Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಝೆನ್ ಕಥೆ: ಒಂದೇ ಹಸ್ತದ ಶಬ್ಧವನ್ನು ಆಲಿಸು

ಸುವೊ ಆ ವಿದ್ಯಾರ್ಥಿಗೆ " ಒಂದೇ ಹಸ್ತದ ಶಬ್ಧವನ್ನು ಆಲಿಸು " ಎಂಬ ಪಾಠವನ್ನು ಕಲಿಯಲು ಹೇಳಿದರು.
ಆ ವಿದ್ಯಾರ್ಥಿ ಮೂರು ವರ್ಷ ಪರಿಶ್ರಮ ಪಟ್ಟರೂ ಅದನ್ನು ಸಾಧಿಸಲಾಗಲಿಲ್ಲ.
ಕಣ್ಣಲ್ಲಿ ನೀರು ತುಂಬಿಕೊಂಡು ಆ ವಿದ್ಯಾರ್ಥಿ ಗುರುಗಳ ಬಳಿ ಬಂದು, "ಗುರುಗಳೇ, ನಾನೀಗ ಅತ್ಯಂತ ನಾಚಿಕೆ ಮತ್ತು ಮುಜುಗರದಿಂದ ನನ್ನ ಊರಿಗೆ ವಾಪಸಾಗಬೇಕಾಗಿದೆ. ನೀವು ಹೇಳಿಕೊಟ್ಟ ಪಾಠವನ್ನು ನನಗೆ ಕಲಿಯಲು ಸಾಧ್ಯವಾಗಲಿಲ್ಲ " ಎಂದನು.
ಗುರುಗಳು, "ಇನ್ನು ಒಂದು ವಾರದ ತನಕ ಧ್ಯಾನ ಮಾಡು" ಎಂದರು.
ಆದರೂ ಆ ವಿದ್ಯಾರ್ಥಿಗೆ ಅದು ಸಾಧ್ಯವಾಗಲಿಲ್ಲ.
ಆದರೂ ಗುರುಗಳು, " ಇನ್ನೂ ಒಂದು ವಾರದ ತನಕ ಧ್ಯಾನ ಮಾಡು " ಎಂದರು.
ಅದಾಗ್ಯೂ ಆ ವಿದ್ಯಾರ್ಥಿಗೆ ಜ್ಞಾನೋದಯವಾಗಲಿಲ್ಲ!
ಆ ವಿದ್ಯಾರ್ಥಿ ತನ್ನನ್ನು ಊರಿಗೆ ಕಳುಹಿಸುವಂತೆ ಗುರುಗಳಲ್ಲಿ ಬೇಡಿದ. ಉಹುಂ! ಗುರುಗಳು ಸುತರಾಂ ಒಪ್ಪಲಿಲ್ಲ. ಇನ್ನೂ ಐದು ದಿನ ಧ್ಯಾನಿಸುವಂತೆ ಹೇಳಿದರು. ಆದರೆ, ಅದರಿಂದ ಏನೂ ಪ್ರಯೋಜನವಾಗಲಿಲ್ಲ.
ಆಗ ಗುರುಗಳು, " ಇನ್ನು ಕೇವಲ ಮೂರು ದಿನ ಧ್ಯಾನಿಸು. ಒಂದು ವೇಳೆ ಆವಾಗಲೂ ನಿನಗೆ ಜ್ಞಾನೋದಯ ಆಗದಿದ್ದರೆ ನಿನ್ನನ್ನು ನೀನೇ ಕೊಂದುಕೊಳ್ಳುವುದೇ ಒಳ್ಳೆಯದು " ಎಂದರು!
ಆ ವಿದ್ಯಾರ್ಥಿಗೆ ಎರಡನೇ ದಿನಕ್ಕೇ ....... ಜ್ಞಾನೋದಯವಾಯಿತು!!



Click it and Unblock the Notifications
