ಮೂರ್ತಿಗಳ ಮೆರವಣಿಗೆ ಮಾಡಲು ಪ್ರತೀ ವರ್ಷ ಮರದಿಂದ ಹೊಸ ರಥವನ್ನು ತಯಾರು ಮಾಡಲಾಗುತ್ತದೆ. ಅಕ್ಷಯ ತೃತೀಯದಂದು ರಥದ ತಯಾರಿಯನ್ನು ಆರಂಭಿಸಲಾಗುತ್ತದೆ. ರಥಗಳಿಗೆ ಕಡುಬಣ್ಣ ಹಚ್ಚಲಾಗುತ್ತದೆ. ಮೇಲ್ಛಾವಣಿಗಳಿಗೆ ಕೆಂಪು, ಹಳದಿ ಮತ್ತು ಹಸಿರು ಛತ್ರಿ ಅಳವಡಿಸಲಾಗುತ್ತದೆ. ಜಗನ್ನಾಥನ ರಥದಲ್ಲಿ ಕೆಂಪು ಮತ್ತು ಹಳದಿ ಛತ್ರಿಗಳಿರುತ್ತದೆ. ಬಾಲಭದ್ರ ರಥವನ್ನು ಕೆಂಪು ಮತ್ತು ಹಸಿರು ಛತ್ರಿಗಳಿಂದ, ಸುಭದ್ರಾ ರಥವನ್ನು ಕೆಂಪು ಮತ್ತು ಕಪ್ಪು ಛತ್ರಿಗಳಿಂದ ಅಲಂಕರಿಸಲಾಗುತ್ತದೆ.

Rath Yatra

ಇದರ ಬಳಿಕ ರಥಗಳನ್ನು ಎಳೆದು ಹತ್ತಿರದ ಗುಡಿಚಾ ಮಂದಿರಕ್ಕೆ ತರಲಾಗುತ್ತದೆ. ಗುಡಿಚಾ ಮಂದಿರವು ಜಗನ್ನಾಥ ದೇವರ ಚಿಕ್ಕಮ್ಮನ ಮನೆಯೆಂಬ ಪ್ರತೀತಿಯಿದೆ. ಜಗನ್ನಾಥ ದೇವರ ಪರಮ ಭಕ್ತೆಯಾಗಿದ್ದ ರಾಣಿಯ ನೆನಪಿಗಾಗಿ ಈ ಮಂದಿರವನ್ನು ಕಟ್ಟಲಾಗಿದೆ ಎಂದು ಪುರಾಣದಲ್ಲಿದೆ. ರಾಣಿಯ ಇಚ್ಛೆಯಂತೆ ರಾಜನು ಪುರಿಯಲ್ಲಿ ದೊಡ್ಡ ಮಂದಿರವನ್ನು ನಿರ್ಮಿಸಿದ. ಪ್ರತೀ ವರ್ಷ ರಥಯಾತ್ರೆ ವೇಳೆಗೆ ಗುಡಿಚಾ ಮಂದಿರಕ್ಕೆ ರಥ ಬರುವುದು ಸಂಪ್ರದಾಯವಾಗಿದೆ. 2014ರ ರಥಯಾತ್ರೆ ಆರಂಭವಾಗಿದ್ದು, ಎಲ್ಲಾ ವಿವರಗಳನ್ನು ಪಡೆಯಲು ಬೋಲ್ಡ್ ಸ್ಕೈಯನ್ನು ನೋಡುತ್ತಲಿರಿ.

ಮೂರು ರಥಗಳು ತಯಾರಾಗಿದೆ
ರಥಯಾತ್ರೆಗಾಗಿ ಜಗನ್ನಾಥ, ಸುಭದ್ರಾ ಮತ್ತು ಬಾಲಭದ್ರ ದೇವರ ರಥಗಳು ತಯಾರಾಗಿದೆ. ಜಗನ್ನಾಥ ದೇವರ ರಥವನ್ನು ನಂಧಿಘೋಷ್ ಅಥವಾ ಚಕ್ರಧ್ವಜ ಎಂದು ಕರೆಯಲಾಗುತ್ತದೆ. ಇದರರ್ಥ ಉಲ್ಲಾಸದ ಶಬ್ದವೆಂದರ್ಥ. ಇದು ಸುಮಾರು 65 ಟನ್ ಭಾರ ಹೊಂದಿದೆ. ಬಾಲಭದ್ರ ರಥವನ್ನು ತಲಧ್ವಜ ಎಂದು ಕರೆಯಲಾಗುತ್ತದೆ. ಇದರರ್ಥ ಶಕ್ತಿಶಾಲಿ ಲಯ. ಸುಭದ್ರಾ ರಥವನ್ನು ಪದ್ಮಧ್ವಜ ಅಥವಾ ದರ್ಪದಾಲನ ಎನ್ನಲಾಗುತ್ತದೆ. ಇದರರ್ಥ ಹೆಮ್ಮೆಯ ವಿಧ್ವಂಸಕ.

ಭಾರೀ ಜನಸ್ತೋಮ
ಪ್ರತೀ ವರ್ಷದಂತೆ 2014ರ ರಥಯಾತ್ರೆಗೆ ಭಾರೀ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ರಥದ ಹಗ್ಗವನ್ನು ಎಳೆಯಳು ಮಂದಿರದ ಹೊರಗಡೆ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ.

ಗರಿಷ್ಠ ಭದ್ರತೆ
ಪ್ರತೀ ವರ್ಷ ಭಾರತ ಹಾಗೂ ವಿದೇಶದಿಂದ ಭಾರೀ ಸಂಖ್ಯೆಯ ಜನರು ಸೇರುವ ಅತೀ ದೊಡ್ಡ ಉತ್ಸವೆಂದರೆ ಅದು ರಥಯಾತ್ರೆ. ಜನರನ್ನು ನಿಯಂತ್ರಿಸಲು ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಬಾಗಿಲು ತೆರೆಯುವುದನ್ನು ಕಾಯುತ್ತಿರುವ ಭಕ್ತರು
ನೀವು ನೋಡುತ್ತಿರುವಂತೆ ಭಾರೀ ಸಂಖ್ಯೆಯ ಭಕ್ತರು ಮಂದಿರದ ಹೊರಗಡೆ ಬಾಗಿಲು ತೆರೆಯಲು ಕಾಯುತ್ತಿದ್ದಾರೆ. ಬಾಗಿಲು ತೆರೆಯುವುದನ್ನು ನೋಡಲು ಜನರು ಕುತೂಹಲದಿಂದ ಕಾಯುತ್ತಿದ್ದಾರೆ.

ಹೊರಬಂದ ಬಾಲಭದ್ರ
ಬಾಲಭದ್ರ ಜಗನ್ನಾಥ ದೇವರ ಹಿರಿಯ ಸೋದರ. ಪುರಿ ಮಂದಿರದಿಂದ ಹೊರಗಡೆ ಮೊದಲು ಬರುವ ಮೂರ್ತಿ ಬಾಲಭದ್ರ ದೇವರದ್ದಾಗಿದೆ.

ಮೆರವಣಿಗೆಯಲ್ಲಿ ಬಾಲಭದ್ರ
ದೇವರ ಮೂರ್ತಿ ಬಾಲಭದ್ರ ದೇವರ ಮೂರ್ತಿಯನ್ನು ಮೆರವಣಿಗೆ ಮೂಲಕ ರಥದವರೆಗೆ ಕೊಂಡೊಯ್ಯಲಾಯಿತು.

ಮೆರವಣಿಗೆಯಲ್ಲಿ ಬಾಲಭದ್ರ ದೇವರ ಮೂರ್ತಿ
ಬಾಲಭದ್ರ ದೇವರ ಮೂರ್ತಿಯನ್ನು ಮೆರವಣಿಗೆ ಮೂಲಕ ರಥದವರೆಗೆ ಕೊಂಡೊಯ್ಯಲಾಯಿತು.

ರಥವೇರಿದ ಬಾಲಭದ್ರ
ಬಾಲಭದ್ರ ದೇವರ ಮೂರ್ತಿಯನ್ನು ಜನರು ರಥವೇರಿಸಿದರು.

ನೇರ ದರ್ಶನ
ಬಾಲಭದ್ರ ದೇವರು 2014ರ ರಥಯಾತ್ರೆಯಲ್ಲಿ ಬಾಲಭದ್ರ ದೇವರ ಮೂರ್ತಿಯನ್ನು ನೋಡಿ.

ಸುಭದ್ರಾ ದೇವತೆ ಸಿಂಘದ್ವಾರದ ಬಳಿ
ದೇವತೆ ಸುಭದ್ರಾಳನ್ನು ಮಂದಿರದಿಂದ ಹೊರತರಲಾಯಿತು.

ರಥವೇರಿದ ದೇವತೆ
ಸುಭದ್ರಾ ದೇವತೆ ಸುಭದ್ರಾ ಮೂರ್ತಿಯನ್ನು ರಥದಲ್ಲಿಡಲಾಯಿತು.

ಜಗನ್ನಾಥ ದೇವರು ಸಿಂಘ ದ್ವಾರ
ಜಗನ್ನಾಥ ದೇವರ ಸಿಂಘದ್ವಾರದಿಂದ ಹೊರತರಲಾಯಿತು.

ಮೆರವಣಿಗೆಯಲ್ಲಿ ಜಗನ್ನಾಥ
ಭಾರೀ ಜನಸ್ತೋಮದಲ್ಲಿ ಜಗನ್ನಾಥ ದೇವರ ಮೂರ್ತಿಯನ್ನು ರಥದ ಬಳಿಗೆ ಕೊಂಡೊಯ್ಯಲಾಯಿತು.

ಲಕ್ಷಾಂತರ ಮಂದಿಯ ಕಾತರ
ಪುರಿ ಮಂದಿರ ಹೊರಗಡೆ ರಥವನ್ನು ಎಳೆಯಲು ಲಕ್ಷಾಂತರ ಮಂದಿ ಕಾತರದಿಂದ ಕಾಯುತ್ತಿದ್ದಾರೆ.

ನಂದಿಘೋಷದಲ್ಲಿ ಜಗನ್ನಾಥ ದೇವರ ಮೂರ್ತಿ
ಜಗನ್ನಾಥ ದೇವರ ಮೂರ್ತಿಯನ್ನು ನಂದಿಘೋಷ ರಥದಲ್ಲಿಡಲಾಯಿತು.

ನೇರ ದರ್ಶನ
ನಿಷ್ಕಲ್ಮಷ ಮನಸ್ಸಿನಿಂದ ಪ್ರಾರ್ಥಿಸಿದರೆ ಜಗನ್ನಾಥ ದೇವರು ತಮ್ಮ ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆಯಿದೆ.

ನಂದಿಘೋಷದೊಳಗಡೆ ಜಗನ್ನಾಥ ದೇವರು
ರಥದೊಳಗೆ ಜಗನ್ನಾಥ ದೇವರ ಮೂರ್ತಿಯನ್ನಿಡಲಾಗಿದೆ. ರಥ ಎಳೆಯುವುದು ಇನ್ನೇನೂ ಆರಂಭವಾಗಲಿದೆ.

ಮೂರ್ತಿಗಳ ಆರಾಧನೆ
ಮೂರ್ತಿಗಳ ಪೂಜೆಗಾಗಿ ಅರ್ಚಕರೊಬ್ಬರು ಪೂಜಾ ಸಾಮಾಗ್ರಿಗಳನ್ನು ಹಿಡಿದುಕೊಂಡಿದ್ದಾರೆ.

ಮೂರ್ತಿಗಳಿಗೆ ಶೃಂಗಾರ
ಬಾಲಭದ್ರಾ, ಸುಭದ್ರಾ ಮತ್ತು ಜಗನ್ನಾಥ ದೇವರ ಮೂರ್ತಿಗಳನ್ನು ಶೃಂಗರಿಸಲಾಯಿತು.

X
Desktop Bottom Promotion