Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೇವಸ್ಥಾನದಲ್ಲಿಟ್ಟಿದ್ದ ಚಪ್ಪಲಿ ಕಳುವಾದ್ರೆ ಶುಭ ಸೂಚನೆಯೇ?
ಕಳ್ಳತನ ಅನ್ನೋದು ಎಷ್ಟರ ಮಟ್ಟಿಗೆ ವ್ಯಾಪಿಸಿಕೊಂಡಿದೆ ಅಂದರೆ ದೇವಾಸ್ಥಾನದಲ್ಲಿಟ್ಟ ಚಪ್ಪಲಿಯನ್ನು ಕೂಡ ಕಳ್ಳರು ಬಿಡೋದಿಲ್ಲ. ಹೀಗಾಗಿ ದೇವಾಲಯದ ಹೊರಗಡೆ ಪ್ರತ್ಯೇಕ ಚಪ್ಪಲಿ ಸ್ಟ್ಯಾಂಡ್‌ಗಳನ್ನು ನಾವು ಕಾಣಬಹುದು. ಇಲ್ಲಿ ನಾವು ಹಣ ಪಾವತಿಸಿದರೆ ಸಾಕು ಅವರೇ ನಮ್ಮ ಪಾದರಕ್ಷೆಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತಾರೆ.
ಅನೇಕ ಬಾರಿ ನಾವು ದೇವಸ್ಥಾನದ ಹೊರಗಿಟ್ಟಿದ್ದ ಚಪ್ಪಲಿ ಅಲ್ಲಿಂದ ಹೊರ ಬರುವಷ್ಟು ಹೊತ್ತಿಗೆ ಮಂಗ ಮಾಯವಾಗಿರುತ್ತದೆ. ಆ ಕ್ಷಣ ನಾವು ಎಷ್ಟು ನೊಂದುಕೊಳ್ಳುತ್ತೇವೆ ಎಂದರೆ ಭಹುಶಃ ಚಿನ್ನ ಕಳೆದುಕೊಂಡರೂ ಕೂಡ ಅಷ್ಟು ವ್ಯಥೆ ಪಡುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇನ್ನೂರು ರೂಪಾಯಿ ಕೊಟ್ಟ ಚಪ್ಪಲಿ ಕಳೆದುಕೊಂಡಾಗ ಆಗುವ ನೋವು ಇದ್ಯಲ್ಲ ಅದನ್ನು ಹೇಳಲು ಅಸಾಧ್ಯ.

ಆದ್ರೆ ಇನ್ನು ಮುಂದೆ ನೀವು ನಿಮ್ಮ ಚಪ್ಪಲಿ ದೇವಸ್ಥಾನದಲ್ಲಿ ಕಳವಾದ್ರೆ ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಯಾಕಂದ್ರೆ ದೇವಸ್ಥಾನದಲ್ಲಿ ಚಪ್ಪಲಿ ಕಳುವಾದ್ರೆ ತುಂಬಾನೇ ಒಳ್ಳೆಯದಂತೆ. ಹಾಗಾದ್ರೆ ದೇವಸ್ಥಾನದಲ್ಲಿ ಚಪ್ಪಲಿ ಕಳುವಾಗೋದು ಒಳ್ಳೆಯದಾ? ಜ್ಯೋತಿಷ್ಯ ಶಾಸ್ತ್ರ ಈ ಬಗ್ಗೆ ಏನು ಹೇಳುತ್ತವೆ ಅನ್ನೋದನ್ನ ತಿಳಿದುಕೊಳ್ಳೋಣ.
ದೇವಸ್ಥಾನದಲ್ಲಿ ಚಪ್ಪಲಿ ಕಳುವಾದ್ರೆ ಶುಭ ಸೂಚನೆ !
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವಾಸ್ಥಾನದಲ್ಲಿಟ್ಟಿದ್ದ ಚಪ್ಪಲಿ ಕಳುವಾದ್ರೆ ಶುಭ ಸೂಚನೆಯಂತೆ. ಅದ್ರಲ್ಲೂ ಶನಿವಾರದ ದಿನ ಚಪ್ಪಲಿ ಕಳುವಾದ್ರೆ ತುಂಬಾನೇ ಒಳ್ಳೆಯದು ಅಂತ ಹೇಳಲಾಗುತ್ತದೆ. ಇದರ ಜೊತೆಗೆ ನಿಮ್ಮ ಕಷ್ಟಗಳು ಎಲ್ಲಾ ಪರಿಹಾರವಾಗಲಿದೆ. ಜೊತೆಗೆ ನೀವು ಬಡತನದಿಂದ ಮುಕ್ತಿ ಹೊಂದುತ್ತೀರಿ. ಹೀಗಾಗಿ ದೇವಸ್ಥಾನದಲ್ಲಿಟ್ಟಿದ್ದ ಚಪ್ಪಲಿ ಕಳೆದು ಹೋದ್ರೆ ಬೇಸರ ಪಟ್ಟುಕೊಳ್ಳುವ ಬದಲಾಗಿ ಖುಷಿ ಪಡಿ.
ಶನಿ ದೋಷ ಪರಿಹಾರವಾಗುತ್ತಾ?
ದೇವಸ್ಥಾನದಲ್ಲಿ ನಮ್ಮ ಚಪ್ಪಲಿ ಕಳೆದು ಹೋದ್ರೆ ಒಳ್ಳೆಯದೇ ಯಾಕಂದ್ರೆ ಅದು ನಮ್ಮ ಶನಿ ದೋಷವನ್ನು ಪರಿಹರಿಸುತ್ತಂತೆ. ನಂಬಲು ಅಸಾಧ್ಯವಾದ್ರು ಕೂಡ ಇದು ನಿಜ. ನಮಗೆ ಜೀವನದಲ್ಲಿ ಮೇಲಿಂದ ಮೇಲೆ ಸಮಸ್ಯೆಗಳು ಬರುತ್ತಿದ್ದರೆ ಆಗ ಶನಿದೋಷ ಇರಬಹುದು ಎಂದು ನಾವು ಅಂದುಕೊಳ್ಳುತ್ತೇವೆ. ಶನಿಯು ನಮ್ಮ ಪಾದದಲ್ಲಿ ವಾಸವಾಗಿರುತ್ತಾನೆ ಎಂದು ನಂಬಲಾಗಿದೆ. ಹಾಗೂ ಶನಿಯನ್ನು ಪಾದರಕ್ಷೆಯ ಅಂಶ ಎಂದು ಹೇಳಲಾಗುತ್ತದೆ.
ಚಪ್ಪಲಿ ದಾನ ಮಾಡೋದ್ರಿಂದ ಶನಿಯ ಆಶೀರ್ವಾದ ಪ್ರಾಪ್ತಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೋಡಿ ಚಪ್ಪಲಿಗಳನ್ನು ದಾನ ಮಾಡೋದ್ರಿಂದ ಶನಿಯ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಶನಿಗ್ರಹದಲ್ಲಿ ಅಶುಭ ಸಂಕೇತವಾದ ದಶ ಇರೋದ್ರಿಂದ ನಾವು ಏನೇ ಕೆಲಸ ಮಾಡಿದರೂ ಕೂಡ ಅದು ಯಶಸ್ವಿಯಾಗೋದಿಲ್ಲ. ಇಂತಹ ಸಮಯದಲ್ಲಿ ದೇವಾಸ್ಥಾನದಲ್ಲಿ ನಮ್ಮ ಚಪ್ಪಲಿ ಅಥವಾ ಶೂ ಕಳುವಾದ್ರೆ ಶುಭ ಸೂಚನೆ ಅಂತ ಹೇಳಲಾಗುತ್ತದೆ. ಆಗ ನಮ್ಮ ನಕ್ಷತ್ರದಲ್ಲಿದ್ದ ದೋಷ ಪರಿಹಾರವಾಗುತ್ತಂತೆ.
ನಮ್ಮ ದೇಹದ ಚರ್ಮ ಹಾಗೂ ಅದರ ಬಣ್ಣ ಶನಿಗೆ ಸಂಬಂಧಿಸಿದ್ದಾಗಿದೆ. ಇಂತಹ ಸಮಯದಲ್ಲಿ ಶನಿವಾರದ ದಿನ ಯಾರಾದರೂ ಚಪ್ಪಲಿ ಅಥವಾ ಶೂ ವನ್ನು ದೇವಸ್ಥಾನದ ಮುಂಭಾಗ ಬಿಟ್ಟು ಬಂದರೆ ಶನಿಯು ನಮ್ಮ ಸಂಕಷ್ಟಗಳನ್ನು ಪರಿಹರಿಸುತ್ತಾನೆ ಎಂಬ ನಂಬಿಕೆಯಿದೆ.
ಇನ್ನು ಮುಂದೆ ದೇವಸ್ಥಾನದಲ್ಲಿ ನಿಮ್ಮ ಚಪ್ಪಲಿ ಕಳುವಾದರೆ ಬೇಸರ ಪಟ್ಟುಕೊಳ್ಳುವುದರ ಬದಲು ಖುಷಿ ಪಡಿ. ಯಾಕಂದ್ರೆ ಚಪ್ಪಲಿಯ ಜೊತೆಗೆ ನಿಮ್ಮೆಲ್ಲಾ ಕಷ್ಟಗಳು ಪರಿಹಾರವಾಗುತ್ತದೆ.



Click it and Unblock the Notifications



