Latest Updates
-
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು
ಹಿಂದೂ ದೇವರುಗಳ ನೆಚ್ಚಿನ ಆಹಾರಗಳು
ಹಿಂದೂ ಭಕ್ತಾಧಿಗಳು ಆಗಾಗ ಗೊಂದಲಕ್ಕೆ ಬೀಳುವ ಅಂಶ ಯಾವುದಪ್ಪ ಎಂದರೆ ತಮ್ಮ ನೆಚ್ಚಿನ ದೇವರುಗಳಿಗೆ ನೈವೇದ್ಯವಾಗಿ ಯಾವ ಆಹಾರವನ್ನು ಇಡುವುದು ಎಂದು. ನಮಗೆ ಸಾಮಾನ್ಯವಾಗಿ ಕೆಲವು ದೇವರುಗಳ ನೆಚ್ಚಿನ ತಿಂಡಿ ಅಥವಾ ಸಿಹಿ ತಿನಿಸುಗಳ ಬಗೆಗೆ ಗೊತ್ತು. ಉದಾಹರಣೆಗೆ ಗಣಪತಿಗೆ ಮೋದಕ ಮತ್ತು ಲಾಡು ಎಂದರೆ ಇಷ್ಟ.
ಇನ್ನು ಶಿವನನ್ನು ಪೂಜಿಸುವ ಭಕ್ತರಿಗು ಗೊತ್ತು ತಮ್ಮ ಭೋಲೆನಾಥನು ಭಂಗಿ, ಧಾತುರ, ಥಂಡೈ ಮತ್ತು ಶ್ವೇತ ವರ್ಣದ ಸಿಹಿ ತಿನಿಸುಗಳನ್ನು ಇಷ್ಟಪಡುತ್ತಾನೆ ಎಂದು. ಹೀಗೆಯೇ ಇತರ ದೇವರುಗಳಿಂದ ನಿಮ್ಮ ಕೋರಿಕೆಯನ್ನು ತೀರಿಸಿಕೊಳ್ಳಲು ನೀವು ಹಲವು ಆಹಾರ ಪದಾರ್ಥಗಳನ್ನು ನೈವೇದ್ಯವಾಗಿ ಇಡಬೇಕಾಗುತ್ತದೆ. ಉದಾಹರಣೆಗೆ ಶ್ರೀ ಕೃಷ್ಣನನ್ನು ಬೆಣ್ಣೆ ಕಳ್ಳ ಎಂದೇ ಕರೆಯುತ್ತಾರೆ, ಅದಕ್ಕಾಗಿ ಆತನಿಗೆ ಬೆಣ್ಣೆಯನ್ನು ಮತ್ತು ಇತರ ಹೈನು ಉತ್ಪನ್ನಗಳನ್ನು ಅರ್ಪಿಸುವುದು ವಾಡಿಕೆ. ಅದಕ್ಕಾಗಿಯೇ ಶ್ರೀಕೃಷ್ಣನಿಗೆ ಹೈನು ಉತ್ಪನ್ನಗಳನ್ನು ಅರ್ಪಿಸುವುದರ ಜೊತೆಗೆ ಬೆಣ್ಣೆಯ ಅಲಂಕಾರವನ್ನು ಮಾಡುತ್ತಾರೆ.
ನಾವು ಇಲ್ಲಿ ನಿಮಗಾಗಿ ಪೂಜೆ ಪುನಸ್ಕಾರಗಳಲ್ಲಿ ಹಿಂದೂ ದೇವರುಗಳಿಗೆ ನೈವೇದ್ಯವಾಗಿ ಸಲ್ಲಿಸಬೇಕಾದ ಆಹಾರ ಪದಾರ್ಥಗಳನ್ನು ಪಟ್ಟಿ ಮಾಡಿದ್ದೇವೆ. ಇನ್ನು ನಿಮ್ಮ ದೇವರ ಬಳಿ ನಿಮ್ಮ ಕೋರಿಕೆಯನ್ನು ಇಡುವಾಗ, ಯಾವ ನೈವೇದ್ಯವನ್ನು ಇಡಬೇಕು ಎಂಬ ತೊಡಕನ್ನು ಇದನ್ನು ಓದಿ ಪರಿಹರಿಸಿಕೊಳ್ಳಿ. ನಿಮ್ಮ ಕೋರಿಕೆ ನೆರವೇರಬೇಕು ಎಂದರೆ ಈ ನೈವೇದ್ಯಗಳನ್ನು ಮನಃ ಪೂರ್ವಕವಾಗಿ ಶ್ರದ್ಧಾ-ಭಕ್ತಿಗಳಿಂದ ತಯಾರಿಸಿ, ದೇವರಿಗೆ ಸಮರ್ಪಿಸಿ. ದೇವರ ಅನುಗ್ರಹಕ್ಕೆ ಪಾತ್ರರಾಗಿ.

ಹಾಲು
ಶಿವ ಮತ್ತು ಗಣಪತಿ ಇಬ್ಬರಿಗು ಹಾಲನ್ನು ಸಮರ್ಪಿಸಲಾಗುತ್ತದೆ. ನಂಬಿಕೆಗಳ ಪ್ರಕಾರ ಶಿವ ಮತ್ತು ಗಣಪತಿ ಇಬ್ಬರೂ ಹಾಲನ್ನು ಇಷ್ಟಪಡುತ್ತಾರೆ.

ಲಾಡು
ಗಣಪತಿಗೆ ಲಾಡುಗಳೆಂದರೆ ಪಂಚ ಪ್ರಾಣ, ಹಾಗಾಗಿಯೇ ಈ ಲಾಡು ಗಣಪತಿಯ ಪರಮಾಪ್ತ ತಿನಿಸುಗಳಲ್ಲಿ ಸ್ಥಾನ ಪಡೆದಿದೆ. ಇದೊಂದು ಬಹುಮುಖಿ ಸಿಹಿ ತಿನಿಸಾಗಿರುವ ಕಾರಣದಿಂದ ಹಲವಾರು ದೇವರುಗಳಿಗು ಸಹ ಇದನ್ನೆ ಅರ್ಪಿಸಲಾಗುತ್ತದೆ.

ಕೆಂಪು ಹೆಸರು ಬೇಳೆ
ಕೆಂಪು ಹೆಸರು ಅಥವಾ ಮೈಸೂರು, ಮಸೂರ್ ಬೇಳೆ ಎಂದು ಸಹ ಕರೆಯಲ್ಪಡುವ ಇದು ಹನುಮಾನ್ ಮತ್ತು ಸೂರ್ಯ ದೇವರು ಇಬ್ಬರಿಗು ನೆಚ್ಚಿನ ಆಹಾರ ಪದಾರ್ಥವಾಗಿದೆ. ಇದನ್ನು ಬೆಲ್ಲ ಮತ್ತು ನೀರಿನೊಂದಿಗೆ ಸೇರಿಸಿ ಸಮರ್ಪಿಸಲಾಗುತ್ತದೆ.

ಹಳದಿ ಹೆಸರು ಬೇಳೆ
ಹಳದಿಯ ಅಂಶಗಳನ್ನು ವಿಷ್ಣುವಿಗೆ ಸಮರ್ಪಿಸುವುದು ವಾಡಿಕೆ. ಏಕೆಂದರೆ ಭಗವಾನ್ ವಿಷ್ಣುವಿಗೆ ಹಳದಿ ಬಣ್ಣವೆಂದರೆ ಪ್ರೀತಿ. ಹೆಸರು ಬೇಳೆ, ಬೆಲ್ಲ, ಹಳದಿ ಲಾಡು ಇತ್ಯಾದಿಗಳು ವಿಷ್ಣುವಿನ ಅನುಗ್ರಹವನ್ನು ನಿಮಗೆ ದೊರಕಿಸಿಕೊಡುತ್ತವೆ.

ಭಾಂಗ್
ಭಾಂಗ್ ಅಥವ ಭಂಗಿ ( ಸೆಣಬಿನ ಎಲೆಗಳಿಂದ ಮಾಡಲಾದ ಒಂದು ಪಾನೀಯ) ಎಂಬ ಪಾನೀಯವು ಶಿವನ ಜೊತೆಗೆ ತಳಕು ಹಾಕಿಕೊಂಡಿದೆ. ಈ ದೇವರಿಗೆ ಸೆಣಬಿನ ಎಲೆಗಳನ್ನು ನೈವೇದ್ಯವಾಗಿ ಅರ್ಪಿಸುವ ವಾಡಿಕೆ ಕೆಲವೆಡೆ ಇದೆ. ನೀವು ಶಿವನ ಅನುಗ್ರಹಕ್ಕೆ ಪಾತ್ರವಾಗಬೇಕು ಎಂದಲ್ಲಿ ಸಕ್ಕರೆ, ಮೊಸರು ಮತ್ತು ಧಾತುರವನ್ನು ನೈವೇದ್ಯವಾಗಿ ಅರ್ಪಿಸಿ.

ಬೆಲ್ಲ
ಇದು ಹಲವು ಹಿಂದೂ ದೇವರುಗಳ ನೆಚ್ಚಿನ ಆಹಾರವಾಗಿದೆ. ಈ ಬೆಲ್ಲವನ್ನು ಹಾಲಿನೊಂದಿಗೆ ಅಥವಾ ಹೆಸರುಬೇಳೆಯೊಂದಿಗೆ ಬೆರೆಸಿ ಅಥವಾ ಸಿಹಿಯ ರೂಪದಲ್ಲಿ ದೇವರಿಗೆ ಸಮರ್ಪಿಸಲಾಗುತ್ತದೆ.

ಕೇಸರಿ
ಈ ಸುಗಂಧಿತ ಮಸಾಲೆ ಪದಾರ್ಥವನ್ನು ಶಿವ ಮತ್ತು ಸೂರ್ಯದೇವರಿಗೆ ಸಮರ್ಪಿಸಲಾಗುತ್ತದೆ. ಇದನ್ನು ಎಸಳುಗಳ ರೂಪದಲ್ಲಿ ಅಥವಾ ಹಾಲಿನ ಜೊತೆಗೆ ಬೆರೆಸಿ ಸಮರ್ಪಿಸಲಾಗುತ್ತದೆ.

ಕಪ್ಪು ಎಳ್ಳು
ಕಪ್ಪು ಎಳ್ಳು ಶನಿ ದೇವರ ಮತ್ತು ರಾಹು,ಕೇತುಗಳ ನೆಚ್ಚಿನ ಆಹಾರ ಪದಾರ್ಥವಾಗಿದೆ. ಈ ಮೂವರಿಗೆ ಇದರಿಂದ ತಯಾರಿಸಿದ ಆಹಾರವನ್ನು ಸಮರ್ಪಿಸುತ್ತಾರೆ.

ಸಾಸಿವೆ ಎಣ್ಣೆ
ಶನಿದೇವರಿಗೆ ಸಾಸಿವೆ ಎಣ್ಣೆಯಲ್ಲಿ ದೀಪಗಳನ್ನು ಹಚ್ಚುವುದರ ಜೊತೆಗೆ ಈ ಎಣ್ಣೆಯನ್ನು ಹಾಗೆಯೇ ಸಮರ್ಪಿಸುವ ವಾಡಿಕೆ ಇದೆ. ಇದರಿಂದ ಶನಿ ಸಾಡೇ ಸಾತಿ ಪ್ರಭಾವ ಕಡಿಮೆಯಾಗಿ, ಶನಿ ಭಗವಾನರ ಅನುಗ್ರಹ ನಿಮಗೆ ದೊರೆಯುತ್ತದೆ.

ಅನ್ನ
ಅನ್ನ ಮತ್ತು ದಾಲ್( ಸಾರು) ಎರಡೂ ಆಹಾರ ಪದಾರ್ಥಗಳು ಪೂಜೆಯ ಸಂದರ್ಭದಲ್ಲಿ ಬಹುವಾಗಿ ಬಳಕೆಯಾಗುವ ನೈವೇದ್ಯಗಳು. ಅನ್ನ ಮತ್ತು ದಾಲ್ ಅನ್ನು ಗಣಪತಿಗೆ, ಲಕ್ಷ್ಮೀಗೆ, ಕೃಷ್ಣನಿಗೆ ಮತ್ತು ಶಿವನಿಗೆ ಸಮರ್ಪಿಸಲಾಗುತ್ತದೆ. ಇದಲ್ಲದೆ ಕಚ್ಛಾ ಅಕ್ಕಿಯನು ಸಕ್ಕರೆಯ ಜೊತೆಗೆ ಬೆರೆಸಿ ಈಶ್ವರ ಮತ್ತು ಸೋಮದೇವ( ಚಂದ್ರ) ನಿಗೆ ಸಮರ್ಪಿಸಲಾಗುತ್ತದೆ.

ಬೆಣ್ಣೆ
ಬೆಣ್ಣೆ ಕಳ್ಳ ಎಂದೇ ಕರೆಯಲ್ಪಡುವ ಶ್ರೀ ಕೃಷ್ಣನಿಗೆ ಬೆಣ್ಣೆಯನ್ನು ಅರ್ಪಿಸುವುದು ಪದ್ಧತಿ. ಇದರ ಜೊತೆಗೆ ಮೊಸರು, ಕೆನೆ ಮತ್ತಿತರ ಹೈನು ಉತ್ಪನ್ನಗಳನ್ನು ಅರ್ಪಿಸುವುದರಿಂದ ಶ್ರೀ ಕೃಷ್ಣನ ಅನುಗ್ರಹ ನಿಮಗೆ ದೊರೆಯುತ್ತದೆ.

ಮೋದಕ
ಗಣಪತಿಯು ಮೋದಕ ಪ್ರಿಯ. ಅದಕ್ಕಾಗಿಯೇ ನಾವು ಗಣಪತಿಯ ಹುಟ್ಟು ಹಬ್ಬದ ಸಲುವಾಗಿ ಆಚರಿಸುವ ಗಣೇಶ ಚತುರ್ಥಿ ಹಬ್ಬದಂದು ತಪ್ಪದೆ ಈ ಮೋದಕಗಳನ್ನು ( ಕಡುಬು) ತಯಾರಿಸಿ ನೈವೇದ್ಯವಾಗಿ ಸಮರ್ಪಿಸುತ್ತೇವೆ.



Click it and Unblock the Notifications











