Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮೇ. 25ಕ್ಕೆ ಅಪರೂಪದ ಗುರು ಪುಷ್ಯಾ ಯೋಗ: ಶುಭ ಕಾರ್ಯಕ್ಕೆ ತುಂಬಾನೇ ಶ್ರೇಷ್ಠ, ಏಕೆ?
ಬಲು ಅಪರೂಪದ ಯೋಗ ಮೇ 25ರಂದು ಉಂಟಾಗಲಿದೆ. ಈ ಯೋಗವನ್ನು ಗುರು ಪುಷ್ಯ ಯೋಗ ಎಂದು ಕರೆಯಲಾಗುವುದು. ಗುರು ಪುಷ್ಯ ಯೋಗವನ್ನು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಇನ್ನು ಅಂಥ ಯೋಗ ಬರುವುದು ಡಿಸೆಂಬರ್‌ನಲ್ಲಿ. ಈ ದಿನ ಗುರು ಪುಷ್ಯ ಯೋಗ ಸೇರಿದಂತೆ 5 ಶುಭ ಯೋಗಗಳು ರೂಪುಗೊಳ್ಳುತ್ತಿವೆ.
ವೃದ್ಧಿ ಯೋಗ, ಸರ್ವಾರ್ಥ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ, ರವಿ ಯೋಗಗಳೂ ಅಂದು ರೂಪುಗೊಳ್ಳುತ್ತಿವೆ. ಆದ್ದರಿಂದ ಯಾವುದೇ ಶುಭಕಾರ್ಯ ಮಾಡಲು ಈ ಯೋಗ ತುಂಬಾನೇ ಫಲಪ್ರದವಾಗಿದೆ. ಆದರೆ ಮದುವೆಯನ್ನು ಮಾಡುವುದಿಲ್ಲ ಉಳಿದಂತೆ ಗೃಹ ಪ್ರವೇಶ, ಹೊಸ ಮನೆಗೆ ಹೋಗುವುದು (ಬಾಡಿಗೆಗೆ), ಹೊಸ ಬ್ಯುಸ್‌ನೆಸ್ ಪ್ರಾರಂಭಿಸಲು, ಆಸ್ತಿ, ಗಾಡಿ ಖರೀದಿಗೆ ಈ ದಿನ ತುಂಬಾನೇ ಚೆನ್ನಾಗಿದೆ.

ಈ ಯೋಗದ ಸಮಯದಲ್ಲಿ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವುದು. ಇದರಿಂದ ಒಳ್ಳೆಯ ಫಲ ಸಿಗುವುದು. ಇದರೊಂದಿಗೆ ವ್ಯಕ್ತಿಯು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾನೆ. ಪುಷ್ಯ ನಕ್ಷತ್ರವನ್ನು ನಕ್ಷತ್ರಪುಂಜಗಳಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಆದ್ದರಿಂದಲೇ ಪುಷ್ಯ ನಕ್ಷತ್ರಕ್ಕೆ ನಕ್ಷತ್ರಪುಂಜಗಳಲ್ಲಿ ರಾಜನ ಬಿರುದು ನೀಡಲಾಗಿದೆ. ಈ ನಕ್ಷತ್ರದಲ್ಲಿ ಪ್ರಾರಂಭವಾದ ಕೆಲಸಗಳು ಉತ್ತಮ ಫಲಿತಾಂಶವನ್ನು ನೀಡುವುದು. ಪುಷ್ಯ ನಕ್ಷತ್ರ ಶಾಶ್ವತವಾದ್ದರಿಂದ ಈ ಸಮಯದಲ್ಲಿ ಮಾಡುವ ಕೆಲಸಗಳಲ್ಲಿ ಯಾವುದೇ ಅಭದ್ರತೆ ಉಂಟಾಗುವುದು. ಗುರು ಪುಷ್ಯ ಯೋಗದ ಕುರಿತ ಮತ್ತಷ್ಟು ಮಾಹಿತಿ ನೋಡೋಣ ಬನ್ನಿ:
ಗುರು ಪುಷ್ಯ ಯೋಗ ಯಾವಾಗ ರೂಪುಗೊಳ್ಳುತ್ತದೆ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರುವಾರ ಪುಷ್ಯ ನಕ್ಷತ್ರ ಬಂದಾಗ ಈ ಅಪರೂಪದ ಗುರು ಪುಷ್ಯ ಯೋಗ ಉಂಟಾಗುತ್ತದೆ. ಗುರು ಪುಷ್ಯ ಯೋಗವನ್ನು ಗುರು ಪುಷ್ಯ ನಕ್ಷತ್ರ ಯೋಗ ಎಂದೂ ಕರೆಯುತ್ತಾರೆ. ಇದು ಅತ್ಯಂತ ಶುಭವಾದ ಯೋಗವಾಗಿದೆ. ವರ್ಷವಿಡೀ ನಿಮಗೆ ಶುಭ ಕಾರ್ಯಗಳಿಗೆ ಯಾವುದೇ ದಿನ ಸಿಗದಿದ್ದರೆ, ಗುರು ಪುಷ್ಯ ಯೋಗದ ದಿನದಂದು ನೀವು ಆ ಕೆಲಸವನ್ನು ಮಾಡಬಹುದು. ಈ ದಿನ ಮಾಡುವ ಕಾರ್ಯದಲ್ಲಿ ನೀವು ಶುಭವನ್ನು ಪಡೆಯಬಹುದು.
ಗುರು ಪುಷ್ಯ ಯೋಗ ಶುಭ ಸಮಯ ಎಷ್ಟು ಸಮಯ ಇರಲಿದೆ?
ಮೇ 25 ರಂದು ಸೂರ್ಯೋದಯದಿಂದ ಸಂಜೆ 05:54ರವರೆಗೆ ಗುರು ಪುಷ್ಯ ಯೋಗವಿದೆ. ಆಶ್ಲೇಷಾ ನಕ್ಷತ್ರವು ಈ ದಿನ ಸಂಜೆ 05:54 ರಿಂದ ಪ್ರಾರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮೇ 25 ರಂದು, ಬೆಳಗ್ಗೆ 05:54 ರವರೆಗೆ ಇರಲಿದೆ. ಈ ದಿನ ನೀವು ಆಸ್ತಿ, ಗಾಡಿ ಈ ಬಗೆಯ ವಸ್ತುಗಳನ್ನು ಖರೀದಿಸಬಹುದು..
ಗುರು ಪುಷ್ಯ ಯೋಗದ ಸಮಯದಲ್ಲಿ ಯಾವ ವಸ್ತುಗಳನ್ನು ಖರೀದಿಸಲು ತುಂಬಾ ಶುಭ
1. ಚಿನ್ನ: ಚಿನ್ನವನ್ನು ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಗುರು ಪುಷ್ಯ ಯೋಗದಲ್ಲಿ ಖರೀದಿಸಿದ ಚಿನ್ನವು ನಿಮ್ಮ ಸಂಪತ್ತು ಮತ್ತು ಅದೃಷ್ಟ ಹೆಚ್ಚಿಸಲಿದೆ.
2. ಅರಿಶಿನ: ಗುರು ಪುಷ್ಯ ಯೋಗದ ಸಮಯದಲ್ಲಿ ಅರಿಶಿನವನ್ನು ಖರೀದಿಸುವುದು ಸಹ ಮಂಗಳಕರವಾಗಿದೆ. ದೇವ ಗುರು ಬೃಹಸ್ಪತಿಯ ಮಂಗಳಕರ ಬಣ್ಣವು ಹಳದಿ ಮತ್ತು ಅರಿಶಿನವು ಮಂಗಳಕರ ಸಂಕೇತವಾಗಿದೆ. ನಿಮಗೆ ಚಿನ್ನವನ್ನು ಖರೀದಿಸಲು ಸಾಧ್ಯವಾಗದಿದ್ದರೆ ಅರಿಶಿಣವನ್ನು ಖರೀದಿಸಬಹುದು.
3. ಕಡಲೆ ಬೇಳೆ: ಗುರು ಪುಷ್ಯ ಯೋಗದಲ್ಲಿ ಕಡ್ಲೆ ಬೇಳೆ ಖರೀದಿಸಿದರೆ ತುಂಬಾ ಅದೃಷ್ಟಕರ ಎಂದು ಪರಿಗಣಿಸಲಾಗಿದೆ. ಈ ಕಡ್ಲೆಬೇಳೆ ಗುರು ದೇವನ ಪೂಜೆಯಲ್ಲಿ ಬಳಸಲಾಗುವುದು . ಇದಲ್ಲದೆ ನೀವು ಹಳದಿ ಬಣ್ಣದ ಬಟ್ಟೆ, ಹಿತ್ತಾಳೆ, ತುಪ್ಪ ಇತ್ಯಾದಿಗಳನ್ನು ಸಹ ಖರೀದಿಸಬಹುದು.
4. ನಾಣ್ಯ: ಈ ದಿನ ಚಿನ್ನದ ಅಥವಾ ಬೆಳ್ಳಿಯ ನಾಣ್ಯ ಖರೀದಿಸುವುದು ಶ್ರೇಷ್ಠ ಎಂದು ಹೇಳಲಾಗುವುದು. ನೀವು ನಾಣ್ಯ ಖರೀದಿಸುವ ಪ್ಲ್ಯಾನ್ ಮಾಡಿದ್ದರೆ ಈ ದಿನ ಖರೀದಿಸಿ.
5. ಸರಸ್ವತಿಯನ್ನು ಪೂಜಿಸಿ: ಗುರು ಪುಷ್ಯ ಯೋಗದಲ್ಲಿ ದೇವ ಗುರು ಬೃಹಸ್ಪತಿಯ ಪ್ರಭಾವ ಹೆಚ್ಚು. ಅಂತಹ ಪರಿಸ್ಥಿತಿಯಲ್ಲಿ, ನೀವು ಗುರು ಪುಷ್ಯ ಯೋಗದಲ್ಲಿ ಧಾರ್ಮಿಕ ಪುಸ್ತಕಗಳನ್ನು ಖರೀದಿಸಬಹುದು. ಇದರಿಂದ ನಿಮಗೂ ಲಾಭವಾಗಲಿದೆ.
ಈ ದಿನ ಲಕ್ಷ್ಮಿಯನ್ನು ಪೂಜಿಸಿ
* ಈ ದಿನ ಲಕ್ಷ್ಮಿ ದೇವಿಯ ಮುಂದೆ ತುಪ್ಪದ ದೀಪವನ್ನು ಹಚ್ಚಿ, ಲಕ್ಷ್ಮಿ ಪೂಜೆಗೆ ಕಮಲದ ಹೂವುಗಳನ್ನು ಅರ್ಪಿಸಿ.
* ಶ್ರೀಸೂಕ್ತವನ್ನು ಪಠಿಸುವುದರಿಂದ, ತಾಯಿ ಲಕ್ಷ್ಮಿಯು ಬಹಳ ಬೇಗನೆ ಲಕ್ಷ್ಮಿ ಕೃಪೆ ಸಿಗುವುದು.
ಈ ದಿನದಂದು ಉಪವಾಸವಿದ್ದು ಪೂಜಿಸುವುದರಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಿಗಲಿದೆ. ಮೊದಲನೆಯದಾಗಿ, ನಿಮ್ಮ ಮನೆಗಳಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ, ಲಕ್ಷ್ಮಿ ದೇವಿಯ ಮುಂದೆ ತುಪ್ಪದಿಂದ ದೀಪವನ್ನು ಬೆಳಗಿಸಿ. ಈ ದಿನ ಲಕ್ಷ್ಮಿ ಮಂತ್ರಗಳನ್ನು ಪಠಿಸಿ.



Click it and Unblock the Notifications
