Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ತಾಳ್ಮೆ ಇದ್ರೆ ಹತ್ತು ವರ್ಷ, ಇಲ್ದಿದ್ರೆ ಇಪ್ಪತ್ತು ವರ್ಷ

ವಿದ್ಯಾರ್ಥಿಯು ತನ್ನ ಗುರುಗಳ ಬಳಿಗೆ ತೆರಳಿ "ಸಮರ ವ್ಯವಸ್ಥೆಗೆ ನನ್ನನ್ನು ನಾನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದೇನೆ. ಇದರಲ್ಲಿ ನಾನು ಗುರುವಾಗಲು ಎಷ್ಟು ವರ್ಷಗಳು ಬೇಕಾಗುತ್ತದೆ" ಎಂದು ಶ್ರದ್ಧೆಯಿಂದ ಕೇಳಿದನು.
ಆ ವಿದ್ಯಾರ್ಥಿಯನ್ನು ಅಪಾದಮಸ್ತಕವಾಗಿ ನೋಡಿದ ಗುರುಗಳು ಸಹಜವಾಗಿಯೇ "ಹತ್ತು ವರ್ಷಗಳು" ಎಂದು ಉತ್ತರಿಸಿದರು. ಈ ಉತ್ತರ ವಿದ್ಯಾರ್ಥಿಗೆ ರುಚಿಸಲಿಲ್ಲ.
ತಾಳ್ಮೆ ಇಲ್ಲದೇ ಆ ವಿದ್ಯಾರ್ಥಿ ಮತ್ತೆ ಗುರುಗಳಿಗೆ, "ಗುರುಗಳೇ ನಾನು ಅದಕ್ಕಿಂತ ಬೇಗನೇ ಈ ವಿದ್ಯೆಯಲ್ಲಿ ಗುರುವಾಗಬೇಕು. ಇದಕ್ಕಾಗಿ ನಾನು ಕಠಿಣ ಶ್ರಮ ವಹಿಸಿ ಅಭ್ಯಾಸ ಮಾಡ್ತೀನಿ. ಪ್ರತಿ ಪ್ರತಿ ದಿನವೂ ದಿನ ಹತ್ತು ಗಂಟೆಗಳಿಗಿಂತ ಹೆಚ್ಚು ಸಮಯ ನಾನು ಅಭ್ಯಾಸ ಮಾಡುತ್ತೇನೆ. ಹೀಗೆ ಮಾಡಿದಾಗ ನಾನು ಗುರುವಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತೇನೆ?" ಎಂದು ಮತ್ತೆ ಕೇಳಿದನು.
ಆಗ ಗುರುಗಳು ಒಂದು ಕ್ಷಣ ಯೋಚಿಸಿ "ಇಪ್ಪತ್ತು ವರ್ಷಗಳು" ಎಂದು ಹೇಳಿದರು.
(ಈ ಕಥೆಯ ಮತ್ತೊಂದು ಆವೃತ್ತಿಯಲ್ಲಿ ವಿದ್ಯಾರ್ಥಿಯು "ಜ್ಞಾನೋದಯ"ವನ್ನು ಪಡೆಯಲು ಉತ್ಸುಕನಾಗಿದ್ದೇನೆ ಎಂದು ಹೇಳುತ್ತಾನೆ.)



Click it and Unblock the Notifications
