Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
'12th Fail': ಫೇಲ್ ಆಗಿ ಐಪಿಎಸ್ ಆಫೀಸರ್ ಆದ ಕತೆ, ಪ್ರತಿಯೊಬ್ಬ ವಿದ್ಯಾರ್ಥಿಗಳು ತಿಳಿದಿರಲೇಬೇಕಾದ ರಿಯಲ್ ಸ್ಟೋರಿ
12th Fail ಎಂಬ ಮೂವಿ ತುಂಬಾನೇ ಸದ್ದು ಮಾಡುತ್ತಿದೆ, ಸೋಷಿಯಲ್ ಮೀಡಿಯಾದಲ್ಲಿ ಈ ಚಿತ್ರದ ಬಗ್ಗೆ ತುಂಬಾನೇ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ, ಅದಕ್ಕೆ ಕಾರಣ ಐಪಿಎಸ್ ಆಫೀಸರ್ ಮನೋಜ್ ಕುಮಾರ್ ಶರ್ಮಾ ಮತ್ತು ಐ ಆರ್‌ಎಸ್ ಆಫೀಸರ್ ಶ್ರದ್ದಾ ಜೋಷಿಯವರ ರಿಯಲ್ ಸ್ಟೋರಿ ಆಗಿರುವುದು, ತುಂಬಾನೇ ಸ್ಪೂರ್ತಿದಾಯಕ ಕತೆಯಿದು.
ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಯೊಬ್ಬ ಯಶಸ್ವಿನ ಉತ್ತುಂಗಕ್ಕೆ ತಲುಪಿದ ಕತೆಯಿದು, ಆದ್ದರಿಂದ ಫೇಲ್ ಆದರೆ ಜೀವನದಲ್ಲಿ ಸೋತು ಹೋಗುತ್ತೇವೆ ಎಂದು ಭಾವಿಸಿ ಕೆಲವರು ಆತ್ಮಹತ್ಯೆಯ ಕೆಟ್ಟ ಆಲೋಚನೆ ಕೂಡ ಮಾಡುತ್ತಾರೆ, ಇವರು ಕತೆ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಪೂರ್ತಿ ತುಂಬುವಂತಿದೆ. 12ನೇ ತರಗತಿಯಲ್ಲಿ ಹಿಂದಿ ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲಿ ಫೇಲ್ ಆಗಿದ್ದರು, ಅಂಥವರು ಇಂದು ಐಪಿಎಸ್ ಆಫೀಸರ್.

ಮನೋಜ್ ಕುಮಾರ್ ಶರ್ಮಾ 1977ರಲ್ಲಿ ಜನನ, ಮಧ್ಯಪ್ರದೇಶದ ಬಿಲ್‌ಗೋನ್ ಎಂಬ ಚಿಕ್ಕ ಹಳ್ಳಿಯಲ್ಲಿ ಬೆಳೆದವರು. ಅವರು ತಂದೆ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು, ಅವರು ಕುಟುಂಬದಲ್ಲಿ ತುಂಬಾ ಆರ್ಥಿಕ ಸಂಕಷ್ಟವಿತ್ತು. ಆ ಹುಡುಗ ಶಾಲಾ ಅವಧಿಯಲ್ಲಿ ಅಷ್ಟೇನು ಚುರುಕು ಆಗಿರಲಿಲ್ಲ, 9, 10ನೇ ತರಗತಿಯನ್ನು 3ನೇ ದರ್ಜೆಯಲ್ಲಿ ಪಾಸಾಗಿದ್ದರು. 11ನೇ ತರಗತಿಯನ್ನು ಕಷ್ಟಪಟ್ಟು ಪಾಸಾದರು, ಆದರೆ 12 ತರಗತಿಯಲ್ಲಿ ಹಿಂದೆ ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲಿ ಡುಮ್ಕಿ ಹೊಡೆದರು. ನಂತರ ಮರುಪರೀಕ್ಷೆಯಲ್ಲಿ ಉಳಿದ ವಿಷಯಗಳನ್ನು ಕ್ಲಿಯರ್ ಮಾಡಿಕೊಂಡರು.
ಅವರ ಜೀವನದ ಪ್ರತಿಯೊಂದು ಘಟ್ಟದಲ್ಲಿಯೂ ಸವಾಲುಗಳನ್ನು ಎದುರಿಸಿದ್ದರು, ಆದರೂ ತಮ್ಮ ಛಲ ಬಿಡದೆ ಮುನ್ನುಗ್ಗಿ ಈಗ ಎಲ್ಲರಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಓದಿನ ಖರ್ಚು ಭರಿಸಲು ಸಿಕ್ಕಿದ ಕೆಲಸವೆಲ್ಲಾ ಮಾಡಿದ್ದಾರೆ, ಟೆಂಪೋ ಡ್ರೈವರ್, ಲೈಬ್ರರಿಯಲ್ಲಿ ಕೆಲಸ, ಕೆಲವು ಶ್ರೀಮಂತ ವ್ಯಕ್ತಿಗಳ ನಾಯಿಯನ್ನು ಕರೆದುಕೊಂಡು ಹೋಗುವ ಕೆಲಸ ಹೀಗೆ ತಮ್ಮ ಓದಿನ ಖರ್ಚಿಗೆ ಸಾಕಷ್ಟು ಕಷ್ಟಪಟ್ಟಿದ್ದಾರೆ, ಕೆಲವೊಮ್ಮ ಅವರು ರಸ್ತೆ ಬದಿಯಲ್ಲಿ ಮಲಗಿದ್ದಾರೆ, ಅವರ ಪಕ್ಕ ಭಿಕ್ಷುಕರು ಮಲಗಿ ಇರುತ್ತಿದ್ದರಂತೆ. UPSC ಕೋಚಿಂಗ್ ಸಮಯದಲ್ಲಿ ಉತ್ತರಕಾಂಡದ ಹುಡುಗಿ ಉತ್ತರ ಶ್ರದ್ದಾ ಜೋಷಿ ಜೊತೆ ಪ್ರೀತಿಯಲ್ಲಿ ಬೀಳುತ್ತಾರೆ, ಜೋಷಿ ಮೊದಲ ಪರೀಕ್ಷೆಯಲ್ಲಿಯೇ ತೇರ್ಗಡೆಯಾಗಿ ಈಗ IRS ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸ್ಪೂರ್ತಿ ತುಂಬುವ ಲವ್‌ಸ್ಟೋರಿ
ಇವರ ಲವ್‌ಸ್ಟೋರಿ ಕೂಡ ಸ್ಪೂರ್ತಿದಾಯಕವಾಗಿದೆ, ಜೋಷಿಯವರು ಮನೋಜ್ ಅವರನ್ನು
UPSC ಕೋಚಿಂಗ್ ಸಮಯಲ್ಲಿ ಭೇಟಿಯಾಗುತ್ತಾರೆ. ಮನೋಜ್ ಅವರು ಪ್ರಿಲಿಮರಿ ಯಾವುದೇ ಕೋಚಿಂಗ್ ಇಲ್ಲದೆ ಪಾಸಾದರು ಎಂದು ಕೇಳಿ ಇಂಪ್ರೆಸ್ ಆಗುತ್ತಾರೆ, ಇಬ್ಬರು ಪ್ರೀತಿಸಲು ಪ್ರಾರಂಭಿಸುತ್ತಾರೆ, ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತಾರೆ. ಮನೋಜ್ ಐಪಿಎಸ್ ಆಫೀಸರ್ ಆದ ಮೇಲೆ ಇಬ್ಬರು ಮದುವೆಯಾಗುತ್ತಾರೆ.
ಮದುವೆಯಲ್ಲಿಯೂ ಇದೆ ಇಂಟೆರೆಸ್ಟಿಂಗ್ ಸ್ಟೋರಿ
ಜೋಷಿಯವರು ಉತ್ತರಕಾಂಡದಿಂದ ಬಂದವರು, ಆದರೆ ಮನೋಜ್ ಕುಮಾರ್ ಶರ್ಮಾ ಅವರು ಮಧ್ಯಪ್ರದೇಶದಲ್ಲಿ ಚಂಬಾಲ್ ಕಣಿವೆ ಸಮೀಪದವರು, ಅಲ್ಲಿ ಡಕಾಯಿತರ ಕಾಟ ಅಧಿಕ. ಇವರ ಮದುವೆಯಲ್ಲಿ ಡಬಲ್ ಬ್ಯಾರಲ್ ಗನ್ ಹಿಡಿದು ಓಡಾಡುವ ವ್ಯಕ್ತಿಗಳನ್ನು ನೋಡಿ ಜೋಷಿ ಕುಟುಂಬದವರು ಶಾಕ್ ಆಗಿದ್ದರಂತೆ. ಮತ್ತೊಂದು ವಿಷಯವೆಂದರೆ ಇವರು ಇವರ ಮದುವೆಗೆ 1500 ಬರುತ್ತಾರೆ ಎಂದು ಲೆಕ್ಕಾಚಾರ ಹಾಕಿ ಊಟಕ್ಕೆ ಸಿದ್ಧತೆ ಮಾಡಿದ್ದರು, ಆದರೆ ನೋಡಿದರೆ 4000ಕ್ಕೂ ಅಧಿಕ ಜನ ನೆರೆದಿದ್ದಾರೆ, ಕೊನೆಗೆ ಮನೋಜ್ ಕುಮಾರ್ ಶರ್ಮಾ ಅವರು ಮಾಡಿರುವ ಸಾರಿಗೆ ನೀರು ಸೇರಿಸಲು ಹೇಳಿದ್ದರಂತೆ, ಹಾಗೆ ಅಷ್ಟೋ ಜನರಿಗೆ ಬಡಿಸಿದರಂತೆ.
ಜೀವನದಲ್ಲಿ ಏನೂ ಇಲ್ಲದಿದ್ದರೂ ಸಾಧಿಸಬಹುದು ಎಂಬುವುದಕ್ಕೆ ಸ್ಪೂರ್ತಿ ಇವರ ಕತೆ'
ಓದುತ್ತಿರುವ ಪ್ರತಿಯೊಂದು ಮಕ್ಕಳಿಗೂ ಇವರ ಕತೆ ತಿಳಿದಿರಬೇಕು, 12 ಕ್ಲಾಸ್‌ನಲ್ಲಿ ಫೇಲ್ ಆದರೂ ನಂತರದ ಇವರ ಸಾಧನೆ ಖಂಡಿತ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವಂತಿದೆ ಅಲ್ವಾ?



Click it and Unblock the Notifications