Latest Updates
-
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ
ಮಹಾಶಿವರಾತ್ರಿಯಂದು ಏನು ಮಾಡಬೇಕು, ಏನು ಮಾಡಬಾರದು?
Short Story
lekhaka-Poornima hegde
Mahashivaratri 2020: What to do and what to Avoid | Shivrathri Special
ಹಿಂದುಗಳಿಗೆ ಆಚರಣೆಗೆ ಹಲವಾರು ಹಬ್ಬಹರಿದಿನಗಳಿವೆ. ಅವುಗಳಲ್ಲಿ ಮಹೇಶ್ವರನನ್ನು ಆರಾಧಿಸುವ ಮಹಾಶಿವರಾತ್ರಿಯೂ ಒಂದು. ಬಹಳ ಭಕ್ತಿಯಿಂದ, ತುಂಬಾ ಅದ್ಧೂರಿಯಾಗಿ ದೇಶದೆಲ್ಲೆಡೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅದರಲ್ಲೂ ಶಿವನ ಮಹಾಆರಾಧಕರು ಶಿವರಾತ್ರಿಯಂದು ಉಪವಾಸ, ಜಾಗರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಈ ವರ್ಷ ಫೆಬ್ರವರಿ 21ರ ಶುಕ್ರವಾರ ಮಹಾಶಿವರಾತ್ರಿ. ಈ ದಿನ ಏನೆಲ್ಲ ಮಾಡಬಹುದು ಮತ್ತು ಯಾವುದನ್ನು ಮಾಡದಿದ್ದರೆ ಒಳ್ಳೆಯದು ಎಂಬಿತ್ಯಾದಿ ಅಂಶಗಳನ್ನು ನಾವಿಲ್ಲಿ ಹೇಳಿದ್ದೇವೆ.

ಶಿವರಾತ್ರಿಯಂದು ಮಾಡಬೇಕಾದ್ದೇನು?

ಶಿವನಿಗೆ ಪೂಜೆ
- ಶಿವರಾತ್ರಿ ದಿನ ಶಿವ ಪೂಜನೀಯ. ಈಶ್ವರನಿಗೆ ಸಕಲ ಕಷ್ಟ ನಿವಾರಣೆಗಾಗಿ, ಸಕಲ ಸಮೃದ್ಧಿಗಾಗಿ ಪ್ರಾರ್ಥಿಸಿ ಪೂಜಿಸುವ ದಿನ. ಈ ದಿನ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಶುಭ್ರ ಬಟ್ಟೆಯನ್ನು ಧರಿಸಿ ಮೊದಲು ಶಿವನಿಗೆ ಪೂಜೆ ಮಾಡಬೇಕು.
- ಶಿವಲಿಂಗ ಪೂಜೆ: ಸಾಮಾನ್ಯವಾಗಿ ಮನೆಗಳಲ್ಲಿ ಲಿಂಗ ಅಥವಾ ಸಾಲಿಗ್ರಾಮಗಳು ಇರುತ್ತವೆ. ಇದ್ದರೆ ಅದನ್ನು ನೀರಿನಿಂದ ಶುಚಿಗೊಳಿಸಿ, ಶಿವಲಿಂಗಕ್ಕೆ ಅಥವಾ ಶಿವನ ವಿಗ್ರಹಕ್ಕೆ ಅಭಿಷೇಕವನ್ನು ಮಾಡಬೇಕು. ಶಿವನಿಗೆ ವಿಶೇಷವಾಗಿ ಹಾಲಿನ ಅಭಿಷೇಕ ಮಾಡಲಾಗುತ್ತದೆ. ಅಲ್ಲದೇ ಜೇನು, ಶ್ರೀಗಂಧಗಳಿಂದಲೂ ಅಭಿಷೇಕ ಮಾಡಿ ಭಕ್ತಿ ಮೆರೆಯಲಾಗುತ್ತದೆ.
- ಹೂವಿನ ಪೂಜೆ: ಶಿವನಿಗೆ ಬಿಳಿಯ ಬಣ್ಣದ ಹೂವು ಶ್ರೇಷ್ಠ ಎನ್ನಲಾಗುತ್ತದೆ. ಅದರ ಜೊತೆಗೆ ಕೇದಿಗೆ ಹೂವನ್ನೂ ಕೂಡ ಶಿವನ ಪೂಜೆಗೆ ಅರ್ಪಿಸಬಹುದು.
- ಬಿಲ್ವ ಪತ್ರೆ: ಮಹೇಶ್ವರನನ್ನು ಪೂಜಿಸಲು ಬಿಲ್ವಪತ್ರೆಯೊಂದಿದ್ದರೆ ಸಾಕು. ಪೂಜೆ ಸಂಪನ್ನಗೊಳ್ಳುತ್ತದೆ. ಹಾಗಾಗಿ ಬಿಲ್ವಪತ್ರೆಯನ್ನು ಇಟ್ಟು ಪೂಜಿಸುವುದು ಸೂಕ್ತ.
- ದೇವಾಲಯ ಭೇಟಿ: ಶಿವರಾತ್ರಿಯಂದು ಶಿವನ ದೇವಾಲಯಕ್ಕೆ ಹೋಗಿ ದೇವರ ದರ್ಶನ ಪಡೆಯುವುದು ಒಳ್ಳೆಯದು. ನಿಮ್ಮ ಹತ್ತಿರದಲ್ಲಿರುವ ಶಿವ ದೇವಾಲಯಕ್ಕೆ ಆ ದಿನದಲ್ಲಿ ಒಮ್ಮೆಯಾದರೂ ಕುಟುಂಬ ಸಮೇತರಾಗಿ ಭೇಟಿ ಕೊಡಿ.
- ನೈವೇದ್ಯ: ಈಶ್ವರನಿಗೆ ಹೆಚ್ಚಾಗಿ ಹಾಲು ಅಥವಾ ಅದರ ಮೂಲದಿಂದ ಮಾಡಿದ ಸಿಹಿಯನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ.
- ಸ್ತೋತ್ರ ಪಠಣ: ಶಿವರಾತ್ರಿ ಶಿವನನ್ನು ಆರಾಧಿಸುವ ದಿನ ಈ ದಿನ 108 ಶಿವನ ನಾಮ ಪಠಣ ಮಾಡುವುದು ಒಳ್ಳೆಯದು. ಅಲ್ಲದೇ ಲಿಂಗಾಷ್ಟಕಂ ಹಾಗೂ ಮೊದಲಾದ ಶಿವ ಸ್ತೋತ್ರಗಳನ್ನು ಹೇಳುವುದು ಮತ್ತು ಇತರರಿಗೂ ಹೇಳಿಕೊಡುವುದು ಅತ್ಯಂತ ಶ್ರೇಷ್ಠವಾದ ಕೆಲಸ.
- ಉಪವಾಸ: ಶಿವರಾತ್ರಿಯಂದು ಉಪವಾಸ ಮಾಡುವುದು ಒಂದು ಪದ್ಧತಿ. ಯಾವುದೇ ವಯಸ್ಸಿನವರೂ ತಮಗೆ ಸಾಧ್ಯವಾಗುವ ಹಾಗಿದ್ದಲ್ಲಿ ಉಪವಾಸ ಮಾಡಬಹುದು. ಈ ದಿನ ಕೇವಲ ಫಲಾಹಾರಗಳನ್ನು ಮಾತ್ರ ಸೇವಿಸಬೇಕು.
- ಜಾಗರಣೆ: ಶಿವ ರಾತ್ರಿಯೆಲ್ಲ ತಾಂಡವ ನೃತ್ಯ ಮಾಡುತ್ತಿರುತ್ತಾನೆ ಎಂಬ ನಂಬಿಕೆಯ ಮೇಲೆ ಜಾಗರಣೆ ಮಾಡಲಾಗುತ್ತದೆ. ಶಿವನ ಎಲ್ಲಾ ದೇವಾಲಯಗಳಲ್ಲೂ ಬೆಳಗಿನ ಜಾವದವರೆಗೂ ವಿವಿಧ ರೀತಿಯಲ್ಲಿ ಜಾಗರಣೆ ಮಾಡಲಾಗುತ್ತದೆ. ಇಲ್ಲಿ ಭಜನೆ, ನೃತ್ಯ, ಸಂಗೀತ ಮೊದಲಾದ ಕಾರ್ಯಕ್ರಮಗಳೊಂದಿಗೆ ಜಾಗರಣೆ ಮಾಡಲಾಗುತ್ತದೆ. ನೀವು ಇಂಥ ಸಮಾರಂಭಗಳಲ್ಲಿ ಪಾಲ್ಗೊಳ್ಳಬಹುದು ಅಥವಾ ನೀವೇ ಕುಟುಂಬದವರೊಂದಿಗೆ ಸೇರಿ ಭಜನೆ, ಮಂತ್ರ ಪಠಣದ ಮೂಲಕ ಜಾಗರಣೆ ಮಾಡುತ್ತಾ ಶಿವನನ್ನು ಪ್ರಾರ್ಥಿಸಬಹುದು.
- ಓಂ ನಮಃ ಶಿವಾಯ: ಮಹಾಶಿವರಾತ್ರಿಯಂದು ಎಷ್ಟು ರಿ 'ಓಂ ನಮಃ ಶಿವಾಯ' ಎಂದು ಪಠಿಸಿದರೂ ಒಳ್ಳೆಯದೇ. ಹೇಳಲು ಸಾಧ್ಯವಾಗದಿದ್ದರೆ ಮನೆಯಲ್ಲಿ ಶಿವನ ಗಾಯನವನ್ನು ಕೇಳಿ.
- ಶಿವನನ್ನು ಆರಾಧಿಸುವ ನೀವು ಭಕ್ತಿಪೂರ್ವಕವಾಗಿ ಮಾಡುವ ಈ ಎಲ್ಲಾ ಕೆಲಸಗಳೂ ನಿಮಗೆ ಉತ್ತಮ ಫಲವನ್ನು ನೀಡುತ್ತವೆ.
- ಉಪಹಾರ: ಶಿವರಾತ್ರಿಯ ದಿನ ಸಾಕಷ್ಟು ಜನ ಉಪವಾಸವನ್ನು ಮಾಡುತ್ತಾರೆ. ಆದರೆ ನಿಮಗೆ ಉಪವಾಸ ಮಾಡಲು ಸಾಧ್ಯವಾಗದಿದ್ದರೆ ಮಾಂಸಾಹಾರವನ್ನು ಸೇವಿಸುವುದುದನ್ನು ತಪ್ಪಿಸಿ. ಶಿವ ಸ್ಮಶಾನ ವಾಸಿ ಎಂದು ಮಾತಿದೆಯಾದರೂ ಈ ದಿನ ಶಿವನನ್ನು ಶುದ್ಧ ಮನಸ್ಸಿನಿಂದ ನೀವು ಶುದ್ಧರಾಗಿಯೇ ಆಚರಿಸುವುದು ಒಳ್ಳೆಯದು.
- ಲಿಂಗಕ್ಕೆ ಸುತ್ತುಬರುವುದು: ಎಲ್ಲಾ ದೇವರಿಗೂ ಸಂಪೂರ್ಣ ಸುತ್ತುಬರುವುದು ವಾಡಿಕೆ. ಆದರೆ ಪುರಾಣಗಳ ಪ್ರಕಾರ, ಲಿಂಗಕ್ಕೆ ಮಾತ್ರ ಅರ್ಧ ಸುತ್ತು ಹಾಕಬೇಕು. ಅರ್ಧ ಸುತ್ತು ಹಾಕಿ ಪುನಃ ನೀವು ಎಲ್ಲಿಂದ ಆರಂಭಿಸಿದ್ದೀರೋ ಅಲ್ಲಿಗೇ ತಲುಪಬೇಕು.
- ಹೂವಿನ ಪೂಜೆ: ಶಿವನಿಗೆ ಕೆಂಪು ಹೂಗಳಿಂದ ಪೂಜಿಸುವುದನ್ನು ತಪ್ಪಿಸಿ. ಕೇದಿಗೆ ಅಥವಾ ಇನ್ಯಾವುದೇ ಬಿಳಿಯ ಹೂವುಗಳು ಈಶ್ವರನ ಪೂಜೆಗೆ ಶ್ರೇಷ್ಠ.
- ತುಳಸಿ ಬಳಸದಿರಿ: ತುಳಸಿ ಎಲೆಯು ಮಹಾವಿಷ್ಣು ಹಾಗೂ ಲಕ್ಷ್ಮೀಗೆ ಪ್ರಿಯವಾದವು. ಹಾಗಾಗಿ ಶಿವನಿಗೆ ತುಳಸಿ ಎಲೆಗಳಿಗಿಂತ ಬಿಲ್ವಪತ್ರೆಯನ್ನು ಬಳಸಿ ಪೂಜೆ ಮಾಡಿ.
- ಸಿಂಧೂರ ಇಡಬಾರದು: ಅದರಲ್ಲೂ ವಿಶೇಷವಾಗಿ ಶಿವ ವಿಗ್ರಹದ ತಲೆಯ ಮೇಲೆ ಅಥವಾ ಲಿಂಗದ ಮೇಲೆ ಮಹಿಳೆಯರು ಸಿಂಧೂರವನ್ನು ಇಡಬಾರದು. ಅದರ ಬದಲು ಶ್ರೀಗಂಧವನ್ನು ಬಳಸಬಹುದು.
- ಬಟ್ಟೆ ಧರಿಸುವಿಕೆ: ಶಿವನಿಗೆ ಇತರ ಬಣ್ಣಗಳು ಅಷ್ಟು ಪ್ರಿಯವಲ್ಲದ್ದರಿಂದ ಕಪ್ಪು ಬಟ್ಟೆಯನ್ನು ಶಿವರಾತ್ರಿಯಂದು ತೊಡುವುದು ಉತ್ತಮ. ಇದನ್ನೇ ತೊಡಬೇಕೆಂಬ ನಿಯಮವಿಲ್ಲ. ಆದರೆ ತೊಡುವ ಬಟ್ಟೆ ಶುಭ್ರವಾಗಿರಲಿ.
- ಎಲೆಗಳನ್ನು ಅರ್ಪಿಸುವುದು: ಬಿಲ್ವಪತ್ರೆ ಅಥವಾ ಇನ್ಯಾವುದೇ ಎಲೆಯನ್ನು ಶಿವನಿಗೆ ಅರ್ಪಿಸುವಾಗ ಅದು ಹಾಳಾಗಿರದಂತೆ ನೋಡಿಕೊಳ್ಳಿ. ಸಂಪೂರ್ಣವಾಗಿ ಸರಿಯಾಗಿರುವ ಬಿಲ್ವಪತ್ರೆಗಳನ್ನೇ ಬಳಸಿ.
- ತಾಮ್ರದ ಪಾತ್ರೆ: ಶಿವನಿಗೆ ಕಂಚಿನ ಪಾತ್ರೆಗಳಲ್ಲಿ ಹಾಲನ್ನು ನೈವೇದ್ಯ ಮಾಡದಿರಿ. ತಾಮ್ರದ ಪಾತ್ರೆಯಲ್ಲಿಯೇ ನೈವೇದ್ಯ ಮಾಡುವುದು ಶ್ರೇಷ್ಠ.
- ಶಿವನಿಗೆ ತೆಂಗಿನ ನೀರನ್ನು ಅಭಿಷೇಕ ಮಾಡುವುದು ಒಳ್ಳೆಯದಲ್ಲ.

ದೇವಾಲಯ ಭೇಟಿ

ಸ್ತೋತ್ರ ಪಠಣ

ಜಾಗರಣೆ

ಓಂ ನಮಃ ಶಿವಾಯ
ಮಹಾಶಿವರಾತ್ರಿಯಂದು ಮಾಡಲೇಬಾರದ ವಿಷಯಗಳು

ಲಿಂಗಕ್ಕೆ ಸುತ್ತುಬರುವುದು ಬೇಡ

ತುಳಸಿ ಬಳಸದಿರಿ

ಸಿಂಧೂರ ಇಡಬಾರದು

ತಾಮ್ರದ ಪಾತ್ರೆಯಲ್ಲಿ ಅಭಿಷೇಕ
ಏನೇ ಆದರೂ ಯಾವ ದೇವರನ್ನು ಹೀಗೆಯೇ ಪೂಜಿಸಬೇಕು ಇಲ್ಲವಾದಲ್ಲಿ ದೇವರು ಒಲಿಯುವುದಿಲ್ಲ ಎಂಬ ನಿಯಮಗಳೇನಿಲ್ಲ. ಮನಸ್ಸಿ ಶುದ್ಧಿಯಿಂದ ಯಾವುದೇ ದೇವರನ್ನು ಪ್ರಾರ್ಥಿಸಿದರೂ ಫಲ ಸಿಗುತ್ತದೆ. ಆದರೂ ನಿಮ್ಮ ಆಚರಣೆಗಳ ಜೊತೆಗೆ ಮೇಲಿನ ಕೆಲವು ಅಂಶಗಳನ್ನು ನಿಮ್ಮ ಪ್ರಾರ್ಥನೆಯಲ್ಲಿ ಸೇರಿಸಿಕೊಂಡರೆ ಒಳಿತಾಗುವುದು ಖಂಡಿತ!
Comments
English summary
Mahashivaratri 2020: What To Do And What To Avoid
More From Boldsky
Prev
Next



Click it and Unblock the Notifications











