For Quick Alerts
ALLOW NOTIFICATIONS  
For Daily Alerts

ರಾಮಾಯಣ ಕಥೆ: ಅಂದು ಶ್ರೀರಾಮನಿಗೆ ಸಹಾಯ ಮಾಡಿದ ಪುಟ್ಟ ಅಳಿಲಿನ ಕಥೆ

|

ವನವಾಸದಲ್ಲಿ ಸೀತಾಮಾತೆಯನ್ನು ರಾವಣನು ಅಪಹರಿಸಿಕೊಂಡು ಹೋಗಿ ಲಂಕೆಯ ಅಶೋಕವನದಲ್ಲಿ ಇರಿಸಿಕೊಂಡ ಬಳಿಕ ಶ್ರೀರಾಮ ಮತ್ತು ಲಕ್ಷ್ಮಣ ಸಹಿತ ಪ್ರತಿಯೊಬ್ಬರು ಚಿಂತಾಕ್ರಾಂತರಾಗಿದ್ದರು. ಸೀತೆಯನ್ನು ಬಿಡುಗಡೆ ಮಾಡಿಕೊಂಡು ಬರಬೇಕು ಎನ್ನುವ ನಿಟ್ಟಿನಲ್ಲಿ ಮೊದಲು ಶಾಂತಿ ದೂತನನ್ನು ಲಂಕೆಗೆ ಕಳುಹಿಸಿಕೊಡಲಾಯಿತು. ಆದರೆ ರಾವಣನು ತನ್ನ ಹಠ ಬಿಡದೆ ರಾಮನನ್ನು ಸೋಲಿಸಿ, ಸೀತೆಯನ್ನು ವಶಪಡಿಸಿಕೊಳ್ಳುವೆ ಎಂದು ಅಹಂ ತೋರಿಸುತ್ತಿದ್ದ. ಶಾಂತಿದೂತನಾಗಿ ಹೋಗಿದ್ದ ಹನುಮಂತನ ಬಾಲಕ್ಕೆ ಕೂಡ ಬೆಂಕಿ ಹಚ್ಚಲಾಯಿತು. ಇದರ ಬಳಿಕ ರಾವಣನ ಸೇನೆಯ ವಿರುದ್ಧ ಹೋರಾಡಲು ಶ್ರೀರಾಮ ದೇವರ ಸೇನೆ ಅತ್ಯುತ್ಸಾಹದಲ್ಲಿತ್ತು ಮತ್ತು ದ್ವೇಷಾಗ್ನಿಯು ಅವರ ಹೃದಯದಲ್ಲಿ ಕುದಿಯುತ್ತಲಿತ್ತು.

Ramayana

ಅದೇ ರೀತಿಯಲ್ಲಿ ಅಲ್ಲಿದ್ದ ಅಳಿಲಿನ ಹೃದಯದಲ್ಲಿ ಈ ದ್ವೇಷದ ಬೆಂಕಿ ಹತ್ತಿಕೊಂಡಿತ್ತು. ರಾಮನ ಸೇನೆಯಲ್ಲಿ ಇದ್ದ ಹೆಚ್ಚಿನ ಎಲ್ಲಾ ಯೋಧರು ಕಪಿಗಳು. ಇವರೆಲ್ಲರೂ ಸಮುದ್ರಕ್ಕೆ ಸೇತುವೆ ಕಟ್ಟಿ ಲಂಕೆಗೆ ಹೋಗುವ ನಿರೀಕ್ಷೆಯಲ್ಲಿ ಸಮುದ್ರ ತಡದಲ್ಲಿ ನಿಂತಿದ್ದರು. ಪ್ರತಿಯೊಬ್ಬರು ದೊಡ್ಡ ದೊಡ್ಡ ಕಲ್ಲುಗಳನ್ನು ಎತ್ತಿಕೊಂಡು ಅದನ್ನು ಸಮುದ್ರಕ್ಕೆ ಎಸೆದು ಸೇತುವೆ ನಿರ್ಮಾಣ ಮಾಡಲು ನಿರ್ಧರಿಸಿದ್ದರು. ಹಾಗೆ ಅವರು ತಮ್ಮ ಕಾಯಕದಲ್ಲಿ ತೊಡಗಿದ್ದರು.

ಸೀತೆಯ ಅಪಹರಣದ ಬಳಿಕದ ಸಂಕಟ

ಸೀತೆಯ ಅಪಹರಣದ ಬಳಿಕದ ಸಂಕಟ

ಹನುಮಂತ, ಸುಗ್ರೀವ ಅಥವಾ ಕಪಿ ಸೇನೆಯ ಬೇರೆ ಯಾರೇ ಆಗಿರಲಿ, ಅವರು ತಮ್ಮ ಆರೋಗ್ಯ, ವಯಸ್ಸು ಮತ್ತು ಮನಸ್ಸನ್ನು ಮರೆತು ಸೀತಾ ಮಾತೆಯ ರಕ್ಷಿಸಬೇಕೆಂಬ ಒಂದೇ ಉದ್ದೇಶದಿಂದ ಬದ್ಧತೆ ಹಾಗೂ ಹುರುಪಿನಿಂದ ಕೆಲಸ ಮಾಡುತ್ತಲಿದ್ದರು. ಸಮುದ್ರವು ತುಂಬಾ ಆಳ ಮತ್ತು ಅಗಲವಾಗಿದ್ದಂತೆ ಇವರೆಲ್ಲರ ಹೃದಯದಲ್ಲಿದ್ದ ಬೆಂಕಿ ಕೂಡ ಅಷ್ಟೇ ಆಳ ಹಾಗೂ ಅಗಲದಲ್ಲಿತ್ತು. ಯಾಕೆಂದರೆ ಅವರೆಲ್ಲರೂ ಶ್ರೀರಾಮ ಮತ್ತು ಸೀತಾಮಾತೆಯನ್ನು ತುಂಬಾ ಪ್ರೀತಿಸುತ್ತಿದ್ದರು ಮತ್ತು ಆಕೆಯನ್ನು ರಕ್ಷಿಸಲು ಅವರು ಬಯಸುತ್ತಿದ್ದರು.

ಸೀತಾಮಾತೆಯ ರಕ್ಷಣೆಗಾಗಿ ಎಲ್ಲರು ಜತೆಗೂಡಿ ಕೆಲಸ ಮಾಡುತ್ತಿದ್ದರು

ಸೀತಾಮಾತೆಯ ರಕ್ಷಣೆಗಾಗಿ ಎಲ್ಲರು ಜತೆಗೂಡಿ ಕೆಲಸ ಮಾಡುತ್ತಿದ್ದರು

ಸೇನೆಯಲ್ಲಿ ಕಪಿಗಳು ಮತ್ತು ಬೇರೆ ಯೋಧರು ಮಾತ್ರ ಶ್ರೀರಾಮನಿಗೆ ನೆರವಾಗುತ್ತಿರಲಿಲ್ಲ. ಹತ್ತಿರ ಅರಣ್ಯವಾಸಿಗಳು ಮತ್ತು ಗ್ರಾಮಸ್ಥರು ಕೂಡ ಶ್ರೀರಾಮನ ಬೆಂಬಲಕ್ಕೆ ಬರುತ್ತಿದ್ದರು. ಶ್ರೀರಾಮನು ಅಯೋಧ್ಯೆಯ ರಾಜ ಮತ್ತು ಆತನು ವನವಾಸ ಅನುಭವಿಸಲು ಬಂದಿರುವುದಾಗಿ ಇವರೆಲ್ಲರಿಗೂ ತಿಳಿದಿತ್ತು. ಸೀತಾ ಮಾತೆಯು ತುಂಬಾ ಗೌರವಯುತ ಮತ್ತು ಘನತೆಯ ರಾಣಿಯಾಗಿದ್ದು, ಆಕೆಯನ್ನು ರಾವಣನು ಕಾಡಿನಿಂದಲೇ ಅಪಹರಿಸಿಕೊಂಡು ಹೋಗಿದ್ದ. ಇವರೆಲ್ಲರೂ ಜತೆಯಾಗಿ ಕೆಲಸ ಮಾಡಿ ಸೀತಾಮಾತೆಯ ರಕ್ಷಿಸಲು ಬಯಸಿದ್ದಾರೆ.

ಅಳಿಲಿನ ಸೇವೆ ಗಮನಕ್ಕೆ ಬರಲಿಲ್ಲ

ಅಳಿಲಿನ ಸೇವೆ ಗಮನಕ್ಕೆ ಬರಲಿಲ್ಲ

ದೊಡ್ಡ ಮಟ್ಟದ ಸೇನೆಯು ಸೇತುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ವೇಳೆ ಒಂದು ಪ್ರಾಣಿಯ ಸೇವೆ ಮಾತ್ರ ಯಾರ ಗಮನಕ್ಕೂ ಬಂದಿರಲಿಲ್ಲ. ಅಳಿಲು ಸಣ್ಣ ಸಣ್ಣ ಕಲ್ಲುಗಳನ್ನು ತೆಗೆದುಕೊಂಡು ಹೋಗಿ ಅದು ಎಲ್ಲಿ ಸಾಧ್ಯವೋ ಅಲ್ಲಿ ಕೊಂಡು ಹೋಗಿ ಇಡುತ್ತಲಿತ್ತು. ಈ ಮೂಲಕ ಅದು ಕೂಡ ಸೇತುವೆ ನಿರ್ಮಾಣಕ್ಕೆ ತನ್ನ ಸೇವೆ ನೀಡಲು ಬಯಸಿತ್ತು. ಈ ಪ್ರಾಣಿಯ ಗಾತ್ರವು ತುಂಬಾ ಸಣ್ಣದಾಗಿದ್ದರೂ ಸೇತುವೆ ನಿರ್ಮಾಣದ ಕಾರ್ಯ ಮತ್ತು ಸೇನೆಯಲ್ಲಿದ್ದ ಇತರರ ಸೇವೆಗೆ ಇದನ್ನು ಹೋಲಿಸಿದರೆ ತುಂಬಾ ಸಣ್ಣದು ಎಂದು ಅನಿಸಿದರೂ ಈ ಸೇವೆಯನ್ನು ಕಡೆಗಣಿಸುವಂತಿಲ್ಲ. ಆ ಅಳಿಲು ತನ್ನಷ್ಟಕ್ಕೆ ತನ್ನ ಸೇವೆ ಮಾಡುತ್ತಲಿತ್ತು. ಬೇರೆ ಯಾವುದೇ ವಿಚಾರವು ಅದರ ಕಾರ್ಯದ ಮೇಲೆ ಪರಿಣಾಮ ಬೀರಲಿಲ್ಲ.

 ಕಪಿಯು ಅಳಿಲಿಗೆ ತಮಾಷೆ ಮಾಡಿತು

ಕಪಿಯು ಅಳಿಲಿಗೆ ತಮಾಷೆ ಮಾಡಿತು

ಸಣ್ಣ ಅಳಿಲು ತನ್ನ ಸೇವೆ ನೀಡುತ್ತಿರುವುದನ್ನು ನೋಡಿದ ಕಪಿಯೊಂದು ಅದರ ಬಗ್ಗೆ ತಮಾಷೆ ಮಾಡಿತು. ಅಳಿಲನ್ನು ನೋಡಿದ ಕಪಿಯು ತನ್ನ ದಾರಿಯಿಂದ ದೂರ ಹೋಗುವಂತೆ ಹೇಳಿತು. ನಿನ್ನ ಸೇವೆಯನ್ನು ಯಾರೂ ಗಮನಿಸದೆ ಇರುವ ಕಾರಣದಿಂದ ಈ ಕಾರ್ಯವನ್ನು ನಿಲ್ಲಿಸಿಬಿಡು ಮತ್ತು ನೀವು ಕೆಲಸ ಮಾಡದೆ ಇದ್ದರೂ ಅದರಿಂದ ಯಾವುದೇ ತೊಂದರೆ ಆಗದು ಎಂದು ಕಪಿಯು ಗೇಲಿ ಮಾಡುತ್ತದೆ. ಕೆಲಸ ನಿಲ್ಲಿಸಿ, ಹೋಗಿ ವಿಶ್ರಾಂತಿ ಪಡೆಯುವಂತೆ ಅದು ಸೂಚಿಸುತ್ತದೆ. ಅಳಿಲು ತನ್ನನ್ನು ಸಮರ್ಥಿಸಿಕೊಂಡ ವೇಳೆ ಬೇರೆಯವರು ಕೂಡ ಅದರತ್ತ ನೋಡಿ ಗೇಲಿ ಮಾಡಲು ಆರಂಭಿಸಿದರು.

ಅಳಿಲು ರಾಮ ದೇವರ ಬಳಿಗೆ ಹೋಯಿತು

ಅಳಿಲು ರಾಮ ದೇವರ ಬಳಿಗೆ ಹೋಯಿತು

ತನ್ನನ್ನು ಗೇಲಿ ಮಾಡಿದ ಕಾರಣ ನೊಂದ ಅಳಿಲು ಶ್ರೀರಾಮನ ಬಳಿಗೆ ಹೋಯಿತು. ಸೇನೆಯಲ್ಲಿ ಇರುವವರ ಬಗ್ಗೆ ದೂರು ನೀಡಿದ ಅಳಿಲು, ಅವರೆಲ್ಲರಿಗೂ ಶಿಕ್ಷೆ ನೀಡುವಂತೆ ಕೇಳಿಕೊಂಡಿತು. ಸೇತುವೆ ಬಳಿ ಸೇನೆಯ ಎಲ್ಲರೂ ಜತೆ ಸೇರುವಂತೆ ಶ್ರೀರಾಮನು ಸೂಚಿಸುತ್ತಾನೆ. ಎಲ್ಲರು ಅಲ್ಲಿ ಬಂದ ಸೇರಿದ ವೇಳೆ ಶ್ರೀರಾಮನು ಬಂದು ಎರಡು ಕಲ್ಲುಗಳು ಜಾರಿ ಬಿದ್ದಿರುವುದರತ್ತ ಬೊಟ್ಟು ಮಾಡುವನು. ಯಾಕೆಂದರೆ ಇವುಗಳನ್ನು ಸಣ್ಣ ಸಣ್ಣ ಕಲ್ಲುಗಳ ನೆರವಿಲ್ಲದೆ ನಿಲ್ಲಿಸಲಾಗಿತ್ತು. ಸಣ್ಣ ಸಣ್ಣ ಕಲ್ಲುಗಳನ್ನು ಅಳಿಲು ಅಲ್ಲಿಗೆ ತಂದು ಹಾಕಿದೆ ಮತ್ತು ಅದು ಜೋಡಣೆಗೆ ನೆರವಾಗಿದೆ ಎಂದು ರಾಮನು ಹೇಳುವನು.

ಸಣ್ಣ ಕಲ್ಲುಗಳು ದೊಡ್ಡ ಕಲ್ಲುಗಳನ್ನು ಜತೆಯಾಗಿಟ್ಟಿದ್ದವು

ಸಣ್ಣ ಕಲ್ಲುಗಳು ದೊಡ್ಡ ಕಲ್ಲುಗಳನ್ನು ಜತೆಯಾಗಿಟ್ಟಿದ್ದವು

ಸಣ್ಣ ಸಣ್ಣ ಕಲ್ಲುಗಳು ದೊಡ್ಡ ಕಲ್ಲುಗಳ ಜೋಡಣೆಯಲ್ಲಿ ಹೇಗೆ ನೆರವಾಗಿದೆ ಎಂದು ನೋಡಿ ಎಲ್ಲರಿಗೂ ಅಚ್ಚರಿಯಾಗಿದೆ. ಯಾವುದೇ ಕಾರ್ಯವು ಸಣ್ಣದು ಅಥವಾ ದೊಡ್ಡದು ಎಂದು ಇರುವುದಿಲ್ಲವೆಂದು ಅವರು ಮನವರಿಕೆ ಮಾಡಿಕೊಂಡರು. ಪ್ರಾಮಾಣಿಕ ಉದ್ದೇಶದಿಂದ, ಸದುದ್ದೇಶದಿಂದ ಮಾಡಿರುವಂತಹ ಯಾವುದೇ ಕಾರ್ಯವು ಒಳ್ಳೆಯದಾಗಿರುವುದು. ಅಳಿಲಿನ ಬಗ್ಗೆ ಗೇಲಿ ಮಾಡಿದವರೆಲ್ಲರೂ ತುಂಬಾ ಮುಜುಗರಕ್ಕೆ ಒಳಗಾದರು ಮತ್ತು ಕ್ಷಮೆ ಕೇಳಿದರು.

ಅಳಿಲಿನ ಪ್ರಶಂಸೆ ಮಾಡಲು ಶ್ರೀರಾಮನು ಅದರ ಬೆನ್ನನ್ನು ಸವರುತ್ತಾನೆ. ಇದರಿಂದ ಅಳಿಲಿನ ಬೆನ್ನ ಮೇಲೆ ಮೂರು ಬೆರಳಿನ ಗುರುತು ಈಗಲೂ ಇದೆ ಎಂದು ಹೇಳಲಾಗುತ್ತದೆ. ಅಳಿಲಿನ ಬೆನ್ನ ಮೇಲೆ ಇರುವ ಮೂರು ಗೆರೆಗಳಿಗೆ ಇದು ಪೌರಾಣಿಕ ಕಾರಣವಾಗಿದೆ.

English summary

Ramayana story: Little squirrel who helped Lord Rama!

Lord Ram's army was well prepared to fight the demon king Ravana who had abducted Mata Sita, the wife of Lord Rama. As they got the orders, all began to make a bridge by carrying big heavy rocks and placing them in alignment in order to make a bridge out of the arrangement. Amidst the entire army, there was a squirrel also, whose efforts were being ignored.
X
Desktop Bottom Promotion