Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ವಿಶ್ವ ಮಲೇರಿಯಾ ದಿನ: ಈ ಅನಾಫಿಲಿಸ್ ಸೊಳ್ಳೆ ಬಗ್ಗೆ ನಿಮಗೆಷ್ಟು ಗೊತ್ತು? ಮಲೇರಿಯಾಗೆ ಮನೆಮದ್ದು ಇಲ್ಲಿದೆ!
ಮಲೇರಿಯಾ ಸೊಳ್ಳೆಗಳಿಂದ ಹರಡುವಂತಹ ಅಪಾಯಕಾರಿ ಹಾಗೆ ಅತ್ಯಂತ ಹೆಚ್ಚು ಸಾವಿಗೂ ಕಾರಣವಾಗಿರುವ ಕಾಯಿಲೆ. ಭಾರತದಲ್ಲಿ ಮಲೇರಿಯಾ ಪ್ರಕರಣಗಳೂ ಹಾಗೂ ಅವುಗಳಿಂದ ಉಂಟಾಗುವ ಸಾವುಗಳ ಪ್ರಮಾಣವೂ ಹೆಚ್ಚಾಗಿದೆ. ಈ ಸೊಳ್ಳೆಗಳ ಕಡಿತವು ವ್ಯಕ್ತಿಯ ಸಾವಿಗೆ ಕಾರಣವಾಗುವಷ್ಟು ಅಪಾಯಕಾರಿಯಾಗಿವೆ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ ಈ ಸೊಳ್ಳೆಗಳ ವಿರುದ್ಧ ಹೋರಾಡಲು ಹಲವು ಜಾಗೃತಿ ಕಾರ್ಯಗಳು, ಹಾಗೂ ಪರಿಹಾರ ಮಾರ್ಗಗಳನ್ನು ಜನರ ಮುಂದಿಡುವ ಕಾರ್ಯ ಮಾಡುತ್ತಲೇ ಬಂದಿದೆ.
ಹಾಗೆ ಪ್ರತಿ ವರ್ಷ ಏಪ್ರಿಲ್ 25ರಂದು ವಿಶ್ವ ಮಲೇರಿಯಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗಿದೆ. ಈ ದಿನ ಮಲೇರಿಯಾ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತದೆ. ಪ್ಲಾಸ್ಮೋಡಿಯಂ ಕುಲದ 5 ಜಾತಿಯ ಏಕಕೋಶ ಪರಾವಲಂಬಿ ಸೊಳ್ಳೆಗಳ ಮೂಲಕ ಈ ಮಲೇರಿಯಾ ಉಂಟಾಗುತ್ತದೆ. ಈ ಯಾವುದಾದರು ಸೋಂಕು ಹೊಂದಿರುವ ಹೆಣ್ಣು ಅನಾಫಿಲಿಸ್ ಸೊಳ್ಳೆಯ ಕಡಿತದಿಂದ ಈ ಮಲೇರಿಯಾ ಹರಡಲಿದೆ.

ಸೊಳ್ಳೆಯ ದೇಹದಲ್ಲಿ ಪರಾವಲಂಬಿಯು ಕೆಂಪು ರಕ್ತಕಣದಲ್ಲಿ ಸೇರುವ ಪರಿಣಾಮ ಇಡೀ ದೇಹದ ಮೇಲೆ ಇದು ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗಲಿದೆ. ಸಾಮಾನ್ಯವಾಗಿ ಈ ಅನಾಫಿಲಿಸ್ ಸೊಳ್ಳೆ ಕಡಿದಾಗ ಸಾಮಾನ್ಯ ಅನಾರೋಗ್ಯ ಲಕ್ಷಣಗಳು ನಿಧಾನವಾಗಿ ಕಾಣಿಸಿಕೊಂಡು ನಂತರ ಜೀವಕ್ಕೆ ಅಪಾಯ ತರುವುದರಿಂದಾಗಿ ಸಾವಿನ ಪ್ರಮಾಣ ಏರಿಕೆಗೆ ಕಾರಣಗಾಗಿದೆ.
ಜ್ವರ, ಶೀತ, ಬೆವರುವುದು, ತಲೆನೋವು ಮತ್ತು ಸ್ನಾಯು ನೋವು ಕಾಣಿಸಿಕೊಳ್ಳುವುದು ಮಲೇರಿಯಾದ ಸಾಮಾನ್ಯ ಲಕ್ಷಣವಾಗಿದೆ. ಹಾಗೆ ಕೆಲವೊಂದು ಪ್ರಕರಣದಲ್ಲಿ ಅಂಗಾಂಗ ವೈಕಲ್ಯ ಸಹ ಉಂಟಾಗುವುದು ನೋಡಬಹುದು. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಇದು ಬಹಳ ಬೇಗ ಅಪಾಯ ತಂದೊಡ್ಡಲಿದೆ.
ಈ ಮಲೇರಿಯಾ ಹರಡುವಿಕೆ ತಡೆಯಲು ತಜ್ಞರ ತಂಡ ಈ ಅನಾಫಿಲಿಸ್ ಸೊಳ್ಳೆಯ ಸಂತಾನೋತ್ಪತ್ತಿ ಆಗದಂತೆ ತಡೆಯಲು ಮುಂದಾಗಿರುವುದು ನೋಡಬಹುದು. ಹಾಗೆ ಈ ಸೊಳ್ಳೆಗಳ ನಿರ್ಮೂಲನೆಯೇ ಮಲೇರಿಯಾ ನಿಯಂತ್ರಣದ ಪ್ರಮುಖ ಅಸ್ತ್ರವಾಗಿದೆ. ಹಾಗೆ ನಾವು ಮನೆಯ ಪರಿಸರದಲ್ಲಿಯೂ ಹಲವು ಕ್ರಮ ತೆಗೆದುಕೊಳ್ಳುವ ಮೂಲಕ ಮಲೇರಿಯಾ ಹರಡದಂತೆ ನಮ್ಮನ್ನು ಕಾಪಾಡಿಕೊಳ್ಳಬಹುದು. ಹಾಗಾದ್ರೆ ನಾವು ಮನೆಯಲ್ಲಿ ಯಾವ ಕ್ರಮ ಅನುಸರಿಸಿ ಈ ಮಲೇರಿಯಾ ತಡೆಯಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಕಿತ್ತಳೆ ರಸ
ನೀವು ಮಲೇರಿಯಾಗೆ ಒಳಗಾದರೆ ಅಥವಾ ಸೊಳ್ಳೆ ಕಡಿತದ ಭಯದಲ್ಲಿದ್ದರೆ ನಿತ್ಯ ಮನೆಯಲ್ಲಿ ಕಿತ್ತಳೆ ರಸ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕಿತ್ತಳೆ ರಸದಲ್ಲಿನ ವಿಟಮಿನ್ ಸಿ ಅಂಶ ರೋಗ ನಿರೋಧಕ ಶಕ್ತಿ ಹೆಚ್ಚಿಸಲಿದೆ. ಹಾಗೆ ನಿಂಬೆ ಜ್ಯೂಸ್ ಸಹ ಇದಕ್ಕೆ ಪೂರಕವಾಗಿದೆ. ಹೀಗಾಗಿ ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಹಣ್ಣುಗಳ ಈ ಸಮಯದಲ್ಲಿ ಸೇವಿಸುವುದು ರೋಗವನ್ನು ತಡೆಯಲು ಒಂದು ಮಾರ್ಗವಾಗಿದೆ.
ಶುಂಠಿ
ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತ ನಿವಾರಕ ಗುಣಗಳ ಹೊಂದಿರುವ ಶುಂಠಿ ನೋವು ನಿವಾರಕ ಹಾಗೂ ದೇಹದ ಸಮತೋಲನ ಕಾಪಾಡಲು ನೆರವಾಗುತ್ತದೆ. ಹೀಗಾಗಿ ಬಿಸಿ ನೀರಿನಲ್ಲಿ ಶುಂಠಿಯನ್ನು ತುರಿದು ಹಾಕಿ ಅದಕ್ಕೆ ಜೇನು ತುಪ್ಪ ಮಿಶ್ರಣ ಸೇರಿಸಿ ಈ ಆನೀರು ಸೇವಿಸುವುದು ನಿಮ್ಮ ದೇಹ ಇಂತಹ ವೈರಸ್‌ಗಳ ವಿರುದ್ಧ ಹೋರಾಡಲು ಅಣಿಯಾಗುವಂತೆ ಮಾಡಲಿದೆ.
ಆಪಲ್ ಸೈಡರ್ ವಿನೆಗರ್
ಆಪಲ್ ಸೈಡರ್ ವಿನೆಗರ್ ನೀವು ಅಡುಗೆಯಲ್ಲಿ ಬಳಸಿರಬಹುದು. ಇದು ಮಲೇರಿಯಾದಿಂದ ಉಂಟಾಗುವಂತಹ ಜ್ವರವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಈ ವಿನೆಗರ್ ಅನ್ನು ಬೌಲ್‌ಗೆ ಹಾಕಿ ಅದಕ್ಕೆ ನೀರು ಸಹ ಹಾಕಿ ಮಿಕ್ಸ್ ಮಾಡಿ ಬಟ್ಟೆಯನ್ನು ಅದರಲ್ಲಿ ನೆನೆಸಿ ನಂತರ ಹಣೆಯ ಮೇಲೆ ಹಾಕಿದರೆ ಜ್ವರ ಕಡಿಮೆಯಾಗುತ್ತದೆ.
ದ್ರಾಕ್ಷಿಹಣ್ಣು
ಹಸಿ ದ್ರಾಕ್ಷಿ ಮಲೇರಿಯಾ ಸೋಂಕಿನ ತೀವ್ರತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ರಸವು ಕ್ವಿನೈನ್ ಎಂಬ ಅಂಶವನ್ನು ಹೊಂದಿದೆ ಇದು ಮಲೇರಿಯಾ ವಿರೋಧಿ ಗುಣವನ್ನು ಸಹ ಹೊಂದಿದ್ದು, ಬಿಸಿ ನೀರಿನಲ್ಲಿ ದ್ರಾಕ್ಷಿ ಹಣ್ಣು ಹಾಕಿ ಬಳಿಕ ಕುದಿಸಿ ಜರಡಿ ಹಿಡಿದು ಆ ನೀರು ಸೇವಿಸಬೇಕು.
(ಹಕ್ಕುತ್ಯಾಗ: ಈ ಮೇಲಿನ ಲೇಖನದಲ್ಲಿ ನೀಡಲಾಗಿರುವ ಸಲಹೆಯು ಕೇವಲ ಮಾಹಿತಿ ನೀಡಲು ಪ್ರಕಟಿಸಲಾಗಿದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಗಳಿಗೆ ಪರ್ಯಾಯವಲ್ಲ. ಈ ಮೇಲಿನ ಉಪಾಯಗಳ ಪ್ರಯೋಗಿಸುವ ಮೊದಲು ಸೂಕ್ತ ವೈದ್ಯರ ಸಲಹೆ ಪಡೆಯಲು ಸೂಚಿಸಲಾಗಿದೆ)



Click it and Unblock the Notifications
