Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಯಾವಾಗ? ಇದರ ವಿಶೇಷತೆಗಳೇನು?
ಕರ್ನಾಟಕದ ಪ್ರಸಿದ್ಧ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿರುವ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ ನೋಡುವುದೇ ಕಣ್ಣಿಗೆ ಆನಂದ. ಮಂಜುನಾಥನ ಸನ್ನಿಧಿ ದೀಪಗಳ ಬೆಳಕಿನಲ್ಲಿ ಮತ್ತಷ್ಟು ಸುಂದರವಾಗಿ ಕಂಗೊಳಿಸುತ್ತದೆ. ಈ ಸಂದರ್ಭದಲ್ಲಿ ಈ ಸುಂದರ ಸಂಖ್ಯೆ ಕಣ್ತುಂಬಿ ಕೊಳ್ಳಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
ಧರ್ಮಸ್ಥಳ-ಸುತ್ತ ಮುತ್ತ ಊರಿನವರಿಗೆ ಹಬ್ಬದ ಸಂಭ್ರಮ
ಧರ್ಮಸ್ಥಳ ಲಕ್ಷ ದೀಪೋತ್ಸವದಲ್ಲಿ ಬರೀ ದೀಪಗಳ ಬೆಳಕಷ್ಟೇ ಅಲ್ಲ ಅಲ್ಲಿ ಜಾತ್ರೆಯ ವಾತಾವರಣ ಇರುತ್ತದೆ, ದೊಡ್ಡವರು-ಮಕ್ಕಳ ಎಲ್ಲರು ಈ ಲಕ್ಷ ದೀಪೋತ್ಸವವನ್ನು ತುಂಬಾನೇ ಸಂಭ್ರಮಿಸುತ್ತಾರೆ. ಹೊರಗಡೆ ಆಟಿಕೆಗಳು, ಆಹಾರ ಹಾಗೂ ಮತ್ತಿತರ ಸಾಮಗ್ರಿಗಳ ಅಂಗಡಿಗಳು ಎಲ್ಲಾ ಇರುತ್ತದೆ. ಈ ಜಾತ್ರೆ ವೀಕ್ಷಿಸಲು ಜನರು ಜಾತಿ- ಬೇಧ, ಚಿಕ್ಕವರು-ದೊಡ್ಡವರು ಎಂಬ ಅಂತರವಿಲ್ಲದೆ ಎಲ್ಲರು ಬಂದು ಈ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ. ಆ ಊರಿನಿಂದ ಪರ ಊರಿಗೆ ಮದುವೆ ಮಾಡಿಕೊಟ್ಟ ಹೆಣ್ಮಕ್ಕಳು ಈ ಸಂದರ್ಭದಲ್ಲಿ ತವರಿಗೆ ಬಂದು ಲಕ್ಷ ದೀಪೋತ್ಸವ ಸಂಭ್ರಮದಲ್ಲಿ ಭಾಗಿಯಾಗುತ್ತರೆ.

ಈ ವರ್ಷ ಧರ್ಮಸ್ಥಳದಲ್ಲಿ ಡಿಸೆಂಬರ್ 8-12ರವರೆಗೆ ಲಕ್ಷ ದೀಪೋತ್ಸವ ನಡೆಯಲಿದೆ.
ಮೊದಲ ದಿನ ಡಿಸೆಂಬರ್ 8ರಂದು ಹೊಸ ಕಟ್ಟೆ ಉತ್ಸವ, ಡಿಸೆಂಬರ್ 9ರಂದು ಕೆರೆ ಕಟ್ಟೆ ಉತ್ಸವ, ಡಿಸೆಂಬರ್ 10ರಂದು ಲಲಿತೋಸ್ಯಾನ ಉತ್ಸವ, ಡಿಸೆಂಬರ್ 10ರಂದು ಲಲಿತೋದ್ಯಾನ ಉತ್ಸವ, ಡಿಸೆಂಬರ್ 11ರಂದು ಕಂಚಿಮಾರು ಕಟ್ಟೆ ಉತ್ಸವ, ಡಿಸೆಂಬರ್ 12ರಂದು ಗೌರಿಮಾರು ಕಟ್ಟೆ ಉತ್ಸವ ನಡೆಯಲಿದೆ.
ಡಿಸೆಂಬರ್ 13ರಂದು ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ ಮಾಡಲಾಗುವುದು, ಡಿಸೆಂಬರ್ 11, 12ರಂದು ಸರ್ವಧರ್ಮ ಸಮ್ಮೇಳನ ನಡೆಯಲಿದೆ.
ಲಕ್ಷ ದೀಪೋತ್ಸವ ವಿಶೇಷ ಆಕರ್ಷಣೆ ಸರ್ವಧರ್ಮ ಸಮ್ಮೇಳನ
ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಮುಖ ಆಕರ್ಷಣೆಯೆಂದರೆ ಸರ್ವಧರ್ಮ ಸಮ್ಮೇಳನ ಆಗಿದೆ. 1933ರಿಂದ ನಡೆದುಕೊಂಡು ಬರುತ್ತಿರುವ ಸರ್ವಧರ್ಮ ಸಮ್ಮೇಳನವನ್ನು ಮೊದಲು ಆರಂಭಿಸಿದರು ದಿ.ಮಂಜಯ್ಯ ಹೆಗ್ಗಡೆಯವರಾಗಿದ್ದಾರೆ. ಲಕ್ಷದೀಪೋತ್ಸವದ ವೇಳೆ ಧರ್ಮಸ್ಥಳ ಕ್ಷೇತ್ರದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ, ಸಾಹಿತ್ಯ ಸಮ್ಮೇಳನ ಮತ್ತು ಸರ್ವಧರ್ಮ ಸಮ್ಮೇಳನಗಳು ನಡೆಯುತ್ತವೆ. ಆದ್ದರಿಂದಲೇ ಲಕ್ಷದೀಪೋತ್ಸವ ಕೇವಲ ಧಾರ್ಮಿಕ ಕಾರ್ಯಕ್ರಮವಾಗಿ ಉಳಿಯದೆ ಸಮಾಜಮುಖಿಯಾಗಿ ಬೆಳೆದು ನಿಲ್ಲಲು ಸಾಧ್ಯವಾಗಿದೆ. ಇದು ಸಾಂಸ್ಕೃತಿಕ ಹಾಗೂ ಬೌದ್ಧಿಕತೆಯ ಸಮಾಗಮವಾಗಿದೆ. ಇಂಥ ವಿಶೇಷಗಳನ್ನು ನೋಡಲೆಂದೇ ಲಕ್ಷದೀಪೋತ್ಸವದಲ್ಲಿ ರಾಜ್ಯದ ವಿವಿಧ ಕಡೆಯಿಂದ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ.
ಲಕ್ಷದೀಪೋತ್ಸವದ ಅಂಗವಾಗಿ ರಾತ್ರಿ ಇಡೀ ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತು ಪ್ರದರ್ಶನ, ಮನೋರಂಜನಾ ಕಾರ್ಯಕ್ರಮಗಳು ಧರ್ಮಸ್ಥಳದಲ್ಲಿ ನಡೆಯಲಿದೆ.
ಧರ್ಮಸ್ಥಳದ ಇತಿಹಾಸ
ಹಿಂದೆ ಈ ಧರ್ಮಸ್ಥಳವನ್ನು ಕುಡುಮಾ ಎಂದು ಕರೆಯಲಾಗಿತ್ತು. ಬಿರ್ಮಣ್ಣ ಪೆರ್ಗಡೆ ಹಾಗೂ ಅವರ ಧರ್ಮಪತ್ನಿ ಅಮ್ಮ ಬಲ್ಲಲ್ತಿ ಇಲ್ಲಿರುವ ನೆಲ್ಲಾಲಿ ಬೀಡು ಎಂಬಲ್ಲಿ ವಾಸವಾಗಿದ್ದರು. ಈ ದಂಪತಿಗಳು ದಾನಮಾಡುವುದರಲ್ಲಿ ಎತ್ತಿದ ಕೈ. ಇದನ್ನು ಮೆಚ್ಚಿದ ದೈವಗಳು ಇವರಿಗೆ ನೆಲ್ಲಾಡಿ ಬೀಡುವಿನಲ್ಲಿ ಧರ್ಮದೈವಗಳನ್ನು ಸ್ಥಾಪಿಸುವಂತೆ ಸೂಚನೆ ನೀಡಿದರಂತೆ. ಅದರಂತೆ ಅವರು ನಾಲ್ಕು ಧರ್ಮ ದೈವಗಳನ್ನು ಸ್ಥಾಪಿಸಿದರು. ಆಗ ಅರ್ಚಕರು ಅವರಿಗೆ ದೈವಗಳ ಪಕ್ಕದಲ್ಲಿ ಶಿವಲಿಂಗವನ್ನು ಸ್ಥಾಪಿಸುವಂತೆ ಸೂಚಿಸುತ್ತಾರೆ. ಅದರಂತೆ ಕದ್ರಿ ಮಂನಾಥೇಶ್ವರ ದೇವಾಲಯದಿಂದ ಲಿಂಗ ತಂದು ಧರ್ಮಸ್ಥಳದಲ್ಲಿ ಇಟ್ಟು ದೇವಾಲಯ ನಿರ್ಮಿಸಲಾಯಿತು.
16ನೇ ಶತಮಾನದಲ್ಲಿ ಶ್ರೀ ದೇವರಾಜ ಹೆಗ್ಗಡೆ ಅವರು ಶ್ರೀ ವಾದಿರಾಜ ಸ್ವಾಮಿಯನ್ನು ಇಲ್ಲಿಗೆ ಬರುವಂತೆ ಆಹ್ವಾನ ನೀಡುತ್ತಾರೆ. ಆವಾಗ ಅಲ್ಲಿಗೆ ಬರುವ ವಾದಿರಾಜರು ಅಲ್ಲಿರುವ ಮಂಜುನಾಥನ ವಿಗ್ರಹವನ್ನು ವೈದಿಕ ವಿಧಿಗಳ ಪ್ರಕಾರ ಪವಿತ್ರ ಮಾಡಿಲ್ಲ ಆಹಾರ ಸೇವನೆಗೆ ನಿರಾಕರಣೆ ಮಾಡುತ್ತಾರೆ. ಆವಾಗ ಹೆಗ್ಗಡೆಯವರು ವಾದಿರಾಜರ ಹತ್ರ ಶಿವಲಿಂಗವನ್ನು ಪವಿತ್ರಗೊಳಿಸುವಂತೆ ಕೇಳಲಾಗಿ ವಾದಿರಾಜರು ಶಿವಲಿಂಗವನ್ನು ಶುದ್ಧಗೊಳಿಸುತ್ತಾರೆ. ಅಂದಿನಿಂದಲೂ ಈ ದೇವಾಲಯದಲ್ಲಿ ದಾನ ಧರ್ಮದ ಕಾರ್ಯದಲ್ಲಿ ನಿರತವಾಗಿದೆ.
ಈ ದೇವಾಲಯವನ್ನು ಪೆರ್ಗಡೆ ಕುಟುಂಬದವರೇ ನಿರ್ವಹಣೆ ಮಾಡುತ್ತಿದ್ದಾರೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ವಿಶೇಷ ಸಂದರ್ಭದಲ್ಲಿ ಲಕ್ಷಗಟ್ಟಲೆ ಜನ ಬರುತ್ತಾರೆ. ಇಲ್ಲಿ ಪ್ರತಿದಿನವೂ ಅನ್ನದಾನವಿದೆ. ಅಲ್ಲದೆ ಸಮಾಜಮುಖಿ ಕಾರ್ಯಗಳ ಮೂಲಕವು ಸಮಾಜದ ನೆರವಿಗೆ ನಿಂತಿದೆ.



Click it and Unblock the Notifications












