Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಮನೆಯಲ್ಲಿ ಈ ಅನಾಹುತಗಳಾದರೆ ಧನ ನಷ್ಟ ಗ್ಯಾರಂಟಿ!
ಅನೇಕ ಬಾರಿ ನಮ್ಮ ಜೀವನದಲ್ಲಿ ಕಾಕತಾಳಿಯವೆಂಬಂತೆ ಕೆಲವೊಂದು ಘಟನೆಗಳು ನಡೆದು ಹೋಗುತ್ತೆ. ಹೆಚ್ಚಿನ ಸಂದರ್ಭದಲ್ಲಿ ನಾವು ಈ ಬಗ್ಗೆ ತಲೆಕೆಡಿಸಿಕೊಳ್ಳೋದಕ್ಕೆ ಹೋಗೋದಿಲ್ಲ. ಆದರೆ ನಿಮಗೊತ್ತಾ ಇದು ನೇರವಾಗಿ ನಮ್ಮ ಸಾಮಾಜಿಕ ಹಾಗೂ ಆರ್ಥಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಈ ರೀತಿಯ ಕಾಕತಾಳಿಯ ಘಟನೆಗಳು ಅನೇಕ ಬಾರಿ ನಮ್ಮನ್ನು ಎಚ್ಚರಿಸುತ್ತದೆ. ಏನಾದರೂ ಕೆಟ್ಟ ಘಟನೆ ನಮ್ಮ ಬದುಕಿನಲ್ಲಿ ಆಗುತ್ತೆ ಅನ್ನೋದ್ರ ಸೂಚನೆಯನ್ನು ನೀಡುತ್ವೆ. ಅಷ್ಟಕ್ಕೂ ಕಾಕತಾಳಿಯ ಘಟನೆಗಳನ್ನು ನಾವು ಯಾಕೆ ನಿರ್ಲಕ್ಷಿಸಬಾರದು. ಇದು ನಮಗೆ ಎಂತಹ ಸೂಚನೆಯನ್ನು ನೀಡುತ್ವೆ ಅನ್ನೋದನ್ನು ತಿಳಿಯೋಣ.
ಕೈಯಲ್ಲಿರೋ ಕಪ್ ಜಾರಿ ಬಿದ್ದು ಒಡೆಯುವುದು!
ಅನೇಕ ಬಾರಿ ನಮ್ಮ ಕೈಯಲ್ಲಿರುವ ಕಪ್ ಅಥವಾ ಗ್ಲಾಸ್ ಜಾರಿ ಬಿದ್ದು ಒಡೆದು ಹೋಗುತ್ತದೆ. ಇದರ ಜೊತೆಗೆ ಅದ್ರಲ್ಲಿರೋ ನೀರು ಕೂಡ ಕೆಳಗೆ ಬೀಳುತ್ತದೆ. ಇದನ್ನು ಯಾವತ್ತಿಗೂ ಶುಭ ಸೂಚನೆಯೆಂದು ಪರಿಗಣಿಸೋದಿಲ್ಲ.
ಇದರರ್ಥ ಮುಂದಿನ ದಿನಗಳಲ್ಲಿ ನಿಮ್ಮ ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ಒಳಗಾಗಬಹುದು. ಮತ್ತು ಆರ್ಥಿಕ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಬಹುದು. ಎಂಬುವುದನ್ನು ಸೂಚಿಸುತ್ತದೆ. ಈ ವಿಪತ್ತನ್ನು ತಪ್ಪಿಸಲು ನೀವು ಬಡವರಿಗೆ ಮತ್ತು ನಿರ್ಗತಿಕರಿಗೆ ಆಹಾರವನ್ನು ನೀಡಿ. ಮತ್ತು ನಿಮ್ಮ ನೆಚ್ಚಿನ ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿ.
ಹಾಲು ಅಥವಾ ಚಹಾ ಹೊರಚೆಲ್ಲುವುದು!
ಹಾಲು ಅಥವಾ ಚಹಾ ಕುದಿಯುತ್ತಿರುವ ಸಂದರ್ಭದಲ್ಲಿ ಅದೇನಾದ್ರೂ ಹೊರ ಚೆಲ್ಲಿದರೆ ಅದನ್ನು ಕೆಟ್ಟ ಅಥವಾ ಅಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಹಾಲು ಮತ್ತು ಚಹಾ ಕುದಿಯುತ್ತಿರುವ ಸಂದರ್ಭದಲ್ಲಿ ಹೊರ ಚೆಲ್ಲಿದರೆ ಮನೆಯ ಸಂತೋಷ ಮತ್ತು ಶಾಂತಿ ಹಾಳಾಗುತ್ತಂತೆ.
ಇದರ ಜೊತೆಗೆ ಕುಟುಂಬ ಸದಸ್ಯರ ನಡುವೆ ಜಗಳಗಳು ಪ್ರಾರಂಭವಾಗುತ್ತವೆ. ಹಾಲು ಚಂದ್ರನನ್ನು ಪ್ರತಿನಿಧಿಸುತ್ತದೆ. ಮತ್ತು ಚಂದ್ರನು ಮನಸ್ಸಿಗೆ ಕಾರಣವಾದ ಗ್ರಹವಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಸೋರಿಕೆಯಿಂದಾಗಿ ವ್ಯಕ್ತಿಯು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಮತ್ತು ಅವನ ಮನಸ್ಸಿನಲ್ಲಿ ಅನೇಕ ನಕಾರಾತ್ಮಕ ಆಲೋಚನೆಗಳು ಬರುತ್ತಂತೆ.
ಗಾಜು ಒಡೆದರೆ ಏನರ್ಥ!
ಒಂದು ವೇಳೆ ಗಾಜು ಅಥವಾ ಕನ್ನಡಿ ಇದ್ದಕ್ಕಿದ್ದಂತೆ ಒಡೆದರೆ ಅಥವಾ ಮನೆಯ ಕಿಟಕಿಯ ಗಾಜು ಒಡೆದರೆ ಅದನ್ನು ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಯಾವುದೇ ಗಾಜು ಒಡೆದರೆ ಬರಲಿರುವ ಬಿಕ್ಕಟ್ಟು ನಿವಾರಣೆಯಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಇದಕ್ಕಾಗಿ ದೇವರಿಗೆ ಧನ್ಯವಾದ ಹೇಳಿ ಪೂಜೆಯ ಕೋಣೆಯಲ್ಲಿ ದೀಪ ಹಚ್ಚಿ ಅನ್ನವನ್ನು ಅರ್ಪಿಸಿ.
ಪೂಜೆಯ ತಟ್ಟೆ ಕೆಳಗೆ ಬೀಳುವುದು!
ಕೈಯಿಂದ ಪೂಜೆಯ ವಸ್ತು ಅಥವಾ ಪೂಜೆಯ ತಟ್ಟೆ ಕೆಳಗೆ ಬಿದ್ದರೆ ಅದನ್ನು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ. ಇದರರ್ಥ ಕುಟುಂಬವು ಭವಿಷ್ಯದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಷ್ಟೇ ಅಲ್ಲದೇ, ಪೂಜೆಯ ದೀಪವು ಇದ್ದಕ್ಕಿದ್ದಂತೆ ಆರಿಹೋದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ಹೀಗಾಗಿ ದೇವರಲ್ಲಿ ಪ್ರಾರ್ಥಿಸಿ ಮತ್ತು ಕ್ಷಮೆಯನ್ನು ಕೇಳಿ. ದೇವರ ಆಶೀರ್ವಾದ ನಿಮ್ಮ ಮೇಲಿದ್ದರೆ ನೀವು ಎಲ್ಲಾ ರೀತಿಯ ಸಮಸ್ಯೆಗಳಿಂದ ಹೊರ ಬರೋದಕ್ಕೆ ಸಾಧ್ಯವಾಗುತ್ತದೆ.



Click it and Unblock the Notifications
