Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು
ಕೊರೊನಾದಿಂದ ಅಪ್ಪ-ಅಮ್ಮ ಕಳೆದುಕೊಂಡ 100 ಮಕ್ಕಳ ದತ್ತು ಪಡೆದ 25 ಪ್ರಾಯದ ಜೈ ಶರ್ಮ
ಕೆಲವರನ್ನೂ ನೋಡುವಾಗ ಅಥವಾ ಅವರ ಬಗ್ಗೆ ಕೇಳುವಾಗ ಇಂಥವರೂ ಇರುತ್ತಾರಾ... ಇವರು ಆ ದೇವರ ಅವತಾರ ಪುರುಷನೇ ಇರಬೇಕು ಎಂದು ಅನಿಸದಿರಲ್ಲ... ಅಂಥ ವ್ಯಕ್ತಿಗಳನ್ನು ನೋಡುವಾಗ ಯಾರೂ ಇಲ್ಲದವರ ರಕ್ಷಣೆಗೆ ದೇವ ಒಬ್ಬನನ್ನು ಕಳುಹಿಸಿಯೇ ಕಳುಸುತ್ತಾನೇ ಎಂಬ ಭರವಸೆ ಮೂಡುವುದು...
ಕೋವಿಡ್ 19 2ನೇ ಅಲೆ ಭಾರತಕ್ಕೆ ದೊಡ್ಡ ನಷ್ಟವನ್ನೇ ಉಂಟು ಮಾಡಿದೆ...ಅದರ ಹೊಡೆತಕ್ಕೆ ಎಷ್ಟೋ ಕುಟುಂಬಗಳು ನಲುಗಿ ಹೋಗಿವೆ. ಕೊರೊನಾದಿಂದ ಅಪ್ಪ-ಅಮ್ಮನನ್ನು ಕಳೆದುಕೊಂಡು ಎಷ್ಟೋ ಮಕ್ಕಳು ಅನಾಥರಾಗಿದ್ದಾರೆ. ಇಂಥ ಅನಾಥ ಮಕ್ಕಳ ಪಾಲಿಗೆ ದೇವರಾಗಿದ್ದಾರೆ ಜೈ ಶರ್ಮ...

25ರ ಪ್ರಾಯದಲ್ಲಿಯೇ 100 ಮಕ್ಕಳಿಗೆ ಆಶ್ರಯದಾತ
ಇವರ ಬಗ್ಗೆ ಹೇಳುವುದಾದರೆ ಇನ್ನೂ 25 ಹರೆಯದ ತರುಣ...ಇವರ ಪ್ರಾಯದಲ್ಲಿ ಇತರರ ಬಗ್ಗೆ ಯೋಚಿಸುವುದಕ್ಕಿಂತ ನಾನು-ನನ್ನದು ಎಂದು ಯೋಚಿಸುವರೇ ಹೆಚ್ಚು. ಆದರೆ ಜೈ ಶರ್ಮ ಮಾತ್ರ ತನ್ನ ಬದುಕನ್ನು ಅನಾಥ ಮಕ್ಕಳಿಗಾಗಿ ಮೀಸಲಿಡಲು ತೀರ್ಮಾನಿಸಿದ್ದಾರೆ. ಕೋವಿಡ್ 19ನಿಂದ ತಂದೆ-ತಾಯಿ ಕಳೆದುಕೊಂಡು ಪ್ರೀತಿಗಾಗಿ ಬೆಂಬಲಿಸುತ್ತಿರುವ 100 ಮಕ್ಕಳಿಗೆ ಆಶ್ರಯದಾತನಾಗಲು ಪ್ರೀತಿಯಿಂದ ಮುಂದೆ ಬಂದಿದ್ದಾರೆ.

ಮಕ್ಕಳ ಬದುಕಿನ ಆಶಾಕಿರಣ ಜೈ ಶರ್ಮ
ತುಂಬಾ ಮುದ್ದಿನಿಂದ ಅಪ್ಪ-ಅಮ್ಮ ನೋಡಿಕೊಳ್ಳುತ್ತಿರುತ್ತಾರೆ. ಇದ್ದಕ್ಕಿದ್ದಂತೆ ಅವರೇ ಕಣ್ಮರೇ ಆಗುತ್ತಾರೆ. ಆ ಚಿಕ್ಕ ಪ್ರಾಯದಲ್ಲಿ ಬದುಕಿನಲ್ಲಿ ಕಾರ್ಮೋಡ ಆವರಿಸಿದಾಗ ಆ ಮಕ್ಕಳ ಬದುಕಿನಲ್ಲಿ ಬೆಳಕಿನ ಕಿರಣವಾಗಿ ಬಂದವರೇ ಡೆಹರಾಡೂನ್‌ನ ಜೈ ಶರ್ಮ. ಜೋಯ್ (JOY) ಎಂಬ ಹೆಸರಿನ ಎನ್‌ಜಿಒ ಸ್ಥಾಪಿಸಿ, ಕೋವಿಡ್ 19ನಿಂದಾಗಿ ಅನಾಥರಾದ 100 ಮಕ್ಕಳನ್ನು ದತ್ತು ತೆಗೆಯುವುದಾಗಿ ಹೇಳಿದ್ದಾರೆ. ಈಗಾಗಲೇ 20 ಮಕ್ಕಳನ್ನು ದತ್ತು ಪಡೆದಿದ್ದಾರೆ.
ಇನ್ನು ಕೆಲವು ವಾರಗಳಲ್ಲಿಯೇ 100 ಮಕ್ಕಳನ್ನು ದತ್ತು ಪಡೆಯಲು ಅವರು ಹಾಗೂ ಅವರ ತಂಡ ಕಾರ್ಯನಿರ್ವಹಿಸುತ್ತದೆ. ಈ ಮೂಲಕ 100 ಮಕ್ಕಳಿಗೆ ಒಂದು ಸುರಕ್ಷಿತ ಕೈ ಸಿಕ್ಕಂತೆ ಆಗುವುದು.

ಕೊರೊನಾ ಸಮಯದಲ್ಲಿ ಸೇವೆ ಸಲ್ಲಿಸಿದ್ದರು
2ನೇ ಅಲೆ ಪ್ರಾರಂಭವಾದ ಜೈ ಶರ್ಮ ಹಾಗೂ ವನ ತಂಡ ಜೋಯ್ ಎನ್‌ಜಿಒ ಮೂಲಕ ಜನರಿಗೆ ಫ್ರೀ ಆಕ್ಸಿಜನ್ ಸಿಲಿಂಡರ್ ಒದಗಿಸುವುದು, ಮೆಡಿಕಲ್ ಕಿಟ್ ತಲುಪಿಸುವುದು, ಇತರ ವೈದ್ಯಕೀಯ ಅಗ್ಯತಗಳನ್ನು ಜನರಿಗೆ ತಲುಪಿಸಿ ಕೊರೊನಾ ವಾರಿಯರ್ ಆಗಿ ಮಾನವೀಯತೆ ಮೆರೆದಿದ್ದರು.

ಮರುಜನ್ಮ ಅಂತ ಇದ್ದರೆ ಇದೇ ಬದುಕು ಸಿಗಲಿ ಅಂತ ಬಯಸುತ್ತೇನೆ
ಕೈ ಶರ್ಮ ತಮ್ಮ ಈ ಕುರಿತು ಹೇಳುತ್ತಾ " ಒಂದು ವೇಳೆ ದೇವರು ನನಗೆ ಮತ್ತೊಂದು ಜನ್ಮ ನೀಡಿದರೆ ನಾನು ಇದೇ ಹಾದಿಯಲ್ಲಿ ಮುಂದುವರೆಯಲು ಬಯಸುತ್ತೇನೆ... ಈ ಮಕ್ಕಳ ಬದುಕಿನಲ್ಲಿ ಸಂತೋಷ ನೀಡುವಂಥ ಭಾಗ್ಯ ನನಗೆ ಸಿಕ್ಕಿದೆ. ಜನರು ನನ್ನನ್ನು ಹೊಗಳುವಾಗ ಒಂದು ಹೇಳ ಬಯಸುತ್ತೇನೆ ಮಕ್ಕಳು ನನ್ನನ್ನು ರಕ್ಷಕನಾಗಿ ಸ್ವೀಕರಿಸಿದ್ದಕ್ಕೆ ಧನ್ಯನಾಗಿದ್ದೇನೆ. ಇಡೀ ಜಗತ್ತು ಗಾಢ ನಿದ್ದೆಯಲ್ಲಿದ್ದಾಗ 25 ವರ್ಷದ ನನಗೆ ಮಕ್ಕಳ ಅಳು ಕೇಳಿ ಎಚ್ಚರವಾದೆ. ದೇವರ ಮಕ್ಕಳಿಗೆ ರಕ್ಷಕನಾಗಿರುವುದು ಹೆಮ್ಮೆಯಾಗಿದೆ" ಎಂದಿದ್ದಾರೆ.
ನೂರು ಮಕ್ಕಳ ಜವಾಬ್ದಾರಿ ಜೈ ಶರ್ಮ ಹೆಗಲ ಮೇಲಿದೆ. ಆ ದೇವರು ಜೈ ಶರ್ಮರಿಗೆ ಆಯುಸ್ಸು, ಆರೋಗ್ಯ ನೀಡಲಿ, ನಿಮ್ಮ ಈ ಕಾರ್ಯಕ್ಕೆ ನಮ್ಮದೊಂದು ಸಲಾಂ.. ಜೈ ಶರ್ಮ
Photo courtesy: Instagram



Click it and Unblock the Notifications











