Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ದೇವಸ್ಥಾನಕ್ಕೆ ಹೋಗುವಾಗ ಮಾಡಬೇಕಾದ ಹಾಗೂ ಮಾಡಬಾರದ ಕೆಲಸಗಳು
Short Story
oi-Meghashree Devaraju
ಹಿಂದೂಗಳಿಗೆ ದೇವಸ್ಥಾನ ಬಹಳ ಪೂಜ್ಯನೀಯ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸ್ಥಳ. ಈ ಸ್ಥಳದಲ್ಲಿ ಹೆಚ್ಚು ಸಕಾರಾತ್ಮಕತೆ ಇರುತ್ತದೆ, ಇಲ್ಲಿದೆ ದೇವರೇ ನೆಲೆಸಿರುತ್ತಾನೆ. ಅಲ್ಲಿ ಹೆಚ್ಚಿನ ರೀತಿಯ ಸಾತ್ವಿಕ ಕಂಪನಗಳು ಇಲ್ಲಿರುತ್ತದೆ, ಆದ್ದರಿಂದ ಇಲ್ಲಿ ಮಾಡುವ ಪ್ರಾರ್ಥನೆ ದೇವರಿಗೆ ಮುಟ್ಟುತ್ತದೆ ಹಾಗೂ ಬಹುಬೇಗ ಫಲಿಸುತ್ತವೆ ಎಂಬ ನಂಬಿಕೆ ಇದೆ.

ನಾವು ದೇವಾಲಯಗಳಿಗೆ ಹೋಗಬೇಕಾದರೆ ಶುದ್ಧವಾಗಿ ಮಡಿಯಿಂದಲೇ ಹೋಗಬೇಕು, ಕೆಟ್ಟ ಆಲೋಚನೆಗಳನ್ನು ಮಾಡಬಾರದು, ದೇವ ಮಂದಿರದ ನೀತಿ ನಿಯಮಗಳನ್ನು ಪಾಲಿಸಬೇಕು ಎನ್ನಲಾಗುತ್ತದೆ. ಅಲ್ಲದೆ ದೇವಸ್ಥಾನಕ್ಕೆ ಹೋಗಬೇಕಾದರೆ ಕೆಲವು ಕೆಲಸಗಳನ್ನು ಮಾಡಲೇಬಾರದು ಹಾಗೂ ಕೆಲವನ್ನು ಮಾಡಲೇಬೇಕು ಎಂಬ ನಿಯಮಗಳೂ ಸಹ ಇದೆ.

ಶುದ್ಧವಾಗಿರಿ
ದೇವಸ್ಥಾನಕ್ಕೆ ಕೈಕಾಲು ತೊಳೆಯದೇ ಪ್ರವೇಶ ಮಾಡಬೇಡಿ.
ಭಗವಂತನ ಮಂದಿರಕ್ಕೆ ಸಾಕ್ಸ್ ಹಾಕಿಕೊಂಡು ಪ್ರವೇಶ ಮಾಡಬೇಡಿ.
ಭಗವಂತನ ಮಂದಿರಕ್ಕೆ ಸಿಗರೇಟು, ಬೀಡಾ, ಸರಾಯಿ, ಮಾಂಸ ಸೇವಿಸಿ ಹೋಗಬೇಡಿ.
ದೇವಾಲಯಕ್ಕೆ ಪ್ರವೇಶ ಮಾಡುವಾಗ ಶೂ, ಸಾಕ್ಸ್ ಕೈಯಿಂದ ತೆಗೆದ ನಂತರ ಕೈ ತೊಳೆದುಕೊಂಡೇ ಪ್ರವೇಶ ಮಾಡಬೇಕು.

ಭಗವಂತನ ಎದುರು ಸನ್ಮಾನ ಬೇಡ
- ಭಗವಂತನ ಮಂದಿರಕ್ಕೆ ಚರ್ಮದ ಬೆಲ್ಟ್, ಚಪ್ಪಲಿ, ಕೈ ಚೀಲ ಧರಿಸಿ ಕೊಂಡು ಹೋಗಬೇಡಿ.
- ಭಗವಂತನ ಎದುರು ಸನ್ಮಾನ ಮಾಡಿಸಿಕೊಳ್ಳಬೇಡಿ.
- ಭಗವಂತನಿಗೆ ಕೆಟ್ಟ, ಕೊಳೆತ, ಒಣಗಿದ ಹಣ್ಣುಗಳನ್ನು ಅರ್ಪಿಸುವುದು ನಿಷಿದ್ಧ.
- ದೇವಾಲಯದ ಗರ್ಭಗುಡಿ ಬಾಗಿಲು ಹಾಕುವಾಗ ನಂದಾ ದೀಪ ಆರಿಸಿ ಎಣ್ಣೆ ಉಳಿಸುವುದು.
- ದೇವರಿಗೆ ಅರ್ಪಿಸುವ ಮೊದಲು ಹೂವು, ಹಣ್ಣು, ಊದು ಬತ್ತಿಗಳನ್ನು ಆಘ್ರಾಣಿಸುವುದು (ವಾಸನೆ ನೋಡುವುದು).
- ದೇವಾಲಯದಲ್ಲಿ ಪೂಜಾರಿಗಳು ಭಕ್ತರಿಂದ ಹಣ ಪಡೆದು ಕಳಪೆ ಅಥವಾ ಕಡಿಮೆ ಗುಣ ಮಟ್ಟದ ಪೂಜಾ ಸಾಮಗ್ರಿಗಳನ್ನು ದೇವರಿಗೆ ಅರ್ಪಿಸಬೇಡಿ.
- ಭಕ್ತರು ಸಹ ದೇವರಿಗೆ ಕಡಿಮೆ ಗುಣಮಟ್ಟದ ಪೂಜಾ ವಸ್ತುಗಳನ್ನು ಅರ್ಪಿಸಬೇಡಿ.
- ದೇವಾಲಯದ ಹೊಸ್ತಿಲು, ಕಿಟಕಿಗಳಲ್ಲಿ ಕರ್ಪೂರ ಹಚ್ಚಬೇಡಿ.
- ದೇವಾಲಯಕ್ಕೆ ಅರ್ಪಿಸಿದ ಸಾಮಾಗ್ರಿಗಳನ್ನು ಅಂಗಡಿಗಳಿಗೆ ಮಾರಿ ಮತ್ತೆ ಅದೇ ಸಾಮಾಗ್ರಿಗಳನ್ನು ಬೇರೆ ಭಕ್ತರ ಮೂಲಕ ದೇವರಿಗೆ ಅರ್ಪಿಸುವುದು ಕೆಟ್ಟ ಅಲೋಚನೆ.
- ದೇವಾಲಯದ ಆಸ್ತಿಗಳನ್ನು ಪರಭಾರೆ ಮಾಡುವುದು.ದೇವರ ಹುಂಡಿ,ಕಾಣಿಕೆ ಹಣ ದುರುಪಯೋಗ ಮಾಡುವುದು.
- ದೇವರಿಗೆ ಸಂಭಂದಿಸಿದ ಉತ್ಸವ, ರಥಯಾತ್ರೆಗಳಲ್ಲಿ ಭಾಗವಹಿಸದಿರುವುದು ಮತ್ತು ಅವುಗಳ ದರ್ಶನ ಪಡೆಯದಿರುವುದು ಶುಭವಲ್ಲ.
- ಭಗವಂತನ ಸಮ್ಮುಖಕ್ಕೆ ಹೋಗಿ ದೇವರ ದರ್ಶನ ಪಡೆಯದಿರುವುದು.
- ಒಂದೇ ಹಸ್ತದಿಂದ ನಮಸ್ಕರಿಸುವುದು ಶುಭವಲ್ಲ.
- ಭಗವಂತನ ಸಮ್ಮುಖದಲ್ಲಿ ನಿಂತಂತೆಯೇ ಪ್ರದಕ್ಷಿಣೆ ಮಾಡುವುದು. ನೆಲಕ್ಕೆ ಬಾಗಿ ನಮಸ್ಕಾರ ಮಾಡದೇ ಇರುವುದು.
- ದೇವಾಲಯದಲ್ಲಿ ಉಗುರು ಕಡಿಯುವುದು, ಕತ್ತರಿಸುವುದು.
- ದೇವಾಲಯಕ್ಕೆ ಪ್ರದಕ್ಷಿಣೇ ಹಾಕದೇ ಇರುವುದು.
- ಭಗವಂತನ ಎದುರು ಕಾಲುಚಾಚಿ ಕುಳಿತುಕೊಳ್ಳುವುದು ಮತ್ತು ಕುರ್ಚಿ, ಆಸನಗಳ ಮೇಲೆ ಕುಳಿತುಕೊಳ್ಳುವುದು.
- ಭಗವಂತನ ಸಮ್ಮುಖ ಭೋಜನ ಮಾಡುವುದು.
- ದೇವಾಲಯದಲ್ಲಿ ಅಸತ್ಯ ನುಡಿಯುವುದು ಮತ್ತು ಅನಗತ್ಯ ವಿಚಾರ ಮಾತಾಡುವುದು.
- ದೇವಾಲಯದಲ್ಲಿ ಜೋರಾಗಿ ಮಾತಾಡೋದು, ಅಪಭ್ರಂಶ ಮಾತನಾಡುವುದು.
- ದೇವಾಲಯದಲ್ಲಿ ಬೇರೆಯವರಿಗೆ ಕೆಡುಕನ್ನು ಬಯಸುವುದು.
- ಭಗವಂತನ ಸಮ್ಮುಖದಲ್ಲಿ ಆಕಳಿಸುವುದು ಮತ್ತು ಅಧೋವಾಯುವನ್ನು ತ್ಯಜಿಸುವುದು.
- ದೇವರ ಪ್ರಸಾದ ಸ್ವೀಕರಿಸದೇ ಬರುವುದು.
- ಭಗವಂತನ ವಿಗ್ರಹಕ್ಕೆ ಬೆನ್ನುತೋರಿಸಿ ಕೂಡುವುದು.
- ಗುರುಗಳ ಸ್ಮರಣೆ ಮಾಡದೇ ಇರುವುದು.
- ಅಶೌಚವಿದ್ದಾಗ ದೇವಾಲಯ ಪ್ರವೇಶ ಮಾಡುವುದು.
- ದೇವಾಲಯದ ದರ್ಶನದ ಅವಧಿ ಮುಗಿದಿದ್ದರೂ ಬಾಗಿಲು ತೆರೆಸಿ ದರ್ಶನ ಪಡೆಯುವುದು.
- ದೇವರ ಸನ್ನಿಧಾನದಲ್ಲಿ ಪೂಜೆಗಳು ನಡೆಯುವಾಗ ಮುಂದಿನ ಸ್ಥಾನಗಳನ್ನು ಆಕ್ರಮಿಸಿ ಬೇರೆ ಭಕ್ತಾದಿಗಳಿಗೆ ದರ್ಶನಕ್ಕೆ ಅಡ್ಡಿಪಡಿಸುವುದು.
- ದೇವಾಲಯದ ಗರ್ಭಗುಡಿಯ ಮೂರ್ತಿಗಳನ್ನು ಮಡಿ ಉಡದೆ ಮುಟ್ಟುವುದು/ ಅದಕ್ಕೆ ಅವಕಾಶ ಮಾಡಿ ಕೊಡುವುದು.
- ದೇವಾಲಯದ ಆಸ್ತಿಗಳ ಮೇಲೆ ಹಕ್ಕು ಸಾಧಿಸುವುದು.
- ದೇವರ ಆಭರಣ ದುರುಪಯೋಗ ಮಾಡಿಕೊಳ್ಳುವುದು.

ಕೆಟ್ಟ ಅಲೋಚನೆ ಸಲ್ಲದು

ದೇವರ ದರ್ಶನ ಪಡೆಯದಿರುವುದು

ಪ್ರದಕ್ಷಿಣೇ ಹಾಕದೇ ಇರುವುದು

ಭಗವಂತನ ಸಮ್ಮುಖದಲ್ಲಿ ನಿದ್ದೆ

ದೇವಾಲಯದ ವಸ್ತುಗಳ ದುರುಪಯೋಗ
Comments
English summary



Click it and Unblock the Notifications