Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮನೆಯಲ್ಲಿ ಹೀಗಿದ್ದರೆ ಪಿತೃದೋಷವಿದೆ: ಜುಲೈ 17, ಆಷಾಢ ಅಮವಾಸ್ಯೆಯಂದು ಈ ಪರಿಹಾರ ಮಾಡಿ
ಆಷಾಢ ಅಮವಾಸ್ಯೆ ಹಲವಾರು ಕಾರಣಗಳಿಂದ ತುಂಬಾ ಮಹತ್ವವನ್ನು ಹೊಂದಿದೆ. ಈ ದಿನ ಭೀಮನ ಅಮವಾಸ್ಯೆ ಆಚರಿಸಲಾಗುವುದು ಹಾಗೂ ಈ ದಿನ ಪಿತೃ ತರ್ಪಣ ಕೂಡ ಮಾಡಲಾಗುವುದು. ಈ ದಿನ ಪಿತೃ ತರ್ಪಣ ಮಾಡುವುದರಿಂದ ಪಿತೃದೋಷದಿಂದ ಮುಕ್ತರಾಗಬಹುದು. ಈ ವರ್ಷ ಆಷಾಢ ಅಮವಾಸ್ಯೆಯನ್ನು ಜುಲೈ 17ರಂದು ಆಚರಿಸಲಾಗುವುದು.
ಆಷಾಢ ಅಮವಾಸ್ಯೆಗೆ ಪಿತೃತರ್ಪಣ ಮಾಡುವುದರ ಹಿಂದಿನ ಉದ್ದೇಶವೇನು? ಪಿತೃದೋಷವಿದ್ದರೆ ಏನೆಲ್ಲಾ ತೊಂದರೆಗಳಾಗುವುದು? ಈ ತೊಂದರೆಗಳ ನಿವಾರಣೆಗೆ ಆಷಾಢ ಅಮವಾಸ್ಯೆಯಂದು ಏನು ಪರಿಹಾರ ಮಾಡಬೇಕು ಎಂದು ನೋಡೋಣ ಬನ್ನಿ:

ಆಷಾಢ ಅಮವಾಸ್ಯೆ
ಆಷಾಢ ಅಮವಾಸ್ಯೆ ಪಿತೃತರ್ಪಣಕ್ಕೆ ತುಂಬಾ ಶ್ರೇಷ್ಠವಾದ ದಿನವೆಂದು ನಂಬಲಾಗಿದೆ. ಆಷಾಢ ಅಮವಾಸ್ಯೆಯಂದು ಶ್ರಾದ್ಧಕಾರ್ಯ ಮಾಡುವುದರಿಂದ ಪಿತೃಗಳಿಗೆ ಮೋಕ್ಷ ಸಿಗುತ್ತದೆ ಅಷ್ಟು ಮಾತ್ರವಲ್ಲ ಅವರ ಆಶೀರ್ವಾದದಿಂದ ಒಳಿತಾಗುವುದು ಎಂದು ನಂಬಲಾಗಿದೆ.
ಪಿತೃದೋಷವಿದ್ದರೆ ಕುಟುಂಬಕ್ಕೆ ಒಳಿತಾಗಲ್ಲ ಎಂದು ಹೇಳಲಾಗುವುದು, ಈ ಬಗೆಯ ಲಕ್ಷಣಗಳು ಕಂಡು ಬಂದರೆ ಪಿತೃದೋಷವಿದೆ ಎಂದು ಹೇಳಲಾಗುವುದು:
* ವೃತ್ತಿ ಜೀವನದಲ್ಲಿ ಅನೇಕ ಅಡೆತಡೆಗಳಿಂದ ಪ್ರಗತಿಗೆ ತೊಂದರೆಯಾಗುವುದು
* ವೈವಾಜಿಕ ಜೀವನ ಸರಿಯಿಲ್ಲದಿರುವುದು
* ಸಂತಾಭಾಗ್ಯ ಇಲ್ಲದಿರುವುದು
* ಆಗಾಗ ಗರ್ಭಪಾತ
* ಮನೆಯಲ್ಲಿ ಸದಾ ಜಗಳ, ನೆಮ್ಮದಿಯೇ ಇಲ್ಲದಿರುವುದು
* ಮನೆಯಲ್ಲಿ ಅಸ್ವಾಭಾವಿಕ ಸಾವು
* ಕಳ್ಳತನ, ಅಪಘಾತ, ದರೋಡೆ ಇವೆಲ್ಲಾ ಪದೇ ಪದೇ ಆಗುವುದು
* ಸದಾ ಆರೋಗ್ಯ ಸಮಸ್ಯೆ
* ಆರ್ಥಿಕ ಸಮಸ್ಯೆ
* ಕನಸಿನಲ್ಲಿ ಹಾವು ಬರುವುದು
* ಕನಸಿನಲ್ಲಿ ಪೂರ್ವಜರು ಬಂದು ಆಹಾರ, ವಸ್ತ್ರ ಕೇಳುವುದು
* ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದಿರುವುದು
* ಸಮಾಜದಲ್ಲಿ ಕೆಟ್ಟ ಹೆಸರು ಬರುವುದು
ಪಿತೃದೋಷ ಯಾವಾಗ ಉಂಟಾಗುವುದು
* ಸತ್ತ ವ್ಯಕ್ತಿಯ ಶ್ರಾದ್ಧ, ಪಿಂಡ ದಾನ ಅಥವಾ ಅವರ ಕರ್ಮಗಳನ್ನು ಮಾಡದೇ ಇದ್ದಾಗ ಅವರಿಗೆ ಮೋಕ್ಷ ಸಿಗದೆ ಪಿತೃದೊಷ ಉಂಟಾಗುವುದು
* ಬೇರೆಯವರ ಶಾಪದಿಂದ ಕೂಡ ಪಿತೃದೋಷ ಉಂಟಾಗುವುದು
* ಮನೆಯಲ್ಲಿ ಹಿರಿಯರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಕೂಡ ಪಿತೃ ದೋಷ ಉಂಟಾಗುವುದು.
ಪಿತೃದೋಷಕ್ಕೆ ಆಷಾಢ ಅಮವಾಸ್ಯೆಯಂದು ಪರಿಹಾರ ಮಾಡಿ
* ಈ ದಿನ ಪಿತೃ ತರ್ಪಣ ಮಾಡಿ
* ನಿರ್ಗತಿಕರಿಗೆ ದಾನ ಮಾಡಿ
ಈ ರೀತಿ ಮಾಡುವುದರಿಂದ ಪಿತೃಗಳಿಗೆ ಮೋಕ್ಷ ಸಿಗುವುದು, ನೀವು ಪಿತೃದೋಷದಿಂದ ಮುಕ್ತರಾಗುತ್ತೀರಿ.
ಈ ಮಂತ್ರ ಪಠಿಸಿ
ಓಂ ಶ್ರೀಂ ಸರ್ವ ಪಿತೃ ದೋಷ ನಿವಾರಣಾಯ ಕ್ಲೇಶಂ ಹನ ಹನ ಸುಖ ಶಾಂತಿಂ ಫಟ್ ಸ್ವಾಹಾ |
" ಓಂ ಶ್ರೀಂ ಸರ್ವ ಪಿತ್ರ ದೋಷ ನಿವಾರಣಾಯ ಕ್ಲೇಶಂ ಹನ್ ಹನ್ ಸುಖ ಶಾಂತಿಂ ದೇಹಿ ಫಟ್ ಸ್ವಾಹಾ"



Click it and Unblock the Notifications

