Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮನೆಯೊಳಗೆ ಯಾವ ಪಕ್ಷಿ, ಪ್ರಾಣಿ ಬಂದರೆ ಅಪಶಕುನ..! ಇಲ್ಲಿದೆ ಮಾಹಿತಿ
ಮನೆಯಲ್ಲಿ ಹುಳು, ಕೀಟ, ಹಲ್ಲಿ, ಹಾವು ಬರುವುದು ಸಾಮನ್ಯವೇ. ಅದರಲ್ಲೂ ಮಳೆಗಾಲದಲ್ಲಂತು ಕೀಟಗಳು ಆಶ್ರಯ ಅರಸಿ ಮನೆಯೊಳಗೆ ಬಂದು ಬಿಡುತ್ತವೆ. ಹಾಗೆ ಹಿಂದೂ ಧರ್ಮದಲ್ಲಿ ಹಾಗೂ ವಾಸ್ತು ಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವೊಂದು ಪ್ರಾಣಿ, ಪಕ್ಷಗಳು, ಮನೆಯೊಳಗೆ ಬಂದರೆ ಅಪಶಕುನ ಎನ್ನಲಾಗಿದೆ.
ಪ್ರಾಣಿ, ಪಕ್ಷಿಗಳು ಮನೆಯೊಳಗೆ ಬರುವುದು ಈ ಶಾಸ್ತ್ರಗಳ ಪ್ರಕಾರ ಅಪಶಕುನಕ್ಕೆ ದಾರಿಯಾಗುತ್ತದೆ. ಅದರಲ್ಲೂ ಕೆಲವೊಮ್ಮೆ ಪ್ರಾಣಿ ಅಥವಾ ಪಕ್ಷಿ ಮನೆಯಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಎಂದು ವಿವರಿಸಲಾಗಿದೆ. ಶಕುನಗಳು ಎಂದರೆ ಅಲ್ಲಿ ಕೆಟ್ಟ ಶಕುನ ಹಾಗೂ ಶುಭ ಶಕುನ ಎಂಬುದಿದೆ. ಕೆಲವೊಮ್ಮೆ ನಾವು ಎಲ್ಲಿಯಾದರು ಹೋಗುವಾಗ ಕೆಲವೊಂದು ಪ್ರಾಣಿ, ಪಕ್ಷಿ ಎದುರಾದರೆ ಆ ಕೆಲಸ ಶುಭವಾಗಲೂ ಬಹುದು ಹಾಗೆ ಅಶುಭವೂ ಆಗಬಹುದು.

ಹಾಗಾದ್ರೆ ನಾವಿಂದು ಯಾವ ಪಕ್ಷ ಅಥವಾ ಪ್ರಾಣಿ ಮನೆಯೊಳಗೆ ಬರಬಾರದು ಎಂಬುದನ್ನು ತಿಳಿದುಕೊಳ್ಳೋಣ.
ಕಾಗೆ
ಕಾಗೆಯನ್ನು ಶನಿದೇವರ ವಾಹನ ಎಂದು ನಾವು ಪರಿಗಣಿಸಿದ್ದೇವೆ. ಕಾಗೆ ಶುಭ ಹಾಗೂ ಅಶುಭ ಸೂಚಕವೂ ಹೌದು. ಪಿಂಡ ಪ್ರಧಾನ ಕಾರ್ಯದಲ್ಲಿ ಕಾಗೆ ಶುಭ ಸೂಚಕವಾಗಿಯೂ ಶುಭ ಕಾರ್ಯಗಳಲ್ಲಿ ಅದು ಅಶುಭವಾಗಿಯೂ ಕಾಣಿಸಿಕೊಳ್ಳಲಿದೆ. ಆದರೆ ಮನೆಯ ಮುಂದೆ ಕಾಗೆ ಪದೇ ಪದೇ ಕೂಗುತ್ತಿದ್ದರೆ ಮನೆಗೆ ಯಾರಾದರು ಅತಿಥಿಗಳು ಬರುತ್ತಾರೆ ಎಂದು ನಂಬಲಾಗುತ್ತದೆ.
ಆದರೆ ಕಾಗೆ ಮನೆಯೊಳಗೆ ಬಂದು ಬಿಟ್ಟರೆ ಅದು ಅಶುಭದ ಸಂಕೇತವಂತೆ. ಅಲ್ಲದೆ ಆರ್ಥಿಕ ಸಂಕಷ್ಟ ಕಾದಿದೆ ಎಂಬ ಸೂಚಕವಂತೆ. ಇನ್ನು ನಿಮ್ಮ ವಾಹನದ ಮೇಲೆ ಪದೇ ಪದೇ ಕಾಗೆ ಕೂರುತ್ತಿದ್ದರೆ ಅದೇ ವಾಹನ ನಿಮಗೆ ಕಂಟಕವಾಗಬಹುದು. ಅದರಿಂದ ಹಾನಿ ಇರಬಹುದು ಎಂದು ಅಂದಾಜಿಸಲಾಗಿದೆ.
ಜೇನು ಗೂಡು
ಸಾಮಾನ್ಯವಾಗಿ ಜನರಿಂದ ದೂರವೇ ಉಳಿಯುವ ಜೇನುಗಳು ಕೆಲವೊಮ್ಮೆ ಮನೆಯೊಳಗೆ ಇಲ್ಲವೆ ಮನೆಗೆ ಅಂಟಿಕೊಂಡಂತೆ ಗೂಡು ಕಟ್ಟುತ್ತವೆ. ಅದರಲ್ಲೂ ಜೇನು ಹುಳುಗಳು ಈಶಾನ್ಯ ದಿಕ್ಕಿನಲ್ಲಿ ಕಟ್ಟಿದ್ದರೆ ಒಳ್ಖೆಯ ಸೂಚಕ, ಆದರೆ ಆಗ್ನೇಯ ದಿಕ್ಕಿನಲ್ಲಿ ಜೇನು ಕಟ್ಟಿದರೆ ಕಲಹಕ್ಕೆ ಕಾರಣವಾಗುತ್ತದೆ. ಹಾಗೆ ಜೇನು ಮನೆಯೊಳಗೆ ಸಾಯುತ್ತಿದ್ದರೆ ಅದು ಮನೆ ಯಜಮಾನನ ಆರೋಗ್ಯಕ್ಕೆ ಹಾಣಿಯಾಗುವ ಮುನ್ಸೂಚನೆಯಂತೆ.
ಹಾವು
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹಾವುಗಳು ಮನೆಯೊಳಗೆ ಬರುವುದು ನೋಡಬಹುದು. ಪದೇ ಪದೇ ಮನೆಯೊಳಗೆ ಹಾವುಗಳು ಬರುತ್ತಿದ್ದರೆ ಸರ್ಪದೋಷ ಇದೆ ಎಂಬ ಮುನ್ಸೂಚನೆ. ಹಾವುಗಳು ಬೆಚ್ಚಗಿರುವ ಜಾಗ ಹುಡುಕುವುದರಿಂದ ಮನೆಯೊಳಗೆ ಬರುವುದು ಕಾಮನ್, ಆದರೆ ನಾಗರಹಾವುಗಳು ಪದೇ ಪದೇ ಮನೆಯೊಳಗೆ ಬರಬಾರದು. ಇದು ಕಾಲ ಸರ್ಪ ದೋಷದ ಮುನ್ಸೂಚನೆಯಾಗಿರುತ್ತದೆ.
ಬಾವಲಿ
ಬಾವಲಿಗಳು ರಾತ್ರಿ ಸಂಚಾರಿಗಳು, ಆದರೆ ಅವು ನಿಮ್ಮ ಮನೆಯೊಳಗೆ ಬಂದು ಸೇರಿಕೊಳ್ಳುವುದು ಮನೆಗೆ ಶ್ರೇಯಸ್ಸಲ್ಲ. ಮನೆಯ ಮೇಲೆ ಕೆಟ್ಟ ರೀತಿಯ ಪ್ರಯೋಗ ನಡೆದಿದ್ದರೆ ಮಾತ್ರವೆ ಈ ಬಾವಲಿಗಳು ಮನೆಯೊಳಗೆ ಉಳಿಯುತ್ತವೆ. ಹಾಗೆ ಕೆಲವೊಮ್ಮೆ ಸತ್ತು ಬೀಳಬಹುದು. ಇದು ಕೆಟ್ಟದರ ಮುನ್ಸೂಚನೆಯಾಗಿರಲಿದೆ.



Click it and Unblock the Notifications

