Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಶಿವೈಕ್ಯಕ್ಕಾಗಿ ಶಿವರಾತ್ರಿ ಆಚರಣೆಗಳು
ಶಿವರಾತ್ರಿಗೆ ಹಿಂದೂ ಧರ್ಮದಲ್ಲಿ ಅದರದ್ದೇ ಆದ ಮಹತ್ವವಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸ ನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ.
ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ. ಶುಚಿರ್ಭೂತರಾಗಿ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾರ ನೀರು ಮುಟ್ಟದೆ ಉಪವಾಸ ಕೈಗೊಳ್ಳುತ್ತಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶಿವಲಿಂಗದ ಮಹತ್ವ
ಈ ಉಪವಾಸವು ಮಾನವನಲ್ಲಿ ರಜ ಮತ್ತು ತಾಮಸ ಗುಣಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ದೇಹಕ್ಕೆ ಆರೋಗ್ಯದೊಂದಿಗೆ ರಜ ತಾಮಸ ಗುಣಗಳನ್ನು ನಿಯಂತ್ರಣದಲ್ಲಿಡುವ ವಿಶೇಷ ಸಿದ್ಧಿ
ಶಿವರಾತ್ರಿ ವೃತಾ ಆಚರಣೆಯಿಂದ ಲಭ್ಯ. ರಜ ಗುಣಗಳೆಂದರೆ ಸಿಟ್ಟು, ಅಸೂಯೆ, ಮುಂತಾದುವು ತಾಮಸ ಗುಣಗಳೆಂದರೆ ಅಂಧಕಾರ, ಅಜ್ಞಾನ, ಪ್ರತಿರೋಧ, ಸಾವು ಮತ್ತು ವಿನಾಶ.
ಶಿವರಾತ್ರಿಯ ಉಪವಾಸವು ಈ ಎರಡೂ ಕೆಟ್ಟ ಗುಣಗಳ ಮೇಲೆ ಹತೋಟಿಯನ್ನಿಡುವ ಶಕ್ತಿಯನ್ನು ನಮಲ್ಲಿ ಉತ್ಪಾದಿಸುತ್ತದೆ. ವೃತಾಚರಣೆ ಮಾಡುವಾಗ ಕೆಲವೊಂದು ಸಿದ್ಧಾಂತಗಳನ್ನು ಅನುಸರಿಸಬೇಕಾಗುತ್ತದೆ.
ಆ ಸಿದ್ದಾಂತಗಳು ಆಚರಣೆಗಳು ಯಾವುವು ಎಂಬುದನ್ನು ಬೋಲ್ಡ್ ಸ್ಕೈ ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಈ ಆಚರಣೆಗಳನ್ನು ಆಚರಿಸುವ ಮೂಲಕ ನಿಮ್ಮ ಶಿವರಾತ್ರಿ ಹಬ್ಬ ಭಕ್ತಿಪೂರಣವಾಗಿದ್ದು ಇಷ್ಟಾರ್ಥ ಸಿದ್ದಿಸಲಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪಂಚಾಮೃತವೂ Pun-ಚಾ-ಅಮೃತ ಇತ್ಯಾದಿಯೂ...

ಪ್ರಾತಃ ಕಾಲದ ಸ್ನಾನ:
ಸಾಂಪ್ರದಾಯಿಕವಾಗಿ ವೃತವನ್ನು ಆಚರಿಸುವ ವ್ಯಕ್ತಿ ಮುಂಜಾನೆದ್ದು ಬೆಚ್ಚಗಿನ ನೀರಿನಲ್ಲಿ ಕಪ್ಪು ಎಳ್ಳು ಬೀಜಗಳೊಂದಿಗೆ ಸ್ನಾನ ಮಾಡಬೇಕು. ವೃತವನ್ನು ಆರಂಭಿಸುವ ಮುನ್ನ ದೇಹದಲ್ಲಿನ ಕಲ್ಮಶಗಳು ದೂರಾಗಲು ಪ್ರಾತಃ ಸ್ನಾನ ಸಹಕಾರಿ.

ಲಿಂಗಕ್ಕೆ ಅಭಿಷೇಕ:
ವೃತಾಧಾರಿಯು ಹತ್ತಿರವಿರುವ ಶಿವ ದೇವಸ್ಥಾನಕ್ಕೆ ಹೋಗಬೇಕು ಅಥವಾ ಮನೆಯಲ್ಲೇ "ಲಿಂಗವನ್ನು" ನೀರು, ಜೇನು ಹಾಲಿನೊಂದಿಗೆ ಅಭಿಷೇಕ ಮಾಡಿಸಿ ಸ್ವಚ್ಛಗೊಳಿಸಬೇಕು.

ಅರ್ಪಣೆಗಳು:
"ಲಿಂಗ" ವನ್ನು ತೊಳೆದ ನಂತರ, ಬಿಲ್ವ ಎಲೆಗಳು ಅಥವಾ ಬಿಲ್ವ ಪತ್ರೆಯನ್ನು, ದತ್ತೂರಿ ಹಣ್ಣು, ಅಖಂಡ ಹೂವುಗಳು, ಅರಶಿನ, ಕುಂಕುಮ ಮತ್ತು ಶ್ರೀ ಗಂಧವನ್ನು "ಲಿಂಗಕ್ಕೆ" ಸಮರ್ಪಿಸಬೇಕು.

ಪ್ರಸಾದ ಅರ್ಪಣೆಗಳು:
ಶಿವ ದೇವರಿಗೆ ಹಾಲಿನ ಪ್ರಸಾದಗಳೆಂದರೆ ತುಂಬಾ ಪ್ರಿಯವಾದುದು. ಹಾಲಿನಿಂದ ಮಾಡಿದ ಪಾಯಸ, ಅಥವಾ ಇತರೆ ಹಾಲ ಉತ್ಪನ್ನಗಳನ್ನು ಶಿವ ದೇವರಿಗೆ ಅರ್ಪಿಸಲಾಗುತ್ತದೆ. ಕೆಲವು ಭಕ್ತರು ದೇವರಿಗೆ "ಭಾಂಗ್" ಅನ್ನು ಅರ್ಪಿಸುತ್ತಾರೆ.

ಪ್ರಾರ್ಥನೆಗಳು:
ಭಕ್ತರು "ಓಂ ನಮಃಶಿವಾಯ" ಮಂತ್ರವನ್ನು ಪಠಿಸುತ್ತಾ "ಲಿಂಗಕ್ಕೆ" ಪ್ರಾರ್ಥನೆಯನ್ನು ಸಲ್ಲಿಸಬೇಕು. ಲಿಂಗದ ಎದುರು ದೀಪ ಹಚ್ಚಿ ಭಕ್ತರು ಶಿವನ ಭಜನೆಗಳನ್ನು ಹಾಡಬೇಕು.

ಹಗಲು ರಾತ್ರಿ ಉಪವಾಸ:
ಶಿವರಾತ್ರಿ ಉಪವಾಸವು ಹಗಲಿನಿಂದ ಪ್ರಾರಂಭಗೊಂಡು ರಾತ್ರಿ ಪೂರ್ತಿ ನಡೆದು ಮರುದಿನ ಪ್ರಾತಃ ಕಾಲಕ್ಕೆ ಕೊನೆಗೊಳ್ಳುತ್ತದೆ.

ಉಪವಾಸ ನಿಯಮಗಳು:
ವೃತದ ಸಮಯದಲ್ಲಿ ಆಹಾರವಿಲ್ಲದೆ ಕಟ್ಟುನಿಟ್ಟಾಗಿ ದೇವರಲ್ಲಿ ಐಕ್ಯಗೊಳ್ಳಬೇಕು. ವೃತಾಧಾರಿಯು ಹಣ್ಣಿನ ರಸ, ಹಣ್ಣುಗಳು ಮತ್ತು ವಿಶೇಷ ವೃತ ಆಹಾರಗಳಾದ ಕುಟ್ಟು ಚಪಾತಿ, ವೃತದ ಅನ್ನ, ಬೀಜಗಳು, ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಪದಾರ್ಥಗಳನ್ನು ಸೇವಿಸಬಹುದು. ಸೂರ್ಯಾಸ್ತದ ನಂತರವಷ್ಟೇ ಊಟವನ್ನು ಸೇವಿಸಬೇಕು.

ಜಾಗರಣೆ:
ವೃತಾಧಾರಿಗಳು ರಾತ್ರಿಯೆಲ್ಲಾ ಶಿವನ ಕಥೆಗಳನ್ನು ಕೇಳುತ್ತಾ ಮಂತ್ರಗಳನ್ನು ಪಠಿಸುತ್ತಾ ಜಾಗರಣೆ ಮಾಡಬೇಕು.

ವೃತವನ್ನು ಸಂಪನ್ನಗೊಳಿಸುವುದು:
ಮರುದಿನ ಮುಂಜಾನೆ ಲಿಂಗಕ್ಕೆ ಅಭಿಷೇಕವನ್ನು ಪೂರೈಸಿ ಪ್ರಾರ್ಥನೆಗಳನ್ನು ಸಲ್ಲಿಸಿದ ನಂತರವಷ್ಟೇ ವೃತವನ್ನು ಸಂಪನ್ನಗೊಳಿಸಬೇಕು. ವೃತ ಸಂಪನ್ನಗೊಳಿಸುವಾಗ ಪ್ರಸಾದ ಇಲ್ಲವೇ, ಶಿವನಿಗೆ ಅರ್ಪಿಸಿದ ಆಹಾರವನ್ನು ಮೊದಲು ತೆಗೆದುಕೊಳ್ಳಬೇಕು.



Click it and Unblock the Notifications