Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಈರುಳ್ಳಿಯಲ್ಲಿ ಕಪ್ಪು ಕಲೆಗಳು ಮೂಡುವುದು ಏಕೆ..? ಇದು ಸೇವನೆಗೆ ಯೋಗ್ಯವೇ..?
ನಾವು ಎಷ್ಟೇ ಜಾಗರುಕತೆಯಿಂದ ತರಕಾರಿ ತಂದರೂ ಒಂದೆರಡು ಬೇಗ ಹಾಳಾಗುತ್ತವೆ. ಇಲ್ಲದೆ ಒಳಗೆ ಕೊಳೆತಿರುತ್ತವೆ. ಆದ್ರೆ ನಾವು ಕೊಳೆತಿರುವ ತರಕಾರಿಯನ್ನು ಅರ್ಧ ಕತ್ತರಿಸಿಯೋ ಇಲ್ಲವೆ ಚೆನ್ನಾಗಿ ತೊಳೆದು ಬಳಸುವ ಪ್ರಯತ್ನ ಮಾಡಿರುತ್ತೇವೆ. ಆದ್ರರೆ ಈ ರೀತಿ ತರಕಾರಿಗಳ ಬಳಸುವುದು ಉತ್ತಮ ಅಭ್ಯಾಸವಂತೂ ಅಲ್ಲ.
ಇನ್ನು ತರಕಾರಿಗಳಲ್ಲಿ ತುಂಬ ದಿನ ಹಾಳಾಗದೆ ಇರುವುದು ಅಂದ್ರೆ ಅದು ಈರುಳ್ಳಿ. ಆದ್ರೆ ನೀವು ಎಂದಾದರು ಗಮನಿಸಿದ್ದೀರಾ? ನೀವು ಅಡುಗೆ ಮನೆಯಲ್ಲಿಟ್ಟ ಈರುಳ್ಳಿ ಕಪ್ಪಾಗಿರುತ್ತದೆ. ಅಂದ್ರೆ ಅದೇನು ಕೊಳೆತಿರುವುದಿಲ್ಲ. ಆದ್ರೆ ಕಪ್ಪಾದ ಮಸಿ ಈರುಳ್ಳಿ ಮೇಲೆ ಬಂದಿರುತ್ತದೆ.

ಹಾಗಾದರೆ ಈ ರೀತಿ ಕಪ್ಪಾಗಿರುವ ಈರುಳ್ಳಿ ಸೇವಿಸಲು ಯೋಗ್ಯವೇ? ಕಪ್ಪಾದ ಈರುಳ್ಳಿ ಸೇವಿಸುವುದರಿಂದ ಏನಾಗಲಿದೆ? ಇದರಿಂದ ಏನಾದರು ಸಮಸ್ಯೆ ಏದುರಾಗುತ್ತಾ? ಕೆಲವು ಈರುಳ್ಳಿ ಸಿಪ್ಪೆ ತೆಗೆಯುವಾಗ ಅದರ ಮೇಲೆ ಕಪ್ಪು ಮಸಿ ರೀತಿಯ ವಸ್ತು ಹಿಡಿದಿರುತ್ತದೆ. ಎಷ್ಟೋ ಜನಕ್ಕೆ ಈ ರೀತಿ ಇರುವ ಈರುಳ್ಳಿ ತಿನ್ನಬಹುದೇ..? ಆ ಕಪ್ಪು ಅಚ್ಚು ದೇಹಕ್ಕೆ ಹಾನಿ ಮಾಡಬಹುದೇ ಎಂಬ ಗೊಂದಲವಿದೆ ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಅಡುಗೆಯಲ್ಲಿ ಈರುಳ್ಳಿ ಬಹುಮುಖ್ಯ ವಸ್ತು. ಅದರಲ್ಲೂ ರುಚಿಕರ ಅಡುಗೆಗೆ ಈರುಳ್ಳಿ ಮುಖ್ಯ. ಬಾಣಲೆಯಲ್ಲಿ ಗೋಲ್ಡನ್ ಬ್ರೌನ್ ರವರೆಗೆ ಫ್ರೈ ಮಾಡಿ ಎಲ್ಲಾ ಪದಾರ್ಥಗಳಿಗೂ ಈರುಳ್ಳಿ ಸೇರಿಸುತ್ತಾರೆ. ಅದರಲ್ಲೂ ಬಿರಿಯಾನಿಗೆ ಹೆಚ್ಚು ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿದರೆ ಅದರ ರುಚಿ ಹೆಚ್ಚು.
ರುಚಿ ಅಡುಗೆಯ ಒಂದು ಅಂಶವಾಗಿದ್ದರೆ, ಅದರ ಪ್ರಯೋಜನಗಳು ಹಲವಾರು. ಈರುಳ್ಳಿ ಜೀರ್ಣಕಾರಿ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯಕ್ಕೂ ಇದು ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ನಮ್ಮ ದೇಹದಲ್ಲಿನ ಕೆಲವು ಅಲರ್ಜಿ ಸಮಸ್ಯೆಗಳು, ಕಣ್ಣಿನ ತುರಿಕೆ, ಗಂಟಲು ಕಿರಿಕಿರಿ ಮತ್ತು ನೆಗಡಿ ಮುಂತಾದ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿದೆ. ಈರುಳ್ಳಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಕಪ್ಪು ಮಸಿಯನ್ನು ಆಸ್ಪರ್ಜಿಲಸ್ ನೈಗರ್ ಎಂದು ಕರೆಯಲಾಗುತ್ತದೆ. ಈ ರೀತಿಯ ಶಿಲೀಂಧ್ರವು ಮಣ್ಣಿನಲ್ಲಿ ಕಂಡುಬರುತ್ತದೆ. ಈ ಕಪ್ಪು ಅಚ್ಚು ಮ್ಯೂಕೋರ್ಮೈಕೋಸಿಸ್ ಅಲ್ಲ. ಆದರೆ ಈ ಕಪ್ಪು ಅಚ್ಚು ಒಂದು ರೀತಿಯ ವಿಷವನ್ನು ಹೊರಸೂಸುತ್ತದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.
ಆಸ್ಪರ್ಜಿಲಸ್ ನೈಗರ್ ಅಪಾಯಕಾರಿಯೇ?
ಈ ಕಪ್ಪು ಬಣ್ಣದ ಮಸಿಯು ಜೀವಕ್ಕೆ ಅಪಾಯಕಾರಿಯಲ್ಲದಿದ್ದರೂ, ಇದು ಅಲರ್ಜಿಯನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಈಗಾಗಲೇ ಅಲರ್ಜಿ ಇರುವವರು ಈ ಕಪ್ಪು ಬಣ್ಣದ ಮಸಿ ಹೊಂದಿರುವ ಈರುಳ್ಳಿಯನ್ನು ಸೇವಿಸದಿರುವುದೇ ಉತ್ತಮ ಎಂದು ಹೇಳುತ್ತಾರೆ. ಅಸ್ತಮಾ ಇರುವವರು ಅದನ್ನು ಸೇವಿಸಿದಾಗ ಪರಿಣಾಮ ಬೀರಬಹುದು ಎಂದೂ ಹೇಳಲಾಗುತ್ತದೆ.
ತೊಳೆದು ಸೇವಿಸಬಹುದು?
ಈ ರೀತಿ ಕಪ್ಪು ಕಲೆ ಅಥವಾ ಮಸಿ ರೀತಿ ಇರುವ ಈರುಳ್ಳಿಯನ್ನು ಸಿಪ್ಪೆ ಸುಲಿದ ಬಳಿಕ ನೀರಿನಲ್ಲಿ ನೆನೆಸಿಡಬೇಕು. ಬಳಿಕ ಚೆನ್ನಾಗಿ ಕಪ್ಪು ಕಲೆಗಳು ಹೋಗುವವರೆಗೂ ತೊಳೆದು ಸೇವಿಸಬಹುದು, ಇಲ್ಲವೆ ಅಡುಗೆಗೆ ಬಳಸಬಹುದು. ಆದರೆ ಕಪ್ಪ ಮಸಿಯಾದ ಈರುಳ್ಳಿಯ ಸಿಪ್ಪೆ ತೆಗೆದು ಫ್ರಿಡ್ಜ್‌ನಲ್ಲಿಟ್ಟು ಅಡುಗೆಗೆ ಬಳಸುವುದು ಉತ್ತಮವಲ್ಲ.



Click it and Unblock the Notifications