Latest Updates
-
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ
ಭಗವಾನ್ ಶ್ರೀ ರಾಮಚ೦ದ್ರನ ಕುರಿತ ಇಂಟರೆಸ್ಟಿಂಗ್ ಕಹಾನಿ
ಅಯೋಧ್ಯಾಧಿಪತಿ, ರಘುಕುಲತಿಲಕ, ಸೂರ್ಯವ೦ಶದ ಮುಕುಟಮಣಿಯೆ೦ದೆನಿಸಿಕೊ೦ಡಿದ್ದ ದೊರೆ ಭಗವಾನ್ ರಾಮನ ಬಗ್ಗೆ ಈ ಹಿ೦ದೆ ಹೇಳದೇ, ಬರೆಯದೇ, ಅಥವಾ ಮಾತನಾಡದೇ ಬಾಕಿ ಉಳಿದಿರುವ ವಿಷಯವಾದರೂ ಯಾವುದಿದೆ ಹೇಳಿ ?! ನಮಗೆಲ್ಲಾ ಶ್ರೀ ರಾಮನ ಧೈರ್ಯ, ಆತನ ಸ೦ಸ್ಕೃತಿ, ಸ೦ಸ್ಕಾರಗಳು, ಆತನ ನೈತಿಕತೆ, ಭ್ರಾತೃವಾತ್ಸಲ್ಯ ಹಾಗೂ ಮಾತೃವಾತ್ಸಲ್ಯ, ತ೦ದೆತಾಯಿಗಳ ಕುರಿತ೦ತೆ ಹಾಗೂ ಗುರುಹಿರಿಯರ ಕುರಿತ೦ತೆ ಆತನಿಗಿದ್ದ ಗೌರವ, ಆದರಗಳು ಹಾಗೂ ತನ್ನ ಅಸೀಮ ಭಕ್ತನಾಗಿದ್ದ ಹನುಮನ ಕುರಿತ೦ತೆ ಶ್ರೀ ರಾಮನ ಹೃದಯವೈಶಾಲ್ಯ ಇವೆಲ್ಲಾ ನಮಗೆ ಗೊತ್ತು.
ಶ್ರೀ ರಾಮಚ೦ದ್ರನ ಜೀವನ ಚರಿತ್ರೆಯು ತೆರೆದ ಪುಸ್ತಕವಿದ್ದ೦ತೆ, ಅದರಲ್ಲಿ ಯಾವುದೇ ಮುಚ್ಚುಮರೆಗಳಿಲ್ಲ, ತನ್ನ ತಂದೆಯ ಮಾತಿಗೆ ಬೆಲೆ ನೀಡಿ, ವನವಾಸಕ್ಕೆ ತೆರಳಿದ್ದು, ತನ್ನ ಪತ್ನಿಯನ್ನು ರಕ್ಷಿಸಿಕೊಳ್ಳಲು ರಾವಣನೊಡನೆ ಹೋರಾಡಿದ್ದು, ಇವೆಲ್ಲವುದರ ಕುರಿತಾಗಿ ನಮಗೆಲ್ಲಾ ತಿಳಿದಿರುವ೦ತಹದ್ದೇ. ಶ್ರೀ ರಾಮಚ೦ದ್ರನ ಕುರಿತ೦ತೆ ಇಷ್ಟೆಲ್ಲಾ ತಿಳಿದಿದ್ದರೂ ಕೂಡಾ ರಾಮನ ಬಗ್ಗೆ ಇನ್ನಷ್ಟು ತಿಳಿದಿಲ್ಲದ ಸ೦ಗತಿಗಳು ರಾಮಾಯಣದಲ್ಲಿ ಬಹಳಷ್ಟು ಇವೆ, ಶ್ರೀ ರಾಮಚ೦ದ್ರನ ಜೀವನದ ಕುರಿತಾದ, ಕೆಲವೊಂದು ಸಂಗತಿಯನ್ನು ನೀಡುತ್ತಿದ್ದೇವೆ, ಮುಂದೆ ಓದಿ...

ಶ್ರೀರಾಮಚಂದ್ರ ಹಾಗೂ ಅಹಲ್ಯಾದೇವಿ
ಸ್ತ್ರೀಕುಲದಲ್ಲಿಯೇ ಅತ್ಯ೦ತ ರೂಪವತಿಯಾಗಿರುವ, ಗೌತಮ ಮಹರ್ಷಿಗಳ ಧರ್ಮಪತ್ನಿಯಾದ ಅಹಲ್ಯಾದೇವಿಯನ್ನು ಸೌಂದರ್ಯಕ್ಕೆ ಮರುಳಾದ ಸುರಾಧಿಪತಿಯಾದ ಇ೦ದ್ರದೇವನು, ಗೌತಮ ಮುನಿಗಳ೦ತೆ ಮಾರುವೇಷವನ್ನು ಧರಿಸಿ, ಅಹಲ್ಯೆಯೊಂದಿಗೆ ತನ್ನ ಅಭಿಲಾಷೆಯನ್ನು ಪೂರೈಸಿಕೊಳ್ಳುತ್ತಾನೆ. ಇದನ್ನು ತಿಳಿದ ಗೌತಮ ಮುನಿಯು ತನ್ನ ಹೆಂಡತಿ ಅಹಲ್ಯಾದೇವಿಯ ಮೇಲೆ ಕೋಪಗೊಂಡು 'ನೀನೊ೦ದು ಶಿಲೆಯಾಗು' ಎಂದು ಬೊಗಸೆಯಲ್ಲಿ ನೀರನ್ನು ತು೦ಬಿಕೊ೦ಡು ಅದನ್ನು ಅಹಲ್ಯೆಯತ್ತ ಎರಚಿದರು. ತತ್ ಕ್ಷಣವೇ ಆಕೆಯು ಶಿಲೆಯಾಗಿ ಮಾರ್ಪಟ್ಟಳು. ಮಹಾನ್ ಸಾಧ್ವಿ ಶಿರೋಮಣಿ 'ಅಹಲ್ಯೆ ದೇವಿಯು' ಏಕೆ ಶಿಲೆಯಾದಳು?

ಶ್ರೀರಾಮಚಂದ್ರ ಹಾಗೂ ಅಹಲ್ಯಾದೇವಿ
ಈ ಎಲ್ಲಾ ಸಂಗತಿಯನ್ನು ವಿಶ್ವಾಮಿತ್ರರರಿಂದ ತಿಳಿದುಕೊಂಡ ಶ್ರೀರಾಮನು. ಅಹಲ್ಯೆಯ ಶಿಲೆಯತ್ತ ಸಾಗಿ, ಮಹರ್ಷಿ ವಿಶ್ವಾಮಿತ್ರರ ನಿರ್ದೇಶನದ೦ತೆ ತನ್ನ ಪಾದವನ್ನು ಆ ಶಿಲೆಯ ಮೇಲಿರಿಸುತ್ತಾನೆ. ಆಗ, ಶಿಲೆಯು ಅಹಲ್ಯೆಯಾಗಿ ಪರಿವರ್ತಿತವಾಯಿತು. ಅರ್ಥಾತ್, ಶ್ರೀರಾಮಚ೦ದ್ರನ ಪಾದಸ್ಪರ್ಶದಿ೦ದ ಅಹಲ್ಯೆಯು ಶಾಪವಿಮೋಚನೆಗೊಳ್ಳುತ್ತಾಳೆ.

ಶಬರಿಯ ಹಾಗೂ ರಾಮ
ಬೇಡರ ಕುಟು೦ಬವೊ೦ದರಲ್ಲಿ ಜನಿಸಿದ ಶಬರಿಯು, ರಾಮನ ಕುರಿತಾದ ತನ್ನ ನಿಷ್ಕಳ೦ಕ ಭಕ್ತಿಭಾವದ ಮೂಲಕ ಪ್ರಭು ಶ್ರೀ ರಾಮಚ೦ದ್ರನ ಪಾದಪದ್ಮಗಳಲ್ಲಿ ಲೀನವಾದ ಕಥೆಯು ರಾಮಾಯಣದ ಭಾಗವಾಗಿದ್ದು, ಆಧ್ಯಾತ್ಮಿಕ ಮಾರ್ಗವನ್ನನುಸರಿಸುತ್ತಿರುವವರಿಗೆ ದಾರಿದೀಪವಾಗಿದೆ. ಹೌದು ತನ್ನ ನಿಷ್ಕಲ್ಮಶ ಮನಸ್ಸಿನಿ೦ದ, ಪರಿಶುದ್ಧವಾದ ಭಕ್ತಿಭಾವದಿ೦ದ, ಪ್ರಾಮಾಣಿಕ ಭಕ್ತಿಭಾವದಿಂದಲೇ, ಶ್ರೀರಾಮಚಂದ್ರನ ಮನಗೆದ್ದ ಶಬರಿಯ ಕಥೆ, ಮನುಕುಲದ ಚರಿತ್ರೆಯಲ್ಲಿ ಅಚ್ಚಳಿಯದೇ ಉಳಿದಿದೆ.ಪರಮ ಭಕ್ತೆ ಶಬರಿಯ ಎಂಜಲು ಶ್ರೀರಾಮನಿಗೆ ಪಂಚಾಮೃತವಾಯಿತೇ?

ಕಬ೦ಧ ರಾಕ್ಷಸ ಹಾಗೂ ರಾಮ
ಕಬ೦ಧ ರಾಕ್ಷಸ ಭಗವಾನ್ ಶ್ರೀರಾಮಚ೦ದ್ರ ಹಾಗೂ ಲಕ್ಷ್ಮಣರು ಸೀತಾಮಾತೆಗಾಗಿ ಅರಣ್ಯದಲ್ಲಿ ಶೋಧಿಸುತ್ತಿದ್ದಾಗ, ಅವರು ಕಬ೦ಧನೆ೦ಬ ರಾಕ್ಷಸನನ್ನು ಎದುರಿಸಿ ಆತನನ್ನು ಕೊಲ್ಲುತ್ತಾರೆ. ವಾಸ್ತವವಾಗಿ ಕಬ೦ಧನು ಶಾಪದ ರಾಕ್ಷಸನಾಗಿದ್ದನು. ಭಗವಾನ್ ಶ್ರೀರಾಮಚ೦ದ್ರನು ಆತನ ಮೃತದೇಹವನ್ನು ದಹಿಸಲು ತೆರಳಿದಾಗ, ಆ ರಕ್ಕಸನ ಆತ್ಮವು ಶಾಪವಿಮೋಚನೆಗೊಳ್ಳುತ್ತದೆ ಹಾಗೂ ಆತನು ಶ್ರೀರಾಮನಲ್ಲಿ ಸುಗ್ರೀವನೊ೦ದಿಗೆ ಮೈತ್ರಿಯನ್ನು ಸಾಧಿಸುವ೦ತೆ ಕೇಳಿಕೊಳ್ಳುತ್ತಾನೆ.

ತನ್ನ ಮಾನವರೂಪಿ ಜನ್ಮವನ್ನು ಅ೦ತ್ಯ
ತನ್ನ ನಿರ್ವಾಣದ ಸ೦ದರ್ಭದಲ್ಲಿ ಪ್ರಭು ಶ್ರೀರಾಮಚ೦ದ್ರನು ಸರಯೂ ನದಿಯಲ್ಲಿ ಜಲಸಮಾಧಿ ಹೊ೦ದಿದನು ಹಾಗೂ ಸೀತಾಮಾತೆಯು ತನ್ನ ತಾಯಿಯಾದ ಭೂದೇವಿಯಿ೦ದ ಹಿ೦ಪಡೆಯಲ್ಪಟ್ಟಳು ಎ೦ದು ನ೦ಬಲಾಗಿದೆ. ತನ್ನ ಪಾತಿವ್ರತ್ಯವನ್ನು ನಿರೂಪಿಸುವ ಮತ್ತೊ೦ದು ಅಗ್ನಿಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗದೇ ಸೀತಾಮಾತೆಯು ವನದಲ್ಲಿದ್ದಾಗ, ಭೂದೇವಿಯನ್ನು ಕುರಿತು ತನ್ನನ್ನು ಹಿ೦ಪಡೆಯುವ೦ತೆ ಬೇಡಿಕೊಳ್ಳುತ್ತಾಳೆ. ತದನ೦ತರ, ತಾಯಿಯನ್ನು ಕಳೆದುಕೊ೦ಡ ದು:ಖದಲ್ಲಿ ಹತಾಶೆಗೊ೦ಡು ಸೀತಾಮಾತೆಯ ಪುತ್ರನಾದ ಕುಶನೂ ಸಹ ತನ್ನ ತಾಯಿಯನ್ನೇ ಅನುಸರಿಸುತ್ತಾನೆ. ತನ್ನ ಅತ್ಯ೦ತ ಪ್ರೀತಿಪಾತ್ರಳಾದ ಸೀತಾಮಾತೆಯ ಅಗಲಿಕೆಯ ದು:ಖವನ್ನು ಸಹಿಸಲಾರದ ಪ್ರಭು ಶ್ರೀರಾಮಚ೦ದ್ರನು ಭೂಮಿಯ ಮೇಲಿನ ತನ್ನ ಅವತಾರವಾದ ಮಾನವರೂಪೀ ಜನ್ಮವನ್ನು ಅ೦ತ್ಯಗೊಳಿಸಿ ಸರಯೂ ನದಿಯಲ್ಲಿ ಭಗವಾನ್ ಶ್ರೀ ಮಹಾವಿಷ್ಣುವಿನೊ೦ದಿಗೆ ಐಕ್ಯನಾಗುತ್ತಾನೆ.

ತನ್ನ ಮಾನವರೂಪಿ ಜನ್ಮವನ್ನು ಅ೦ತ್ಯ
ತನ್ನ ನಿರ್ವಾಣದ ಸ೦ದರ್ಭದಲ್ಲಿ ಪ್ರಭು ಶ್ರೀರಾಮಚ೦ದ್ರನು ಸರಯೂ ನದಿಯಲ್ಲಿ ಜಲಸಮಾಧಿ ಹೊ೦ದಿದನು ಹಾಗೂ ಸೀತಾಮಾತೆಯು ತನ್ನ ತಾಯಿಯಾದ ಭೂದೇವಿಯಿ೦ದ ಹಿ೦ಪಡೆಯಲ್ಪಟ್ಟಳು ಎ೦ದು ನ೦ಬಲಾಗಿದೆ. ತನ್ನ ಪಾತಿವ್ರತ್ಯವನ್ನು ನಿರೂಪಿಸುವ ಮತ್ತೊ೦ದು ಅಗ್ನಿಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗದೇ ಸೀತಾಮಾತೆಯು ವನದಲ್ಲಿದ್ದಾಗ, ಭೂದೇವಿಯನ್ನು ಕುರಿತು ತನ್ನನ್ನು ಹಿ೦ಪಡೆಯುವ೦ತೆ ಬೇಡಿಕೊಳ್ಳುತ್ತಾಳೆ. ತದನ೦ತರ, ತಾಯಿಯನ್ನು ಕಳೆದುಕೊ೦ಡ ದು:ಖದಲ್ಲಿ ಹತಾಶೆಗೊ೦ಡು ಸೀತಾಮಾತೆಯ ಪುತ್ರನಾದ ಕುಶನೂ ಸಹ ತನ್ನ ತಾಯಿಯನ್ನೇ ಅನುಸರಿಸುತ್ತಾನೆ. ತನ್ನ ಅತ್ಯ೦ತ ಪ್ರೀತಿಪಾತ್ರಳಾದ ಸೀತಾಮಾತೆಯ ಅಗಲಿಕೆಯದು:ಖವನ್ನು ಸಹಿಸಲಾರದ ಪ್ರಭು ಶ್ರೀರಾಮಚ೦ದ್ರನು ಭೂಮಿಯ ಮೇಲಿನ ತನ್ನ ಅವತಾರವಾದ ಮಾನವರೂಪೀ ಜನ್ಮವನ್ನು ಅ೦ತ್ಯಗೊಳಿಸಿ ಸರಯೂ ನದಿಯಲ್ಲಿ ಭಗವಾನ್ ಶ್ರೀ ಮಹಾವಿಷ್ಣುವಿನೊ೦ದಿಗೆ ಐಕ್ಯನಾಗುತ್ತಾನೆ.



Click it and Unblock the Notifications











