Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪ್ರತಿನಿತ್ಯ ಈರುಳ್ಳಿ ಸೇವಿಸ್ತಿದ್ದೀರಾ? ಶ್ರೀ ಕೃಷ್ಣ, ವಿಷ್ಣು ಹಾಗೂ ಈರುಳ್ಳಿಗಿರೋ ಸಂಬಂಧದ ಬಗ್ಗೆ ನಿಮಗೊತ್ತಾ?
ಈರುಳ್ಳಿ ಅಡುಗೆಗೆ ಬೇಕಾದ ಅತಿ ಮುಖ್ಯ ಸಾಮಾಗ್ರಿಗಳಲ್ಲಿ ಒಂದು. ಈರುಳ್ಳಿ ಇಲ್ಲದೇ ಅಡುಗೆ ಪೂರ್ತಿಯಾಗೋದೇ ಇಲ್ಲ. ಅಡುಗೆಗೆ ಈರುಳ್ಳಿ ಹಾಕಿದ್ರೆ ಅದರ ರುಚಿಯೇ ಬದಲಾಗಿ ಬಿಡುತ್ತದೆ. ಅದ್ರಲ್ಲೂ ಮಾಂಸಹಾರಿ ಖಾದ್ಯಗಳನ್ನು ತಯಾರಿಸುವಾಗಂತೂ ಈರುಳ್ಳಿ ಬೇಕೇ ಬೇಕು. ಇಂತಹ ಈರುಳ್ಳಿ ಹಾಗೂ ಶ್ರೀ ಕೃಷ್ಣನಿಗೆ ಅವಿನಾಭಾವ ಸಂಬಂಧ ಇತ್ತು ಅಂದ್ರೆ ನೀವು ನಂಬ್ತೀರಾ? ನಂಬಲು ಅಸಾಧ್ಯವಾದ್ರು ಇದು ಸತ್ಯ. ಈ ಈರುಳ್ಳಿ ಕೇವಲ ಕೃಷ್ಣನ ಜೊತೆಗೆ ಮಾತ್ರವಲ್ಲದೇ ಭಗವಾನ್ ವಿಷ್ಣುವಿಗೂ ಸಂಬಂಧಿಸಿದ್ದಾಗಿದೆ. ಅಷ್ಟಕ್ಕು ಏನಿದು ಶ್ರೀ ಕೃಷ್ಣ, ವಿಷ್ಣು ಹಾಗೂ ಈರುಳ್ಳಿ ಕಥೆ ಅನ್ನೋದನ್ನ ತಿಳಿದುಕೊಳ್ಳೋಣ.
ವೇದಗಳ ಕಾಲದಲ್ಲಿ ಸಂಸ್ಕೃತ ಭಾಷೆಯನ್ನೇ ಆಡು ಭಾಷೆಯನ್ನಾಗಿ ಬಳಕೆ ಮಾಡಲಾಗ್ತಿತ್ತು. ಆದ್ರೀಗ ಬ್ರಾಹ್ಮಣರ ಮಂತ್ರಗಳಲ್ಲಿ ಮಾತ್ರ ಸಂಸ್ಕೃತ ಕೇಳಲು ಸಿಗೋದು. ನಿಮಗೊತ್ತಾ ಈರುಳ್ಳಿಯನ್ನು ಸಂಸ್ಕೃತ ಭಾಷೆಯಲ್ಲಿ ಕೃಷ್ಣವಾಲ್ ಎಂದು ಕರೆಯಲಾಗುತ್ತಿತ್ತಂತೆ. ಆದ್ರೆ ಇತ್ತೀಚಿಗೆ ಈ ಪದವನ್ನು ಬಳಕೆ ಮಾಡಲಾಗ್ತಿಲ್ಲ. ಹಾಗಾದ್ರೆ ಈರುಳ್ಳಿಯ ಹಿಂದಿರುವ ಈ ನಾಲ್ಕು ಸ್ವಾರಸ್ಯಕರ ಕಥೆಗಳ ಬಗ್ಗೆ ತಿಳಿದುಕೊಳ್ಳೋಣ.

1. ಭಾರತದ ಯಾವ ಭಾಗಗಳಲ್ಲಿ ಈ ಹೆಸರು ಈಗಲೂ ಪ್ರಚಲಿತದಲ್ಲಿದೆ?
ಈರುಳ್ಳಿಗೆ ಇಂಗ್ಲಿಷ್‌ನಲ್ಲಿ ಆನಿಯನ್ ಎಂದು ಕರೆಯುತ್ತಾರೆ. ಇನ್ನೂ ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಆಂಧ್ರ ಸೇರಿದಂತೆ ಅನೇಕ ಕಡೆ ಆಯಾ ಭಾಗದ ಪ್ರಾದೇಶಿಕ ಭಾಷೆಯಿಂದಲೇ ಈರುಳ್ಳಿಯನ್ನು ಸಂಭೋದಿಸಲಾಗುತ್ತದೆ. ಆದ್ರೆ ತಮಿಳುನಾಡು ಹಾಗೂ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಈಗಲೂ ಕೂಡ ಈರುಳ್ಳಿಯನ್ನು ಕೃಷ್ಣವಾಲ್ ಎಂತಲೇ ಕರೆಯಲಾಗುತ್ತಂತೆ.
2. ಶಂಕ, ಚಕ್ರದ ಈರುಳ್ಳಿ
ಪುರಾಣಗಳಿಂದಾನೂ ಶಂಕ ಹಾಗೂ ಚಕ್ರ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಮಹಾಭಾರತ ಯುದ್ಧದ ಸಂದರ್ಭದಲ್ಲಿ ಶಂಕ ಹಾಗೂ ಚಕ್ರದ ಪಾತ್ರ ಎಷ್ಟು ಪ್ರಾಮುಖ್ಯತೆ ಪಡೆದುಕೊಂಡಿತ್ತು ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಈರುಳ್ಳಿಯನ್ನು ಶಂಕ ಹಾಗೂ ಚಕ್ರಕ್ಕೆ ಹೋಲಿಕೆ ಮಾಡಲಾಗುತ್ತದೆ. ಯಾಕಂದ್ರೆ ಈರುಳ್ಳಿಯನ್ನು ಉದ್ದವಾಗಿ ತುಂಡರಿಸಿದರೆ ಶಂಖದ ರೂಪಕ್ಕೆ ಅಡ್ಡವಾಗಿ ತುಂಡರಿಸಿದರೆ ಚಕ್ರದ ರೂಪಕ್ಕೆ ಬದಲಾಗುತ್ತದೆ.
3. ಈರುಳ್ಳಿಯನ್ನು ಕೃಷ್ಣವಾಲ್ ಎಂದು ಕರೆಯೋದ್ಯಾಕೆ?
ಶ್ರೀ ಕೃಷ್ಣನ ಆಯುದ್ಧಗಳ ಬಗ್ಗೆ ನಿಮಗೆ ಗೊತ್ತಿರಬಹುದು. ಆತನ ಕೈಯಲ್ಲಿ ನೀವು ಶಂಕ ಹಾಗೂ ಚಕ್ರಗಳನ್ನು ಖಂಡಿತ ನೋಡಿರ್ತೀರಿ. ಹರಿ ವಿಷ್ಣುವಿನ ಎಂಟು ಅವತಾರಗಳಲ್ಲಿ ಈ ಅವತಾರ ಕೂಡ ಒಂದು ಎಂದು ಹೇಳಬಹುದು. ಭಗನಾವ್ ಶ್ರೀ ಕೃಷ್ಣನು ತನ್ನ ಕೈಯಲ್ಲಿ ಶಂಕ ಹಾಗೂ ಚಕ್ರವನ್ನು ಹಿಡಿದಿರೋದಕ್ಕಾಗಿ ಕೃಷ್ಣವಾಲ್ ಎಂಬ ಹೆಸರು ಬಂದಿದ್ಯಂತೆ.
4. ಈರುಳ್ಳಿ ವಿಷ್ಣುವನ್ನು ಪ್ರತಿನಿಧಿಸುತ್ತದೆ
ಈರುಳ್ಳಿಯನ್ನು ಕೃಷ್ಣವಾಲ್ ಎಂದು ಕರೆಯೋದಕ್ಕೆ ಮತ್ತೊಂದು ಕಾರಣವಿದೆ. ನೀವೇನಾದರೂ ಎಲೆಯನ್ನು ಹೊಂದಿರುವ ಈರುಳ್ಳಿಯನ್ನು ಮೇಲೆ ಕೆಳಗಾಗಿ ಹಿಡಿದುಕೊಂಡರೆ ಅದು ಪದ್ಮದ ರೂಪದಲ್ಲಿ ಕಾಣುತ್ತದೆ. ಇಲ್ಲಿ ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಪದ್ಮ ಎಂದರೆ ಕಮಲ. ಗದಾ ಹಾಗೂ ಪದ್ಮವು ವಿಷ್ಣುವಿಗೆ ಸಂಬಂಧ ಪಟ್ಟಿದಾಗಿದೆ.
ಈ ವಿಚಾರದ ಬಗ್ಗೆ ಅನೇಕ ಜನರಿಗೆ ಗೊತ್ತಿಲ್ಲ. ಈರುಳ್ಳಿಯೂ ಕೃಷ್ಣ ಹಾಗೂ ಭಗವಾನ್ ವಿಷ್ಣುವಿನ ಜೊತೆಗೆ ಪರೋಕ್ಷ ಸಂಬಂಧವನ್ನು ಹೊಂದಿದೆ. ಇದೇ ಕಾರಣಕ್ಕೆ ಈರುಳ್ಳಿಯನ್ನು ಕೃಷ್ಣವಾಲ್ ಎಂದು ಕರೆಯೋದು.



Click it and Unblock the Notifications



