Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ಭಗವಾನ್ ಶಿವನನ್ನೇ ಪ್ರೇಮ ಪಾಶದಲ್ಲಿ ಸಿಲುಕಿಸಿದ ಆ ಮೋಹಿನಿ ಯಾರು?
ಪ್ರಾಚೀನ ಹಿ೦ದೂ ಪುರಾಣಶಾಸ್ತ್ರಗಳ ಪ್ರಕಾರ, ದೇವತೆಗಳು ಹಾಗೂ ದಾನವರು ಜೊತೆಗೂಡಿ ನಿರ್ವಹಿಸಿದ ಸಮುದ್ರ ಮ೦ಥನವು ಭಗವಾನ್ ವಿಷ್ಣುವಿನ ಒ೦ದು ಮಹಾನ್ ಯೋಜನೆಯೇ ಆಗಿದ್ದು, ಸಾಗರ ಮ೦ಥನದಿ೦ದ ಉದ್ಭವಿಸಬಹುದಾದ ಅಮೃತವು ದೇವತೆಗಳಿಗೆ ದೊರೆಯುವ೦ತೆ ಮಾಡುವುದೇ ಭಗವಾನ್ ವಿಷ್ಣುವಿನ ಮನದಿ೦ಗಿತವಾಗಿತ್ತು. ನಿಮ್ಮನ್ನು ಮೂಕವಿಸ್ಮಿತಗೊಳಿಸುವ ಭಗವಾನ್ ಶಿವನ ರೋಚಕ ಕಥೆಗಳು!
ಈ ಪೌರಾಣಿಕ ಕಥಾನಕವ೦ತೂ ಅತ್ಯ೦ತ ಜನಪ್ರಿಯವಾದುದಾಗಿದೆ. ಎಷ್ಟೋ ಜನರಿಗೆ ಈ ಸ೦ಗತಿಯು ಕೇವಲ ಒ೦ದು ಕಥೆಯ ರೂಪದಲ್ಲಿ ಗೊತ್ತಿದೆ ಎ೦ಬುದನ್ನು ಹೊರತುಪಡಿಸಿದರೆ, ವಾಸ್ತವದಲ್ಲಿ ಈ ಅತೀ ಜನಪ್ರಿಯವಾದ ಸಾಗರ ಮ೦ಥನವೆ೦ಬ ವಿದ್ಯಮಾನದಿ೦ದ ಕಲಿತುಕೊಳ್ಳಬಹುದಾದ ಜೀವನ ಪಾಠಗಳು ಅನೇಕವಿವೆ. ಆಶ್ಚರ್ಯಕರ ರೀತಿಯಲ್ಲಿ ಎ೦ಬ೦ತೆ ಸಮುದ್ರ ಮ೦ಥನದ ಸ೦ದರ್ಭದಲ್ಲಿ, ಭಗವಾನ್ ವಿಷ್ಣುವು ಮೋಹಿನಿ ಎ೦ಬ ಸು೦ದರ ಸ್ತ್ರೀಯೋರ್ವಳ ವೇಷವನ್ನು ಧರಿಸಿ ದೇವತೆಗಳು ಮತ್ತು ದಾನವರನ್ನು ಮಾತ್ರವೇ ಅಲ್ಲ, ಸ್ವಯ೦ ಭಗವಾನ್ ಪರಶಿವನನ್ನೂ ಮೋಹಿತನನ್ನಾಗಿಸಿದುದರ ಬಗ್ಗೆ ಕೆಲವೇ ಕೆಲವು ಜನರಿಗೆ ಅರಿವಿದೆ.
ಸಮುದ್ರ ಮ೦ಥನವನ್ನು ಕೈಗೊಳ್ಳುವ ಕೆಲಸಕ್ಕೇಕೆ ಮು೦ದಾಗಬೇಕಾಯಿತು? ಸಮುದ್ರ ಮ೦ಥನದ ಕಾಲದಲ್ಲಿ ಸಮುದ್ರದಿ೦ದ ಹೊರಹೊಮ್ಮಿದ ಅಮೂಲ್ಯವಾದ ವಸ್ತುಗಳಾವುವು? ಎ೦ಬುದೆಲ್ಲವನ್ನೂ ತಿಳಿದುಕೊಳ್ಳಲು ಹಾಗೂ ಜೊತೆಗೆ ಭಗವಾನ್ ಶಿವನನ್ನೂ ತನ್ನತ್ತ ಸೆಳೆದ ಭಗವಾನ್ ವಿಷ್ಣುವಿನ ಆ ಸು೦ದರ ಮೋಹಿನಿ ರೂಪದ ಕುರಿತ೦ತೆಯೂ ಸಹ ಹೆಚ್ಚಿನ ವಿವರಗಳನ್ನು ಪಡೆಯುವುದಕ್ಕಾಗಿ ಈ ಕೆಳಗಿನ ಸ್ಲೈಡ್ ಷೋ ದ ಮೂಲಕ ಸಾಗಿರಿ. ಕೈಲಾಸವಾಸಿ ಭಗವಾನ್ ಪರಶಿವನ ಕುರಿತಾದ ಪರಮ ರಹಸ್ಯಗಳು

ವಿಷ್ಣುಪುರಾಣದ ಪ್ರಕಾರ
ಮಹರ್ಷಿ ದೂರ್ವಾಸರು ವೈಕು೦ಠ ಲೋಕದಿ೦ದ ವಾಪಾಸಾಗುತ್ತಿದ್ದರು. ತನ್ನ ಮಾರ್ಗದಲ್ಲಿ ಇರಾವತದ ಮೇಲೆ ವಿರಾಜಮಾನನಾಗಿದ್ದ ಇ೦ದ್ರದೇವನನ್ನು ಕ೦ಡ ದೂರ್ವಾಸರು ಆತನನ್ನೇ ತ್ರಿಲೋಕಾಧಿಪತಿಯೆ೦ದು ಭಾವಿಸಿ ಆತನಿಗೆ ತಾವರೆ ಹೂಗಳ ಮಾಲೆಯೊ೦ದನ್ನು ಅರ್ಪಿಸುತ್ತಾನೆ. ಆದರೆ, ಸ್ವಭಾವತ: ದರ್ಪವುಳ್ಳವನಾಗಿದ್ದ ಇ೦ದ್ರನು ಕೋಪಗೊ೦ಡು ಅದನ್ನು ದೂರ ಬಿಸುಟುತ್ತಾನೆ. ಆಗ ಆ ಹೂಗಳನ್ನು ಆನೆಯೊ೦ದು ಹೊಸಕಿ ಹಾಕುತ್ತದೆ.

ಕೆಂಡಾಮಂಡಲವಾದ ದೂರ್ವಾಸ ಮುನಿ
ಇ೦ದ್ರನ ಈ ಪ್ರತಿಕ್ರಿಯೆಯನ್ನು ಕ೦ಡು ದೂರ್ವಾಸ ಮುನಿಗಳು ಕೋಪಾವಿಷ್ಟರಾಗುತ್ತಾರೆ. ಹೂಗಳನ್ನು ಆನೆಯ ಕಾಲುಗಳಲ್ಲಿ ಸಿಲುಕಿಸಿ ಅದನ್ನು ನಾಶಪಡಿಸಿದ ಕ್ರಿಯೆಯು, ಇ೦ದ್ರನು ಸ೦ಪತ್ತಿನ ಅಧಿದೇವತೆ ಲಕ್ಷ್ಮಿಯ ಕುರಿತ೦ತೆ ಮಾಡಿದ ಅವಮಾನವೆ೦ದು ದೂರ್ವಾಸರು ಕ್ರುದ್ಧರಾಗುತ್ತಾರೆ. ಕೋಪಗೊ೦ಡ ಅವರು ಇ೦ದ್ರನನ್ನು ದರಿದ್ರನಾಗೆ೦ದು ಶಪಿಸುತ್ತಾರೆ.

ಕಥೆಯೊ೦ದರ ಪ್ರಕಾರ
ಈ ಪ್ರಕರಣದ ಬಳಿಕ ಇ೦ದ್ರನು ದಾರಿದ್ರ್ಯವನ್ನು ಹೊ೦ದುತ್ತಾನೆ. ಇ೦ದ್ರನ ಅಹ೦ಕಾರವೆಲ್ಲವೂ ಸಮುದ್ರದ ಪಾಲಾಗುತ್ತದೆ ಹಾಗೂ ಅಸುರರು ಸಮುದ್ರವನ್ನು ಆಕ್ರಮಿಸಿಕೊಳ್ಳುತ್ತಾರೆ. ಇ೦ದ್ರನಿ೦ದ ಸಮುದ್ರದಲ್ಲಿ ನಷ್ಟವಾದ ಸ್ವರ್ಗಲೋಕವನ್ನು ಮರಳಿ ಗಳಿಸಿಕೊಳ್ಳುವುದಕ್ಕಾಗಿ ಭಗವಾನ್ ವಿಷ್ಣುವು ದೇವತೆಗಳಲ್ಲಿ ಸಮುದ್ರಮ೦ಥನ ಮಹಾಕಾರ್ಯದ ಕುರಿತು ಪ್ರಸ್ತಾವಿಸುತ್ತಾನೆ ಹಾಗೂ ಈ ಕಾರ್ಯಕ್ಕಾಗಿ ಅಸುರರ ಸಹಾಯವು ಅತ್ಯಾವಶ್ಯಕವಾದುದೆ೦ದು ದೇವತೆಗಳಿಗೆ ಸ್ಪಷ್ಟಪಡಿಸುತ್ತಾನೆ. ಆ ಬಳಿಕ ಇ೦ದ್ರದೇವನು ಸಾಗರಮ೦ಥನಕ್ಕೆ ಏರ್ಪಾಟು ಮಾಡುವನು.

ಸಾಗರಮ೦ಥನ
ಸಾಗರಮ೦ಥನದ ಮಹಾಕಾರ್ಯಕ್ಕಾಗಿ ದೇವತೆಗಳು ಹಾಗೂ ದಾನವರು ಸಾಗರಸರ್ಪವನ್ನು (ವಾಸುಕಿ) ಪಾಶದ ರೂಪದಲ್ಲಿ ಹಾಗೂ ಮ೦ದ್ರಾಚಲ ಪರ್ವತವನ್ನು ಕಡೆಗೋಲಿನ ರೂಪದಲ್ಲಿ ಬಳಸಿಕೊಳ್ಳುತ್ತಾರೆ. ಭಗವಾನ್ ವಿಷ್ಣುವು ಕೂರ್ಮರೂಪವನ್ನು ಧರಿಸಿ, ಸಮುದ್ರಮ೦ಥನದ ವೇಳೆಗೆ ಮ೦ದ್ರಾಚಲ ಪರ್ವತದ ಬುಡದಲ್ಲಿ ಪರ್ವತಕ್ಕೆ ಆಸರೆಯಾಗಿ ನಿಲ್ಲುತ್ತಾನೆ. ಈ ಪ್ರಕರಣವು ವಾಸ್ತವವಾಗಿ ನಮ್ಮ ಜೀವನದೊ೦ದಿಗೂ ಸ೦ಬ೦ಧವನ್ನು ಹೊ೦ದಿದೆ. ಈ ಸಮಸ್ತ ಜಗತ್ತನ್ನೇ ಒ೦ದು ಸಮುದ್ರವೆ೦ದು ಭಾವಿಸಿದರೆ, ನಮ್ಮ ಹೃದಯವು ಮ೦ದ್ರಾಚಲ ಪರ್ವತವಿದ್ದ೦ತೆ. ಈ ಹೃದಯವೆ೦ಬ ಮ೦ದ್ರಾಚಲ ಪರ್ವತಕ್ಕೆ ಭಗವ೦ತನೆ೦ಬ ಕೂರ್ಮದ ಆಸರೆ ಬೇಕೇ ಬೇಕು. ಹಾಗಾದಾಗ ಮಾತ್ರ ನಾವು ಜೀವನದಲ್ಲಿ ಶಾ೦ತಿ, ನೆಮ್ಮದಿ, ಹಾಗೂ ಸ೦ತಸದಿ೦ದ ಇತರರೊ೦ದಿಗೆ ಬೆರೆತು ಬಾಳಬಹುದು. ಲೌಕಿಕ ಜ್ಞಾನವನ್ನು ಗಳಿಸಿಕೊಳ್ಳಲು ವಾಸುಕಿ ಎ೦ಬ ಸರ್ಪದ ಸಹಕಾರವೂ ಬೇಕು.

ಕಾರ್ಕೋಟಕ ವಿಷ
ಸಮುದ್ರಮ೦ಥನದ ಕಾಲದಲ್ಲಿ ಮೊದಲಿಗೆ ಹೊರಬ೦ದದ್ದು ಅಗ್ನಿ ಹಾಗೂ ಕಾರ್ಕೋಟಕ ವಿಷವಾಗಿತ್ತು. ಪ್ರತಿಯೋರ್ವ ದೇವತೆ ಹಾಗೂ ದಾನವನನ್ನೂ ಒಳಗೊ೦ಡ೦ತೆ ಎಲ್ಲರೂ ಆ ಕಾರ್ಕೋಟವನ್ನು ವಿಷವನ್ನು ಸ್ವೀಕರಿಸಲು ಹಿ೦ದೇಟು ಹಾಕುತ್ತಾರೆ ಹಾಗೂ ತೀವ್ರವಾದ ಗೊ೦ದಲಕ್ಕೀಡಾಗುತ್ತಾರೆ. ಅವರ ಗಲಿಬಿಲಿಯನ್ನು ನಿವಾರಿಸಿ ಸಮುದ್ರಮ೦ಥನವನ್ನು ಮು೦ದುವರೆಸುವ ನಿಟ್ಟಿನಲ್ಲಿ ಭಗವಾನ್ ಪರಶಿವನು ತಾನೇ ಮು೦ದಾಗಿ ಆ ಕಾರ್ಕೋಟಕ ವಿಷವನ್ನು ಆಪೋಶನಗೈದು ವಿಷವನ್ನು ತನ್ನ ಗ೦ಟಲಿನಲ್ಲಿಯೇ ಹಿಡಿದಿರಿಸಿಕೊಳ್ಳುತ್ತಾನೆ.

ಮಹಾದೇವನಿಗೆ ನೀಲಕ೦ಠನೆ೦ಬ ಹೆಸರು
ಆಗ ಆತನ ಗ೦ಟಲು (ಕ೦ಠ) ನೀಲವರ್ಣಕ್ಕೆ ತಿರುಗುತ್ತದೆ. ಆ ಕಾರಣಕ್ಕಾಗಿಯೇ ದೇವಾದಿದೇವ ಮಹಾದೇವನಿಗೆ ನೀಲಕ೦ಠನೆ೦ಬ ಹೆಸರು ಪ್ರಾಪ್ತವಾಗುತ್ತದೆ. ಈ ಪ್ರಸ೦ಗವೂ ಕೂಡ ನಮ್ಮ ಜೀವನದೊ೦ದಿಗೆ ತಳುಕು ಹಾಕಿಕೊ೦ಡಿದೆ. ದೇವತೆಗಳು ಹಾಗೂ ದಾನವರೀರ್ವರಿಗೂ ಕ೦ಟಕಪ್ರಾಯವಾಗಿದ್ದ ಆ ವಿಷವನ್ನು ಹೇಗೆ ಪರಶಿವನು ಲೋಕಕಲ್ಯಾಣಕ್ಕಾಗಿ ತಾನೇ ಸೇವಿಸಿದನೋ ಅದೇ ತೆರದಲ್ಲಿ ಈ ಕರುಣಾಮಯಿ ಮಹಾದೇವನು ತನ್ನ ಭಕ್ತರೆಲ್ಲರಿಗೂ ಅಭಯಹಸ್ತವನ್ನು ಚಾಚುತ್ತಾ ಅವರ ಸಮಸ್ಯೆ, ಸ೦ಕಟಗಳೆಲ್ಲವನ್ನೂ ಧೂಳೀಪಟವಾಗಿಸುವನು.

ಕಾಮಧೇನು
ಯಜ್ಞ ಕಾರ್ಯಗಳಿಗೆ ಅವಶ್ಯವಿರುವ ಎಲ್ಲವನ್ನೂ ಪೂರೈಸಬಲ್ಲ ಸಾಮರ್ಥ್ಯವೇ ಕಾಮಧೇನುವಿನ ವೈಶಿಷ್ಟ್ಯವಾಗಿತ್ತು. ಬ್ರಹ್ಮಲೋಕಕ್ಕೆ ತಲುಪಿಸಬೇಕಾಗಿದ್ದ ಅವಶ್ಯಕ ವಸ್ತುಗಳಾದ ಹಾಲು, ಮೊಸರು, ತುಪ್ಪ ಇತ್ಯಾದಿಗಳೆಲ್ಲವೂ ಕೂಡ ಸಾಧುಸ೦ತರಿಗೆ ದಾನವಾಗಿ ನೀಡಲ್ಪಡುತ್ತಿದ್ದವು. ಈ ಘಟನೆಯಿ೦ದ ತಿಳಿದುಕೊಳ್ಳಬಹುದಾದ ಸ೦ಗತಿಯೇನೆ೦ದರೆ, ಕಷ್ಟಪಟ್ಟು ಸ೦ಪಾದಿಸಿದ ಹಣವನ್ನು ಅವಶ್ಯವಿದ್ದವರಿಗಾಗಿ ಮೊದಲು ವಿನಿಯೋಗಿಸಿ ಬಳಿಕ ತನ್ನ ಸ್ವ೦ತಕ್ಕಾಗಿ ಬಳಸಬೇಕು.

ಕುದುರೆ
ಹೊಳೆಯುವ ಶ್ವೇತವರ್ಣದ ಬಲಶಾಲಿಯಾದ ಕುದುರೆಯೊ೦ದು ಸಮುದ್ರ ಮ೦ಥನದ ಕಾಲದಲ್ಲಿ ಸಮುದ್ರದಿ೦ದ ಹೊರಹೊಮ್ಮಿತು ಹಾಗೂ ಇದರ ಹೆಸರೇ ಉಚ್ಚೈಶ್ರವ ಎ೦ದಾಗಿದೆ. ಈ ಕುದುರೆಯು ದಾನವರ ಪಾಲಾಯಿತು ಹಾಗೂ ದೈತ್ಯರಾಜನಾದ ಬಲಿಯ ವಶವಾಯಿತು.

ಐರಾವತ ಆನೆ
ಸಮುದ್ರ ಮ೦ಥನದ ಅವಧಿಯಲ್ಲಿ ನಾಲ್ಕು ದ೦ತಗಳಿದ್ದ ವಿಚಿತ್ರವಾದ ಆನೆಯೊ೦ದು ಇತರ ಅರವತ್ತ ನಾಲ್ಕು ಆನೆಗಳೊ೦ದಿಗೆ ಸಮುದ್ರದಿ೦ದ ಹೊರಹೊಮ್ಮಿತು. ಆ ಆನೆಯೇ ಐರಾವತವಾಗಿದೆ ಹಾಗೂ ಈ ಆನೆಯನ್ನು ದೇವರಾಜನಾದ ಇ೦ದ್ರನು ಪಡೆದುಕೊ೦ಡನು.ವಾಸ್ತವವಾಗಿ ಆನೆಯ ಕಣ್ಣುಗಳು ಬಹಳ ಕಿರಿದಾಗಿರುತ್ತವೆ ಹಾಗೂ ಇವು ತೀಕ್ಷ್ಣವಾದ ದೃಷ್ಟಿ ಹಾಗೂ ಜೀವನದ ಕುರಿತ೦ತೆ ಆಳವಾದ ಯೋಚನೆಗಳನ್ನು ಸ೦ಕೇತಿಸುತ್ತವೆ.

ಕೌಸ್ತುಭ ಮಣಿ
ಎಲ್ಲಾ ಮುತ್ತುರತ್ನಗಳಿ೦ಗಿತಲೂ ಅತ್ಯಾಕರ್ಷಕವಾದ ಕೌಸ್ತುಭ ಮಣಿಯು ಸೂರ್ಯನ೦ತೆ ದೇದೀಪ್ಯಮಾನವಾಗಿದ್ದು, ಮೂರು ಲೋಕಗಳನ್ನೂ ಬೆಳಗಬಲ್ಲದು. ಈ ಮಣಿಯು ದೇವತೆಗಳ ಪಾಲಾಯಿತು.

ಕಲ್ಪವೃಕ್ಷ
ಸ್ವರ್ಗಲೋಕದ ಹೆಮ್ಮೆಯ ಪ್ರತೀಕವಾಗಿರುವ ಕಲ್ಪವೃಕ್ಷವು ಜನರ ಆಶೋತ್ತರಗಳನ್ನು ಈಡೇರಿಸುವ ಪರಮಪವಿತ್ರ ವೃಕ್ಷವಾಗಿದೆ.

ಅಪ್ಸರೆ
ಪರಿಪೂರ್ಣವಾದ ಕಾಯಗಳುಳ್ಳ ಹಾಗೂ ವಿಶಿಷ್ಟವಾದ ನಡಿಗೆಯ ಶೈಲಿಯುಳ್ಳ ಅತ್ಯಪೂರ್ವ ಸು೦ದರಿಯರೇ ಈ ಅಪ್ಸರೆಯರಾಗಿದ್ದು, ಅವರುಗಳ ಪೈಕಿ ರ೦ಭೆಯು ಅತೀ ಪ್ರಮುಖಳಾಗಿದ್ದು, ಈಕೆಯು ದೇವತೆಗಳ ಪಾಲಾಗುವಳು.



Click it and Unblock the Notifications











