Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಅಂತ್ಯ ಸಂಸ್ಕಾರದಲ್ಲಿ ಮಹಿಳೆಯರಿಗೆ ಮಾತ್ರ ನಿರ್ಬಂಧ ಸರಿಯೇ?
ಬಹುಶಃ ನಾವೆಲ್ಲರು ಒಮ್ಮೆಯಾದರು ಅಂತ್ಯ ಸಂಸ್ಕಾರಕ್ಕೆ ಹೋಗಬೇಕಾದಾಗ, ಮಹಿಳೆಯರನ್ನು ಸ್ಮಶಾನಕ್ಕೆ ಕರೆತರದೆ ಇರುವುದನ್ನು ನಾವು ನೋಡಿರುತ್ತೇವೆ. ಅದು ಏಕೆ ಎಂದು ಎಂಬುದರ ಕುರಿತು ಎಂದಾದರು ಯೋಚಿಸಿದ್ದೀರಾ? ಚಿಕ್ಕವರಿದ್ದಾಗ ನಾವು ನಮ್ಮ ಹಿರಿಯರನ್ನು ಈ ಕುರಿತು ಪ್ರಶ್ನಿಸಿರುವುದಿಲ್ಲ. ಆದರೆ ದೊಡ್ಡವರದಾ ಮೇಲೆ ಸಹ ನೋಡಿದಾಗ ಈ ಸಂಪ್ರದಾಯ ಕೆಲವೊಂದು ಧರ್ಮಗಳಲ್ಲಿ ಹಾಗೆಯೇ ಮುಂದುವರಿದುಕೊಂಡು ಬಂದಿರುತ್ತದೆ. ಆದರೆ ಇದಕ್ಕೆ ಧರ್ಮಗಳು ಕಾರಣವಲ್ಲ, ಇವೆಲ್ಲವೂ ಒಂದು ಮೂಢನಂಬಿಕೆ. ಬನ್ನಿ ಇಂದು ನಾವು ನಮ್ಮ ಅಂಕಣದಲ್ಲಿ ಇದರ ಹಿಂದಿನ ಕಾರಣಗಳನ್ನು ತಿಳಿಸಿಕೊಡುತ್ತೇವೆ. ಹಿಂದೂ ಧರ್ಮದಲ್ಲಿ ಮುಟ್ಟಾದ ಹೆಂಗಸರನ್ನು ಏಕೆ ಅಪವಿತ್ರ ಎಂದು ಪರಿಗಣಿಸಲಾಗುತ್ತದೆ?
ಒಮ್ಮೆ ಆಲೋಚಿಸಿ, ಕೆಲವು ಪೋಷಕರಿಗೆ ಒಬ್ಬಳೆ ಮಗಳಿದ್ದಾಗ ಆಕೆಗೆ ತಮ್ಮ ಪೋಷಕರ ಎಲ್ಲಾ ಸಂಸ್ಕಾರಗಳನ್ನು ಮಾಡುವ ಅಧಿಕಾರವನ್ನು ಧರ್ಮಗಳು ನೀಡಿರುತ್ತವೆ. ಆಗ ಆಕೆ ಅದಕ್ಕಾಗಿ ಸ್ಮಶಾನಕ್ಕೆ ಬರಬೇಕಾಗುತ್ತದೆ. ಹೀಗೆ ಒಬ್ಬಾಕೆ ಮಾತ್ರ ಬರಬೇಕು ಎಂದು ಎಲ್ಲಿಯೂ ಹೇಳಿಲ್ಲ, ಅಲ್ಲದೆ ಅಸಲಿಗೆ ಮಹಿಳೆಯರು ಸ್ಮಶಾನಕ್ಕೆ ಬರಲೇಬಾರದು ಎಂಬ ಕಟ್ಟಪ್ಪಣೆಯನ್ನು ಯಾರೂ ವಿಧಿಸಿಲ್ಲ. ವಿಧಿಸಿದ್ದರೆ ಇದರ ಕುರಿತು ತಿಳಿಯದೆ ಇರುವ ಜನರು ಮಾತ್ರ ಈ ನಿಯಮವನ್ನು ಬಲವಂತವಾಗಿ ವಿಧಿಸಿರಬೇಕು.
ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಪ್ರತ್ಯೇಕವಾದ ಜವಾಬ್ದಾರಿಗಳನ್ನು ನೀಡಲಾಗಿತ್ತು. ಆಗ ಪುರುಷರು ಇಂತಹ ಕಾರ್ಯಗಳನ್ನು ಮಾಡುತ್ತಿದ್ದರು. ಹೀಗೆ ಮುಂದೆ ಇದೇ ನಿಯಮವು ಕಡ್ಡಾಯವಾಗಿ ಪಾಲಿಸಿಕೊಂಡು ಬಂದು ಮಹಿಳೆಯರು, ಸ್ಮಶಾನದಿಂದ ದೂರ ಉಳಿಯುವಂತಾಯಿತು. ಬನ್ನಿ ಮಹಿಳೆಯರು ಸ್ಮಶಾನಕ್ಕೆ ಬರದೆ ಇರಲು ಇರುವ ಕಾರಣಗಳನ್ನು ಒಮ್ಮೆ ನೋಡೋಣ:

ಮನೆ ಸ್ವಚ್ಛಗೊಳಿಸಲು
ಮನೆಯಲ್ಲಿ ಸೂತಕವಾದಾಗ ಮನೆಯ ಮಹಿಳೆಯರು, ಮನೆಯಲ್ಲಿಯೇ ಉಳಿದು, ಮನೆಯ ಶುದ್ಧಿ ಕಾರ್ಯವನ್ನು ಮಾಡುತ್ತಿದ್ದರು. ಹಾಗಾಗಿ ಅವರು ಸ್ಮಶಾನಕ್ಕೆ ಬರಲು ಹಿಂದೇಟು ಹಾಕುತ್ತಿದ್ದರು. ಅಂತ್ಯ ಸಂಸ್ಕಾರ ಮಾಡಿ ಬರುವ ಪುರುಷರಿಗೆ ಸ್ನಾನ ಮಾಡಲು ನೀರು ಮತ್ತು ತಿನ್ನಲು ಆಹಾರವನ್ನು ಸಹ ಸಿದ್ಧಪಡಿಸಿ ಇಡಲಾಗುತ್ತಿತ್ತು.

ಭಯಾನಕ ದೃಶ್ಯಗಳನ್ನು ನೋಡುವುದನ್ನು ತಪ್ಪಿಸಲು
ಶವವನ್ನು ಚಿತೆಯಲ್ಲಿ ಹಾಕಿ ಸುಡುವುದು ಅಥವಾ ಮಣ್ಣಿನಲ್ಲಿ ಮುಚ್ಚುವುದನ್ನು ನೋಡಲು ಭಯಾನಕವಾಗಿರುತ್ತದೆ. ಅದರಲ್ಲೂ ಚಿತೆಯಲ್ಲಿ ಸುಡುವಾಗ ದೇಹಗಳು ಎದ್ದು ಕೂರುವ ಸಂದರ್ಭಗಳು ಸಹ ಉಂಟು. ಆಗ ಅಕ್ಕ ಪಕ್ಕದ ಜನ ಆ ಶವವನ್ನು ಹೊಡೆದು ಮತ್ತೆ ಮಲಗಿಸಿ, ಸುಡುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಭಯಾನಕ ದೃಶ್ಯಗಳನ್ನು ನೋಡುವುದನ್ನು ತಪ್ಪಿಸಲು
ಇಂತಹ ಭಯಾನಕ ದೃಶ್ಯಗಳನ್ನು ನೋಡುವುದನ್ನು ತಪ್ಪಿಸಲು ಮಹಿಳೆಯರನ್ನು ಸ್ಮಶಾನಗಳಿಗೆ ಕರೆದುಕೊಂಡು ಬರುವುದಿಲ್ಲ. ಅದರಲ್ಲೂ ಕುಟುಂಬಸ್ಥರನ್ನು ಈ ಸ್ಥಿತಿಯಲ್ಲಿ ತೋರಿಸಲು ಯಾರಿಗೂ ಇಷ್ಟವಿರುವುದಿಲ್ಲ.

ನೊಂದ ಜೀವಗಳು
ಮಹಿಳೆಯರದು ಎಷ್ಟಾದರು ತಾಯಿ ಹೃದಯಗಳು, ಈ ಹೆಣ್ಣು ಮನಸ್ಸುಗಳು ಬಹುವಾಗಿ ನೊಂದುಕೊಳ್ಳುತ್ತವೆ. ಮನೆಯಲ್ಲಿರುವ ಸದಸ್ಯರು ಸತ್ತರೆ ಅದರಿಂದ ಮನೆ ಮಂದಿ ಚೇತರಿಸಿಕೊಳ್ಳಲು ಹಲವಾರು ದಿನಗಳು ಬೇಕಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನೊಂದ ಜೀವಗಳು
ಹಿಂದೂ ಧರ್ಮದ ಪ್ರಕಾರ ದೇಹವು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಬೇಕು. ಸೌದೆಯಲ್ಲಿ ಸುಡಲು ಇದಕ್ಕೆ ಎರಡು ದಿನ ಹಿಡಿಯುತ್ತದೆ. ಅದಕ್ಕಾಗಿ ಮಹಿಳೆಯರು ಮನೆಯಲ್ಲಿಯೇ ಉಳಿದು ಚಿಕ್ಕ ಮಕ್ಕಳಿಗೆ ಊಟ-ತಿಂಡಿಯನ್ನು ಮಾಡಿಕೊಡುತ್ತಿರುತ್ತಾರೆ. ಜೊತೆಗೆ ಹೆಣ ಸುಡುವಾಗ ಬರುವ ಕೆಟ್ಟ ವಾಸನೆಯನ್ನು ಯಾರೂ ಸಹ ಸಹಿಸಲ್ಲು ಆಗುವುದಿಲ್ಲ. ಮಹಿಳೆಯರಿಗಂತು ಊಟ ತಿಂಡಿಗಳು ಸೇರದಂತಾಗುತ್ತವೆ. ಅದಕ್ಕಾಗಿ ಅವರನ್ನು ಕರೆದುಕೊಂಡು ಹೋಗುವುದಿಲ್ಲ.

ದೆವ್ವದ ಕಾಟ
ನಂಬಿಕೆಗಳ ಪ್ರಕಾರ ಮಹಿಳೆಯರಿಗೆ ದೆವ್ವದ ಕಾಟವು ಹೆಚ್ಚು ಕಾಡುತ್ತದೆಯಂತೆ. ಅದರಲ್ಲೂ ಅವರು ಸ್ಮಶಾನಕ್ಕೆ ಹೋದರೆ ಇದರ ಕಾಟ ಹೆಚ್ಚಂತೆ. ವಿಶೇಷವಾಗಿ ಕನ್ಯೆಯರಿಗೆ ಇದರ ಕಾಟ ಹೆಚ್ಚು ತಟ್ಟುತ್ತದೆಯಂತೆ.ಏಕೆಂದರೆ ವಿವಾಹಿತರಿಗೆ ಹೋಲಿಸಿದಾಗ ಅವರು ಪವಿತ್ರರು ಎಂದು ಪರಿಗಣಿತವಾಗಿರುವುದರಿಂದ, ಇವರಿಗೆ ದೆವ್ವಗಳ ಕಾಟವಿರುತ್ತದೆಯಂಟೆ, ಸ್ಮಶಾನಕ್ಕೆ ಹೋದರೆ. ಆದರೂ ಇದನ್ನೆಲ್ಲಾ ನಂಬಲು ಆಗುತ್ತದೆಯೇ?

ಬೋಳು ತಲೆ
ಮಹಿಳೆಯರ ಕೂದಲು ದುಷ್ಟಶಕ್ತಿಗಳ ಗಮನವನ್ನು ತನ್ನತ್ತ ಸೆಳೆಯುತ್ತದೆಯಂತೆ. ಏಕೆಂದರೆ ಕೂದಲು ಇಲ್ಲದ ಬೋಳುತಲೆಯ ಮಹಿಳೆಯರನ್ನು ನಾವು ನೋಡುವುದು ಎಷ್ಟು ಅಪರೂಪವಲ್ಲವೇ? ಇವರ ಕೂದಲನ್ನು ವಾಮಾಚಾರಕ್ಕೆ ಸಹ ಬಳಸಿಕೊಳ್ಳಲಾಗುತ್ತದೆ. ಅದಕ್ಕಾಗಿ ಬೋಳು ತಲೆಯ ಹೆಂಗಸರು ಬೇಕಾದರೆ ಸ್ಮಶಾನಕ್ಕೆ ಬರಬಹುದು ಎಂಬ ನಿಯಮ ಕೆಲವು ಕಡೆ ಇದೆ. ಈ ಕಾರಣದಿಂದ ಮಹಿಳೆಯರನ್ನು ಸ್ಮಶಾನಕ್ಕೆ ಬರಲು ಅನುಮತಿಸುವುದಿಲ್ಲ.



Click it and Unblock the Notifications
