Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
2023, ಭೀಮನ ಅಮವಾಸ್ಯೆ ಯಾವಾಗ? ಈ ದಿನ ಗಂಡನ ಪಾದ ಪೂಜೆ ಮಾಡುವುದರ ಹಿಂದಿನ ಮಹತ್ವವೇನು?
ಭೀಮನ ಅಮವಾಸ್ಯೆಯನ್ನು ಭೀಮ ಅಮವಾಸ್ಯೆಯೆಂದು ಕೂಡ ಕರೆಯಲಾಗುವುದು. ಆಷಾಢಧ ಕೊನೆಯ ಅಮವಾಸ್ಯೆ ಇದಾಗಿದೆ. ಹಿಂದೂಗಳಿಗೆ ಈ ದಿನ ತುಂಬಾ ಪ್ರಮುಖವಾದ ದಿನವಾಗಿದೆ. ಹೆಣ್ಮಕ್ಕಳಿಗಂತೂ ಈ ದಿನ ತುಂಬಾ ವಿಶೇಷವಾದದ್ದು. ಅಲ್ಲದೆ ಈ ಪಿತೃತರ್ಪಣಕ್ಕೂ ತುಂಬಾ ಶ್ರೇಷ್ಠವಾದ ದಿನವಾಗಿದೆ ಎಂದು ಪರಿಗಣಿಸಲಾಗಿದೆ.
ಈ ವರ್ಷ ಭೀಮನ ಅಮವಾಸ್ಯೆ ಯಾವ ದಿನಾಂಕದಂದು ಆಚರಿಸಲಾಗುತ್ತಿದೆ? ಈ ದಿನ ಮಾಡಬೇಕಾದ ಪೂಜಾ ವಿಧಾನಗಳೇನು, ಈ ದಿನಕ್ಕೆ ಯಾಕಿಷ್ಟು ಮಹತ್ವ ಎಂದು ನೋಡೋಣ:

ಈ ವರ್ಷ ಭೀಮನ ಅಮವಾಸ್ಯೆ ಯಾವಾಗ?
ಈ ವರ್ಷ ಆಷಾಢ ಅಮವಾಸ್ಯೆ ತಿಥಿ ಪ್ರಾರಂಭ: ಜುಲೈ 17 ಬೆಳಗ್ಗೆ 09:11ಕ್ಕೆ
ಆಷಾಢ ಅಮವಾಸ್ಯೆ ತಿಥಿ ಮುಕ್ತಾಯ: ಜುಲೈ 18 ಬೆಳಗ್ಗೆ 10:06ಕ್ಕೆ
ಆಷಾಢ ಅಮವಾಸ್ಯೆಯಂದು ಭೀಮನ ಅಮವಾಸ್ಯೆ ಆಚರಣೆ
ಈ ದಿನ ಹೆಣ್ಮಕ್ಕಳು ಶಿವ -ಪಾರ್ವತಿಯನ್ನು ಆರಾಧಿಸುತ್ತಾರೆ. ಮುತ್ತೈದೆಯರು ತಮ್ಮ ಗಂಡನಿಗೆ ಈ ದಿನ ಗಂಡನಿಗೆ ಪಾದ ಪೂಜೆ ಮಾಡುವ ಪದ್ಧತಿ ಇದೆ. ಈ ದಿನ ಮಣ್ಣಿನಿಂದ ಹಣತೆ ಮಾಡಿ ದೇವರಿಗೆ ದೀಪ ಹಚ್ಚಲಾಗುವುದು.
ಭೀಮನ ಅಮವಾಸ್ಯೆ ಆಚರಣೆಯ ಹಿಂದೆ ಪೌರಾಣಿಕ ಕತೆಯಿದೆ
ಪವಿತ್ರ ಗ್ರಂಥ ಸ್ಕಂದ ಪುರಾಣದಲ್ಲಿ ಭೀಮನ ಅಮವಾಸ್ಯೆ ಬಗ್ಗೆ ಹೇಳಲಾಗಿದೆ. ಅದರಲ್ಲಿ ಬಡ ಬ್ರಾಹ್ಮಣ ಹೆಣ್ಣು ಮಗಳು ಸತ್ತ ರಾಜಕುಮಾರನನ್ನು ಮದುವೆಯಾಗಿ ಬದುಕಿಸಿಕೊಂಡ ಕತೆಯಿದೆ.
ಒಂದು ಬಡ ದಂಪತಿಗೆ ಮಗಳಿದ್ದಳು, ಆ ದಂಪತಿ ಕಾಶಿಯಾತ್ರೆ ಹೋಗಲು ಬಯಸುತ್ತಾರೆ, ಆದರೆ ಅವಾಹಿತ ಮಗಳನ್ನು ಜೊತೆಗೆ ಕರೆದುಕೊಂಡು ಹೋಗಲು ಬಯಸುವುದಿಲ್ಲ, ಅವಳನ್ನು ಅವಳ ಸಹೋದರ ಮತ್ತು ಆತನ ಪತ್ನಿ ಜೊತೆ ಬಿಟ್ಟು ಹೋಗುತ್ತಾರೆ. ಆದರೆ ಆ ಸಹೋದರ ತುಂಬಾ ದುರಾಸೆ ಇರುವವನು ಆಗಿದ್ದ.
ಅಲ್ಲಿಯ ರಾಜ್ಯದ ರಾಜಕುಮಾರ ಸತ್ತು ಹೋಗುತ್ತಾನೆ. ಆತನಿಗೆ ಮದುವೆಯಾಗಬೇಕೆಂಬ ಆಸೆ ಇತ್ತು, ರಾಜಕುಮಾರ ತೀರಿ ಹೋದಾಗ ರಾಜ ತನ್ನ ಮಗನ ಕೊನೆಯ ಆಸೆ ನೆರವೇರಲು ಸತ್ತ ರಾಜಕುಮಾರನಿಗಾಗಿ ಹೆಣ್ಣು ಹುಡುಕುತ್ತಾನೆ, ಆದರೆ ಯಾರೂ ಕೊಡುವುದಿಲ್ಲ, ಅದು ಗೊತ್ತಾದ ಈ ಸಹೋದರ ಹಣದ ಆಸೆಗೆ ತನ್ನ ಸಹೋದರಿಯನ್ನು ಸತ್ತ ರಾಜಕುಮಾರನ ಜೊತೆ ಮದುವೆ ಮಾಡಿಸುತ್ತಾನೆ.
ಅವಳು ಪತಿಯ ಶವದ ಮುಂದೆ ಅಳುತ್ತಾ ಕೂತಿದ್ದಾಗ ತಂದೆ-ತಾಯಿ ಆಚರಿಸುತ್ತಿದ್ದ ಭೀಮನ ಅಮವಾಸ್ಯೆ ನೆನಪಾಗಿ ಭೀಮನ ಅಮವಾಸ್ಯೆ ವ್ರತ ಮಾಡುತ್ತಾಳೆ. ಈಕೆಯ ವ್ರತಕ್ಕೆ ಮೆಚ್ಚಿ ಶಿವ-ಪಾರ್ವತಿ ಪ್ರತ್ಯಕ್ಷವಾಗಿ ಏನು ಬೇಕೆಂದು ಕೇಳಿದಾಗ ತನ್ನ ಪತಿಯನ್ನು ಬದುಕಿಸಿ ತನಗೆ ಮುತ್ತೈದೆ ಭಾಗ್ಯ ನೀಡುವಂತೆ ಕೋರುತ್ತಾಳೆ, ಅದರಂತೆ ರಾಜಕುಮಾರನಿಗೆ ಜೀವ ಬರುತ್ತದೆ, ಅವಳು ಆ ರಾಜ್ಯದ ರಾಣಿಯಾಗಿ ಸುಖವಾಗಿ ಬಾಳುತ್ತಾಳೆ.
ಹೀಗೆ ಭೀಮನ ಅಮವಾಸ್ಯೆಯಂದು ಹೆಣ್ಮಕ್ಕಳು ಶಿವ-ಪಾರ್ವತಿಯನ್ನು ಆರಾಧಿಸಿದರೆ ಅವರಿಗೆ ಮುತ್ತೈದೆ ಭಾಗ್ಯ ಸಿಗುತ್ತದೆ.
ಭೀಮನ ಅಮವಾಸ್ಯೆ ಪೂಜಾ ವಿಧಾನ
- ಈ ದಿನ ಬೆಳಗ್ಗೆ ಬೇಗ ಎದ್ದು ಮಡಿ ಬಟ್ಟೆ ಧರಿಸಿ, ಮನೆ ಮುಂದೆ ರಣಗೋಲಿ ಹಾಕಬೇಕು
- ನಂತರ ಕೈಗೆ ಕಂಕಣ ಕಟ್ಟಿಕೊಂಡು ಶಿವ-ಪಾರ್ವತಿಯನ್ನು ಧ್ಯಾನಿಸಿ ವ್ರತವನ್ನು ಕೈಗೊಳ್ಖಬೇಕು
- ಈ ದಿನ ಶುಭ ಮುಹೂರ್ತದಲ್ಲಿ ಪೂಜೆ ಮಾಡಬೇಕು
- ತಟ್ಟೆಯಲ್ಲಿ ಅಕ್ಕಿ ಹಾಕಿ ಅದರಲ್ಲಿ ಎರಡು ಮಣ್ಣಿನ ದೀಪದಲ್ಲಿ ಎಣ್ಣೆ ಹಾಕಿ ಹಚ್ಚಬೇಕು.
- ನಂತರ ಆ ತಟ್ಟೆಗೆ ಶಿವ-ಪಾರ್ವತಿ ಆವಾಹನೆ ಮಾಡಿ ಪೂಜೆ ಮಾಡಬೇಕು.
- ಹೀಗೆ ಪೂಜೆ ಮಾಡುವಾಗ 9 ಗಂಟಿನ ಗೌರಿದಾರವನ್ನಿಟ್ಟು ಪೂಜೆ ಮಾಡಿ ನಂತರ ಆ ದಾರವನ್ನು ಕೈಗೆ ಕಟ್ಟಿಕೊಳ್ಳಬೇಕು.
- ಈ ವ್ರತವನ್ನು ಮೊದಲಿಗೆ ಗಣೇಶನಿಗೆ ಪೂಜೆ ಸಲ್ಲಿಸಿ ನಂತರ ಪ್ರಾರಂಭಿಸಬೇಕು.
- ದೇವರಿಗೆ ಕರಿಕಡುಬು ನೈವೇದ್ಯವನ್ನಾಗಿ ಅರ್ಪಿಸಿ
- ನಂತರ ಗಂಡನಿಗೆ ಪಾದ ಪೂಜೆ ಮಾಡಿ, ಪತಿಯ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯಲಾಗುವುದು.
ಈ ದಿನ ಕರಿದ ಪದಾರ್ಥಗಳನ್ನು ತಿನ್ನುವುದಿಲ್ಲ
ಮದುವೆಯಾಗಿ 9 ವರ್ಷ ಕಳೆದ ಮೇಲೆ ಭೀಮನ ಅಮವಾಸ್ಯೆ ವ್ರತ ಆಚರಿಸಲಾಗುವುದು.



Click it and Unblock the Notifications

