Latest Updates
-
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ!
ಧರ್ನುಮಾಸದ ಪೂಜೆಗೆ ತುಂಬಾ ವಿಶೇಷ ದಿನಗಳಿವು
ವಿಷ್ಣು ಭಕ್ತರಿಗೆ ಧರ್ನುಮಾಸ ತುಂಬಾ ವಿಶೇಷವಾದ ತಿಂಗಳಾಗಿದೆ. ಧ್ಯಾನ ಮಾಡಲು ಅಥವಾ ಸಾಧನೆ ಈ ತಿಂಗಳು ತುಂಬಾ ಶುಭವಾಗಿದೆ. ಸೂರ್ಯನು ಧನು ರಾಶಿಗೆ ಪ್ರವೇಶಿಸಿದಾಗ ಧರ್ನುಮಾಸ ಪ್ರಾರಂಭವಾಗುವುದು. ಇದು ಪ್ರತೀವರ್ಷ ಡಿಸೆಂಬರ್ ಮಧ್ಯದಲ್ಲಿ ಪ್ರಾರಂಭವಾಗಿ ಸಂಕ್ರಾಂತಿಗೆ ಮುಕ್ತಾಯವಾಗುತ್ತದೆ.
ಈ ತಿಂಗಳಿನಲ್ಲಿ ವಿಷ್ಣು ಭಕ್ತರು ಅನೇಕ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುವುದು. ಧಾರ್ಮಿಕ ನಂಬಿಕೆಯ ಪ್ರಕಾರ ಶ್ರೀ ವಿಷ್ಣು ಧರ್ಮನುಮಾಸದಲ್ಲಿ ಎದ್ದೇಳುತ್ತಾನೆ ಎಂದು ಹೇಳಲಾಗುವುದು. ಆದ್ದರಿಂದ ಶ್ರೀ ಮಹಾ ವಿಷ್ಣುವಿಗೆ ಬ್ರಹ್ಮ ಮುಹೂರ್ತದಲ್ಲಿ ಅಂದರೆ ಸೂರ್ಯ ಉದಯಿಸುವ ಒಂದು ಗಂಟೆಯ ಮೊದಲು ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ಪ್ರತಿದಿನ ಬ್ರಹ್ಮ ಮುಹೂರ್ತದಲ್ಲಿ ಶ್ರೀ ವಿಷ್ಣುವಿಗೆ ಪೂಜೆಯನ್ನು ಸಲ್ಲಿಸಲಾಗುವುದು.
ಧರ್ನುಮಾಸದಲ್ಲಿ ಶ್ರೀ ವಿಷ್ಣುವಿನ ಪೂಜಿಸಿದರೆ ಅಶ್ವಮೇಧ ಯಾಗ ಮಾಡಿದಷ್ಟು ಫಲ ಸಿಗುವುದು. ಧರ್ನುಮಾಸದಲ್ಲಿ ಕರ್ನಾಟಕ ಹಾಗೂ ಆಂಧ್ರ ಪ್ರದೇಶದಲ್ಲಿ ಕಾತ್ಯಾಯನಿ ವ್ರತವನ್ನು ಆಚರಿಸಲಾಗುವುದು. ಧರ್ನುಮಾಸದಲ್ಲಿ ವೈಕುಂಠ ಏಕಾದಶಿ, ವೈಕುಂಠ ದ್ವಾದಶಿ ಹಬ್ಬವನ್ನು ಆಚರಣೆ ಮಾಡಲಾಗುವುದು.

ಧರ್ನುಮಾಸ 2021-22ರಲ್ಲಿ ಈ ದಿನಗಳು ತುಂಬಾನೇ ವಿಶೇಷವಾಗಿದೆ:
ಧನು ಸಂಕ್ರಾಂತಿ: ಡಿಸೆಂಬರ್ 16, 2021
ದತ್ತಾತ್ರೇಯ ಜಯಂತಿ: ಡಿಸೆಂಬರ್ 18
ಮಾರ್ಗಶೀರ್ಷ ಪೂರ್ಣಿಮೆ: ಡಿಸೆಂಬರ್ 19
ಸಫಲ ಏಕಾದಶಿ: ಡಿಸೆಂಬರ್ 30
ಪೌಷ ಪುತ್ರದ ಏಕಾದಶಿ: ಜನವರಿ 13
ಮಕರ ಸಂಕ್ರಾಂತಿ: ಜನವರಿ 14

ಧರ್ನುಮಾಸದಲ್ಲಿ ವಿಷ್ಣು ಸಹಸ್ರನಾಮ ಪಠಿಸಿ
ಧರ್ನುಮಾಸದಲ್ಲಿ ವಿಷ್ಣು ಸಹಸ್ರನಾಮ ಪಠಿಸಿದರೆ ತುಂಬಾನೇ ಒಳ್ಳೆಯದು. ಬೆಳಗ್ಗೆ ಎದ್ದು ವಿಷ್ಣುವಿಗೆ ಪೂಜೆ ಮಾಡಿ, ವಿಷ್ಣು ಸಹಸ್ರನಾಮ ಪಠಿಸಿ. ವೈಕುಂಠ ಏಕಾಶಿ, ದ್ವಾದಶಿಯಂದು ಉಪವಾಸವಿದ್ದು ವಿಷ್ಣುವಿಗೆ ಪೂಜೆ ಮಾಡಿದರೆ ಬದುಕಿನಲ್ಲಿರುವ ಕಷ್ಟಗಳು ದೂರಾಗುವುದು, ನಿಮ್ಮ ಇಷ್ಟಾರ್ಥಗಳು ನೆರವೇರುವುದು.

ಹುಗ್ಗಿಯನ್ನು ನೈವೇದ್ಯವಾಗಿ ಅರ್ಪಿಸಿ
ಶ್ರೀ ವಿಷ್ಣುವಿಗೆ ಪೂಜೆ ಮಾಡುವಾಗ ಹುಗ್ಗಿಯನ್ನು ತಯಾರಿ ಮಾಡಿ ನೈವೇದ್ಯ ಮಾಡಿ ಇಡಲಾಗುವುದು. ಇದನ್ನು ಮುದ್ಗಾನ್ನ ಎಂದು ಕರೆಯಲಾಗುವುದು. ಹುಗ್ಗಿ ಅಕ್ಕಿಯ ಎರಡರಷ್ಟು ಪ್ರಮಾಣದ ಹೆಸರುಬೇಳೆ, ಒಣಶುಂಠಿ, ಮೆಣಸು, ಜೀರಿಗೆ , ಪತ್ರೆ, ಡಾಲ್ಷಿನ್ನಿ, ಜಾಯಿಕಾಯಿ, ಕೊಬ್ಬರಿ, ಲವಂಗ, ತುಪ್ಪ, ಉಪ್ಪು ಹಾಕಿ ಇದನ್ನು ತಯಾರಿಸಲಾಗುವುದು.
ಧರ್ನುಮಾಸದಲ್ಲಿ ಹುಗ್ಗಿ ಅನ್ನ ಸೇವನೆ ವೈಜ್ಞಾನಿಕ ದೃಷ್ಟಿಯಿಂದಲೂ ಒಳ್ಳೆಯದು. ಧರ್ನುಮಾಸದಲ್ಲಿ ಚಳಿ ಹೆಚ್ಚು, ಈ ಸಮಯದಲ್ಲಿ ಶರೀರದಲ್ಲಿ ಕೊಬ್ಬಿನಂಶ ಕಡಿಮೆಯಾಗುವುದರಿಂದ ಈ ಹುಗ್ಗಿ ಅನ್ನ ಸೇವಿಸಿದರೆ ಶಾರೀರಿಕ ಸಮತೋಲನ ಕಾಪಾಡಿಕೊಳ್ಳಬಹುದು.



Click it and Unblock the Notifications