Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಶ್ರಾವಣ ಮಾಸದಲ್ಲಿ ಶಿವನನ್ನು ಒಲಿಸಿಕೊಂಡರೆ ಇಷ್ಟಾರ್ಥ ಸಿದ್ಧಿ
ಹಿಂದೂ ಶಾಸ್ತ್ರಗಳಲ್ಲಿ ಶ್ರಾವಣ ಮಾಸವನ್ನು ಪವಿತ್ರ ಮಾಸವೆಂದೇ ಪರಿಗಣಿಸಲಾಗಿದ್ದು ಶಿವನು ಭೂಮಿಯೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧವನ್ನು ಈ ಮಾಸವು ತಿಳಿಸುತ್ತದೆ. ವ್ರತ ಮತ್ತು ಪೂಜೆ ಪುನಸ್ಕಾರಗಳಿಂದ ಶಿವನನ್ನು ಒಲಿಸಿಕೊಂಡರೆ ಅವರು ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂಬುದು ಈ ಮಾಸದ ವಿಶೇಷತೆಯಾಗಿದೆ.
ಶ್ರಾವಣ ಮಾಸದ ಸೋಮವಾರಗಳಂದು ಕನ್ಯೆಯರು ಮತ್ತು ಹೆಂಗಳೆಯರು ಶಿವನನ್ನು ಆರಾಧಿಸಿದಲ್ಲಿ ಅವರಿಗೆ ಉತ್ತಮ ವರನು ದೊರಕಿ ಕುಟುಂಬದಲ್ಲಿ ಶಾಂತಿ ನೆಲೆಸುವ ವರವನ್ನು ನೀಡುತ್ತಾರೆ ಎಂಬ ನಂಬಿಕೆ ಇದೆ. ಶ್ರಾವಣ ಮಾಸದ ವಿಶೇಷ: ಬೈದ್ಯನಾಥ ಶಿವನ ಕಥೆ

ಶಿವ ದೇವರಿಗೆ ಶ್ರಾವಣ ಮಾಸವು ಹೆಚ್ಚು ಅಚ್ಚುಮೆಚ್ಚಿನದ್ದಾಗಿದೆ. ಪಾರ್ವತಿ ದೇವಿಯೊಂದಿಗೆ ಶಿವನು ಮತ್ತೆ ಒಂದಾಗಿರುವುದು ಈ ಮಾಸದಂದೇ ಎಂಬ ಪ್ರತೀತಿ ಇದ್ದು ಸ್ತ್ರೀಯರು ತಾವು ಬಯಸಿದವರನ್ನು ಪತಿಯಾಗಿ ಪಡೆದುಕೊಳ್ಳಲು ಈ ಮಾಸದಂದು ಶಿವನನ್ನು ಬೇಡಿಕೊಂಡರೆ ಅವರ ಮನೋಭಿಲಾಷೆ ಈಡೇರುತ್ತದೆ.
ಅಂತೆಯೇ ಈ ಮಾಸ ಏಕೆ ಶಿವನಿಗೆ ಅಚ್ಚುಮೆಚ್ಚಿನದ್ದಾಗಿದೆ ಎಂಬುದನ್ನು ಈ ಕೆಳಗಿನ ಸ್ಲೈಡರ್ಗಳಲ್ಲಿ ತಿಳಿಸಿದ್ದು ಇದಕ್ಕೆ ಪುರಾಣದ ಹಿನ್ನಲೆ ಕೂಡ ಇದೆ,ಮುಂದೆ ಓದಿ....
ಪಾರ್ವತಿಯ ತಪಸ್ಸಿಗೆ ಮೆಚ್ಚಿದ ಶಿವ
ದಂತಕತೆಗಳ ಪ್ರಕಾರ ಸತಿಯು ತನ್ನನ್ನು ತಾನು ಅಗ್ನಿಯಲ್ಲಿ ಸುಟ್ಟುಕೊಂಡ ಮೇಲೆ ಪಾರ್ವತಿ ದೇವಿಯಾಗಿ ಮರು ಅವತಾರವನ್ನು ಎತ್ತಿದಳು. ಆಗ ಆಕೆಯು ಶಿವನನ್ನು ಮದುವೆಯಾಗುವ ಸಲುವಾಗಿ ಘೋರ ತಪಸ್ಸನ್ನು ಆಚರಿಸಿದಳು. ಇದರಿಂದ ಸಂತುಷ್ಟನಾದ ಶಿವನು ಪಾರ್ವತಿಯನ್ನು ಮದುವೆಯಾಗಲು ಒಪ್ಪಿದನು. ಹಿಂದೂ ಧರ್ಮದ ಭಾವೈಕ್ಯತೆಯ ಹಬ್ಬ: ಶ್ರಾವಣ ಮಾಸ
ಪುರಾಣಗಳ ಪ್ರಕಾರ
ಶ್ರಾವಣ ಮಾಸದಲ್ಲಿ ಶಿವನು ತನ್ನ ಅತ್ತೆ- ಮಾವನ ಮನೆಗೆ ಭೇಟಿ ನೀಡುವ ಮಾಸ ಇದಾಗಿದೆ. ಅವರು ಅಪರಿಮಿತವಾದ ಪ್ರೀತಿ ಮತ್ತು ವಾತ್ಸಲ್ಯದಿಂದ ಶಿವನನ್ನು ಬರಮಾಡಿಕೊಳ್ಳಲು ಕಾಯುತ್ತಿರುತ್ತಾರಂತೆ. ಈ ಕಾರಣಕ್ಕಾಗಿಯೂ ಸಹ ಶಿವನಿಗೆ ಶ್ರಾವಣ ಮಾಸವೆಂದರೆ ಅತ್ಯಂತ ಪ್ರೀತಿ.
ಪುರಾಣಗಳ ಪ್ರಕಾರ
ಯಾವಾಗ ಶಿವನು ಕೈಲಾಸದಿಂದ ತನ್ನ ಅತ್ತೆ-ಮಾವನನ್ನು ನೋಡಲು ಇಳಿದು ಬರುತ್ತಾನೋ, ಆಗ ಆತನಿಗೆ ಅತ್ಯಂತ ಆದರದ ಸ್ವಾಗತವನ್ನು ನೀಡಲಾಗುತ್ತದೆಯಂತೆ. ಆತ ಭುವಿಗೆ ಇಳಿದು ಬರುವ ಸಂದರ್ಭವನ್ನು ಜಲಾಭಿಷೇಕದ ಮೂಲಕ ಆರಾಧಿಸಲಾಗುತ್ತದೆ. ಆದ್ದರಿಂದಲೇ ಶಿವಾಲಯಗಳಲ್ಲಿ ಶಿವಲಿಂಗಕ್ಕೆ ನೀರು, ಹಾಲು, ಮೊಸರು ಇತ್ಯಾದಿಗಳಿಂದ ಅಭಿಷೇಕವನ್ನು ಮಾಡುತ್ತಾರೆ.
ಕ್ಷೀರಸಾಗರ ಮಂಥನ



Click it and Unblock the Notifications



