Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಜು. 27ಕ್ಕೆ ಅಂಗಾರಕ ಸಂಕಷ್ಟ ಚತುರ್ಥಿ: ಇದರ ಮಹತ್ವವೇನು, ಪೂಜಾ ವಿಧಿಗಳು ಹೇಗಿರಬೇಕು?
ಪ್ರತೀ ತಿಂಗಳು ಬರುವ ಸಂಕಷ್ಟಿಯಂದು ಭಕ್ತರು ಉಪವಾಸವಿದ್ದು ವಿಘ್ನ ನಿವಾರಕನನ್ನು ಆರಾಧಿಸಲಾಗುವುದು. ಗಣಪನನ್ನು ಭಕ್ತಿಯಿಂದ ನಂಬಿ ಆರಾಧಿಸಿದರೆ ಅವನು ತನ್ನ ಭಕ್ತರನ್ನು ಎಂದಿಗೂ ಕೈ ಬಿಡಲ್ಲ ಎಂಬುವುದು ಅಚಲ ನಂಬಿಕೆ.
ಈ ತಿಂಗಳು ಬಂದಿರುವ ಸಂಕಷ್ಟಿ ವಿಶೇಷವಾಗಿದೆ. ಈ ತಿಂಗಳು ಜುಲೈ 27ಕ್ಕೆ ಅಂಗಾರಕ ಸಂಕಷ್ಟಿ ಬಂದಿದೆ. ಮಂಗಳವಾರದಂದು ಬರುವ ಸಂಕಷ್ಟಿಯನ್ನು ಅಂಗಾರಕ ಸಂಕಷ್ಟ ಚತುರ್ಥಿ ಎಂದು ಆಚರಿಸಲಾಗುವುದು.
ಈ ವರ್ಷ ಇನ್ನು ಅಂಗಾರಕ ಸಂಕಷ್ಟ ಚತುರ್ಥಿ ನವೆಂಬರ್ 23ಕ್ಕೆ ಇದೆ. ಒಟ್ಟಿನಲ್ಲಿ ಈ ವರ್ಷ 3 ಬಾರಿ ಅಂಗಾರಕ ಸಂಕಷ್ಟ ಚತುರ್ಥಿ ಬಂದಿದೆ. ಮಾರ್ಚ್ 2ರಂದು ಅಂಗಾರಕ ಚತುರ್ಥಿಯನ್ನು ಆಚರಿಸಲಾಗಿತ್ತು.
ಅಂಗಾರಕ ಸಂಕಷ್ಟ ಚತುರ್ಥಿಯ ಮಹತ್ವೇನು, ಪೂಜಾ ವಿಧಿಗಳೇನು ಎಂದು ತಿಳಿಯೋಣ ಬನ್ನಿ:

ಅಂಗಾರಕ ಸಂಕಷ್ಟ ಚತುರ್ಥಿಯ ವಿಶೇಷವೇನು?
'ಅಂಗಾರಕ' ಎಂಬುವುದು ಸಂಸ್ಕೃತ ಪದವಾಗಿದ್ದು ಬೆಂಕಿ ಕೆಂಡದಂಥ ಹೊಳಪು ಎಂಬುವುದು ಇದರ ಅರ್ಥವಾಗಿದೆ. ಈ ದಿನ ಉಪವಾಸವಿದ್ದು ವಿಘ್ನ ನಿವಾರಕನನ್ನು ಪೂಜಿಸಿದರೆ ಆತನ ಎಲ್ಲಾ ಆಸೆಯೂ ಈಡೇರುವುದು. ಈ ದಿನ ಗಣೇಶನು ಮಂಗಳನಿಗೆ ವಿಮೋಚನೆ ನೀಡಿದ ದಿನ ಎಂಬ ಪೌರಾಣಿಕ ಕತೆಯಿದೆ. ಹಾಗಾಗಿ ಈ ದಿನದಂದು ಪೂಜೆ ಮಾಡುವುದರಿಂದ ಮಂಗಳ ಕೃಪೆ ಕೂಡ ನಿಮ್ಮ ಮೇಲಿರುವುದು. ಯಾರು ಭಕ್ತಿ ಮತ್ತು ಶ್ರದ್ಧೆಯಿಂದ ಈ ದಿನ ಪೂಜೆ ಸಲ್ಲಿಸುತ್ತಾರೋ ಅವರಿಗೆ ಜೀವನದಲ್ಲಿ ಕಷ್ಟಗಳು ಇರಲ್ಲ, ವಿಘ್ನೇಶ ಅವರ ಜೀವನದಲ್ಲಿ ಬರುವ ಎಲ್ಲಾ ವಿಘ್ನಗಳನ್ನು ನಿವಾರಿಸುತ್ತಾನೆ.

ಅಂಗಾರಕ ಚತುರ್ಥಿ ಶುಭ ಮುಹೂರ್ತ
ಚತುರ್ಥಿ ತಿಥಿ ಪ್ರಾರಂಭ ಜುಲೈ 26 ರಾತ್ರಿ 2:54ಕ್ಕೆ
ಚತುರ್ಥಿ ತಿಥಿ ಮುಕ್ತಾಯ ಜುಲೈ 28 ಮಧ್ಯಾಹ್ನ 2:28ಕ್ಕೆ

ಅಂಗಾರಕ ಚತುರ್ಥಿ ಪೂಜಾ ವಿಧಿ
* ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ತೊಟ್ಟು ಗಣೇಶನಿಗೆ ಗರಿಕೆ, ಮೋದಕವನ್ನು ಅರ್ಪಿಸಬೇಕು. ಈ ಪ್ರಸಾದವನ್ನು ಆರತಿ ಬಳಿಕ ಹಂಚಬಹುದು.
* ಈ ದಿನ ಉಪವಾಸವಿದ್ದು ರಾತ್ರಿ ಚಂದ್ರನ ನೋಡಿದ ಬಳಿಕವಷ್ಟೇ ಉಪವಾಸ ಆಹಾರ ಸೇವಿಸಬೇಕು.
* ಸಂಪೂರ್ಣ ಉಪವಾಸ ಇರಲು ಸಾಧ್ಯವಾಗದವರು ಹಣ್ಣುಗಳನ್ನಷ್ಟೇ ಈ ದಿನ ತೆಗೆದುಕೊಳ್ಳುತ್ತಾರೆ.
* ಈ ದಿನ ತುಂಬಾ ನೀರು ಕುಡಿಯುವಂತಿಲ್ಲ, ಎಲೆ ಅಡಿಕೆ, ತಂಬಾಕು ಸೇವಿಸುವಂತಿಲ್ಲ
* ಚಂದ್ರನ ನೋಡಿದ ಬಳಿ ಗಣೇಶನಿಗೆ ಪೂಜೆ ಸಲ್ಲಿಸಿ ಉಪವಾಸವನ್ನು ಮುರಿಯಲಾಗುವುದು.
* ಈ ದಿನ ಪೂಜೆಯ ವೇಳೆ ಗಣೇಶನ ಮಂತ್ರಗಳನ್ನು ಪಠಿಸಿ.

ಅಂಗಾರಕ ಚತುರ್ಥಿಯ ಮಹತ್ವ
ಅಂಗಾರಕ ಚತುರ್ಥಿಯನ್ನು ಆಚರಿಸಿದರೆ 21 ವ್ರತಗಳನ್ನು ಪಾಲಿಸಿದ್ದಕ್ಕೆ ಸಮ. ಈ ದಿನ ಉಪವಾಸವಿದ್ದು ಏನಾದರೂ ಸಂಕಲ್ಪ ಕೈಗೊಂಡರೆ ಅದು ನೆರವೇರುವುದು.

ಈ ಸ್ತೋತ್ರ ಪಠಿಸಿ
ಸಂಕಟ ಹರ ಗಣೇಶ ಸ್ತೋತ್ರ:
|| ಓಂ ಪ್ರಣಮ್ಯ ಶಿರಸಾ ದೇವಂ ಗೌರಿ ಪುತ್ರಂ ವಿನಾಯಕಂ ಭಕ್ತವಾಸಂ ಸ್ಮರೇನ್ನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ
ಪ್ರಥಮಂ ವಕ್ರತುಂಡಂಚ ಏಕದಂತಮಂ ದ್ವಿತೀಯಕಂ ತೃತೀಯಂ ಕೃಷ್ಣ ಪಿಂಗಾಕ್ಷಂ, ಗಜವಕ್ತ್ರಂ ಚತುರ್ಥಕಂ
ಲಂಬೋಧರಂ ಪಂಚಮಂ ಚ ಷಷ್ಠಂ ವಿಕಟಮೇವಚ ಸಪ್ತಮಂ ವಿಘ್ನ ರಾಜಂಚ ಧೂಮ್ರವರ್ಣಂ ತಥಾಷ್ಠಕಂ
ನವಮಂ ಫಲ ಚಂದ್ರಂಚ ದಶಮಂ ತು ವಿನಾಯಕಂ ಏಕಾದಶಂ ಗಣಪತಿಂ ದ್ವಾದಶಂತು ಗಜಾನನಂ
ದ್ವಾದಶೈತಾನಿ ನಾಮಾನಿ ತ್ರಿ ಸಂಧ್ಯಂ ಯಃ ಪಠೇನ್ನರಃ ನ ಚ ವಿಘ್ನ ಭಯಂ ತಸ್ಯ ಸರ್ವ ಸಿದ್ಧಿ ಕರೀಂ ಪ್ರಭೋ
ವಿದ್ಯಾರ್ಥಿ ಲಭತೆ ವಿದ್ಯಂ ವಿದ್ಯಾಂ ಧನಾರ್ಥಿ ಲಭತೆ ಧನಂ ಪುತ್ರಾರ್ಥಿ ಲಭತೆ ಪುತ್ರಂ ಮೋಕ್ಷಾರ್ಥಿ ಲಭತೆ ಗತಿಂ ಜಪೇತ್ ಗಣಪತಿ ಸ್ತೋತ್ರಂ ಷಡ್ಭೀರ್ಮಾಸೈ ಫಲಂ ಲಭೇತ್, ಸಂವತ್ಸರೇಣ ಸಿದ್ಧಿಂ ಚ ಲಭತೆ ನಾತ್ರ ಸಮಸ್ಯಾಃ ಅಷ್ಟಾಭ್ಯೋ ಬ್ರಹ್ಮಣೇಭ್ಯಾಷ ಚ ಲಿಖಿತ್ವ ಯಃ ಸಮರ್ಪಯೇತ್ ತಸ್ಯ ವಿದ್ಯಾ ಭವೇತ್ಸರ್ವ ಗಣೇಶಸ್ಯ ಪ್ರಸಾದತಃ
ಇತಿ ಶ್ರೀ ನಾರದ ಪುರಾಣೆ ಸಂಕಷ್ಟ ನಾಶನ ಗಣಪತಿ ಸ್ತೋತ್ರಂ ಸಂಪೂರ್ಣಂ ||



Click it and Unblock the Notifications
