Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಕೃಷ್ಣ ಜನ್ಮಾಷ್ಟಮಿ 2022: ಕೃಷ್ಣನ ಪ್ರೇರಣಾತ್ಮಕ ಹೇಳಿಕೆಗಳು
ವಿಷ್ಣುವು ಶ್ರೀಕೃಷ್ಣನ ಅವತಾರವನ್ನೆತ್ತಿ ದುಷ್ಟ ಸಂಹಾರಗೈದ, ಯಾವುದೇ ಆಯುಧಗಳಿಲ್ಲದೆ ಕುರುಕ್ಷೇತ್ರ ಯುದ್ಧದಲ್ಲಿ ಮಾಧವ ಪಾಂಡವರಿಗೆ ಜಯ ತಂದುಕೊಟ್ಟ, ಯುದ್ಧ ಮಾಡಲು ನಿರಾಕರಿಸಿದ ಅರ್ಜುನನಿಗೆ ಗೀತೋಪದೇಶವನ್ನು ಮಾಡಿ ಮನಸ್ಸು ಬದಲಿಸಿದ ವಾಸುದೇವ. ಹೀಗೆ ನಂದಗೋಪಾಲನ ಬಣ್ಣನೆ, ಸಾಧನೆ ಪದಗಳಲ್ಲಿ ವರ್ಣಿಸಲು ಅಸಾಧ್ಯವಾದದ್ದು.

ಪರಬ್ರಹ್ಮ ಜಗನ್ನಾಥನು ಮನುಷ್ಯನು ಜೀವನದಲ್ಲಿ ಹೇಗೆ ಬದುಕಬೇಕು, ಎಂಥಾ ತತ್ವದಾರ್ಶಗಳನ್ನು ಪಾಲಿಸಬೇಕು, ಯಾವುದು ಸರಿ, ಯಾವುದು ತಪ್ಪು ಎಂಬ ಜೀವನ ಸಾರವನ್ನು ಹೇಳಿದ್ದಾನೆ. ಮುರಾರಿ ಹೇಳಿರುವ ಜೀವನಾದರ್ಶಗಳು ನಮ್ಮ ಜೀವನಕ್ಕೆ ಸಾಕಷ್ಟು ಸಂದೇಶಗಳನ್ನು ನೀಡುತ್ತದೆ, ಇವುಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಗಿರಿಧರನ ಪ್ರೇರಣಾತ್ಮಕ ಪ್ರಮುಖ ಹೇಳಿಕೆಗಳನ್ನು ನಾವಿಲ್ಲಿ ನಿಮಗೆ ಹೇಳಲಿದ್ದೇವೆ:

ಪ್ರೇರಣಾತ್ಮಕ ಹೇಳಿಕೆಗಳು 1
"ಬದುಕಿನಲ್ಲಿ ಏನೇ ನಡೆದರೂ ಒಳ್ಳೆಯದೇ. ವರ್ತಮಾನದಲ್ಲಿ ಏನಾಗುತ್ತಿದೆಯೋ ಅದೆಲ್ಲವೂ ಉತ್ತಮವಾಗಿಯೇ ನಡೆಯುತ್ತಿದೆ. ಮುಂದೆ ಏನಾಗುವುದೋ ಅದು ಕೂಡ ಚೆನ್ನಾಗಿರುತ್ತದೆ. ಭವಿಷ್ಯದ ಬಗ್ಗೆ ಚಿಂತಿಸಬೇಡಿ, ವರ್ತಮಾನದಲ್ಲಿ ಜೀವಿಸಿ". - ಶ್ರೀ ಕೃಷ್ಣ ಪರಮಾತ್ಮ

ಪ್ರೇರಣಾತ್ಮಕ ಹೇಳಿಕೆಗಳು 2
"ತನ್ನ ಮನಸ್ಸನ್ನು ಗೆದ್ದವನಿಗೆ, ಮನಸ್ಸೇ ಅತ್ಯುತ್ತಮ ಸ್ನೇಹಿ. ಆದರೆ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾದವನಿಗೆ, ಮನಸ್ಸೇ ಅತ್ಯಂತ ದೊಡ್ಡ ಶತ್ರು." - ಶ್ರೀ ಕೃಷ್ಣ ಪರಮಾತ್ಮ

ಪ್ರೇರಣಾತ್ಮಕ ಹೇಳಿಕೆಗಳು 3
"ನಿಮ್ಮ ಗುರಿಯನ್ನು ಸಾಧಿಸುವಲ್ಲಿ ನೀವು ವಿಫಲವಾದರೆ ತಂತ್ರವನ್ನು ಬದಲಿಸಿ, ಗುರಿಯನ್ನಲ್ಲ!" - ಶ್ರೀ ಕೃಷ್ಣ ಪರಮಾತ್ಮ

ಪ್ರೇರಣಾತ್ಮಕ ಹೇಳಿಕೆಗಳು 4
"ನಿಮ್ಮ ಕೆಲಸವನ್ನು ನೀವು ನಿಷ್ಠೆ, ಪ್ರಾಮಾಣಿಕವಾಗಿ ಮಾಡಿ, ಅದರಿಂದ ಯಾವುದೇ ಪ್ರತಿಫಲವನ್ನು ನಿರೀಕ್ಷಿಸಬೇಡಿ". - ಶ್ರೀ ಕೃಷ್ಣ ಪರಮಾತ್ಮ

ಪ್ರೇರಣಾತ್ಮಕ ಹೇಳಿಕೆಗಳು 5
"ಜೀವನದಲ್ಲಿ ಯಾರಿಗೆ ಯಾವುದೇ ಲಗತ್ತುಗಳಿಲ್ಲವೋ ಅವರು ನಿಜವಾಗಿಯೂ ಇತರರನ್ನು ಪ್ರೀತಿಸಬಹುದು, ಏಕೆಂದರೆ ಅವರ ಪ್ರೀತಿ ಶುದ್ಧ ಮತ್ತು ದೈವಿಕವಾಗಿರುತ್ತದೆ" - ಶ್ರೀ ಕೃಷ್ಣ ಪರಮಾತ್ಮ

ಪ್ರೇರಣಾತ್ಮಕ ಹೇಳಿಕೆಗಳು 6
"ನೀವು ಮಾಡಬೇಕಾದ ಎಲ್ಲವನ್ನೂ ಮಾಡಿ, ಆದರೆ ದುರಾಸೆಯಿಂದ ಅಲ್ಲ, ಅಹಂಕಾರದಿಂದ ಅಲ್ಲ, ಕಾಮದಿಂದ ಅಲ್ಲ, ಅಸೂಯೆಯಿಂದಲ್ಲ. ಬದಲಾಗಿ ಪ್ರೀತಿ, ಕರುಣೆ, ನಮ್ರತೆ ಮತ್ತು ಭಕ್ತಿಯಿಂದ." - ಶ್ರೀ ಕೃಷ್ಣ ಪರಮಾತ್ಮ

ಪ್ರೇರಣಾತ್ಮಕ ಹೇಳಿಕೆಗಳು 7
"ನಾವು ನಮ್ಮ ಸ್ವಂತ ಸ್ನೇಹಿತರಾಗುವ ಶಕ್ತಿಯನ್ನು ಹೊಂದಿದ್ದೇವೆ ಮತ್ತು ನಮ್ಮ ಸ್ವಂತ ಶತ್ರುವಾಗುವ ಮೂರ್ಖತನವನ್ನೂ ಸಹ ಹೊಂದಿದ್ದೇವೆ" - ಶ್ರೀ ಕೃಷ್ಣ ಪರಮಾತ್ಮ

ಪ್ರೇರಣಾತ್ಮಕ ಹೇಳಿಕೆಗಳು 8
"ನೀವು ಏಕೆ ಅನಗತ್ಯವಾಗಿ ಚಿಂತಿಸುತ್ತೀರಿ? ಯಾರಿಗಾಗಿಯೋ ಏಕೆ ಹೆದರುತ್ತೀರಿ? ಯಾರು ನಿಮ್ಮನ್ನು ಕೊಲ್ಲಲು ಸಾಧ್ಯ? ಅಂತಿಮವಾಗಿ ಆತ್ಮವು ಹುಟ್ಟುತ್ತದೆ ಅಥವಾ ಸಾಯುತ್ತದೆ ಅಷ್ಟೇ ಅಲ್ಲವೇ". - ಶ್ರೀ ಕೃಷ್ಣ ಪರಮಾತ್ಮ

ಪ್ರೇರಣಾತ್ಮಕ ಹೇಳಿಕೆಗಳು 9
"ಸ್ವಯಂ ವಿನಾಶ ಮತ್ತು ನರಕಕ್ಕೆ ಮೂರು ದ್ವಾರಗಳಿವೆ: ಅದುವೇ ಕಾಮ, ಕೋಪ ಮತ್ತು ದುರಾಸೆ". - ಶ್ರೀ ಕೃಷ್ಣ ಪರಮಾತ್ಮ

ಪ್ರೇರಣಾತ್ಮಕ ಹೇಳಿಕೆಗಳು 10
"ಸಂತೋಷ ಎಂಬುದು ನಮ್ಮದೇ ಮನಸ್ಥಿತಿಯಾಗಿದೆ, ಅದು ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ." - ಶ್ರೀ ಕೃಷ್ಣ ಪರಮಾತ್ಮ

ಪ್ರೇರಣಾತ್ಮಕ ಹೇಳಿಕೆಗಳು 11
"ಎಲ್ಲಾ ರೀತಿಯ ಕೊಲೆಗಾರರಿಗೆ ಹೋಲಿಸಿದರೆ ಸಮಯವೇ ಅಂತಿಮವಾಗಿದೆ, ಏಕೆಂದರೆ ಅದು ಎಲ್ಲವನ್ನೂ ಕೊಲ್ಲುತ್ತದೆ" - ಶ್ರೀ ಕೃಷ್ಣ ಪರಮಾತ್ಮ

ಪ್ರೇರಣಾತ್ಮಕ ಹೇಳಿಕೆಗಳು 12
"ಜೀವನದಲ್ಲಿ ಆಸೆ, ದುರಾಸೆಗಳನ್ನು ಕಡಿಮೆ ಮಾಡುವುದೇ ಸಂತೋಷದ ಕೀಲಿಕೈ" - ಶ್ರೀ ಕೃಷ್ಣ ಪರಮಾತ್ಮ



Click it and Unblock the Notifications