Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
Trigrahi Yoga : ಗುರು ಪೂರ್ಣಿಮಾ 2022: ಮಿಥುನ ರಾಶಿಯಲ್ಲಿ ತ್ರಿಗ್ರಾಹಿ ಯೋಗ ಈ 3 ರಾಶಿಗಳಿಗೆ ಅದೃಷ್ಟ
ನಮ್ಮಲ್ಲಿರುವ ಅಜ್ಞಾನ ಹಾಗೂ ಕತ್ತಲೆಯನ್ನು ನಿವಾರಿಸುವ ಗುರುಗಳನ್ನು ಪೂಜಿಸುವ, ಧನ್ಯವಾದ ಹೇಳುವ ಹಾಗೂ ಗೌರವಿಸುವ ವಿಶೇಷ ದಿನವೇ ಗುರು ಪೂರ್ಣಿಮಾ. ಗುರು ಪೂರ್ಣಿಮಾ ಹಬ್ಬವು ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಆಷಾಢ ಮಾಸದ ಹುಣ್ಣಿಮೆಯಂದು ಈ ವಿಶೇಷ ದಿನವನ್ನು ಆಚರಿಸುವುದು ವಾಡಿಕೆ. 2022 ಅಂದರೆ ಈ ವರ್ಷ ಗುರು ಪೂರ್ಣಿಮಾ ಜುಲೈ 13 ರಂದು ಆಚರಿಸಲಾಗುತ್ತಿದೆ.

ಈ ವರ್ಷದ ಗುರು ಪೂರ್ಣಿಮೆ ಬಹಳ ವಿಶೇಷವಾಗಿದೆ, ಅಂದರೆ ಸೂರ್ಯ, ಬುಧ ಮತ್ತು ಶುಕ್ರ ಮೂರು ಗ್ರಹಗಳು ಮಿಥುನ ರಾಶಿಯಲ್ಲಿ ಕುಳಿತುಕೊಳ್ಳಲಿವೆ. ಮಿಥುನ ರಾಶಿಯಲ್ಲಿ ರೂಪುಗೊಂಡ ಈ ತ್ರಿಗ್ರಾಹಿ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ವಿಶೇಷ ತ್ರಿಗ್ರಾಹಿ ಯೋಗದ ಗುರು ಪೂರ್ಣಿಮೆಯಂದು ಈ 3 ರಾಶಿಯವರಿಗೆ ವಿಶೇಷ ಲಾಭ ಸಿಗಲಿದೆ. ಏನದು ಮುಂದೆ ತಿಳಿಯೋಣ:

ಮಿಥುನ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ ರಾಶಿಯ ಲಗ್ನ ಮನೆಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತಿದೆ. ಈ ರಾಶಿಯವರು ಈ ಯೋಗದಿಂದ ಅದೃಷ್ಟವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ಈ ರಾಶಿಯವರು ವೃತ್ತಿ ಮತ್ತು ವ್ಯಾಪಾರದಲ್ಲಿ ಅನಿರೀಕ್ಷಿತ ಯಶಸ್ಸನ್ನು ಸಾಧಿಸಬಹುದು. ಪಾಲುದಾರಿಕೆ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಗುರು ಪೂರ್ಣಿಮೆಯ ದಿನದಂದು ಈ ಯೋಗವು ಈ ರಾಶಿಯವರಿಗೆ ಆದಾಯವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಅಲ್ಲದೆ, ಈ ಅವಧಿಯಲ್ಲಿ ಅನಗತ್ಯ ವೆಚ್ಚಗಳು ಸಹ ಕಡಿಮೆಯಾಗುತ್ತವೆ. ಕೌಟುಂಬಿಕ ಸಹ ಸಂತೋಷ ಇರುತ್ತದೆ. ಮಗುವಿನ ಕಡೆಯಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.

ವೃಷಭ ರಾಶಿ
ವೃಷಭ ರಾಶಿಯ ಎರಡನೇ ಮನೆಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತಿದೆ, ಇದನ್ನು ಹಣ ಮತ್ತು ಮಾತಿನ ಸ್ಥಳ ಎಂದು ಕರೆಯಲಾಗುತ್ತದೆ. ಈ ಶುಭ ಕಾಕತಾಳೀಯದಿಂದ, ವೃಷಭ ರಾಶಿಚಕ್ರದವರ ಜೀವನದಲ್ಲಿ ಧನಾತ್ಮಕ ಪರಿಣಾಮಗಳು ಕಂಡುಬರುತ್ತವೆ. ಈ ಸಮಯದಲ್ಲಿ, ಯಾರಿಗಾದರೂ ಸಾಲ ನೀಡಿದ ಹಣವನ್ನು ಮರಳಿ ಪಡೆಯುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ, ಇತರೆ ಮೂಲಗಳಿಂದ ಸಹ ಹಣವನ್ನು ಪಡೆಯಬಹುದು. ಈ ಅವಧಿಯು ನಿಮಗೆ ಬಹಳ ಮಂಗಳಕರವೆಂದು ಸಾಬೀತಾಗುತ್ತದೆ. ನಿಮ್ಮ ಗೌರವ ಸಹ ಹೆಚ್ಚಾಗಲಿದೆ. ಅದೇ ಸಮಯದಲ್ಲಿ, ಈ ರಾಶಿಚಕ್ರದ ಅವಿವಾಹಿತರಿಗೆ ಮದುವೆಯ ಪ್ರಸ್ತಾಪಗಳು ಸಹ ಪಡೆಯಬಹುದು. ಸಮಾಜದಲ್ಲಿ ಪ್ರತಿಷ್ಠೆಯೂ ಸಿಗಲಿದೆ.

ಧನು ರಾಶಿ
ಧನು ರಾಶಿಯ ಏಳನೇ ಮನೆಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತಿದೆ. ಈ ವರ್ಷದ ಗುರು ಪೂರ್ಣಿಮೆಯು ಧನು ರಾಶಿಯವರಿಗೆ ತುಂಬಾ ವಿಶೇಷವಾಗಿರಲಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು. ಅದೇ ಸಮಯದಲ್ಲಿ, ಸರ್ಕಾರಿ ಉದ್ಯೋಗಗಳ ಸಾಧ್ಯತೆ ಸಹ ಇದೆ. ಈ ಸಮಯದಲ್ಲಿ, ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ನಿಮ್ಮ ವ್ಯವಹಾರವು ವಿದೇಶಕ್ಕೆ ಸಂಬಂಧಿಸಿದ್ದರೆ, ನೀವು ಉತ್ತಮ ಹಣವನ್ನು ಗಳಿಸಬಹುದು.



Click it and Unblock the Notifications
