Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸಣ್ಣ ಜಾಗದಲ್ಲೂ ಹಸಿರು! ಮಳೆಗಾಲದಲ್ಲಿ ಲಂಬ ತೋಟಗಾರಿಕೆ ಪ್ರಯತ್ನಿಸಿ.. ಇದು ಸ್ಮಾರ್ಟ್ ವಿಧಾನ
ಸಣ್ಣ ಜಾಗದಲ್ಲೂ ಹಸಿರು.. ಇಲ್ಲಿದೆ ಸ್ಮಾರ್ಟ್ ವಿಧಾನ. ಬೆಂಗಳೂರಿನಂತಹ ನಗರಗಳಲ್ಲಿ ಸ್ಥಳದ ಕೊರತೆ ಸಾಮಾನ್ಯ. ಇಲ್ಲಿ ಹಸಿರನ್ನು ಬೆಳೆಸುವ ಕೆಲವ ತುಸು ಕಷ್ಟಕರ. ಆದರೆ, ಲಂಬ ತೋಟಗಾರಿಕೆಯು ಈ ಸಮಸ್ಯೆಗೆ ಸುಲಭ ಪರಿಹಾರವಾಗಿದೆ. ಅದರಲ್ಲೂ ಮಳೆಗಾಲದ (Monsoon) ಸಮಯದಲ್ಲಿ ಇದು ಹೆಚ್ಚು ಉಪಯುಕ್ತ. ಮಾನ್ಸೂನ್‌ನಲ್ಲಿ ಲಂಬ ತೋಟಗಾರಿಕೆಯು (Vertical Gardening) ನಿಮ್ಮ ಮನೆಯನ್ನು ಸುಂದರವಾಗಿಸುತ್ತದೆ. ಅಲ್ಲದೆ, ಪರಿಸರವನ್ನು ಸಹ ರಕ್ಷಿಸುತ್ತದೆ. ಲಂಬ ತೋಟಗಾರಿಕೆಯ ಪ್ರಯೋಜನಗಳು ಮತ್ತು ಲಂಬ ತೋಟಗಾರಿಕೆಯನ್ನು ಹೇಗೆ ಮಾಡುವುದು? ಎಂಬ ಬಗ್ಗೆ ತಿಳಿಯೋಣ ಬನ್ನಿ.
ಉದ್ಯಾನವನ ಮಾಡಲು ಹೆಚ್ಚು ಸ್ಥಳವಿಲ್ಲದಿದ್ದರೆ, ಲಂಬ ತೋಟಗಾರಿಕೆ ಸೂಕ್ತವಾಗಿದೆ. ಇದು ಗೋಡೆಗಳನ್ನು ತಂಪಾಗಿರಿಸುತ್ತದೆ. ಇದು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುತ್ತದೆ. ಈ ಹಚ್ಚ ಹಸಿರಿನ ಸಸ್ಯಗಳು ನಿಮ್ಮ ಮನೆಯ ಗೋಡೆಗಳು ಮತ್ತು ಬಾಲ್ಕನಿಗಳಿಗೆ ಹೊಸ ನೋಟವನ್ನು ನೀಡುತ್ತವೆ. ಮಾನ್ಸೂನ್‌ನಲ್ಲಿ ಲಂಬ ತೋಟಗಾರಿಕೆ ಏಕೆ ವಿಶೇಷ? ಮಳೆಗಾಲದಲ್ಲಿ ಯಾವ ಸಸ್ಯಗಳನ್ನು ನೆಡುವುದು ಒಳ್ಳೆಯದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಲಂಬ ತೋಟಗಾರಿಕೆ ಎಂದರೇನು?
ಲಂಬ ತೋಟಗಾರಿಕೆ ಎಂದರೆ ಗಿಡಗಳನ್ನು ನೆಲದ ಮೇಲೆ ಹರಡುವ ಬದಲು ಗೋಡೆಗಳ ಮೇಲೆ ಬೆಳೆಸುವುದು. ಅಂದರೆ, ನಿಮ್ಮ ಮನೆಯ ಬಾಲ್ಕನಿ, ಗೋಡೆ ಅಥವಾ ಯಾವುದೇ ಖಾಲಿ ಜಾಗದಲ್ಲಿ ನೀವು ಸಸ್ಯಗಳನ್ನು ಬೆಳೆಸಬಹು. ಮಳೆಗಾಲದಲ್ಲಿ ಈ ವಿಧಾನದಿಂದ ಸಸ್ಯಗಳ ಆರೈಕೆ ಸುಲಭ. ಏಕೆಂದರೆ, ಮಳೆ ಮತ್ತು ತೇವಾಂಶವು ಅವುಗಳ ಬೆಳವಣಿಗೆಗೆ ಸೂಕ್ತ ವಾತಾವರಣ ಕಲ್ಪಿಸುತ್ತದೆ.
ಲಂಬ ತೋಟಗಾರಿಕೆಯ ಪ್ರಯೋಜನಗಳಿವು
ಜಾಗ ಉಳಿತಾಯ: ತೋಟವನ್ನು ನಿರ್ಮಿಸಲು ಹೆಚ್ಚಿನ ಸ್ಥಳವಿಲ್ಲದಿದ್ದರೆ, ಲಂಬ ತೋಟಗಾರಿಕೆ ಪರಿಪೂರ್ಣ ಆಯ್ಕೆಯಾಗಿದೆ. ಸಣ್ಣ ಅಪಾರ್ಟ್‌ಮೆಂಟ್‌ಗಳು ಅಥವಾ ಫ್ಲ್ಯಾಟ್‌ಗಳಲ್ಲಿಯೂ ಸಹ ನೀವು ಸುಲಭವಾಗಿ ಹಸಿರನ್ನು ತರಬಹುದು.
ಪರಿಸರಕ್ಕೆ ಉತ್ತಮ: ಲಂಬ ತೋಟಗಾರಿಕೆಯು ನಿಮ್ಮ ಮನೆಯನ್ನು ಸುಂದರವಾಗಿಸುತ್ತದೆ. ಜೊತೆಗೆ ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಗೋಡೆಗಳನ್ನು ತಂಪಾಗಿರಿಸುತ್ತದೆ. ಇದರಿಂದ ವಿದ್ಯುತ್ ಬಳಕೆಯು ಕಡಿಮೆಯಾಗುತ್ತದೆ.
ಮನೆಯ ಸೌಂದರ್ಯ ಹೆಚ್ಚಳ: ಹಚ್ಚ ಹಸಿರಿನ ಸಸ್ಯಗಳು ನಿಮ್ಮ ಮನೆಯ ಗೋಡೆಗಳು ಮತ್ತು ಬಾಲ್ಕನಿಗೆ ಹೊಸ ಲುಕ್ ನೀಡುತ್ತವೆ. ಮಳೆಗಾಲದಲ್ಲಿ ಇವುಗಳ ನೈಸರ್ಗಿಕ ಹೊಳಪು ನಿಮ್ಮ ಮನೆಯ ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ.
ನಿಮ್ಮ ಇಷ್ಟದ ತರಕಾರಿ ಬೆಳೆಯಬಹುದು: ಲಂಬ ತೋಟಗಾರಿಕೆಯ ವಿಧಾನದಿಂದ ನೀವು ಪಾಲಕ್, ಕೊತ್ತಂಬರಿ, ಮೆಣಸಿನಕಾಯಿ ಮತ್ತು ಟೊಮೆಟೊಗಳಂತಹ ಸಣ್ಣ ತರಕಾರಿಗಳನ್ನು ಸುಲಭವಾಗಿ ಬೆಳೆಯಬಹುದು. ತಾಜಾ ತರಕಾರಿಗಳು ನೇರವಾಗಿ ನಿಮ್ಮ ತೋಟದಿಂದ ನಿಮ್ಮ ಅಡುಗೆಮನೆಗೆ ತಲುಪುತ್ತವೆ.
ನೀರಿನ ಉಳಿತಾಯ: ಇದಕ್ಕೆ ನೀವು ಡ್ರಿಪ್ ನೀರಾವರಿ ವ್ಯವಸ್ಥೆ ಬಳಸಬೇಕು. ಇದರಿಂದ ನೀವು ನೀರಿನ ಬಳಕೆಯನ್ನು ಕಡಿಮೆ ಮಾಡಬಹುದು. ಮಾನ್ಸೂನ್‌ನಲ್ಲಿ ಮಳೆಯ ನೀರು ಸಸ್ಯಗಳಿಗೆ ಇನ್ನಷ್ಟು ಪ್ರಯೋಜನಕಾರಿ.
ಲಂಬ ತೋಟಗಾರಿಕೆ ಮಾಡುವುದು ಹೇಗೆ?
ನೀವು ಮೊದಲು, ಸಸ್ಯಗಳಿಗೆ ಸಾಕಷ್ಟು ಬೆಳಕು ಸಿಗುವ ಸ್ಥಳವನ್ನು ಆಯ್ಕೆಮಾಡಿ. ಉದಾಹರಣೆಗೆ ಬಾಲ್ಕನಿ ಅಥವಾ ಗೋಡೆ ಸೂಕ್ತ ಸ್ಥಳ. ಮಾರುಕಟ್ಟೆಯಲ್ಲಿ ಲಂಬ ತೋಟಗಾರಿಕೆಗಾಗಿ ವಿಶೇಷ ಚೌಕಟ್ಟುಗಳು ಮತ್ತು ಮಡಿಕೆಗಳು ಲಭ್ಯವಿದೆ. ನೀವು ಹಳೆಯ ಪ್ಲಾಸ್ಟಿಕ್ ಬಾಟಲಿಗಳು ಅಥವಾ ಡಬ್ಬಿಗಳನ್ನು ಸಹ ಬಳಸಬಹುದು.
ಮಳೆಗಾಲದಲ್ಲಿ ಮನಿ ಪ್ಲಾಂಟ್, ಫರ್ನ್, ಮನಿವೋರ್ಟ್ ಮತ್ತು ಇಂಗ್ಲಿಷ್ ಐವಿ ಸೇರಿದಂತೆ ಇತ್ಯಾದಿ ಸಸ್ಯಗಳನ್ನು ನೆಡುವುದು ಒಳ್ಳೆಯದು. ತರಕಾರಿಗಳನ್ನು ಬೆಳೆಯಲು ಪಾಲಕ್ ಮತ್ತು ಕೊತ್ತಂಬರಿ ಸೊಪ್ಪು ಉತ್ತಮ ಆಯ್ಕೆ. ಸಸ್ಯಗಳಿಗೆ ನಿಯಮಿತವಾಗಿ ನೀರು ಹಾಕಿ ಮತ್ತು ಅವುಗಳಿಗೆ ಕಾಲಕಾಲಕ್ಕೆ ಸಾವಯವ ಗೊಬ್ಬರ ಹಾಕಬೇಕು. ಬಲವಾದ ಗಾಳಿ ಅಥವಾ ಮಳೆ ಬೀಳದಂತೆ ನೋಡಿಕೊಳ್ಳಿ.
ಮಳೆಗಾಲಲ್ಲಿ ಲಂಬ ತೋಟಗಾರಿಕೆ ಏಕೆ ವಿಶೇಷ?
ಮಾನ್ಸೂನ್ ಅನ್ನು ಸಸ್ಯಗಳಿಗೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಮಳೆ ಮತ್ತು ತೇವಾಂಶವು ಸಸ್ಯಗಳ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಅವುಗಳಿಗೆ ಪೋಷಣೆ ನೀಡುತ್ತದೆ. ಮಳೆಗಾಲದಲ್ಲಿ ಲಂಬ ತೋಟಗಾರಿಕೆ ಮಾಡುವುದು ಸುಲಭ ಮಾತ್ರವಲ್ಲ. ಇದು ನಿಮ್ಮ ಮನೆಯನ್ನು ಹಸಿರಿನಿಂದ ತುಂಬಿಸುತ್ತದೆ. ಮನೆಯನ್ನು ಮಾತ್ರವಲ್ಲ, ಪರಿಸರವನ್ನು ಸಹ ರಕ್ಷಿಸುತ್ತದೆ. ಆದ್ದರಿಂದ, ಈ ಮಾನ್ಸೂನ್‌ನಲ್ಲಿ ನಿಮ್ಮ ಮನೆಯಲ್ಲಿ ಹಸಿರನ್ನು ತರಲು ನೀವು ಬಯಸಿದರೆ, ಲಂಬ ತೋಟಗಾರಿಕೆಯನ್ನು ಒಮ್ಮೆ ಟ್ರೈ ಮಾಡಿ. ಇದು ಕಡಿಮೆ ಜಾಗದಲ್ಲಿಯೂ ಹಸಿರಿನ ಸಿರಿ ನೀಡುತ್ತದೆ.
ಒಟ್ಟಾರೆ, ಲಂಬ ತೋಟಗಾರಿಕೆಯು ನಗರ ಪ್ರದೇಶಗಳಲ್ಲಿ ಹಸಿರನ್ನು ತರಲು ಒಂದು ಅತ್ಯುತ್ತಮ ಮಾರ್ಗ. ಇದು ಪರಿಸರ ಸ್ನೇಹಿಯಾಗಿದ್ದು, ಸ್ಥಳವನ್ನು ಉಳಿಸುತ್ತದೆ. ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮಳೆಗಾಲದ ಸಮಯದಲ್ಲಿ ಇದು ಹೆಚ್ಚು ಪ್ರಯೋಜನಕಾರಿ. ಮಳೆ ಮತ್ತು ತೇವಾಂಶವು ಸಸ್ಯಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತದೆ.



Click it and Unblock the Notifications



