Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಮುಂದಿನ ವಾರ (ಆಗಸ್ಟ್6-13) ಈ 8 ಪ್ರಮುಖ ಹಬ್ಬಗಳು, ವ್ರತಗಳಿವೆ
ಇದು ಶ್ರಾವಣ ಮಾಸ, ಶ್ರಾವಣ ಮಾಸವೆಂದ ಮೇಲೆ ಪ್ರತಿದಿನವೂ ವಿಶೇಷವೂ ಅದರಲ್ಲೂ ಈ ಸಮಯದಲ್ಲಿ ಕೆಲವೊಂದು ವಿಶೇಷ ಹಬ್ಬಗಳು, ವ್ರತಗಳು ಬರುತ್ತವೆ. ಪ್ರತಿಯೊಂದು ಹಬ್ಬ, ವ್ರತಗಳು ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಅದರಲ್ಲೂ ಮುಂದಿನ ವಾರವಂತೂ ತುಂಬಾನೇ ಪ್ರಮುಖ ಹಬ್ಬಗಳು ವ್ರತಗಳಿವೆ. ಬನ್ನಿ ಯಾವ ದಿನ ಯಾವ ಹಬ್ಬವಿದೆ, ವ್ರತವಿದೆ ಅವುಗಳ ಮಹತ್ವವೇನು ಎಂದು ನೋಡೋಣ ಬನ್ನಿ:

ಆಗಸ್ಟ್ 6: ಸ್ನೇಹಿತರ ದಿನ/ಫ್ರೆಂಡ್‌ಶಿಪ್ ಡೇ
ಎಲ್ಲಾ ರಕ್ತ ಸಂಬಂಧವನ್ನು ಮೀರಿದ ಸಂಬಂಧವೆಂದರೆ ಸ್ನೇಹಿತರು. ಒಬ್ಬ ಒಳ್ಳೆಯ ಸ್ನೇಹಿತ ಜೊತೆಗಿದ್ದರೆ ನಾವು ಜೀವನದಲ್ಲಿ ಯಾವುದೇ ಕಾರಣಕ್ಕೆ ಒಂಟಿ ಅಂತ ಅನಿಸುವುದೇ ಇಲ್ಲ. ಸ್ನೇಹಿತರ ದಿನವನ್ನು ಸಂಭ್ರಮಿಸಲೆಂದೇ ಪ್ರತೀವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರದಮದು ಸ್ನೇಹಿತರ ದಿನವನ್ನು ಆಚರಿಸಲಾಗುವುದು. ಈ ವರ್ಷ ಆಗಸ್ಟ್ 6ರಂದು ಬಂದಿದೆ.
ಆಗಸ್ಟ್ 7: ಶ್ರಾವಣ ಸೋಮವಾರ
ಶ್ರಾವಣ ಮಾಸವಾಗಿರುವುದರಿಂದ ಪ್ರತೀ ಶ್ರಾವಣ ಸೋಮವಾರ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಈ ದಿನ ಶಿವ ಭಕ್ತರಿಗೆ ತುಂಬಾನೇ ಪ್ರಮುಖವಾದ ದಿನವಾಗಿದೆ, ಉಪವಾಸವಿದ್ದು ಶಿವನ ಆರಾಧನೆ ಮಾಡಲಾಗುವುದು. ಈ ದಿನ ಅಭಿಷೇಕ ಮಾಡಿದರೆ ನಮ್ಮ ಬಯಕೆ ಈಡೇರುವುದರಿಂದ ಈ ದಿನ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುವುದು.
ಆಗಸ್ಟ್ 8: ಈ ದಿನ 3 ಪ್ರಮುಖ ಹಬ್ಬಗಳಿವೆ
* ಮಂಗಳ ಗೌರಿ ವ್ರತ: ಶ್ರಾವಣ ಮಾಸದ ಪ್ರತಿ ಮಂಗಳವಾರ ಮುತ್ತೈದೆಯರು ಮಂಗಳ ಗೌರಿ ವ್ರತವನ್ನು ಮಾಡುತ್ತಾರೆ. ಗಂಡನ ಆಯುಸ್ಸು, ಆರೋಗ್ಯ ಹೆಚ್ಚಾಗಲಿ, ಮನೆಯಲ್ಲಿ ಸಂಪತ್ತು ವೃದ್ಧಿಸಲಿ, ಸಂತಾನ ಭಾಗ್ಯ ದೊರೆಯಲಿ ಎಂದು ಬೇಡಿ ಈ ವ್ರತವನ್ನು ಆಚರಿಸುತ್ತಾರೆ. ಮದುವೆಯಾದ ಮೊದಲ ವರ್ಷ ಅಮ್ಮನ ಮನೆಯಲ್ಲಿ ಈ ವ್ರತ ಮಾಡಿದರೆ ನಂತರ ನಾಲ್ಕು ವರ್ಷ ಗಂಡನ ಮನೆಯಲ್ಲಿ ಈ ವ್ರತ ಮಾಡುತ್ತಾರೆ.
ಕಾಲಾಷ್ಟಮಿ ವ್ರತ: ಕಾಲಾಷ್ಟಮಿಯಂದು ಕಾಲ ಭೈರವನನ್ನು ಪೂಜಿಸಲಾಗುವುದು. ಕಾಲಾಷ್ಟಮಿ ಕೃಷ್ಣ ಪಕ್ಷದಲ್ಲಿ ಬರುತ್ತದೆ.
ಮಾಸಿಕ ಕೃಷ್ಣ ಜನ್ಮಾಷ್ಟಮಿ: ಈ ದಿನ ಮಾಸಿಕ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುವುದು. ಕಷ್ಣ ಜನ್ಮಾಷ್ಟಮಿಯಂದು ಶ್ರೀ ಕೃಷ್ಣನನ್ನು ಆರಾಧಿಸಲಾಗುವುದು.
ಆಗಸ್ಟ್ 10: ರೋಹಿಣಿ ವ್ರತ: ಪ್ರತಿ ತಿಂಗಳು ರೋಹಿಣಿ ನಕ್ಷತ್ರದಂದು ರೋಹಿಣಿ ವ್ರತವನ್ನು ಆಚರಿಸಲಾಗುವುದು. ಈ ವ್ರತವನ್ನು ಮಾಡುವುದರಿಂದ ಶಾಂತಿ, ನೆಮ್ಮದಿ, ಸಂತೋಷ ಸಿಗಲಿದೆ.
ಆಗಸ್ಟ್ 12: ಪರಮ ಏಕಾದಶಿ: ಪರಮ ಏಕಾದಶಿಯಂದು ಶ್ರೀವಿಷ್ಣುವನ್ನು ಆರಾಧಿಸಲಾಗುವುದು. ಈ ದಿನ ಶ್ರೀವಿಷ್ಣುವನ್ನು ಉಪವಾಸವಿದ್ದು ಪೂಜಿಸುವುದರಿಂದ ಮೋಕ್ಷ ಸಿಗುವುದು. ಅಲ್ಲದೆ ಪರಮಾತ್ಮನ ಕೃಪೆಯಿಂದ ಬದುಕಿನಲ್ಲಿರುವ ಕಷ್ಟಗಳೆಲ್ಲಾ ದೂರಾಗುವುದು ಎಂಬ ನಂಬಿಕೆ ಇದೆ.
ಆಗಸ್ಟ್ 13: ಆಗಸ್ಟ್ 13ರಂದು ಪ್ರದೋಷ ವ್ರತವನ್ನು ಆಚರಿಸಲಾಗುವುದು. ಈ ದಿನ ಶಿವನನ್ನು ಪ್ರದೋಷ ಕಾಲದಲ್ಲಿ ಆರಾಧಿಸಲಾಗಿದೆ.



Click it and Unblock the Notifications
