Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ನ. 30 ಕಾರ್ತಿಕ ಪೌರ್ಣಿಮೆಯ ಮಹತ್ವ ಹಾಗೂ ಈ ದಿನ ಏನು ಮಾಡಿದರೆ ಒಳ್ಳೆಯದಾಗುತ್ತೆ?
ಹಿಂದೂಗಳಿಗೆ ಕಾರ್ತಿಕ ಮಾಸವೆಂದರೆ ತುಂಬಾ ಪವಿತ್ರವಾದದ್ದು. ಅದರಲ್ಲೂ ಕಾರ್ತಿಕ ಮಾಸದ 15ನೇ ದಿನ ಬರುವ ಪೌರ್ಣಿಮೆ(ಹುಣ್ಣಿಮೆ) ತುಂಬಾ ವಿಶೇಷವಾದದ್ದು. ಇದನ್ನು ತ್ರಿಪುರಿ ಹುಣ್ಣಿಮೆ, ದೇವ-ದೀಪಾವಳಿ ಎಂದು ಕೂಡ ಕರೆಯಲಾಗುವುದು. ಕಾರ್ತಿಕ ಹುಣ್ಣಿಮೆ ಹಬ್ಬವು ಸಿಖ್ಖರ ಹಬ್ಬವಾದ ಗುರುನಾನಕ್ ಜಯಂತಿಯೊಂದಿಗೆ ಏಕಕಾಲಕ್ಕೆ ನಡೆಯುತ್ತದೆ.

ವರ್ಷದಲ್ಲಿ ಬರುವ 12 ಹುಣ್ಣಿಮೆಗಳಲ್ಲಿ ಕಾರ್ತಿಕ ಮಾಸ ತುಂಬಾ ಮಹತ್ವವನ್ನು ಹೊಂದಿದೆ. ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಿ, ವ್ರತ ಮಾಡಿ, ಜಪ, ಪೂಜೆ ಮಾಡಿದರೆ ಎಲ್ಲಾ ದೇವರ ಕೃಪೆಗೆ ಪಾತ್ರರಾಗುವಷ್ಟು ಪುಣ್ಯ ಪಡೆಯಬಹುದು. ಈ ಕಾರ್ತಿಕ ಈ ಹುಣ್ಣಿಮೆ ಈ ಕೆಳಗಿನ ಕಾರಣಗಳಿಂದಾಗಿ ಪ್ರಾಮುಖ್ಯತೆಯನ್ನು ಪಡೆದಿದೆ.
ಹಿಂದೂ ಧರ್ಮದಲ್ಲಿ ಈ ಹಬ್ಬದ ಪ್ರಾಮುಖ್ಯತೆ:

ತ್ರಿಪುರಿ ಹುಣ್ಣಿಮೆ
ಕಾರ್ತಿಕ ಹುಣ್ಣಿಮೆಯಂದು ಶಿವನು ತ್ರಿಪುರಾಂತಕನ ರೂಪದಲ್ಲಿ ತ್ರಿಪುರಾಸುರನೆಂಬ ರಾಕ್ಷಸನ ವಧಿಸಿದ ದಿನ ಎಂದು ಪೌರಾಣಿಕ ಕತೆ ಹೇಳುತ್ತದೆ. ತ್ರಿಪುರಾಸುರನು ಇಡೀ ವಿಶ್ವವನ್ನೇ ಆಕ್ರಮಣ ಮಾಡಿ ದೇವಾನುದೇವತೆಗಳನ್ನು ಸೋಲಿಸಿ ಸ್ವರ್ಗಲೋಖದಲ್ಲಿ ಮೂರು ನಗರಗಳನ್ನು ಕೂಡಾ ನಿರ್ಮಿಸಿ, ದೇವತೆಗಳನ್ನು ಆಳಲು ತೊಡಗಿದನು, ಈತನಿಂದ ಪಾರು ಮಾಡುವಂತೆ ದೇವತೆಗಳು ಶಿವನ ಮೊರೆ ಹೋಗುತ್ತಾರೆ, ಆಗ ಶಿವನು ತನ್ನ ಒಂದೇ ಬಾಣದಿಂದ ತ್ರಿಪುರಾಸುರನನ್ನು ಕೊಂದು ಅವನ ನಗರಗಳನ್ನು ನಾಶ ಮಾಡಿ, ದೇವತೆಗಳನ್ನು ಬಂಧ ಮುಕ್ತಗೊಳಿಸಿದನು. ಈ ಹಬ್ಬವನ್ನು ದೇವ ದೀಪಾವಳಿಯಾಗಿ ಆಚರಿಸಲಾಗುತ್ತದೆ.

ವಿಷ್ಣು ಮತ್ಸ್ಯಾವತಾರ ತಾಳಿದ ದಿನ
ಕಾರ್ತಿಕ ಹುಣ್ಣಿಮೆಯಂದು ವಿಷ್ಣು ಮತ್ಸ್ಯಾವತಾರ ತಾಳಿದನು. ಅಲ್ಲದೆ ವಿಷ್ಣುವಿನ ಪ್ರಿಯಳಾದ ತುಳಸಿ ಹುಟ್ಟಿದ ದಿನ ಕೂಡ ಎಂದು ಹೇಳಲಾಗುತ್ತದೆ. ಈ ದಿನವನ್ನು ವಿಷ್ಣುವಿನ ಅವತಾರವಾದ ಕೃಷ್ಣನ ಪ್ರಿಯತಮೆಯಾದ ರಾಧಾಳಿಗೆ ತುಂಬಾ ಆತ್ಮೀಯವೆಂದೂ ಪರಿಗಣಿಸಲಾಗಿದೆ. ಈ ದಿನದಂದು ರಾಧಾ ಮತ್ತು ಕೃಷ್ಣರು ರಾಸ ನೃತ್ಯವನ್ನು ಮಾಡಿದರೆಂದು ಮತ್ತು ಕೃಷ್ಣನು ರಾಧೆಯನ್ನು ವರಿಸಿದನೆಂದು ನಂಬಲಾಗಿದೆ. ಈ ದಿನವನ್ನು ಮೃತ ಪೂರ್ವಜರಾದ ಪಿತೃಗಳಿಗೆ ಕೂಡ ಸಮರ್ಪಿಸಲಾಗುತ್ತದೆ.

ಪ್ರಬೋಧಿನಿ ಏಕಾದಶಿ ಮತ್ತು ಪುಷ್ಕರ ಮೇಳ
ಕಾರ್ತಿಕ ಹುಣ್ಣಿಮೆಗೂ ಪ್ರಬೋಧಿನಿ ಏಕಾದಶಿಗೂ ನಿಕಟ ಸಂಬಂಧವಿದೆ. ವಿಷ್ಣುವು ನಿದ್ರಿಸುವನೆಂದು ನಂಬಲಾದ ನಾಲ್ಕು ತಿಂಗಳ ಅವಧಿಯಾದ ಚಾತುರ್ಮಾಸದ ಮುಕ್ತಾಯವನ್ನು ಸೂಚಿಸುವ ಪ್ರಬೋಧಿನಿ ಏಕಾದಶಿಯಾಗಿದೆ. ಈ ಪ್ರಬೋಧಿನಿ ಏಕಾದಶಿಯು ದೇವರು ನಿದ್ರೆಯಿಂದ ಎಚ್ಚರವಾಗುವುದನ್ನು ಸೂಚಿಸುತ್ತದೆ. ಪ್ರಬೋಧಿನಿ ಏಕಾದಶಿಯಂದು ಪ್ರಾರಂಭವಾಗುವ ಬಹಳಷ್ಟು ಜಾತ್ರೆಗಳು ಕಾರ್ತಿಕ ಹುಣ್ಣಿಮೆಯಂದು ಮುಕ್ತಾಯಗೊಳ್ಳುತ್ತವೆ, ಕಾರ್ತಿಕ ಹುಣ್ಣಿಮೆಯು ಸಾಮಾನ್ಯವಾಗಿ ಜಾತ್ರೆಯ ಪ್ರಮುಖ ದಿನವಾಗಿರುತ್ತದೆ. ಈ ದಿನದಂದು ಮುಕ್ತಾಯಗೊಳ್ಳುವ ಜಾತ್ರೆಗಳಲ್ಲಿ ಪಂಢರಾಪುರದಲ್ಲಿನ ಪ್ರಬೋಧಿನಿ ಏಕಾದಶಿ ಆಚರಣೆ ಮತ್ತು ಪುಷ್ಕರ ಮೇಳ ಒಳಗೊಂಡಿದೆ. ಪ್ರಬೋಧಿನಿ ಏಕಾದಶಿಯಿಂದ ಆಚರಣೆ ಮಾಡಬಹುದಾದ ತುಳಸಿ ವಿವಾಹವನ್ನು ಆಚರಿಸಲು ಕಾರ್ತಿಕ ಪೂರ್ಣಿಮೆಯ ಕೊನೆಯ ದಿನವಾಗಿದೆ.

ಕಾರ್ತಿಕ ಹುಣ್ಣಿಮೆಯಂದು ಮಾಡಬೇಕು ಪವಿತ್ರ ಸ್ನಾನ
ಕಾರ್ತಿಕ ಹುಣ್ಣಿಮೆಯಂದು ಪವಿತ್ರ ನದಿಗೆ ಹೋಗಿ ಪುಣ್ಯಸ್ನಾನವನ್ನು ಮಾಡುವುದು ಶ್ರೇಷ್ಠವೆಂದು ಹೇಳಲಾಗುತ್ತದೆ. ಈ ಪವಿತ್ರ ಸ್ನಾನವನ್ನು ಕಾರ್ತಿಕ ಸ್ನಾನವೆಂದು ಕರೆಯುತ್ತಾರೆ. ಕಾರ್ತಿಕ ಪೌರ್ಣಿಮೆಯಂದು ವಾರಣಾಸಿಯ ಗಂಗಾನದಿಯಲ್ಲಿ ಸ್ನಾನ ಮಾಡಲು ಲಕ್ಷಾಂತರ ಭಕ್ತರು ಬರುತ್ತಾರೆ. ಪವಿತ್ರ ನದಿಯಲ್ಲಿ ಸ್ನಾನ ಮಾಡಿ ದೀಪ ಬೆಳಗಿ ದೇವರನ್ನು ಪೂಜಿಸುವುದರಿಂದ ಎಲ್ಲಾ ದೇವರುಗಳ ಕೃಪೆಯೂ ದೊರೆಯುವುದು ಎಂದು ನಂಬಲಾಗಿದೆ.

ಕಾರ್ತಿಕ ಹುಣ್ಣಿಮೆಗೆ ಏನು ಮಾಡಬಾರದು?
ಯಾವುದೇ ಪ್ರಕಾರದ ಹಿಂಸೆಯನ್ನು ಈ ದಿನ ಮಾಡಬಾರದು. ಕ್ಷೌರ ಮಾಡುವುದು, ತಲೆ ಕೂದಲು ಕತ್ತರಿಸುವುದು, ಮರಗಳನ್ನು ಕಡಿಯುವುದು,ಹಣ್ಣುಗಳನ್ನು ಮತ್ತು ಹೂಗಳನ್ನು ಕೀಳುವುದು, ಬೆಳೆಗಳ ಕಟಾವು ಮತ್ತು ಹೆಣ್ಣು-ಗಂಡಿನ ಮಿಲನವೂ ಕೂಡ ಇದರಲ್ಲಿ ಒಳಗೊಂಡಿದೆ.

ಏನು ಮಾಡಬೇಕು?
ಈ ದಿನ ದಾನಕ್ಕೆ ತುಂಬಾ ಶ್ರೇಷ್ಠವೆಂದು ಹೇಳಲಾಗುತ್ತದೆ. ವಿಶೇಷವಾಗಿ ಗೋ ಮಾತೆಗೆ ದಾನ ಮಾಡಬೇಕು, ಬ್ರಾಹ್ಮಣರಿಗೆ ಆಹಾರ ದಾನ ಮಾಡಬೇಕು. ಈ ದಿನ ಉಪವಾಸವಿದ್ದು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು.

ಆಚರಣೆ ಹೇಗೆ?
ಕಾರ್ತಿಕ ಮಾಸದಲ್ಲಿ ದೀಪಗಳನ್ನು ಹಚ್ಚಿ ಆರಾಧನೆ ಮಾಡಲಾಗುವುದು. ದೀಪಗಳನ್ನು ನದಿಗಳಲ್ಲಿ ಸಣ್ಣದಾದ ದೋಣಿಗಳಲ್ಲಿ ತೇಲಿ ಬಿಡಲಾಗುತ್ತದೆ. ತುಳಸಿ, ಪವಿತ್ರವಾದ ಅಂಜೂರದ ಹಣ್ಣು ಮತ್ತು ನೆಲ್ಲಿ ಮರಗಳ ಕೆಳಗೆ ದೀಪಗಳನ್ನಿಡಲಾಗುತ್ತದೆ. ನೀರಿನಲ್ಲಿರುವ ಮತ್ತು ಮತ್ತು ಮರಗಳ ಕೇಳಗಿರುವ ದೀಪಗಳನ್ನು ಕಣ್ತುಂಬಿಕೊಳ್ಳುವ ಮೀನುಗಳು, ಕ್ರಿಮಿ-ಕೀಟಗಳು ಮತ್ತು ಪಕ್ಷಿಯಾದಿಗಳು ಅಂತಿಮವಾಗಿ ಮೋಕ್ಷ ಪಡೆಯುತ್ತವೆ ಎಂದು ನಂಬಲಾಗುತ್ತದೆ.



Click it and Unblock the Notifications