Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಎಲ್ಲಾ ಏಕಾದಶಿಗಳ ಫಲ ನೀಡುವ ನಿರ್ಜಲ ಏಕಾದಶಿ ಯಾವಾಗ? ಇದರ ಪೂಜಾ ವಿಧಿ ಹಾಗೂ ಮಹತ್ವವೇನು?
ಹಿಂದೂ ಪಂಚಾಂಗದ 12 ಮಾಸಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದ ಹನ್ನೊಂದನೆಯ ದಿನವನ್ನು ಏಕಾದಶಿಯೆಂದು ಆಚರಿಸಲಾಗುವುದು. ಈ ದಿನ ಉಪವಾಸ ಮಾಡುವ ಸಂಪ್ರದಾಯವಿದೆ. ಈ ಬಾರಿ ನಿರ್ಜಲ ಏಕಾದಶಿ ಜೂನ್ 21ರಂದು ಬಂದಿದೆ.
ಧರ್ಮ ಗ್ರಂಥಗಳ ಪ್ರಕಾರ ಜ್ಯೇಷ್ಠ ಮಾಸವು ಅನೇಕ ಧಾರ್ಮಿಕ ಮಹತ್ವವನ್ನು ಹೊಂದಿರುವ ತಿಂಗಳಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಜ್ಯೇಷ್ಠ ಮಾಸವನ್ನು ಮೂರನೇ ತಿಂಗಳಾಗಿದೆ. ಈ ತಿಂಗಳಿನಲ್ಲಿಹಗಲು ಹೆಚ್ಚಿರುತ್ತದೆ, ಇರುಳು ಕಡಿಮೆ ಇರುತ್ತದೆ . ಜ್ಯೇಷ್ಠ ಮಾಸದ ಶುಕ್ಲ ಪಕ್ಷದ 11ನೇ ದಿನದಂದು ಆಚರಿಸುವ ಏಕಾದಶಿಯನ್ನು ನಿರ್ಜಲ ಏಕಾದಶಿ ಎಂದು ಕರೆಯಲಾಗುತ್ತದೆ. ಮಹಾವಿಷ್ಣುವಿನ ಕೃಪೆಗಾಗಿ ಪ್ರಾರ್ಥಿಸಿ ಈ ಏಕಾದಶಿಯನ್ನು ಮಾಡಲಾಗುವುದು. ನಿರ್ಜಲ ಏಕಾದಶಿಯನ್ನುಜ್ಯೇಷ್ಠ ಶುಕ್ಲ ಏಕಾದಶಿ ಎಂದೂ ಕೂಡ ಕರೆಯುತ್ತಾರೆ.
ಸಾಮಾನ್ಯವಾಗಿ ಗಂಗಾದಸರಾದ ಬಳಿಕ ಈ ನಿರ್ಜಲ ಏಕಾದಶಿ ಬರುತ್ತದೆ, ಕೆಲವೊಂದು ವರ್ಷಗಳಲ್ಲಿ ಒಂದೇ ದಿನವೂ ಬರಬಹುದು. ಈ ವರ್ಷ ಗಂಗಾ ದಸರಾ ಬಳಿಕ ನಿರ್ಜಲ ಏಕಾದಶಿ ಬಂದಿದೆ. ಜೂನ್ 20ಕ್ಕೆ ಗಂಗಾ ದಸರಾ 21ರಂದು ನಿರ್ಜಲ ಏಕಾದಶಿಯನ್ನು ಆಚರಿಸಲಾಗುವುದು. ನಿರ್ಜಲ ಏಕಾದಶಿಯಂದು ನೀರು ಸಹ ಮುಟ್ಟದೆ ಉಪವಾಸವಿರುವ ಸಂಪ್ರದಾಯವಿದೆ. ಈ ಏಕಾದಶಿ ಆಚರನೆ ಮಾಡುವುದರಿಂದ ಮಾಡಿದ ಪಾಪವೆಲ್ಲಾ ಕಳೆದು ಹೋಗಿ ಭಗವಂತನ ಸಾಕ್ಷಾತ್ಕಾರ ದೊರೆಯುವುದು ಎಂಬ ನಂಬಿಕೆ ಇದೆ.

23 ಏಕಾದಶಿಗಳ ಆಚರಣೆ ಫಲ ನಿರ್ಜಲ ಏಕಾದಶಿ ಆಚರಣೆಯಿಂದ ಸಿಗುವುದು
ಪ್ರತಿಯೊಂದು ಏಕಾದಶಿ ಮಹತ್ವವನ್ನು ಹೊಂದಿದೆ. ಅವುಗಳಲ್ಲಿ ಅತ್ಯಂತ ಫಲ ನೀಡುವ ಏಕಾದಶಿ ಅಂದ್ರೆ ಅದು ನಿರ್ಜಲ ಏಕಾದಶಿ ಎಂದು ಹೇಳಲಾಗುವುದು. ಈ ಏಕಾದಶಿ ಮಾಡಿದರೆ ಇತರ 23 ಏಕಾದಶಿಗಳ ಫಲ ಕೂಡ ಲಭಿಸುವುದು ಎಂದು ಹೇಳಲಾಗುವುದು. ಇದರಿಂದ ಅಭಿವೃದ್ಧಿ ಉಂಟಾಗುತ್ತದೆ, ಆರೋಗ್ಯ ಉತ್ತಮವಾಗುವುದು, ಆಯುಸ್ಸು ವೃದ್ಧಿಸುವುದು. ಯಾರು ಈ ಏಕಾದಶಿಯನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾರೋ ಅವರ ಬದುಕಿನಲ್ಲಿ ಯಾವಾಗಲೂ ಸಂತೋಷ, ಶಾಂತಿ ಮತ್ತು ಸಮೃದ್ಧಿ ತುಂಬಿರಲಿದೆ.

ನಿರ್ಜಲ ಏಕಾದಶಿ ಉಪವಾಸಕ್ಕೆ ಶುಭ ಸಮಯ
ನಿರ್ಜಲ ಏಕಾದಶಿ ತಿಥಿ ಪ್ರಾರಂಭ: ಜೂನ್ 20, ಭಾನುವಾರ ಸಂಜೆ 4:21 ರಿಂದ ಪ್ರಾರಂಭವಾಗುತ್ತದೆ
ಏಕಾದಶಿ ತಿಥಿ ಮುಕ್ತಾಯ: ಜೂನ್ 21, ಸೋಮವಾರ ಮಧ್ಯಾಹ್ನ 1.31 ರವರೆಗೆ
ಏಕಾದಶಿ ಪಾರಣ ಸಮಯ: ಜೂನ್ 22, ಸೋಮವಾರ ಬೆಳಗ್ಗೆ 5:13 ರಿಂದ ಬೆಳಿಗ್ಗೆ 8.01 ರವರೆಗೆ

ನಿರ್ಜಲ ಏಕಾದಶಿಯ ಆರಾಧನಾ ವಿಧಾನ
ಏಕಾದಶಿ ಉಪವಾಸದಲ್ಲಿ ವಿಶೇಷ ನಿಯಮಗಳನ್ನು ಪಾಲಿಸಬೇಕು. ನಿರ್ಜಲ ಏಕಾದಶಿ ದಿನದಂದು, ಸ್ನಾನ ಮಾಡಿದ ನಂತರ, ಪೂಜಾ ಸ್ಥಳದಲ್ಲಿ ಕುಳಿತು, ಉಪವಾಸದ ಸಂಕಲ್ಪ ತೆಗೆದುಕೊಂಡು, ಪೂಜೆಯನ್ನು ಪ್ರಾರಂಭಿಸಬೇಕು. ಈ ದಿನ ವಿಷ್ಣುವಿಗೆ ಹಳದಿ ಬಟ್ಟೆಗಳನ್ನು ಧರಿಸಿ. ಪೂಜೆಯಲ್ಲಿ ಹಳದಿ ಹೂಗಳನ್ನು ಬಳಸಿ. ಈ ದಿನ ಹಳದಿ ವಸ್ತುಗಳನ್ನು ಬಳಸಲಾಗುತ್ತದೆ. ವಿಷ್ಣುವಿಗೆ ಹಳದಿ ಬಣ್ಣ ಹೆಚ್ಚು ಪ್ರಿಯವಾಗಿದೆ.
ಈ ದಿನ ಈ ಮಂತ್ರವನ್ನು ಜಪಿಸಬೇಕು-
"ಓಂ ನಮೋ ಭಾಗವತ ವಾಸುದೇವ"

ಇದರ ಬಗ್ಗೆ ಇರುವ ಪೌರಾಣಿಕ ಕತೆ
ನಿರ್ಜಲ ಏಕಾದಶಿಯನ್ನು ಭೀಮಾಸೇನಾ ಏಕಾದಶಿಯೆಂದು ಕೂಡ ಆಚರಿಸುತ್ತಾರೆ. ಭೀಮನಿಗೆ ಆಹಾರವೆಂದರೆ ತುಂಬಾ ಪ್ರಿಯ, ಸದಾ ತಿನ್ನುತ್ತಲೇ ಇರುತ್ತಿದ್ದ. ಅವನಿಗೆ ತನ್ನ ಹಸಿವು ತಡೆದು ಏಕಾದಶಿ ಉಪವಾ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಮಹಾವಿಷ್ಣುವಿಗೆ ಅವಮಾನ ಮಾಡಿದಂತೆ ಎಂದು ತಿಳಿದ ಭೀಮ ವ್ಯಾಸ ಮಹರ್ಷಿ ಭೇಟಿಯಾಗಿ ಏನು ಮಾಡಬೇಕೆಂದು ಕೇಳುತ್ತಾನೆ. ಆಗ ಅವರು ನಿರ್ಜಲ ಏಕಾದಶಿಯಂದು ಉಪವಾಸವಿದ್ದರೆ ಎಲ್ಲಾ ಏಕಾದಶಿಯ ಫಲ ಸಿಗುವುದು ಎಂದು ಹೇಳುತ್ತಾರೆ. ಅದರಂತೆ ಭೀಮ ನಿರ್ಜಲ ಏಕಾದಶಿ ಆಚರಿಸುತ್ತಿದ್ದ ಎಂಬ ಕತೆಯಿದೆ.



Click it and Unblock the Notifications
