Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಅಮ್ಮ ತೋರಿಸುತ್ತಿದ್ದ ಚಂದ ಮಾಮ ಈಗ ಭಾರತದ ಕೈಯಲ್ಲಿದೆ, ಮುಗಿಲು ಮುಟ್ಟಿದ ಭಾರತೀಯರ ಸಂಭ್ರಮ
'India Is On the Moon'ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಹೇಳುವುದನ್ನು ಕೇಳಿದಾಗ ಪ್ರತಿಯೊಬ್ಬ ಭಾರತೀಯನಿಗೆ ರೋಮಾಂಚನ ಉಂಟಾಗುವುದು.. ಈ ಕ್ಷಣಕ್ಕಾಗಿ, ಈ ಸುಂದರ, ಹೆಮ್ಮೆಯ ಕ್ಷಣಕ್ಕಾಗಿ ಇಡಿ ದೇಶವೇ ಎದುರು ನೋಡುತ್ತಿತ್ತು. ಚಂದ್ರಯಾನ 3 ತ್ರಿವಿಕ್ರಮ ಜುಲೈ 14, 2:35ಕ್ಕೆ ಭೂ ಕಕ್ಷೆಯನ್ನು ಬಿಟ್ಟು ಹೊರಟ ಕ್ಷಣದಿಂದ ಇದುವರೆಗೆ ದೇವರೇ... ಪ್ರಗ್ಯಾನ್ ಅನ್ನು ಚಂದ್ರನಲ್ಲಿ ಯಶಸ್ವಿಯಾಗಿ ಇಳಿಯುವಂತೆ ಮಾಡು ಎಂದು ಪ್ರಾರ್ಥಿಸಿದೆವು.

ಇಸ್ರೋ ವಿಜ್ಞಾನಿಗಳ ಶ್ರಮದ ಜೊತೆಗೆ ಲಕ್ಷಾಂತರ ಭಾರತೀಯರ ಪ್ರಾರ್ಥನೆಗೆ ಫಲ ಸಿಕ್ಕಿದೆ, ಇಡೀ ದೇಶದಲ್ಲಿ ಇಂದು ಸಂಭ್ರಮದ ವಾತಾವರಣ. ಶಾಲಾ ಮಕ್ಕಳು ಈ ಕ್ಷಣದಿಂದ ತಾವು ಕೂಡ ವಿಜ್ಞಾನಿಗಳಾಗುವ ಕನಸು ಕಾಣುವಂತೆ ಮಾಡಿರುವ ಈ ಯಶಸ್ವಿ ವಿಕ್ರಮ್ 3 ಯೋಜನೆ ಭಾರತದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಿದೆ. ಇಡೀ ವಿಶ್ವವೇ ಭಾರತದ ಸಾಧನೆಯನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ನಮ್ಮ ಇಸ್ರೋ ವಿಜ್ಞಾನಿಗಳಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಅಲ್ವಾ?
ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಸೌತ್ ಆಫ್ರಿಕಕ್ಕೆ ಹೋಗಿರುವ ಪ್ರಧಾನಿ ಮೀದಿಯವರು ವರ್ಚ್ಯೂಯಲ್ ಮೂಲಕ ಈ ದೃಶ್ಯವನ್ನು ವೀಕ್ಷಿಸಿದ ಪ್ರಧಾನಿ ಮೋದಿ ಭಾರತದ ಬಾವುಟ ತೋರಿಸಿ ಸಂಭ್ರಮಿಸಿದರು. ನಮ್ಮ ವಿಜ್ಞಾನಿಗಳು ಹಲವು ವರ್ಷಗಳಿಂದ ಇದಕ್ಕಾಗಿ ಶ್ರಮಿಸಿದ್ದಾರೆ ,ಸಮಸ್ತ ಭಾರತೀಯರ ಪರವಾಗಿ ಕೋಟಿ ಕೋಟಿ ಧನ್ಯವಾದ ಸಲ್ಲಿಸುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಮಕ್ಕಳು ಚಿಕ್ಕವಿರುವಾಗ ಚಂದ ಮಾಮನ ತೋರಿಸಿ ಅಮ್ಮ ಆಹಾರ ತಿನ್ನಿಸುತ್ತಿದ್ದಳು, ಆದರೆ ಇದೀಗ ಅದೇ ಚಂದಮಾಮನ ಮೇಲೆ ನಾವಿದ್ದೇವೆ, ಇದು ಖುಷಿಯ ವಿಚಾರವಾಗಿದೆ.
ಸೋಲೇ ಗೆಲುವಿನ ಸೋಪಾನ
ಒಮ್ಮೆ ಸೋತ ಮಾತ್ರ ಎಲ್ಲವೂ ಕಳೆದುಕೊಂಡಿವೆ ಎಂಬ ಅರ್ಥವಲ್ಲ, ಸೋತರೆ ಅದರಿಂದ ಗೆಲ್ಲುವ ಮಾರ್ಗವನ್ನು ಕಂಡುಕೊಳ್ಳಬೇಕು. ನಮ್ಮ ವಿಜ್ಞಾನಿಗಳು ಸೋಲಿನಿಂದ ಪಾಠ ಕಲಿತು ಇದೀಗ ಯಶಸ್ವಿನ ಖುಷಿಯನ್ನು ಸಂಭ್ರಮಿಸುತ್ತಿದ್ದಾರೆ. ಚಂದ್ರಯಾನ 2 ವಿಫಲರಾದಾಗ ಆವಾಗ ಇಸ್ರೋ ಅಧ್ಯಕ್ಷರಾಗಿದ್ದ ಕೆ. ಶಿವನ್ ಚಿಕ್ಕ ಮಗುವಿನಂತೆ ಬಿಕ್ಕಿ- ಬಿಕ್ಕಿ ಅತ್ತಾಗ ಅವರ ಕಣ್ಣೀರು ಭಾರತೋಯರ ಕಣ್ಣಂಚಿನಲ್ಲಿ ನೀರು ತಂದಿತ್ತು. ಆ ಸೋಲಿನಿಂದ ಕಲಿತ ಪಾಠಗಳಿಂದಲೇ ಇಂದು ನಮ್ಮ ವಿಜ್ಞಾನಿಗಳು ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸಲು ಸಾಧ್ಯವಾಯಿತು.
ಸೂರ್ಯ-ಶುಕ್ರನ ಅಧ್ಯಯನವನ್ನು ಮಾಡಲಿದೆ ಇಸ್ರೋ
ಇಸ್ರೋ ತನ್ನ ಅನ್ವೇಷಣೆಯನ್ನು ಚಂದ್ರನಲ್ಲಿ ಮಾತ್ರವಲ್ಲ ಮುಂಬರುವ ವರ್ಷಗಳಲ್ಲಿ ಸೂರ್ಯ ಹಾಗೂ ಶುಕ್ರ ಗ್ರಹಗಳಲ್ಲಿ ಮಾಡುವ ಇಚ್ಛೆಯನ್ನು ಹೊಂದಿದ್ದು ಇಸ್ರೋದ ಮುಂದಿನ ಎಲ್ಲಾ ಪ್ರಯೋಗಗಳು ಯಶಸ್ವಿಯಾಗಲಿ, ಭಾರತ ವಿಶ್ವದಲ್ಲಿಯೇ ಬಿಲಿಷ್ಠ ರಾಷ್ಟ್ರವಾಗಿ ಬೆಳೆಯುವಂತಾಗಲಿ ಎಂಬುವುದೇ ಪ್ರತಿಯೊಬ್ಬ ಭಾರತೀಯರ ಪ್ರಾರ್ಥನೆ, ಆಶಯವಾಗಿದೆ... ಜೈ ಹಿಂದ್..



Click it and Unblock the Notifications