Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸಂಪತ್ತು ವೃದ್ಧಿಗಾಗಿ ಆಷಾಢ ಶುಕ್ರವಾರದಂದು ಲಕ್ಷ್ಮಿಯನ್ನು ಪೂಜಿಸುವ ವಿಧಾನ
ಆಷಾಢ ಶುಕ್ರವಾರ ಲಕ್ಷ್ಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ಆಷಾಢದಂದು ಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸುವುದರಿಂದ ಇಷ್ಟಾರ್ಥಗಳು ನೆರವೇರುವುದು, ಕಷ್ಟಗಳು ದೂರಾಗುವುದು, ಬಾಳಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸುವ ಆತ್ಮವಿಶ್ವಾಸ ಹೆಚ್ಚಾಗುವುದು. ಲಕ್ಷ್ಮಿ ಕೃಪೆ ಇರುವುದರಿಂದ ಸಂಪತ್ತು, ಸಮೃದ್ಧಿ ಹೆಚ್ಚಾಗಲಿದೆ. ಹೀಗಾಗಿ ಆಷಾಢ ಶುಕ್ರವಾರದ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದೆ.
ಆಷಾಢದಲ್ಲಿ ಲಕ್ಷ್ಮಿ ಪೂಜೆ ಜೊತೆಗೆ ಇನ್ನು ಕೆಲವು ಪರಿಹಾರ ಮಾಡಿದರೆ ಇನ್ನೂ ಒಳ್ಳೆಯದು. ಈ ದಿನ ಏನು ಮಾಡಬೇಕು, ಇದರಿಂದ ದೊರೆಯುವ ಫಲವೇನು ಎಂದು ನೋಡೋಣ ಬನ್ನಿ:

ಬ್ರಾಹ್ಮೀ ಮುಹೂರ್ತದಲ್ಲಿ ಕಲಶ ಸ್ಥಾಪಿಸಿ
ಆಷಾಢ ಶುಕ್ರವಾರದಂದು ಬೆಳಗ್ಗೆ ಬೇಗನೆ ಎದ್ದೇಳಬೇಕು, ನಂತರ ಸ್ಥಾನ ಮಾಡಿ, ಮಡಿ ಬಟ್ಟೆ ಧರಿಸಿ ಕಲಶ ಸ್ಥಾಪನೆ ಮಾಡಬೇಕು. ನೀವು ಕಲಶವನ್ನು ಸ್ಥಾಪಿಸುವಾಗ ಉತ್ತರಾಭಿಮುಖವಾಗಿ ಅಥವಾ ಪೂರ್ವಾಭಿಮುಖವಾಗಿ ಸ್ಥಾಪಿಸಬೇಕು. ನಂತರ ಕಲಶಕ್ಕೆ ಅಷ್ಟ ದಳವನ್ನಿಟ್ಟು, ಶ್ರೀ ಚಕ್ರವನ್ನಿಟ್ಟು ಪೂಜೆ ಪ್ರಾರಂಭಿಸಬೇಕು.
ಲಕ್ಷ್ಮಿಯನ್ನು ಅಲಂಕರಿಸಿ
ಶುಕ್ರವಾರ ಲಕ್ಷ್ಮಿಯ ಮೂರ್ತಿ ಅಥವಾ ಫೋಟೋಗೆ ಚೆನ್ನಾಗಿ ಅಲಂಕರಿಸಿ, ಪೂಜೆಗೆ ಹೂ, ಧೂಪ, ತುಪ್ಪದ ದೀಪ, ಹಣ್ಣುಗಳು ಇವುಗಳನ್ನು ಬಳಸಿ, ಲಕ್ಷ್ಮಿಗೆ ಬ್ಲೌಸ್ ಪೀಸ್ ಅಥವಾ ಸೀರೆಯನ್ನು ಅರ್ಪಿಸಿ. ನಂತರ ಲಕ್ಷ್ಮಿ ಮಂತ್ರಗಳನ್ನು ಪಠಿಸಿ. ಲಕ್ಷ್ಮಿ ಸಹಸ್ರನಾಮ ಪಠಿಸಿ. ಲಕ್ಷ್ಮಿಗೆ ಬಿಳಿ ಸಿಹಿತಿಂಡಿಯನ್ನು ನೈವೇದ್ಯವನ್ನಾಗಿ ಅರ್ಪಿಸಿ.
ತಾಂಬೂಲ ನೀಡಿ
ನಂತರ ಮನೆಗೆ ಮುತ್ತೈದೆಯರನ್ನು ಆಹ್ವಾನಿಸಿ ಅವರಿಗೆ ತಾಂಬೂಲ ನೀಡಿ. ಸಾಧ್ಯವಾದರೆ ಕಡ್ಲೆ ನೈವೇದ್ಯ, ಪಾಯಸ, ಸಿಹಿ ತಿಂಡಿಗಳು, ಹಣ್ಣುಗಳು ಇವುಗಳನ್ನು ನೈವೇದ್ಯವನ್ನಾಗಿ ಅರ್ಪಿಸಿ ನಂತರ ಮನೆಗೆ ಬಂದ ಮುತ್ತೈದೆಯರಿಗೆ ಹಂಚಿ.
ಈ ರೀತಿ ಮಾಡುವುದರಿಂದ ಲಕ್ಷ್ಮಿ ಕೃಪೆಗೆ ಪಾತ್ರರಾಗುವಿರಿ, ನಿಮ್ಮ ವೃತ್ತಿ ಜೀವನ, ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ, ಸಂಪತ್ತು ಹೆಚ್ಚಲಿದೆ.
ಈ ಮಂತ್ರಗಳನ್ನು ಪಠಿಸಿ
ನೀವು ನಿಮಗೆ ಸರಳವಾದ ಯಾವುದೇ ಲಕ್ಷ್ಮಿ ಮಂತ್ರ ಪಠಿಸಿ
'ಶ್ರೀಂ': 1008 ಬಾರಿ ಪಠಿಸಿ
ಓಂ ಸರ್ವಬಾಧಾ ವಿನಿರ್‌ಮುಕ್ತೊ ಧನ ಧಾನ್ಯಃ ಸುತಾನ್ವಿತಃ, ಮನುಷ್ಯೊ ಮತ್‌ಪ್ರಸಾದಿನ್ ಭವಿಷ್ಯತಿ ನ ಸನ್‌ಶಯಾ ಓಂ:"
"ಓಂ ಶ್ರಿಂಗ್ ಶ್ರಿಯೆ ನಮಃ".
"ಓಂ ಶ್ರೀ ಮಹಾಲಕ್ಷ್ಮೀಯೇ ಚ ವಿದ್ಮಹೇ ವಿಷ್ಣು ಪತ್ಮಿಯೇ ಚ ಧೀಮಹಿ ತನ್ನೊ ಲಕ್ಷ್ಮಿ ಪ್ರಚೋದಯಾತ್ ಓಂ".
"ಓಂ ಶ್ರೀಂ ಮಹಾ ಲಕ್ಷ್ಮೀಯೇ ನಮಃ".
"ಓಂ ಹ್ರೀಂ ಶ್ರೀಂ ಕ್ಲೀಂ ಮಹಾ ಲಕ್ಷ್ಮಿ ನಮಃ".
ಓಂ ಶ್ರೀಂ ಶ್ರೀ ಏ ನಮಃ
ಓಂ ಹ್ರೀಂ ಶ್ರೀಂ ಲಕ್ಷ್ಮೀಭ್ಯೋ ನಮಃ.
"ಓಂ ಶ್ರೀಂ ಹ್ರೀಂ ಶ್ರೀಂ ಕಮಲೆ ಕಮಲಲೆಯೆ ಪ್ರಸೀದಾ ಪ್ರಸೀದಾ ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೀಯೇ ನಮಃ".
ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್ ಪ್ರಸೀದ್ ಸಕಲ ಸೌಭಾಗ್ಯಂ ದೇಹಿ ದೇಹಿ ಓಂ ಶ್ರೀಂ ಹ್ರೀಂ ಶ್ರೀಂ ಓಂ ಮಹಾ ಲಕ್ಷ್ಮೀಯೈ ನಮಃ"
"ಓಂ ಶ್ರೀಂ ವಿಷ್ಣುಪತಿನ್ಯೇ ನಮಃ



Click it and Unblock the Notifications
