Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗಣೇಶ ಚತುರ್ಥಿ 2022: ಗಣೇಶನಿಗೆ ಅಕ್ಷತೆಯನ್ನು ಏಕೆ ಪ್ರೋಕ್ಷಣೆ ಮಾಡುತ್ತೇವೆ ಗೊತ್ತೆ?
ಗಣೇಶನ ಕೃಪೆಗೆ ಪಾತ್ರರಾಗಲು ಅವನಿಗೆ ಇಷ್ಟವಾದ ಫಲ, ಫುಷ್ಪ, ಸಿಹಿತಿಂಡಿಗಳನ್ನು ಅರ್ಪಿಸಿ ಪೂಜಿಸುತ್ತೇವೆ. ಇದೆಲ್ಲದರ ನಡುವೆ ನಾವು ವಿನಾಯಕನಿಗೆ ಅಕ್ಷತೆ ಹಾಕುವುದನ್ನು ತಪ್ಪಿಸುವುದಿಲ್ಲ. ಅರಿಶಿನ ಮತ್ತು ಕುಂಕುಮದಿಂದ ಲೇಪಿತ ಅಕ್ಕಿ ಕಾಳನ್ನು ಅಕ್ಷತೆಯ ರೂಪದಲ್ಲಿ ಬಳಸುತ್ತಾರೆ.
ಮೋದಕ ಪ್ರಿಯ ಗಣೇಶನ ಹಬ್ಬವನ್ನು 2022ನೇ ಸಾಲಿನಲ್ಲಿ ಆಗಸ್ಟ್ 31ರಂದು ಆಚರಿಸಲಾಗುತ್ತಿದೆ. ಈ ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶನನ್ನು ತರುವ ಸಮಯದಿಂದ ವಿಸರ್ಜಿಸುವ ಪ್ರತಿಹಂತದಲ್ಲೂ ಮೊದಲು ಅಕ್ಷತೆಯನ್ನು ಹಾಕಿ ಮುಂದಿನ ಕಾರ್ಯ, ಪೂಜೆಗಳನ್ನು ಮಾಡುತ್ತೇವೆ. ಇನ್ನು ಹಲವರು ವಿನಾಯಕ ಚತುರ್ಥಿಯಂದು ಗಣೇಶ ಇಟ್ಟಿರುವವರ ಮನೆಗಳಿಗೆ ಹೋಗಿ ಅಕ್ಷತೆಯನ್ನು ಹಾಕಿ ವಂದಿಸುವ ವಾಡಿಕೆಯೂ ಇದೆ.
ಗಣಪತಿಯ ಪೂಜೆಯಲ್ಲಿ ಅಕ್ಷತೆಗೆ ಏಕೆ ಇಷ್ಟು ವಿಶೇಷ ಮಹತ್ವ ಇದೆ. ಅಕ್ಷತೆಯನ್ನು ಏಕೆ ಶುಭಕರ್ತಾ ಎಂದು ಹೇಳಲಾಗುತ್ತದೆ ಮುಂದೆ ನೋಡೋಣ:

ಶುಭದ ಸಂಕೇತ
ಅಕ್ಷತೆ ಅಂದರೆ ಅದು ಖುಷಿ ಮತ್ತು ಸಮೃದ್ಧಿಯ ಸಂಕೇತ. ಗಣೇಶನನ್ನು ಮನೆಗೆ ಕರೆತರುವಾಗ ಆತನ ಮೇಲೆ ಅಕ್ಷತೆ ಅಥವಾ ಅಕ್ಕಿಯನ್ನು ಹಾಕುವುದರಿಂದ ಮನೆಯಲ್ಲಿನ ಎಲ್ಲ ಬಾಧೆಗಳು ದೂರವಾಗುತ್ತವೆ. ಅಲ್ಲಿಂದ ಮನೆಯಲ್ಲಿ ಶುಭ ಮನೆ ಮಾಡುತ್ತದೆ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.

ದೇವತೆಗಳ ಆಶೀರ್ವಾದ
ಇದರ ಹೊರತಾಗಿ ಅಕ್ಷತೆ ಹಾಕುವುದರಿಂದ ಗಣೇಶನ ಜೊತೆಗೆ ಎಲ್ಲ ದೇವಾನು-ದೇವತೆಗಳ ಆಶೀರ್ವಾದ ಲಭಿಸುತ್ತದೆ. ಮನೆಯಲ್ಲಿ ಇದರಿಂದ ಸಕಾರಾತ್ಮಕತೆ ತುಂಬುತ್ತದೆ.

ಮೊದಲ ಪೂಜಾಕಾರಕ
ಯಾವುದೇ ಶುಭ ಕಾರ್ಯ ಇದ್ದರೂ ಗಣೇಶನಿಗೆ ಮೊದಲು ಪೂಜಿಸಲಾಗುತ್ತದೆ. ಸರ್ವ ದೇವತೆಗಳಲ್ಲೂ ವಿನಾಯಕನಿಗೆ ಪೂಜೆಗೆ ಪ್ರಥಮ ಆದ್ಯತೆ. ಈ ವೇಳೆ ಸಮೃದ್ಧಿ ಎಂದು ಪರಿಗಣಿಸಲಾದ ಅಕ್ಕಿ, ಶುಭ ಎಂದು ಹೇಳಲಾಗುವ ಅರಿಶಿನ ಹಾಗೂ ಕುಂಕುಮವನ್ನು ಮಿಶ್ರಣ ಮಾಡಿ ಅರ್ಪಿಸುವುದು ಮಂಗಳಕರ ಎನ್ನಲಾಗುತ್ತದೆ.

ಐದು ದೇವತೆಗಳ ಶಕ್ತಿ
ಗಣೇಶಯನ್ನು ಮನೆಗೆ ಸ್ವಾಗತಿಸುವಾಗ, ಕುಂಕುಮದೊಂದಿಗೆ ಅಕ್ಷತೆಯನ್ನು ಪ್ರೋಕ್ಷಣೆ ಮಾಡುವುದು ಅತ್ಯಗತ್ಯವಾಗಿದೆ. ಏಕೆಂದರೆ ಅಕ್ಕಿ ಧಾನ್ಯವು ಐದು ಪ್ರಮುಖ ದೇವತೆಗಳಾದ ಶಿವ, ಶಕ್ತಿ, ಶ್ರೀರಾಮ, ಶ್ರೀ ಕೃಷ್ಣ ಮತ್ತು ಶ್ರೀ ಗಣೇಶರಿಂದ ಧನಾತ್ಮಕತೆ ಮತ್ತು ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ.

ಮುರಿಯದ ಅಕ್ಕಿ ಬಳಸಿ
ಮುರಿಯದ ಅಕ್ಕಿಯನ್ನು ಬಳಸುವುದರಿಂದ ದೇವಾನು-ದೇವತೆಗಳಿಂದ ಉತ್ತಮ ಕಂಪನಗಳನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ಅರಿಶಿನ-ಕುಂಕುಮ ತಪ್ಪಿಸಬೇಡಿ
ಗಣೇಶ ಅಥವಾ ಯಾವುದೇ ದೇವರಿಗೆ ಅಕ್ಷತೆಯನ್ನು ಪ್ರೋಕ್ಷಣೆ ಮಾಡುವಾಗ ಅಕ್ಕಿಯನ್ನು ಹಾಗೆಯೇ ಹಾಕುವಂತಿಲ್ಲ, ದಕ್ಕೆ ಕುಂಕುಮ ಅಥವಾ ಅರಿಶಿನವನ್ನು ಲೇಪಿಸಬೇಕು. ಅಕ್ಕಿ ಮುರಿಯದಂತೆ ನೀವು ಅದನ್ನು ನಿಧಾನವಾಗಿ ಮಿಶ್ರಣ ಮಾಡಬೇಕು.



Click it and Unblock the Notifications
