ಮಹಾಭಾರತದಲ್ಲಿ ಕಂಡುಬರುವ ಅತಿ ಜನಪ್ರಿಯ ಪ್ರೇಮ ಕಥೆಗಳು

ಮಹಾಭಾರತದಲ್ಲಿ ಹಲವಾರು ಕಥೆಗಳಿವೆ. ಅವುಗಳಲ್ಲಿ ಎಷ್ಟೋ ಪ್ರೇಮ ಕಥೆಗಳು ಕೇವಲ ಮಹಾಭಾರತದವನ್ನು ಆಳವಾಗಿ ಅಭ್ಯಸಿಸಿದವರಿಗೆ ಮಾತ್ರ ತಿಳಿದಿದೆ. ಇಂತಹ ಕಥೆಗಳಲ್ಲಿ ಪ್ರಮುಖವಾದುದನ್ನು ಇಲ್ಲಿ ಉಲ್ಲೇಖಿಸಲಾಗಿದೆ....

By manu

ಮಹಾಭಾರತವು ಹಿ೦ದೂ ಧರ್ಮದ ಬಹುದೊಡ್ಡ ಆಸ್ತಿಯಾಗಿದೆ. ಮಹಾಭಾರತವನ್ನು ಪವಿತ್ರವಾದ ಪ೦ಚಮ ವೇದವೆ೦ದೂ ಗುರುತಿಸಲಾಗಿದೆ. ಈ ಮಹಾನ್ ಕೃತಿಯನ್ನು ಮಹರ್ಷಿ ವೇದವ್ಯಾಸರು ರಚಿಸಿದರು. ದಿನನಿತ್ಯದ ಎಷ್ಟೋ ಕೆಲಸಗಳಲ್ಲಿ ನಾವು ಮಹಾಭಾರತ ಮತ್ತು ರಾಮಾಯಣದ ಕಥೆಗಳನ್ನು ಉಲ್ಲೇಖಿಸಿ ಅವುಗಳ ದೃಷ್ಟಾಂತವನ್ನು ಪರಿಗಣಿಸುತ್ತೇವೆ. ಮಹಾಭಾರತದಲ್ಲಿ ನಿಮ್ಮನ್ನು ಬೆಚ್ಚಿ ಬೀಳಿಸುವ ಸತ್ಯಗಳು!

ಮಹಾಭಾರತದಲ್ಲಿ ಹಲವಾರು ಕಥೆಗಳಿವೆ. ಅವುಗಳಲ್ಲಿ ಎಷ್ಟೋ ಪ್ರೇಮ ಕಥೆಗಳು ಕೇವಲ ಮಹಾಭಾರತದವನ್ನು ಆಳವಾಗಿ ಅಭ್ಯಸಿಸಿದವರಿಗೆ ಮಾತ್ರ ತಿಳಿದಿದೆ. ಇಂತಹ ಕಥೆಗಳಲ್ಲಿ ಪ್ರಮುಖವಾದುದನ್ನು ಇಲ್ಲಿ ಉಲ್ಲೇಖಿಸಲಾಗಿದೆ....

ಶ್ರೀಕೃಷ್ಣ ಮತ್ತು 16,108 ಪತ್ನಿಯರು

ಶ್ರೀಕೃಷ್ಣ ಮತ್ತು 16,108 ಪತ್ನಿಯರು

ಶ್ರೀಕೃಷ್ಣನ 16,108 ಪತ್ನಿಯರಿದ್ದರಂತೆ. ಅವರಲ್ಲಿ 16,000 ಪತ್ನಿಯರು ಅವರ ಒಂದೇ ಜೀವಿತಾವಧಿಯಲ್ಲಿ ಪತ್ನಿಯರಾಗಿ ಬಂದಿರಲಿಲ್ಲ. ಇದಕ್ಕಾಗಿ ಅವರು ಹಲವಾರು ಜನ್ಮಗಳನ್ನು ಎತ್ತಬೇಕಾಯಿತು. ಎಲ್ಲರನ್ನೂ ಸಂತೋಷವಾಗಿಡಲು ಮತ್ತು ಎಲ್ಲರನ್ನೂ ಪ್ರೀತಿಸಲು ಸರ್ವಶಕ್ತನಾದ ಶ್ರೀಕೃಷ್ಣನು ಏಕಮಾತ್ರ ಪರಮಾತ್ಮನಾಗಿದ್ದಾನೆ.

ದ್ರೌಪದಿ ಮತ್ತು ಪಾಂಡವರು

ದ್ರೌಪದಿ ಮತ್ತು ಪಾಂಡವರು

ಪಂಚಪಾಂಡವರಿಗೆ ಪತ್ನಿಯಾಗಿ ಬಂದವಳು ದ್ರೌಪದಿ. ಸಾಮಾನ್ಯವಾಗಿ ಬಹುಪತ್ನಿತ್ವ ಅಥವಾ ಬಹುಪತಿತ್ವ ಇರುವೆಡೆ ಕಲಹಗಳು ಸಾಮಾನ್ಯವಾಗಿರುತ್ತವೆ. ಆದರೆ ಮಹಾಭಾರತದಲ್ಲಿ ಬಹುಪತಿಯರಿದ್ದರೂ ಅಣ್ಣತಮ್ಮಂದಿರ ನಡುವೆ ಪತ್ನಿಯ ಕುರಿತಾಗಿ ಯಾವುದೇ ಕಲಹ, ಜಗಳವಾಗಿರುವ ಉಲ್ಲೇಖವಿಲ್ಲ. ದ್ರೌಪತಿ ತನ್ನ ಐವರೂ ಪತಿಯರೊಡನೆ ಅನ್ಯೋನ್ಯತೆಯಿಂದಿದ್ದ ಹಾಗೇ ಪಾಂಡವರೂ ದ್ರೌಪದಿಯ ಮೇಲೆ ವಿಶ್ವಾಸವನ್ನಿರಿಸಿಕೊಂಡಿದ್ದರು.

ಧೃತರಾಷ್ಟ್ರ ಮತ್ತು ಗಾಂಧಾರಿ

ಧೃತರಾಷ್ಟ್ರ ಮತ್ತು ಗಾಂಧಾರಿ

ವಿಚಿತ್ರವೀರ್ಯನ ಮರಣಾನಂತರ ಆತನ ತಾಯಿ ಸತ್ಯವತಿ ತನ್ನ ಮೊದಲ ಮಗನಾದ ವೇದವ್ಯಾಸನಿಗೆ ಕೂಡಲೇ ಬರುವಂತೆ ಕರೆ ಕಳಿಸುತ್ತಾಳೆ. ತಾಯಿಯ ಕರೆಯನ್ನು ಮನ್ನಿಸಿ ಆಗಮಿಸುತ್ತಾನೆ. ತಾಯಿಯ ಬಯಕೆಯಂತೆ ವೇದವ್ಯಾಸ ವಿಚಿತ್ರವೀರ್ಯನ ಇಬ್ಬರು ಪತ್ನಿಯರಾದ ಅಂಬಿಕೆ ಮತ್ತು ಅಂಬೆಯರನ್ನು ಭೇಟಿಯಾಗಿ ಅದ್ಭುತ ಶಕ್ತಿಯುಳ್ಳ ಗಂಡು ಮಗುವೊಂದನ್ನು ಅಂಬಿಕೆಗೆ ಕರುಣಿಸುತ್ತಾನೆ. ವ್ಯಾಸನ ಭಯಾನಕ ರೂಪ ಮತ್ತು ಬೆದರಿಕೆಯೊಡ್ಡುವಂತಹಾ ಕಣ್ಣುಗಳನ್ನು ನೋಡಿದ ಅಂಬಿಕೆ ಭಯಭೀತಳಾಗಿ ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಾಳೆ. ಇದರ ಪರಿಣಾಮವಾಗಿ ಆಕೆಗೆ ಹುಟ್ಟಿದ ಮಗು ಧೃತರಾಷ್ಟ್ರ ಹುಟ್ಟಿನಿಂದಲೇ ಅಂಧವಾಗಿರುತ್ತದೆ. ಮಹಾಭಾರತವನ್ನು ಬರೆದವರು ವೇದವ್ಯಾಸರೇ ಆಗಿದ್ದಾರೆ.ಪ್ರಾಪ್ರವಯಸ್ಕನಾದಾಗ ಭೀಷ್ಮ ಗಾಂಧಾರಿಯನ್ನು ಕರೆತಂದು ಧೃತರಾಷ್ಟ್ರನಿಗೆ ಮದುವೆ ಮಾಡಿಸುತ್ತಾನೆ. ತನ್ನ ಪತಿಗೆ ಇಲ್ಲದ ದೃಷ್ಟಿಯ ಯೋಗ ತನಗೂ ಬೇಡವೆಂದು ತೀರ್ಮಾನಿಸಿದ ತನ್ನ ನಂತರದ ಜೀವನದುದ್ದಕ್ಕೂ ಕಣ್ಣಿಗೆ ಪಟ್ಟಿಯನ್ನು ಕಟ್ಟಿಕೊಂಡು ಸ್ವಪ್ರೇರಣೆಯಿಂದ ಅಂಧಳಾಗಿ ಬದುಕುತ್ತಾಳೆ.

ಅರ್ಜುನ ಮತ್ತು ಉಲೂಪಿ

ಅರ್ಜುನ ಮತ್ತು ಉಲೂಪಿ

ವನವಾಸದ ಸಮಯದಲ್ಲಿ ನಾಗಗಳ ರಾಜನಾದ ಕೌರವ್ಯನ ಮಗಳಾದ ಉಲೂಪಿ ಅರ್ಜುನನನ್ನು ಮೋಹಿಸಿ ಅಪಹರಿಸಿರುತ್ತಾಳೆ.ವನವಾಸದ ಸಮಯದಲ್ಲಿ ಬ್ರಹ್ಮಚರ್ಯೆಯನ್ನು ಪಾಲಿಸಬೇಕಾದುದರಿಂದ ಅರ್ಜುನ ಆಕೆಯ ಮೋಹಪಾಶದಲ್ಲಿ ಬೀಳಲಿಚ್ಛಿಸುವುದಿಲ್ಲ. ಆದರೆ ಬ್ರಹ್ಮಚರ್ಯೆ ಕೇವಲ ಧರ್ಮಪತ್ನಿಯೊಡನೆ ಮಾತ್ರ ಪಾಲಿಸಿದರೆ ಸಾಕು ಎಂದು ಆತನ ಮನವೊಲಿಸುತ್ತಾಳೆ. ಬಳಿಕ ಅರ್ಜುನನಿಗೆ ನೀರಿನಿಂದ ಎಂದೂ ಯಾವುದೇ ಅಪಾಯವಾಗದಂತಿರುವ ವರ ನೀಡುತ್ತಾಳೆ.

ಶ್ರೀಕೃಷ್ಣ ಮತ್ತು ರುಕ್ಮಿಣಿ

ಶ್ರೀಕೃಷ್ಣ ಮತ್ತು ರುಕ್ಮಿಣಿ

ರುಕ್ಮಿಣಿಯನ್ನು ಕಂಡು ಮೋಹಿತನಾದ ಶ್ರೀಕೃಷ್ಣ ಆಕೆಯ ಮನೆಯವರ ಇಚ್ಛೆಗೆ ವಿರುದ್ಧವಾಗಿ ಆಕೆಯನ್ನು ವಿವಾಹವಾಗುತ್ತಾನೆ. ರುಕ್ಮಿಣಿ ಮಾತ್ರ ಶ್ರೀಕೃಷ್ಣನನ್ನು ಪ್ರೀತಿಸುತ್ತಿರುತ್ತಾಳೆ.

ಅರ್ಜುನ ಮತ್ತು ಚಿತ್ರಾಂಗದೆ

ಅರ್ಜುನ ಮತ್ತು ಚಿತ್ರಾಂಗದೆ

ಕಾವೇರಿ ನದಿ ತೀರದ ಮಣಿಪುರ ಎಂಬ ರಾಜ್ಯದ ರಾಜನಾದ ಚಿತ್ರವಾಹನನ ಪುತ್ರಿ ಚಿತ್ರಾಂಗದೆಯಾಗಿದ್ದಳು. ಒಮ್ಮೆ ಮಣಿಪುರಕ್ಕೆ ಭೇಟಿ ನೀಡಿದ ಅರ್ಜುನ ಅಪ್ರತಿಮ ಸುಂದರಿಯಾಗಿದ್ದ ಚಿತ್ರಾಂಗದೆಯನ್ನು ನೋಡಿ ಪ್ರಥಮ ನೋಟದಲ್ಲಿಯೇ ಮೋಹಿತನಾಗಿದ್ದ. ಆಕೆಯನ್ನು ವರಿಸಲು ಚಿತ್ರವಾಹನನಲ್ಲಿ ಬೇಡಿಕೆಯಿಟ್ಟಾಗ ಚಿತ್ರವಾಹನ ಒಂದು ಕರಾರನ್ನು ಮುಂದಿಟ್ಟ. ಏನೆಂದರೆ ಅವರಿಗೆ ಹುಟ್ಟುವ ಮಗು ಮಣಿಪುರದಲ್ಲಿಯೇ ಬೆಳೆಯಬೇಕು ಹಾಗೂ ತನ್ನ ಬಳಿಕ ತನ್ನ ರಾಜ್ಯವನ್ನಾಳಬೇಕು. ಇದಕ್ಕೆ ಒಪ್ಪಿದ ಅರ್ಜುನ ಚಿತ್ರಾಂಗದೆಯನ್ನು ವಿವಾಹವಾದ. ಅವರಿಗೆ ಹುಟ್ಟಿದ ಮಗನಾದ ಬಬ್ರುವಾಹನನನ್ನು ಮಣಿಪುರದಲ್ಲಿಯೇ ಬಿಟ್ಟು ತಾನೊಬ್ಬನೇ ಇಂದ್ರಪ್ರಸ್ಥಕ್ಕೆ ತನ್ನ ಸಹೋದರರ ಬಳಿ ಹಿಂದಿರುಗಿದ. ಚಿತ್ರವಾಹನನ ಮರಣಾನಂತರ ಬಬ್ರುವಾಹನ ಪಟ್ಟವಲಂಕರಿಸಿದ. ಬಳಿಕ, ಮಹಾಭಾರತದ ಯುದ್ದದ ಬಳಿಕ ಯುದ್ದವೊಂದರಲ್ಲಿ ಅರ್ಜುನ ತನ್ನ ಮಗನಾದ ಬಬ್ರುವಾಹನನಿಗೆ ಸೋತ.

ಅರ್ಜುನ ಮತ್ತು ಸುಭದ್ರೆ

ಅರ್ಜುನ ಮತ್ತು ಸುಭದ್ರೆ

ದ್ರೋಣಾಚಾರ್ಯರಲ್ಲಿ ಶಿಕ್ಷಣ ಪಡೆಯುತ್ತಿರುವಾಗ ಗದ ಎಂಬ ಸಹಪಾಠಿಯೊಂದಿಗೆ ಅರ್ಜುನನಿಗೆ ಸ್ನೇಹ ಬೆಳೆಯಿತು. ವನವಾಸದ ಕಾಲದಲ್ಲಿ ದ್ವಾರಕೆಯನ್ನು ತಲುಪಿದ ಅರ್ಜುನ ಗದನನ್ನು ಭೇಟಿಯಾಗಲು ಆತನ ಮನೆಗೆ ಹೋದಾಗ ಗದನ ಸಹೋದರಿ ಸುಭದ್ರೆಯನ್ನು ಕಂಡ.ಸುಭದ್ರೆ ಶ್ರೀಕೃಷ್ಣನ ಮಲಸಹೋದರಿಯೂ ಆಗಿದ್ದಳು. ಇಬ್ಬರೂ ಒಬ್ಬರನ್ನೊಬ್ಬರು ಕಂಡು ಪರಸ್ಪರ ಮೋಹಿತರಾದರು. ಶ್ರೀಕೃಷ್ಣನ ಸಲಹೆಯಂತೆ ಅರ್ಜುನ ಸುಭದ್ರೆಯನ್ನು ಅಪಹರಿಸಿ ಬಳಿಕ ಮದುವೆಯಾದ. ಅರ್ಜುನನೊಂದಿಗೆ ಹಿಂದಿರುಗಿದ ಸುಭದ್ರೆ ದ್ರೌಪದಿಯನ್ನು ಭೇಟಿಯಾದ ಕೂಡಲೇ ತಮ್ಮ ವಿವಾಹದ ಬಗ್ಗೆ ಯಾವುದೇ ಚಕಾರವೆತ್ತಲಿಲ್ಲ. ಆದರೆ ದ್ರೌಪದಿಯೊಂದಿಗೆ ಕೇವಲ ಒಂದು ಘಂಟೆಯ ಕಾಲ ಸಮಾಲೋಚನೆ ನಡೆಸಿದ ಬಳಿಕ ಮನಸ್ಸು ಬದಲಾಯಿಸಿ ತನ್ನ ವಿವಾಹದ ಬಗ್ಗೆ ತಿಳಿಸಿದಳು. ವಿಶಾಲ ಮನಸ್ಸಿನ ದ್ರೌಪದಿ ಆಕೆಯನ್ನು ಸವತಿಯಾಗಿ ಸ್ವೀಕರಿಸಿದಳು.

ಭೀಮ ಮತ್ತು ಹಿಡಿಂಬೆ

ಭೀಮ ಮತ್ತು ಹಿಡಿಂಬೆ

ಹಿಡಿಂಬೆ ಓರ್ವ ನರಭಕ್ಷಕ ರಾಕ್ಷಸಿಯಾಗಿದ್ದಳು. ಕುಂತಿಯ ಮಗನಾದ ಭೀಮನನ್ನು ಕಂಡು ಮೋಹಿತಳಾದ ಹಿಡಿಂಬೆ ತನ್ನ ರಾಕ್ಷಸೀ ಗುಣಗಳನ್ನು ಸಂಪೂರ್ಣವಾಗಿ ತ್ಯಜಿಸಿದಳು. ಮೊದಲು ವಿವಾಹಕ್ಕೆ ಒಪ್ಪದ ಭೀಮನನ್ನು ಒಲಿಸುವಂತೆ ಕುಂತಿಯನ್ನು ಹಿಡಿಂಬೆ ಕಾಡಲು ತೊಡಗಿದಳು. ಬಳಿಕ ಕುಂತಿ ಒಂದು ಕರಾರಿನ ಮೇಲೆ ವಿವಾಹಕ್ಕೆ ಅನುಮತಿಸಿದಳು. ಏನೆಂದರೆ ಮಗುವಾದ ಬಳಿಕ ಆಕೆ ಭೀಮನನ್ನು ಬಿಟ್ಟುಬಿಡಬೇಕು. ಇದಕ್ಕೊಪ್ಪಿ ಭೀಮನನ್ನು ವಿವಾಹವಾದ ಹಿಡಿಂಬೆ ಬಳಿಕ ಮಗುವಿಗೆ ಜನ್ಮನೀಡುತ್ತಾಳೆ. ತೆಲೆ ಮಡಕೆಯಾಕಾರದಲ್ಲಿರುವ ಕಾರನ ಘಟೋದ್ಗಜನೆಂದು ಹೆಸರಿಟ್ಟು ಆಜೀವನ ಬೇರೆ ಯಾರನ್ನೂ ಮದುವೆಯಾಗದೇ ಮರಣಿಸುತ್ತಾಳೆ.

ಸತ್ಯವತಿ ಮತ್ತು ಪರಾಶರ ಮುನಿ

ಸತ್ಯವತಿ ಮತ್ತು ಪರಾಶರ ಮುನಿ

ಅಪಾರ ತಪಸ್ಸಿನ ಪರಿಣಾಮವಾಗಿ ಹಲವು ದೈವಿಕ ಶಕ್ತಿಯನ್ನು ಹೊಂದಿದ್ದ ಪರಾಶರ ಮುನಿ ಒಮ್ಮೆ ಯಮುನಾನದಿಯನ್ನು ದಾಟಬೇಕಾಗಿತ್ತು. ಅಲ್ಲಿ ಅಂಬಿಗನಾಗಿದ್ದ ಮೀನುಗಾರ ದಶ್ರಜ ಅಂದು ಮನೆಗೆ ತೆರಳಿದ್ದರಿಂದ ಆತನ ಮಗಳು ಸತ್ಯವತಿ ದೋಣಿಯ ಹುಟ್ಟು ಹಾಕುತ್ತಿದ್ದಳು. ದೋಣಿಯಲ್ಲಿ ಆಕೆಯನ್ನು ಕಂಡ ಪರಾಶರ ಮೋಹಿತಗೊಂಡು ಆಕೆಯಲ್ಲಿ ತನ್ನ ಇಂಗಿತವನ್ನು ತಿಳಿಸಿದ. ಇವರ ಸಂಗಮದಿಂದ ಹುಟ್ಟುವ ಮಗು ಅತ್ಯಂತ ತೇಜಸ್ಸುಳ್ಳವನಾಗುವನೆಂದು ಭರವಸೆ ನೀಡಿದ. ಮುನಿಯ ಅಪೇಕ್ಷೆಯನ್ನು ಮನ್ನಿಸಲು ಮೂರು ಕರಾರುಗಳನ್ನು ಆಕೆ ಒಡ್ಡುತ್ತಾಳೆ. ೧) ಅವರೇನು ಮಾಡುತ್ತಿದ್ದಾರೆ ಎಂದು ಯಾರಿಗೂ ತಿಳಿಯಬಾರದು. ೨) ಮಗುವಿನ ಜನನವಾದ ಬಳಿಕವೂ ತನ್ನ ಕನ್ಯತ್ವ ಉಳಿಯಬೇಕು ೩) ತನ್ನ ಶರೀರದಿಂದ ಸೂಸುವ ಮೀನಿನ ವಾಸನೆ ತೊಲಗಬೇಕು. ಇದನ್ನು ಮನ್ನಿಸಿದ ಪರಾಶರ ಮುನಿ ಮೊದಲ ಕರಾರಿಗೆ ಒಪ್ಪಿ ಅವರ ಸಂಗಮದ ಹೊತ್ತಿನಲ್ಲಿ ಇಬ್ಬರನ್ನು ದಟ್ಟವಾದ ಇಬ್ಬನಿ ಆವರಿಸಿರುವಂತೆ ವರ ನೀಡಿದ. ಎರಡನೆಯ ಕರಾರಿಗೆ ಒಪ್ಪಿದ. ಅವರಿಗೆ ವೇದ ವ್ಯಾಸ ಮಗನಾಗಿ ಹುಟ್ಟಿದ ಬಳಿಕ ಆಕೆಯ ಕನ್ಯತ್ವ ಮರಳಿತು. ಮೂರನೆಯ ಕರಾರಿಗೆ ಒಪ್ಪಿ ಆಕೆಯ ದೇಹವನ್ನು ಸುಗಂಧಭರಿತವಾಗಿಸಿದ. ಈ ಸುಗಂಧ ಒಂದು ಯೋಜನೆ ಅಂದರೆ ಸುಮಾರು ಒಂಭತ್ತು ಮೈಲಿಗಳವರೆಗೂ ವ್ಯಾಪಿಸಿತ್ತು. ಈ ಕಾರಣದಿಂದ ಆಕೆಗೆ ಗಂಧವತಿ ಎಂಬ ಅನ್ವರ್ಥನಾಮವೂ ಲಭಿಸಿತ್ತು.

ಶಾಂತನು ಮತ್ತು ಸತ್ಯವತಿ

ಶಾಂತನು ಮತ್ತು ಸತ್ಯವತಿ

ಸತ್ಯವತಿಯ ಈ ಸುಗಂಧ ಶಾಂತನುವನ್ನು ಬಹುವಾಗಿ ಆಕರ್ಷಿಸಿತ್ತು. ಈ ಸುಗಂಧವನ್ನು ಹಿಂಬಾಲಿಸಿಕೊಂಡು ಬಂದ ಶಾಂತನು ದೋಣಿಯಲ್ಲಿ ಕುಳಿತಿದ್ದ ಸತ್ಯವತಿಯನ್ನು ಕಂಡು ಮೋಹಿತನಾದ. ತನ್ನನ್ನು ನದಿಯ ಆಚೆದಡಕ್ಕೆ ಬಿಡುವಂತೆ ಕೇಳಿಕೊಂಡ ಆತ ಆಚೆ ದಡ ತಲುಪಿದ ಬಳಿಕ ಮತ್ತೆ ಈಚೆ ದಡಕ್ಕೆ ಕರೆದೊಯ್ಯುವಂತೆ ತಿಳಿಸಿದ. ಇದು ಇಡಿಯ ದಿನ ಮುಂದುವರೆಯಿತು. ಕಡೆಗೆ ತನ್ನನ್ನು ವರಿಸುವಂತೆ ಆಕೆಯನ್ನು ಕೇಳಿಕೊಂಡ. ಆದರೆ ಸತ್ಯವತಿಯ ತಂದೆ ಹಲವು ಕರಾರುಗಳನ್ನಿಟ್ಟ.

ಅವುಗಳಲ್ಲಿ ಮೊದಲನೆಯದು ಸತ್ಯವತಿಗೆ ಹುಟ್ಟುವ ಮಗುವೇ ಶಾಂತನುವಿನ ರಾಜ್ಯದ ಅಧಿಪತಿಯಾಗಬೇಕು. ಆದರೆ ಶಾಂತನುವಿಗೆ ಈಗಾಗಲೇ ಭೀಷ್ಮ ಮೊದಲ ಮಗನಾಗಿ ಹುಟ್ಟಿದ್ದ.ಈ ಇಬ್ಬಂದಿಯನ್ನು ಭೀಷ್ಮನಲ್ಲಿ ಪ್ರಸ್ತಾಪಿಸಿದ ಶಾಂತನುವಿಗೆ ಭೀಷ್ಮ ಸತ್ಯವತಿಯನ್ನು ತಂದೆ ಮದುವೆಯಾಗಲು ಅಡ್ಡಿಯಿಲ್ಲವೆಂದು ತಿಳಿಸಿದ. ಭೀಷ್ಮನಿಗೆ ಮುಂದೆ ಹುಟ್ಟುವ ಮಕ್ಕಳಿಂದ ತನ್ನ ಮಕ್ಕಳಿಗೆ ಅನ್ಯಾಯವಾಗಬಹುದೆಂಬ ಅನುಮಾನವನ್ನು ಪರಿಹರಿಸಿದ ಭೀಷ್ಮ ತಾನು ಆಜೀವನ ಬ್ರಹ್ಮಚಾರಿಯಾಗಿರುವುದಾಗಿ ಪ್ರತಿಜ್ಞೆ ಮಾಡಿದೆ. ಇದನ್ನೇ ನಾವು ಭೀಷ್ಮಪ್ರತಿಜ್ಞೆ ಎಂದು ಉಲ್ಲೇಖಿಸುತ್ತೇವೆ. ಬಳಿಕ ಶಾಂತನು ಸತ್ಯವತಿಯನ್ನು ವಿವಾಹವಾದ. ಅವರಿಗೆ ಚಿತ್ರಾಂಗದ ಮತ್ತು ವಿಚಿತ್ರವೀರ್ಯರೆಂದ ಇಬ್ಬರು ಮಕ್ಕಳಾದರು.

X
Desktop Bottom Promotion