Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ವಿಶೇಷ ಮಹತ್ವ ಹೊಂದಿರುವ ಶಿವನ ಆಭರಣಗಳು
ನಮ್ಮ ಹಿಂದೂ ಸಂಪ್ರದಾಯದಲ್ಲಿ ವಿಶೇಷವಾಗಿ ಶಿವ ದೇವರು ಎಲ್ಲಾ ದೇವತೆಗಳಿಂದ ವಿಭಿನ್ನವಾಗಿದ್ದಾರೆ. ಭಸ್ಮ ಧಾರಿ, ತ್ರಿಶೂಲಧಾರಿ, ಹಾವನ್ನೇ ಆಭರಣವನ್ನಾಗಿಸಿಕೊಂಡಿರುವ ಮಹೇಶ್ವರ ದೇವಾಧಿ ದೇವ. ಚಿನ್ನದ ಆಭರಣಗಳನ್ನೇ ಧರಿಸದೇ ರುದ್ರಾಕ್ಷಿ, ಹಾವನ್ನೇ ತನ್ನ ಆಭರಣವನ್ನಾಗಿಸಿಕೊಂಡಿರುವ ಶಿವ ಸರಳತೆಯನ್ನೇ ಮೈಗೂಢಿಸಿಕೊಂಡವರು. ಹುಲಿಯ ಚರ್ಮವನ್ನೇ ತನ್ನ ಆಸನವಾಗಿಸಿ ಕೈಲಾಸ ವಾಸಿಯಾಗಿರುವ ಮಹಾದೇವ ಭಕ್ತನುರಾಗಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶಿವೈಕ್ಯಕ್ಕಾಗಿ ಶಿವರಾತ್ರಿ ಆಚರಣೆಗಳು
ಶಿವನನ್ನು ಅಲಂಕರಿಸಿರುವ ಈ ಆಭರಣಗಳು ತಮ್ಮದೇ ಆದ ಮಹತ್ವನ್ನು ಪಡೆದುಕೊಂಡಿವೆ. ಇಂದು ಈ ಆಭರಣಗಳ ಮಹತ್ವನ್ನು ಬೋಲ್ಡ್ ಸ್ಕೈ ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಜಟಾಧಾರಿಯಾಗಿ ಸರಳ ಸುಂದರನಾಗಿರುವ ಪರಮೇಶ್ವರನು ಭಕ್ತರ ಇಷ್ಟಾರ್ಥಗಳನ್ನು ಕ್ಷಣದಲ್ಲಿ ಸಾಧಿಸುವ ಕರುಣಾಮಯಿ.
ಆದ್ದರಿಂದಲೇ ದೇವತೆಗಳಿಂದ ಹಿಡಿದು ರಾಕ್ಷಸರವರೆಗೂ ಶಿವನನ್ನೇ ಆರಾಧಿಸಿರುವ ಭಕ್ತಿ ಪ್ರಧಾನ ಕಥೆಗಳಿವೆ. ಶಿವರಾತ್ರಿಯ ಪುಣ್ಯ ದಿನದಂದು ಶಿವನ ಬಗೆಗಿನ ಎಷ್ಟೋ ಕಥೆಗಳನ್ನು ಕೇಳಿ ಓದಿ ಧನ್ಯರಾಗುತ್ತೇವೆ. ಅದೇ ರೀತಿ ಶಿವನು ಏಕೆ ಸರಳತೆಯ ರುವಾರಿ ಎಂಬುದನ್ನು ಇಂದು ತಿಳಿದುಕೊಳ್ಳೋಣ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶಿವಲಿಂಗದ ಮಹತ್ವ

1.ಹಾವು
'ಜೀವ' ವನ್ನು ವ್ಯಕ್ತಿಯ ಆತ್ಮವನ್ನು ಪ್ರತಿನಿಧಿಸುವ ಶಿವನ ಆಭರಣವಾಗಿರುವ ಹಾವು ಶಿವನ ಕುತ್ತಿಗೆಯಲ್ಲಿ ವಿರಾಜಮಾನವಾಗಿರುತ್ತದೆ. ಪ್ರತಿಯೊಬ್ಬ ಜೀವ ಸಂಕುಲವೂ ತನ್ನ ಬದುಕಿನ ಏಳಿಗೆಗೆ ದೇವರನ್ನು ನಂಬಿರಬೇಕೆಂಬ ತತ್ವವನ್ನು ಇದು ಪ್ರತಿನಿಧಿಸುತ್ತದೆ. ನಮಗೆ ಹಾವೆಂದರೆ ಭಯ ಆದರೆ ಆ ಪರಶಿವನು ಎಲ್ಲಾ ರೀತಿಯ ಭಾವನೆಗಳಿಂದ ಮುಕ್ತನಾಗಿರುವುದರಿಂದ ಯಾವುದೇ ಭಯ ಶಿವ ದೇವರಿಗಿಲ್ಲ ಮತ್ತು ಹಾವು ಅವರ ಕೊರಳನ್ನು ಸುತ್ತುವರಿದಿದೆ.

2.ಭಸ್ಮ ಅಥವಾ ವಿಭೂತಿ
ನೀವು ಗಮನಿಸರಬಹುದು ಶಿವನು ತನ್ನ ಮೈಗೆಲ್ಲಾ ಪವಿತ್ರ ಭಸ್ಮವನ್ನೂ ಹಚ್ಚಿಕೊಂಡಿರುತ್ತಾರೆ. ಭಸ್ಮ ಅಥವಾ ವಿಭೂತಿ ಮಾನವನ ಜೀವನದ ಕೊನೆಯನ್ನು ಪ್ರತಿನಿಧಿಸುತ್ತದೆ. ಶಿವನು ತನ್ನ ಮೈಗೆಲ್ಲಾ ಭಸ್ಮವನ್ನೂ ಧರಿಸಿರುವ ಉದ್ದೇಶವೇನೆಂದರೆ ಯಾರೊಬ್ಬರೂ ತಮ್ಮ ಅಂತ್ಯವನ್ನು ತಪ್ಪಿಸಿಕೊಳ್ಳಲಾರರು ಎಂಬ ತತ್ವ ಇದರಲ್ಲಡಗಿದೆ. ಭೂಮಿಯಲ್ಲಿ ಜನ್ಮ ತಾಳಿರುವ ಪ್ರತಿಯೊಂದೂ ಬೂದಿಗೆ ಸೇರುತ್ತದೆ ಎಂಬ ಅಂಶ ಇಲ್ಲಿನದು.

3.ಜಟಾಧಾರಿ
ಶಿವನ ಕಟ್ಟಿದ ತುರುಬು ಅಥವಾ ಜಟೆಯು ವಾಯುವಿನ ಅಧಿಪತಿ ಎಂಬುದನ್ನು ತೋರಿಸುತ್ತದೆ. ಎಲ್ಲಾ ಚರಾಚರ ಸಂಕುಲಗಳಿಗೂ ವಾಯು ಅಥವಾ ಗಾಳಿ ಅನಿವಾರ್ಯವಾದುದು.

4.ರುದ್ರಾಕ್ಷಿ
ಶಿವನ ಕೊರಳಹಾರ ಮತ್ತು ಮಣಿಕಟ್ಟಿನ ಆಭರಣ ರುದ್ರಾಕ್ಷಿಯಾಗಿದೆ. ಕೊರಳ ಹಾರವು 108 ರುದ್ರಾಕ್ಷಿಗಳನ್ನು ಹೊಂದಿದ್ದು ಭೂಮಿಯ ರಚನೆಗೆ ಬಳಸಲಾದ ಅಂಶಗಳನ್ನು ಪ್ರತಿನಿಧಿಸುತ್ತದೆ. ಎಲ್ಲಾ ಘಟಕಗಳಿಗೂ ಅಂಶಗಳಿಗೂ ಶಿವನೇ ದೇವರು ಎಂಬ ಅಂಶವನ್ನು ರುದ್ರಾಕ್ಷಿ ಬಿಂಬಿಸುತ್ತದೆ.

5.ಹುಲಿಯ ಚರ್ಮ
ಹುಲಿಯ ಚರ್ಮವು ಬಲ ಅಥವಾ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಶಕ್ತಿಯು ಶಿವನ ಒಂದು ಪಾರ್ಶ್ವವಾಗಿರುವುದರಿಂದ, ಭೂಮಿಯಲ್ಲಿ ಪ್ರಸ್ತುತವಿರುವ ಎಲ್ಲಾ ಪ್ರಕಾರದ ಶಕ್ತಿಗಳಿಂದ ಆತನ ಜಯವನ್ನು ತೋರಿಸುತ್ತದೆ.

6.ಅರ್ಧಚಂದ್ರ
ಶಿವ ದೇವರನ್ನು 'ಚಂದ್ರಶೇಖರ' ಎಂಬ ಹೆಸರಿನಿಂದ ಕರೆಯುತ್ತಾರೆ. ತಲೆಯಲ್ಲಿ ಅರ್ಧಚಂದ್ರನನ್ನು ಧರಿಸಿರುವುದಕ್ಕೆ ಶಿವನಿಗೆ ಈ ಹೆಸರು. ಜೀವಿಯ ಪ್ರಕ್ರಿಯೆಯನ್ನು ಒಳಗೊಂಡಂತೆ, ಪ್ರಾರಂಭದಿಂದ ಅಂತ್ಯದವರೆಗಿನ ಸಮಯ ಚಕ್ರವನ್ನು ಅರ್ಧ ಚಂದ್ರ ಪ್ರತಿನಿಧಿಸುತ್ತದೆ. ಚಂದ್ರನು ಸಮಯದ ಅಳತೆಯಾದ್ದರಿಂದ ಶಿವ ದೇವರ ತಲೆಯಲ್ಲಿರುವ ಅರ್ಧಚಂದ್ರ ಸಮಯದ ಮೇಲಿನ ಆತನ ಹಿಡಿತವನ್ನು ತೋರಿಸುತ್ತದೆ. ಸಮಯದ ಅಳತೆಯ ಹಿಂದಿರುವ ಶಕ್ತಿ ಶಿವ ದೇವರು ಮತ್ತು ಆತನೇ ಶಾಶ್ವತ ವಾಸ್ತವವಾಗಿರುವನು.



Click it and Unblock the Notifications











