Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ ಮೂಢನಂಬಿಕೆಗಳನ್ನು ನಂಬಬಹುದಾ?
ನಮ್ಮ ಸಮಾಜದಲ್ಲಿ ಅನೇಕ ನಂಬಿಕೆಗಳಿವೆ. ಅವುಗಳಲ್ಲಿ ಕೆಲವು ನಂಬಿಕೆಗಳು ಅರ್ಥವಿಲ್ಲದ ನಂಬಿಕೆಗಳಾಗಿವೆ. ಅಂತಹ ನಂಬಿಕೆಗಳನ್ನು ಮೂಢ ನಂಬಿಕೆಗಳೆಂದು ಕೆಲವರು ಹೇಳಿದರೆ ಹೇಳಿದರೆ ಮತ್ತೆ ಕೆಲವರು ಅಂತಹ ಅರ್ಥವಿಲ್ಲದ ನಂಬಿಕೆಗಳನ್ನು ಬಿಡಲು ಸಿದ್ಧವಿರುವುದಿಲ್ಲ.
ಕೆಲವೊಮ್ಮೆ ನಡೆಯುವ ಘಟನೆಗಳು ಅಂತಹ ಮೂಢಂಬಿಕೆಗೆ ಮತ್ತಷ್ಟು ಪುಷ್ಠಿ ನೀಡುತ್ತದೆ. ಉದಾಹರಣೆಗೆ ರಸ್ತೆ ದಾಡುವಾಗ ಬೆಕ್ಕು ಅಡ್ಡ ಬಂದರೆ ಅಪಶಕುನ ಎಂದು ನಂಬಿಕೆ ಹೆಚ್ಚಿನವರಲ್ಲಿದೆ. ಈ ಮೂಢ ನಂಬಿಕೆ ನಂಬಿದವರಿಗೆ ಅಯ್ಯೋ ಏನಾಗಬಹುದೋ ಎಂಬ ಭಯವಿರುತ್ತದೆ. ಸ್ವಲ್ಪ ಮುಂದೆ ನಡೆಯುವಾಗ ಗಾಡಿ ಕೈ ಕೊಡುವುದಾ ಅಥವಾ ನಡೆಯುವಾಗ ಸ್ವಲ್ಪ ಎಡವಿದರೆ ಅದನ್ನು ಆಕಸ್ಮಿಕವೆಂದು ತಿಳಿದುಕೊಳ್ಳದೆ ಆ ಮೂಢನಂಬಿಕೆಯನ್ನು ಬಲವಾಗಿ ನಂಬಿ ಬಿಡುತ್ತಾರೆ.

ಅದರಲ್ಲೂ ಈ ಕೆಳಗಿನ ಮೂಢನಂಬಿಕೆಗಳು ಹೆಚ್ಚಾಗಿ ಕಂಡು ಬರುತ್ತಿವೆ:
* ಮೇಲೆ ಹೇಳಿದಂತೆ ಎಲ್ಲಿಗಾದರೂ ಹೋಗುವಾಗ ಬೆಕ್ಕು ಅಡ್ಡ ಓಡುವುದು ಸರಿಯಲ್ಲ.
* ಮೂರು ಜನರು ಸೇರಿ ಶುಭ ಕಾರ್ಯಗಳಿಗೆ ಹೋಗಬಾರದು. ಈ ರೀತಿ ಮೂರು ಜನರು ಇದ್ದರೆ ಚಿಕ್ಕ ಮಗುವನ್ನು ಆದರೂ ಜೊತೆಗೆ ಕರೆದುಕೊಂಡು ಹೋಗುತ್ತಾರೆ.
* 13ನೇ ತಾರೀಕು ಶುಕ್ರವಾರದಂದು ಬಂದರೆ ಆ ದಿನದಂದು ಏನಾದರೂ ಅಪಶಕುನವಾಗುತ್ತದೆ ಎಂದು ಜನರು ಭಯಪಡುತ್ತಾರೆ.
* ದಾರಿಯಲ್ಲಿ ನೋಟ್ ಅಥವಾ ಚಿಲ್ಲರೆ ಬಿದ್ದಿರುವುದು ಕಂಡರೆ ಅದನ್ನು ಎತ್ತಿಕೊಳ್ಳಬೇಕು, ಇದರಿಂದ ನಿಮಗೆ ಅದೃಷ್ಟ ಲಕ್ಷ್ಮಿ ಒಲಿದು ಬರುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ.
* ಯಾವುದಾದರೂ ಒಂದು ಕಣ್ರೆಪ್ಪೆ ಉದುರಿ ಮುಖದ ಮೇಲೆ ಬಿದ್ದಿದ್ದರೆ ಕೆಲವರು ಅದನ್ನು ಜೋಪಾನವಾಗಿ ತೆಗೆದು ಕೈಯಲ್ಲಿ ಹಿಡಿದುಕೊಂಡು ನಂತರ ನಮಗೆ ಒಳ್ಳೆಯದಾಗಲಿ ಎಂದು ಬಯಸಿ ಊದುತ್ತಾರೆ. ಅದು ಹಾರಿದರೆ ಒಳ್ಳೆಯದಾಗುತ್ತದೆ ಎಂದು ಅರ್ಥ. ಊದಿದರೆ ಅಷ್ಟು ಚಿಕ್ಕ ರೆಪ್ಪೆ ಹಾರದೆ ಇರುತ್ತದೆಯೇ?
* ಕಣ್ರೆಪ್ಪೆ ಬಡೆಯುತ್ತಿದ್ದರೆ ಏನೋ ಅನಾಹುತ ಉಂಟಾಗಬಹುದೆಂಬ ಮೂಢ ನಂಬಿಕೆ ಜನರಲ್ಲಿದೆ. ಅದರಲ್ಲಿ ಬಲ ರೆಪ್ಪೆ ಬಡೆದರೆ ಹೆಣ್ಣು ಮಕ್ಕಳಿಗೆ ಒಳ್ಳೆಯದಲ್ಲ, ಎಡ ಕಣ್ಣಿನ ರೆಪ್ಪೆ ಬರೆದರೆ ಹೆಣ್ಣು ಮಕ್ಕಳಿಗೆ ಒಳ್ಳೆಯದು. ಈ ರೀತಿಯ ಅನೇಕ ಅರ್ಥವಿಲ್ಲದ ನಂಬಿಕೆಗಳು ನಮ್ಮ ಸಮಾಜದಲ್ಲಿವೆ.



Click it and Unblock the Notifications
