ವಾಸ್ತು ಶಾಸ್ತ್ರದ ಪ್ರಕಾರ, ಇಂತಹ ಕೆಟ್ಟ ಅಭ್ಯಾಸದಿಂದಲೇ ಬಡತನ ಕಾಡುವುದಂತೆ!

ವಾಸ್ತುಶಾಸ್ತ್ರವನ್ನು ಸರಿಯಾಗಿ ಶಿಸ್ತಿನಿಂದ ಪಾಲಿಸಿಕೊಂಡು ಹೋದರೆ ಅದರಿಂದ ನಮ್ಮ ಮನೆ ಹಾಗೂ ನಮಗೆ ಧನಾತ್ಮಕ ಶಕ್ತಿಯು ಲಭ್ಯವಾಗುವುದು ಎಂದು ಹೇಳಲಾಗುತ್ತದೆ. ಹೆಚ್ಚಿನವರು ವಾಸ್ತು ಪ್ರಕಾರವೇ ಮನೆಯನ್ನು ಕಟ್ಟುತ್ತಾರೆ. ಆದರೆ ಮನೆ ಕಟ್ಟಿದ ಬಳಿಕ ಮನೆಯೊಳಗಿನ ಕೆಲವೊಂದು ಸಾಮಗ್ರಿಗಳು ಹಾಗೂ ಅಲಂಕಾರಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ಮಾಡದೆ ಹೋದರೆ ಅದರಿಂದ ಸುಖ ಹಾಗೂ ಸಮೃದ್ಧಿ ದೂರವಾಗುವುದು.

vastu

ವಾಸ್ತುವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಹೋದರೆ ಅದರಿಂದ ನಿಮಗೆ ಒಳ್ಳೆಯ ಅದೃಷ್ಟ ಹಾಗೂ ಸಮೃದ್ಧಿಯು ಸಿಗುವುದು. ಜೀವನದಲ್ಲಿನ ಕೆಲವೊಂದು ವಿಭಾಗದಲ್ಲೂ ನಮಗೆ ಮುಂದುವರಿಯಲು ಆಗುವುದು. ನಿಮಗೆ ಬಡತನ ತರಬಲ್ಲ ಕೆಲವೊಂದು ಅಭ್ಯಾಸಗಳನ್ನು ಬಿಡಬೇಕು. ಇದು ಯಾವುದು ಎಂದು ನೀವು ತಿಳಿಯಿರಿ.

ಪೊರಕೆ ಇಲ್ಲಿ ಇಡಬೇಡಿ

ಪೊರಕೆ ಇಲ್ಲಿ ಇಡಬೇಡಿ

ಮನೆಯ ಕೆಲವೊಂದು ಭಾಗಗಳಲ್ಲಿ ನಾವು ಪೊರಕೆಯನ್ನು ಇಡಲೇಬಾರದು. ಹೀಗೆ ಮಾಡುವುದರಿಂದ ನಮ್ಮ ಮನೆಯ ಸಮೃದ್ಧಿ ಮೇಲೆ ಅದು ಪರಿಣಾಮ ಬೀರುವುದು. ವಾಸ್ತು ಶಾಸ್ತ್ರವು ಹೇಳುವಂತೆ ಪೊರಕೆಯನ್ನು ಹಣವಿಡುವಂತಹ ಕಪಾಟು ಅಥವಾ ಡಬ್ಬದ ಬಳಿ ಇಡಬಾರದು.

ಮಾತ್ರೆಗಳು

ಮಾತ್ರೆಗಳು

ಮಾತ್ರೆ ತೆಗೆದುಕೊಳ್ಳಲು ನೀರು ಬೇಕಾಗುತ್ತದೆ. ಇದಕ್ಕಾಗಿ ನಾವು ಅಡುಗೆ ಮನೆಗೆ ಹೋಗಿ ಮಾತ್ರೆ ಸೇವಿಸುತ್ತೇವೆ. ಪದೇ ಪದೇ ಅಲ್ಲಿಗೆ ಬರಬೇಕು ಎನ್ನುವ ಕಾರಣಕ್ಕೆ ಔಷಧಿಯ ಬಾಕ್ಸ್ ನ್ನು ನಾವು ಅಲ್ಲೇ ಇಡುತ್ತೇವೆ. ಅದಾಗ್ಯೂ, ವಾಸ್ತುಶಾಸ್ತ್ರದ ಪ್ರಕಾರ ಇದು ಒಳ್ಳೆಯ ಅಭ್ಯಾಸವಲ್ಲ. ಅಡುಗೆ ಮನೆಯಲ್ಲಿ ಯಾವುದೇ ರೀತಿಯ ಔಷಧಿ ಅಥವಾ ಔಷಧಿ ಡಬ್ಬವನ್ನು ಇಡಬಾರದು.

ಶೌಚಾಲಯದ ಬಾಗಿಲು

ಶೌಚಾಲಯದ ಬಾಗಿಲು

ಶೌಚಾಲಯವನ್ನು ನೀವು ಬಳಸದೆ ಇರುವಾಗ ಅದರ ಬಾಗಿಲನ್ನು ಯಾವತ್ತಿಗೂ ತೆರೆದು ಇಡಬೇಡಿ. ಸ್ನಾನ ಮಾಡಿಕೊಂಡು ಬಂದ ಬಳಿಕ ಶೌಚಾಲಯದ ಬಾಗಿಲನ್ನು ತೆರೆದಿಡುವಂತಹ ಅಭ್ಯಾಸವು ಕೆಲವರಲ್ಲಿದೆ. ಅದಾಗ್ಯೂ, ಇದು ತಪ್ಪು. ವಾಸ್ತು ಶಾಸ್ತ್ರದ ಪ್ರಕಾರ ಇಲ್ಲಿರುವಂತಹ ಕೆಲವೊಂದು ನಕಾರಾತ್ಮಕವಾಗಿರುವ ಶಕ್ತಿಗಳು ನಿಮ್ಮ ವ್ಯಾಪಾರ ಹಾಗು ವೃತ್ತಿ ಜೀವನದ ಮೇಲೆ ಪರಿಣಾಮ ಬೀರಬಹುದು.

ಗೋಡೆಗಳಲ್ಲಿ ಗೆರೆಗಳು

ಗೋಡೆಗಳಲ್ಲಿ ಗೆರೆಗಳು

ಸಣ್ಣ ಮಕ್ಕಳಿರುವಂತಹ ಮನೆಗಳಲ್ಲಿ ಗೋಡೆಗಳಲ್ಲಿ ಪೆನ್ಸಿಲ್ ಅಥವಾ ಪೆನ್ ನಿಂದ ಹಾಕಿರುವಂತಹ ಗೆರೆಗಳು ಕಾಣಿಸಿಕೊಳ್ಳುವುದು. ಅದಾಗ್ಯೂ, ನೀವು ಮಕ್ಕಳಿಗೆ ಹೀಗೆ ಮಾಡಲು ಬಿಡಲೇಬಾರದು. ಯಾಕೆಂದರೆ ವಾಸ್ತುಶಾಸ್ತ್ರದ ಪ್ರಕಾರ ಗೋಡೆ ಮೇಲಿನ ಗೆರೆಗಳಿಂದಾಗಿ ಮನೆಯವರು ಯಾವಾಗಲೂ ಸಾಲದಿಂದ ಮುಕ್ತರಾಗುವುದಿಲ್ಲ. ಇದನ್ನು ತುಂಬಾ ಅಪವಿತ್ರವೆಂದು ಪರಿಗಣಿಸಲಾಗಿದೆ.

ದಕ್ಷಿಣ ಭಾಗದಲ್ಲಿ ಕೆಲವು ಸಾಮಗ್ರಿಗಳನ್ನು ಇಡುವುದು

ದಕ್ಷಿಣ ಭಾಗದಲ್ಲಿ ಕೆಲವು ಸಾಮಗ್ರಿಗಳನ್ನು ಇಡುವುದು

ನೀರಿಗೆ ಸಂಬಂಧಿಸಿರುವಂತಹ ಅಕ್ವೇರಿಯಂ ಮತ್ತು ನೀರಿನ ಕ್ಯಾನ್ ಗಳನ್ನು ಮನೆಯ ದಕ್ಷಿಣ ಭಾಗದಲ್ಲಿ ಯಾವತ್ತಿಗೂ ಇಡಬಾರದು. ಇದು ಅಪವಿತ್ರವೆಂದು ಪರಿಗಣಿಸಲಾಗುತ್ತದೆ. ಇಂತಹ ಸಾಮಗ್ರಿಗಳ ಹೊರತಾಗಿ ದೇವರ ಫೋಟೊಗಳು, ಮೂರ್ತಿಗಳು ಅಥವಾ ಕೆಲವೊಂದು ದೇವರ ಶೋಪೀಸ್ ಗಳನ್ನು ಮನೆಯ ದಕ್ಷಿಣ ಭಾಗದಲ್ಲಿ ಇಡಬಾರದು.

ಈಶಾನ್ಯ ಭಾಗದಲ್ಲಿ ಯಾವಾಗಲೂ ಸ್ವಚ್ಛತೆಯಿರಲಿ

ಈಶಾನ್ಯ ಭಾಗದಲ್ಲಿ ಯಾವಾಗಲೂ ಸ್ವಚ್ಛತೆಯಿರಲಿ

ತುಂಬಾ ಕೊಳಕು ಹಾಗೂ ಸ್ವಚ್ಛತೆ ಇಲ್ಲದಿರುವಂತಹ ಮನೆಯಲ್ಲಿ ಲಕ್ಷ್ಮೀಯು ಯಾವತ್ತಿಗೂ ಇಷ್ಟಪಡುವುದಿಲ್ಲ. ಮನೆಯ ಈಶಾನ್ಯ ಭಾಗದಲ್ಲಿ ಕಸವು ಇದ್ದರೆ ಇದನ್ನು ತುಂಬಾ ಅಪವಿತ್ರವೆಂದು ಪರಿಗಣಿಸಲಾಗಿದೆ. ಇದರಿಂದ ಮನೆಯ ಈಶಾನ್ಯ ಭಾಗವನ್ನು ಯಾವಾಗಲೂ ತುಂಬಾ ಸ್ವಚ್ಛ ಹಾಗೂ ಸುಂದರವಾಗಿಡಲು ಪ್ರಯತ್ನಿಸಿ.

ಪೂಜಾ ಕೊಠಡಿ

ಪೂಜಾ ಕೊಠಡಿ

ಪೂಜಾ ಕೊಠಡಿಯು ಯಾವತ್ತಿಗೂ ಮಲಗುವ ಕೋಣೆಯಲ್ಲಿ ಇರಲೇಬಾರದು. ಇಷ್ಟು ಮಾತ್ರವಲ್ಲದೆ ಮನೆಯ ಮಲಗುವ ಕೋಣೆಯಲ್ಲಿ ದೇವರ ಫೋಟೋಗಳು ಅಥವಾ ಚಿತ್ರಗಳನ್ನು ಇಡಬಾರದು. ನೀವು ಇದನ್ನು ಇಟ್ಟರೆ ಆಗ ಪೂಜಿಸುವಂತಹ ದೇವರು ಕೋಪಗೊಳ್ಳುವರು.

ಕೆಲವೊಂದು ಗಿಡಗಳು

ಕೆಲವೊಂದು ಗಿಡಗಳು

ಬಿಳಿ ವಿಷವನ್ನು ಬಿಡುವಂತಹ ಕೆಲವೊಂದು ರೀತಿಯ ಸಸ್ಯಗಳನ್ನು ಯಾವಾಗಲೂ ಮನೆಯ ಒಳಗಡೆ ಬೆಳೆಸಬೇಡಿ. ಮುಳ್ಳುಗಳು ಇರುವಂತಹ ಗಿಡಗಳನ್ನು ಕೂಡ ಮನೆಯ ಒಳಗಡೆ ಬೆಳೆಸಬಾರದು ಎಂದು ವಾಸ್ತುಶಾಸ್ತ್ರವು ಹೇಳುತ್ತದೆ. ಹೀಗೆ ಮಾಡಿದರೆ ಅದರಿಂದ ನಿಮ್ಮ ಮನೆಯ ಸಮೃದ್ಧಿ ಮೇಲೆ ಪರಿಣಾಮ ಬೀರುವುದು.

English summary

As per the vastu these Practices That Might Lead To Poverty

Vastu Shastra is a discipline which can help us get rid of all forms of negativity and improve the flow of all positive energies. From the infrastructure of a room to the items we should keep there, Vastu Shastra can help us know about everything. Regarding wealth and prosperity, it says that there are 8 inauspicious practices that might lead to poverty.
X
Desktop Bottom Promotion