ವೈದ್ಯರ ದಿನ: 9ನೇ ವಯಸ್ಸಿನಲ್ಲಿ ವಿವಾಹವಾದರೂ ಭಾರತದ ಮೊದಲ ಮಹಿಳಾ ವೈದ್ಯೆಳಾಗಿ ಸಾಧನೆ ಮಾಡಿದ ಆನಂದಿಬಾಯಿ

ಜುಲೈ 1 ಈ ದಿನವನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುವುದು. ಸಮಾಜದಲ್ಲಿ ವೈದ್ಯರ ಪ್ರಾಮುಖ್ಯತ್ತೆ, ಅವರ ಕರ್ತವ್ಯ, ಅವರ ಅಗ್ಯತತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ರೋಗಿಗಳ ಸೇವೆ ಮಾಡುವ ವೈದ್ಯರನ್ನು ಗೌರವವಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುವುದು.

ಈ ದಿನದ ಇತಿಹಾಸದ ಬಗ್ಗೆ ನೋಡುವುದಾದರೆ ಭಾರತದ ಮೊಟ್ಟ ಮೊದಲ ವೈದ್ಯೆ ಡಾ. ಆನಂದಿ ಬಾಯಿ ಜೋಷಿಯವರ ಸ್ಮರಾಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.

ಡಾ. ಆನಂದಿಬಾಯಿ ಜೋಷಿ ಅವರ ಸಾಧನೆ ಕತೆ ಸಾಧಿಸಬೇಕೆನ್ನುವವರಿಗೆ ಒಂದು ಸ್ಪೂರ್ತಿಯಾಗಿದೆ. ಆನಂದಿಬಾಯಿ ಜೋಷಿ ಅವರನ್ನು ಆನಂದಿಬಾಯಿ ಗೋಪಾಲ್‌ರಾವ್‌ ಜೋಷಿ ಎಂದು ಕೂಡ ಕರೆಯಲಾಗುವುದು. ಅವರ ಮೂಲ ಹೆಸರು ಯಮುನಾ... ಪತಿ ಗೋಪಾಲ್‌ರಾವ್‌ ಜೋಷಿ ಅವರಿಗೆ ಆನಂದಿ ಎಂದು ಕರೆದರು.

9ನೇ ವಯಸ್ಸಿನಲ್ಲಿ 30 ವರ್ಷ ವ್ಯಕ್ತಿ ಜೊತೆ ಬಾಲ್ಯ ವಿವಾಹ

9ನೇ ವಯಸ್ಸಿನಲ್ಲಿ 30 ವರ್ಷ ವ್ಯಕ್ತಿ ಜೊತೆ ಬಾಲ್ಯ ವಿವಾಹ

ಮಾರ್ಚ್‌ 31,1865ರಲ್ಲಿ ಮಹಾರಾಷ್ಟ್ರದಲ್ಲಿ ಅಂದ್ರೆ ಆಗಿನ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಜನಿಸಿದರು. ಅವರದ್ದು ಬಾಲ್ಯ ವಿವಾಹ, ಒಂಭತ್ತನೇ ವಯಸ್ಸಿನಲ್ಲಿ ಗೋಪಾಲ್‌ರಾವ್‌ ಜೋಷಿ ಅವರನ್ನು ವಿವಾಹವಾದರು, ಆಗ ಜೋಷಿಯವರಿಗೆ ಮೊದಲ ವಿವಾಹವಾಗಿ ವಿಧುರರಾಗಿದ್ದರು. ಯಮುನಾರವರ ಊರಿನಲ್ಲಿಯೇ ಪೋಸ್ಟ್‌ ಆಫೀಸ್‌ನಲ್ಲಿ ಗುಮಸ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರಿಬ್ಬರ ನಡುವೆ ವಯಸ್ಸಿನ ಅಂತರ ತುಂಬಾ ಇದ್ದರೂ ಗೋಪಾಲ್‌ ರಾವ್‌ ಪತ್ನಿಯ ಬೆಳವಣಿಗೆಯ ಬೆನ್ನಲುಬು ಆದರು.

Photo courtesy

ಪತ್ನಿಗೆ ಬೆಂಬಲವಾಗಿ ನಿಂತ ಪತಿ

ಪತ್ನಿಗೆ ಬೆಂಬಲವಾಗಿ ನಿಂತ ಪತಿ

ಆ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಸಾಧಾರಣ ಶಿಕ್ಷಣವೇ ಕನಸ್ಸಿನ ಮಾತಾಗಿತ್ತು, ಅದರಲ್ಲೂ ವೈದ್ಯ ಶಿಕ್ಷಣ, ಅದರಲ್ಲೂ ವಿದೇಶಕ್ಕೆ ಕಲಿಯುವ ಮಾತು ಊಹುಂ... ಹೆಣ್ಣು ಮಕ್ಕಳು ಕನಸು ಕಾಣಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಅಂಥ ಕಾಲ ಘಟ್ಟದಲ್ಲಿ ತಮ್ಮ ಪತ್ನಿಗೆ ಅಷ್ಟು ದೊಡ್ಡ ಪದವಿ ಕೊಡಿಸಲು ಛಲ ತೊಟ್ಟವರು ಗೋಪಾಲ್‌ ರಾವ್.

ಎಲ್ಲಾ ಸಾಧಕರ ಸಾಧನೆಯ ಹಿಂದೆ ಒಂದು ನೋವಿನ ಕತೆ ಇರುತ್ತದೆ, ಅದರಂತೆ ಆನಂದಿಬಾಯಿಯವರ ಜೀವನದಲ್ಲೂ ಅಂಥ ಒಂದು ನೋವೇ ಅವರನ್ನು ವೈದ್ಯೆರನ್ನಾಗಿ ಮಾಡಿತು.

Photo courtesy

ಮೊದಲ ಮಗು ಅನಾರೋಗ್ಯದಿಂದ ಮರಣ: ವೈದ್ಯಳಾಗುವ ನಿರ್ಧಾರ

ಮೊದಲ ಮಗು ಅನಾರೋಗ್ಯದಿಂದ ಮರಣ: ವೈದ್ಯಳಾಗುವ ನಿರ್ಧಾರ

ಆನಂದಿಬಾಯಿ ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಚೊಚ್ಚಲ ಮಗುವಿಗೆ ಜನ್ಮ ನೀಡುತ್ತಾರೆ. ಆದರೆ ಮಗುವನ್ನು ಮುದ್ದಾಡುವ ಕನಸು ಕಮರಿ ಹೋಯಿತು. ಸರಿಯಾದ ವೈದ್ಯಕೀಯ ಸೌಲಭ್ಯವಿಲ್ಲದ ಕಾರಣ ಅವರ ಮಗು ಸರಿಯಾದ ವೈದ್ಯಕೋಯ ಸೌಲಭ್ಯವಿಲ್ಲದ ಕಾರಣ ಮರಣವನ್ನಪ್ಪಿತು. ಆಗ ಅವರಿಗೆ ಆರೋಗ್ಯ ಸೇವೆಗಾಗಿ ಏನನ್ನಾದರೂ ಮಾಡಬೇಕೆನಿಸಿತು. ತಾನು ವೈದ್ಯೆಳಾಗಬೇಕೆಂದು ಪತಿ ಬಳಿ ಹೇಳಿದರು, ಅವರ ಆಸೆಗೆ ಪತಿಯ ಸಂಪೂರ್ಣ ಬೆಂಬಲ ಸಿಕ್ಕಿತು.

ಗೋಪಾಲ್‌ ರಾವ್‌ ಜೋಷಿಯವರು ಅಮೆರಿಕನ್ ಮಿಷನರಿಗೆ ಆನಂದಿಯವರ ವಿದ್ಯಾಭ್ಯಾಸಕ್ಕೆ ಕೋರಿ ಪತ್ರ ಬರೆದರು. ತಮಗೂ ಅಲ್ಲೇನದರೂ ಕೆಲಸ ಸಿಗುತ್ತಾ ಅಂತ ನೋಡಿದರು, ಆಗ ಪತ್ನಿಗೆ ಬೆಂಬಲವಾಗಿ ಜೊತೆಯಲ್ಲೇ ಇರಬಹುದು ಎಂದು ಬಯಸಿದರು. ಆದರೆ ಅವರಿಗೆ ಪಶ್ಚಿಮ ಬಂಗಾಳಕ್ಕೆ ವರ್ಗಾವಣೆ ಆದ ಆನಂದಿಬಾಯಿಯವರನ್ನು ಮಾತ್ರ ವಿದೇಶಕ್ಕೆ ಕಳುಹಿಸಬೇಕಾಗಿ ಬಂತು. ಪತ್ನಿಗೆ ಧೈರ್ಯ ತುಂಬಿ, ಭಾರತದಲ್ಲಿರುವ ಹೆಣ್ಣು ಮಕ್ಕಳಿಗೆ ನೀನು ಮಾದರಿಯಾಗಬೇಕು ಎಂದು ಹೇಳಿ ಪತ್ನಿಯನ್ನು ವಿದ್ಯಾಭ್ಯಾಸಕ್ಕೆ ಕಳುಹಿಸಿದರು.

ಕಲ್ಕತ್ತಾದಿಂದ ನೂಯಾರ್ಕ್‌ಗೆ ಹಡಗಿನ ಮೂಲಕ ಪ್ರಯಾಣಿಸಿದರು, ಅಮೆರಿಕದ ವುಮೆನ್ಸ್ ಮೆಡಿಕಲ್ ಕಾಲೇಜ್ ಆಫ್‌ ಪೆನ್ಸಿಲ್ವೇನಿಯಾದಲ್ಲಿ ಅವರಿಗೆ ಸೀಟ್ ಸಿಕ್ಕಿತ್ತು. ತಮ್ಮ 19ನೇ ವಯಸ್ಸಿನಲ್ಲಿ ವೈದ್ಯಕೀಯ ಶಿಕ್ಷಣ ಪ್ರಾರಂಭಿಸಿದರು. ಭಾರತದಲ್ಲಿ ಇರುವಾಗಲೇ ಅವರಿಗೆ ನೆಗಡಿ ಸಮಸ್ಯೆ ಇತ್ತು. ಅಮೆರಿಕದಲ್ಲಿ ಅಲ್ಲಿಯ ತಂಪಾದ ವಾತಾವರಣ ಹಾಗೂ ಅಪರಿಚಿತ ಆಹಾರಶೈಲಿಯಿಂದಾಗಿ ಇವರ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ಆದರೂ ಅವರು ತಮ್ಮ ವೈದ್ಯಕೀಯ ಶಿಕ್ಷಣ ಮುಗಿಸಿ ಭಾರತಕ್ಕೆ ಮರಳಿದರು.

ಭಾರತದ ಹೆಣ್ಣು ಮಕ್ಕಳಿಗೆ ದಾರಿ ದೀಪವಾದ ಆನಂದಿಬಾಯಿ

ಭಾರತದ ಹೆಣ್ಣು ಮಕ್ಕಳಿಗೆ ದಾರಿ ದೀಪವಾದ ಆನಂದಿಬಾಯಿ

ಅವರಿಗೆ ಭಾರತದಲ್ಲಿ ಭವ್ಯ ಸ್ವಾಗತ ಕೋರಲಾಯಿತು, ಅವರನ್ನು ಆಲ್ಬರ್ಟ್ ಎಡ್ವರ್ಡ್ ಹಾಸ್ಪಟಲ್‌ನಲ್ಲಿ ನೇಮಕ ಮಾಡಲಾಯಿತು.

ಫೆಬ್ರವರಿ 26, 1887ರಲ್ಲಿ ತಮ್ಮ 22ನೇ ಹುಟ್ಟುಹಬ್ಬಕ್ಕೆ ಒಂದು ತಿಂಗಳು ಇರುವಾಗ ಟಿಬಿ ಕಾಯಿಲೆಯಿಂದಾಗಿ ಇಹಲೋಕ ತ್ಯಜಿಸಿದರು. ಅವರ ಮರಣ ಭಾರತಕ್ಕೆ ಆದ ದೊಡ್ಡ ನಷ್ಟವೇ ಸರಿ. ಅವರ ಸಾವು ಹಾಗೂ ಸಾಧನೆ ಬಗ್ಗೆ ದೇಶ-ವಿದೇಶದ ಪತ್ರಿಕೆಗಳಲ್ಲಿ ಮುಖಪುಟಗಳಲ್ಲಿಪ್ರಕಟವಾಯಿತು. ಅವರಿಗೆ ಗೌರವರ್ಥವಾಗಿ ನೂಯಾರ್ಕ್‌ನ ಪೌಕ್‌ಕೀಪ್ಸಿ ಸಮಾಧಿಯಲ್ಲಿ ಅವರ ಚಿತಾಬಸ್ಮ ಇಡಲಾಯಿತು.

ಆಕೆ ಮಾಡಿದ ಸಾಧನೆ ಭಾರತದ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಯಿತು, ಆನಂದಿಬಾಯಿಯವರ ಸ್ಮರಣಾರ್ಥವಾಗಿ ಆನಂದಿ ಜೋಪಾಲ್‌ ಜೋಷಿ ಹೆಸರಿನಲ್ಲಿ ಮಹಾರಾಷ್ಟ್ರದಲ್ಲಿ ಫೆಲೋಶಿಪ್ ಕೂಡ ನೀಡಲಾಗುತ್ತಿದೆ.

ಸಮಾಜದ ಕಟ್ಟಳೆ ಮೀರಿ, ಅನಾರೋಗ್ಯವನ್ನೂ ಲೆಕ್ಕಿಸದೆ ಕಷ್ಟಪಟ್ಟು ಓದಿ ಭಾರತದ ಮೊದಲ ಮಹಿಳಾ ವೈದ್ಯೆ ಎನಿಸಿಕೊಂಡ ಆನಂದಿ ಜೋಪಾಲ್‌ ಜೋಷಿಯವರಿಗೆ ಭಾರತದಲ್ಲಿ ಮಹಿಳಾ ವೈದ್ಯಕೀಯ ಕಾಲೇಜು ಕಟ್ಟುವ ಕನಸ್ಸಿತ್ತು, ಆದರೆ ಅವರು ಅವರ ಕನಸ್ಸು ನನಸಾಗುವ ಮುನ್ನ ಕಣ್ಮುಚ್ಚಿದರು. ಇದೀಗ ಭಾರತದಲ್ಲಿ ಹಲವಾರು ಉತ್ತಮ ವೈದ್ಯಕೀಯ ಕಾಲೇಜುಗಳಿವೆ. ಅನೇಕ ಹೆಣ್ಣು ಮಕ್ಕಳು ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ, ಮಾಡುತ್ತಿದ್ದಾರೆ ಈ ಬೆಳವಣಿಗೆಗೆ ಅಡಿಪಾಯ ಹಾಕಿದ ಆನಂದಿಬಾಯಿಗೆ ನಮ್ಮದೊಂದು ಸಲಾಂ.

English summary

National Doctor's Day Special : The Inspiring Story Of India's First Female Doctor Anandi Gopal Joshi in Kannada

National Doctor's Day Special : The Inspiring Story Of India's First Female Doctor Anandi Gopal Joshi in Kannada,
X
Desktop Bottom Promotion