Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೃಷ್ಣ ಜನ್ಮಾಷ್ಟಮಿಯಂದು ಪೂಜೆ ಸಲ್ಲಿಸುವಾಗ ಈ ತಪ್ಪುಗಳು ಆಗದಿರಲಿ!
ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿಯ ದಿನದಂದು ದೇಶಾದ್ಯಂತ ಜನರು ಉಪವಾಸವನ್ನು ಕೈಗೊಳ್ಳುತ್ತಾರೆ. ಈ ದಿನದಂದು ಶ್ರೀಕೃಷ್ಣನನ್ನು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ.

ಈ ಬಾರಿಯ ಜನ್ಮಾಷ್ಟಮಿಯ ವ್ರತವನ್ನು ಸೆ.6ರಂದು ಆಚರಿಸಲಾಗುತ್ತದೆ. ಆದರೆ ಶ್ರೀಕೃಷ್ಣನನ್ನು ಪೂಜಿಸುವಾಗ ಕೆಲವೊಂದು ತಪ್ಪುಗಳಾಗದಂತೆ ನೋಡಿಕೊಳ್ಳೋದು ತುಂಬಾನೇ ಮುಖ್ಯವಾಗುತ್ತದೆ. ಅಷ್ಟಕ್ಕೂ ಜನ್ಮಾಷ್ಟಮಿ ಪೂಜೆಯ ಸಮಯದಲ್ಲಿ ಯಾವೆಲ್ಲಾ ವಿಚಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ ಅನ್ನೋದನ್ನು ತಿಳಿದುಕೊಳ್ಳೋಣ.
ಜನ್ಮಾಷ್ಟಮಿಯಂದು ಶುಭ್ರವಾದ ಬಟ್ಟೆಗಳನ್ನು ಧರಿಸಿ!
ಕೃಷ್ಣ ಜನ್ಮಾಷ್ಟಮಿಯು ಹಿಂದೂಗಳಿಗೆ ವಿಶೇಷವಾದ ಹಬ್ಬ ಆಗಿರೋದ್ರಿಂದ ಕೆಲವೊಂದು ಪದ್ಧತಿಗಳನ್ನು ತಪ್ಪದೇ ಪಾಲಿಸುವುದು ತುಂಬಾನೇ ಮುಖ್ಯವಾಗುತ್ತದೆ. ಜನ್ಮಾಷ್ಟಮಿಯಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಶುಭ್ರವಾದ ಬಟ್ಟೆಗಳನ್ನು ಧರಿಸಿ. ಇದಾದ ಬಳಿಕ ನಿಮ್ಮ ದೇವರ ಮನೆಯನ್ನು ಸರಿಯಾಗಿ ಸ್ವಚ್ಛಗೊಳಿಸಿ. ಮತ್ತು ಹೂವಿನ ಮಾಲೆಗಳಿಂದ ಅಲಂಕರಿಸಿ.
ಶ್ರೀಕೃಷ್ಣನನ್ನು ಹೂವಿನಿಂದ ಅಲಂಕರಿಸಿ!
ತುಳಸಿ ಎಂದರೆ ವಿಷ್ಣುವಿಗೆ ಬಹಳ ಇಷ್ಟ. ಆದ್ದರಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಅನ್ನವನ್ನು ಅರ್ಪಿಸುವಾಗ ಅದರಲ್ಲಿ ತುಳಸಿ ಎಲೆಗಳನ್ನು ಖಂಡಿತವಾಗಿ ಸೇರಿಸುವುದನ್ನು ಮರೆಯದಿರಿ.
ಪಂಚಾಮೃತದೊಂದಿಗೆ ಶ್ರೀಕೃಷ್ಣನ ಅಭಿಷೇಕ ಮಾಡಿ!
ಶ್ರೀಕೃಷ್ಣನಿಗೆ ಪಂಚಾಮೃತದಿಂದ ಅಭಿಷೇಕ ಮಾಡಬೇಕು. ಕೃಷ್ಣ ಜನ್ಮಾಷ್ಟಮಿಯ ದಿನದಂದು ಶ್ರೀ ಕೃಷ್ಣನಿಗೆ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯನ್ನು ಸೇರಿಸಿ ಪಂಚಾಮೃತದಿಂದ ಅಭಿಷೇಕ ಮಾಡಬೇಕು. ಶ್ರೀಕೃಷ್ಣನ ಅಭಿಷೇಕಕ್ಕೆ ಹಸುವಿನ ತುಪ್ಪವನ್ನು ಬಳಸುವುದು ತುಂಬಾನೇ ಮುಖ್ಯ. ಶ್ರೀ ಕೃಷ್ಣ ಗೋಪಾಲಕನಾಗಿರೋದ್ರಿಂದ ಅಗತ್ಯವಾಗಿ ಗೋವಿನ ತುಪ್ಪವನ್ನೇ ಬಳಸಿರಿ.
ಶ್ರೀಕೃಷ್ಣನಿಗೆ ಹಳದಿ ವಸ್ತ್ರವನ್ನು ಧರಿಸಿರಿ!
ಪೀತಾಂಬರಿ ಎಂಬುದು ಶ್ರೀಕೃಷ್ಣನ ಹೆಸರಾಗಿದೆ. ಆದ್ದರಿಂದ ಈ ದಿನ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಮತ್ತು ಹಳದಿ ಬಣ್ಣದ ಹೂವಿನಿಂದ ಅಲಂಕರಿಸಬೇಕು. ಅಷ್ಟೇ ಅಲ್ಲದೇ ಶ್ರೀ ಕೃಷ್ಣನ ತಲೆಯ ಮೇಲೆ ನವಿಲಿನ ಕಿರೀಟವನ್ನು ಹಾಕೋದನ್ನು ಮರೆಯಬೇಡಿ.
ಮನೆಯಲ್ಲಿ ತಯಾರಿಸಿದ ಪ್ರಸಾದವನ್ನು ಮಾತ್ರ ನೀಡಿ!
ಶ್ರೀಕೃಷ್ಣನಿಗೆ ಮನೆಯಲ್ಲಿ ಮಾಡಿದ ಪ್ರಸಾದವನ್ನು ಮಾತ್ರ ಅರ್ಪಿಸಿ. ಮಾರುಕಟ್ಟೆಯಿಂದ, ಹೊರಗಿನಿಂದ ತಂದ ಸಿಹಿತಿಂಡಿಗಳನ್ನು ತಂದು ಅರ್ಪಿಸಬೇಡಿ. ಒಂದು ವೇಳೆ ಹೊರಗಿನಿಂದ ತಿಂಡಿ ತಂದರೂ ಕೂಡ ನೈವೇದ್ಯ ಮಾತ್ರ ನೀವು ಕೈಯಾರೆ ತಯಾರಿಸಿದರೆ ಮಾತ್ರ ಉತ್ತಮ.
ಶ್ರೀಕೃಷ್ಣನ ಮಂತ್ರವನ್ನು ಪಠಿಸಿ
ಭಗವಾನ್ ಶ್ರೀ ಕೃಷ್ಣನನ್ನು ಪೂಜಿಸುವಾಗ ನೀವು ಶ್ರೀ ಕೃಷ್ಣನ ಮಂತ್ರವಾದ 'ಕ್ರಿಂ ಕೃಷ್ಣಾಯ ನಮಃ' ವನ್ನು ಜಪಿಸುತ್ತಿರಬೇಕು ಮತ್ತು ನೀವು ರಾಧಾ ನಾಮವನ್ನು ಕೂಡ ಜಪಿಸಬಹುದು.



Click it and Unblock the Notifications
