Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ನಿಂಬೆ-ಹಸಿ ಮೆಣಸು ಕಟ್ಟುವಾಗ ನೀವು ಮಾಡುತ್ತಿರುವ ತಪ್ಪುಗಳಿವು..! ಇನ್ನೆಂದು ಮಾಡಬೇಡಿ..!
ಹಿಂದೂ ಧರ್ಮದಲ್ಲಿ ಹಲವು ಸಂಪ್ರದಾಯಗಳು, ಆಚರಣೆಗಳಿವೆ. ಅದರಲ್ಲಿ ಕೆಲವೊಂದನ್ನು ನಾವು ಚಾಚು ತಪ್ಪದೆ ಮಾಡುತ್ತಿರುತ್ತೇವೆ. ದೇವರ ಪೂಜೆಯಿಂದ ಹಿಡಿದು ಕೆಲವೊಂದು ಸಣ್ಣಪುಟ್ಟ ಆಧ್ಯಾತ್ಮಿಕ ನಂಬಿಕೆಗಳನ್ನ ನಾವು ಶ್ರದ್ಧಾ ಭಕ್ತಿಯಿಂದ ಮಾಡುತ್ತಿರುತ್ತೇವೆ. ಅಂತಹ ನಂಬಿಕೆಯಲ್ಲಿ ಈ ನಿಂಬೆ ಹಣ್ಣು ಮೆಣಸಿನ ಕಾಯಿ ಸುರಿದು ಬಾಗಿಲಿಗೆ ಕಟ್ಟುವುದಾಗಿದೆ.
ನಿಂಬೆ ಹಾಗೂ ಹಸಿ ಮೆಣಸಿನಕಾಯಿಯನ್ನು ಮನೆಯ ದ್ವಾರ ಬಾಗಿಲಿನ ಮೇಲೆ ಕಟ್ಟುತ್ತಾರೆ. ಇದಕ್ಕೆ ಹಲವು ರೀತಿಯ ನಂಬಿಕೆಗಳು ಸುತ್ತಿಕೊಂಡಿದೆ. ಹಾಗೆ ವೈಜ್ಞಾನಿಕ ಕಾರಣವೂ ಕೂಡ ಇದೆ. ಬಹುತೇಕ ಎಲ್ಲರ ಮನೆಯಲ್ಲಿ ಶುಕ್ರವಾರದಂದು ಬೆಳಗ್ಗೆ ಪೂಜೆ ಸಲ್ಲಿಸಿದ ಬಳಿಕ ಅಥವಾ ಸಂಜೆ ಪೂಜೆ ಮಾಡಿದ ಬಳಿಕ ಆರತಿಯಲ್ಲಿ ಈ ನಿಂಬೆಯನ್ನು ಕಪ್ಪಾಗಿಸಿ ಬಳಿಕ ಬಾಗಿಲಿಗೆ ಕಟ್ಟುತ್ತಾರೆ.

ಒಂದು ವಾರಗಳ ಕಾಲ ಈ ನಿಂಬೆ ಬಾಗಿಲಿನ ಮೇಲೆ ಇರುತ್ತೆ. ಇದರ ಜೊತೆಗೆ ಹಸಿ ಮೆಣಸು ಸಹ ಸುರಿದಿರುತ್ತಾರೆ. ಹಾಗಾದ್ರೆ ಇದನ್ನು ಕಟ್ಟುವುದೇಕೆ? ಮನೆಯ ಮುಂದೆ ಅಥವಾ ಅಂಗಡಿ, ದ್ವಾರ ಬಾಗಿಲಿಗೆ ಇದನ್ನು ನೇತು ಹಾಕುವುದರಿಂದ ಯಾರ ಕೆಟ್ಟ ಕಣ್ಣು ಬೀಳುವುದಿಲ್ಲ. ಇದು ಸಂಪತ್ತನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ.
ಅಂಗಡಿಯ ಮೇಲೆ ದುಷ್ಟ ಜನರ ಕಣ್ಣು ಬೀಳುವುದಿಲ್ಲ ಎಂಬ ನಂಬಿಕೆ ಇದೆ. ಹೀಗಾಗಿ ದೇವಿಗೆ ಮಾಡಿದ ಆರತಿಯಲ್ಲಿ ಈ ನಿಂಬೆಯನ್ನು ಸುಟ್ಟು ಬಳಿಕ ಕಟ್ಟಲಾಗುತ್ತದೆ. ಹಳೆಯ ನಿಂಬೆಯನ್ನು ಕಿತ್ತೆಸೆಯಲಾಗುತ್ತದೆ. ಆದ್ರೆ ಈ ರೀತಿ ನಿಂಬೆ ಹಾಗೂ ಮೆಣಸು ಕಟ್ಟುವಾಗ ನಾವು ಕೆಲವು ತಪ್ಪುಗಳ ಮಾಡುತ್ತಿರುತ್ತೇವೆ. ನಮ್ಮ ಅರಿವಿಲ್ಲದೆ ಮಾಡಿದ ತಪ್ಪುಗಳು ನಮ್ಮ ಪೂಜೆ ಫಲಿಸದಂತೆ ಮಾಡಬಹುದು.
ಹಾಗಾದ್ರೆ ಈ ನಿಂಬೆ ಮೆಣಸಿನ ಹಾರ ಕಟ್ಟುವಾಗ ನಾವು ಮಾಡುತ್ತಿರುವ ತಪ್ಪುಗಳಾದರೂ ಏನು? ಯಾವ ತಪ್ಪನ್ನು ಮಾಡಬಾರದು ಎಂಬುದನ್ನು ನಾವಿಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ಬೆಸ ಸಂಖ್ಯೆಯಲ್ಲಿ ಇರಬೇಕು
ಈ ನಿಂಬೆ ಹಾಗೂ ಹಸಿ ಮೆಣಸಿನ ದಾರವನ್ನು ಕೆಲವರು ಮನೆಯಲ್ಲೇ ರೆಡಿ ಮಾಡಿಕೊಳ್ಳುತ್ತಾರೆ. ಮತ್ತೆ ಕೆಲವರು ಅಂಗಡಿಗಳಿಂದ ತಂದು ಒಮ್ಮೆ ತೊಳೆದು ಅದನ್ನು ಪೂಜೆಗೆ ಬಳಸುತ್ತಾರೆ. ಆದ್ರೆ ನೆನಪಿನಲ್ಲಿಡಿ, ಈ ನಿಂಬೆ, ಹಸಿಮೆಣಸಿನ ಹಾರವು ಬೆಸ ಸಂಖ್ಯೆಯಲ್ಲಿರಬೇಕು. ಅಂದರೆ 1 ನಿಂಬೆ ಹಣ್ಣು ಹಾಗೂ 4 ಹಸಿ ಮೆಣಸು ಇದ್ದರೆ ಒಟ್ಟು ಸಂಖ್ಯೆ 5 ಎಂದಾಗುತ್ತದೆ. ಈ ರೀತಿ ಎಲ್ಲಾ ಒಟ್ಟುಗೂಡಿಸಿದರೆ ಬೆಸ ಸಂಖ್ಯೆ ಬರುವಂತಿರಬೇಕು. ಒಂದು ವೇಳೆ ಸಮ ಸಂಖ್ಯೆ ಬಂದರೆ ಒಂದು ಹಸಿ ಮೆಣಸನ್ನು ಅದರಿಂದ ತೆಗೆದು ನಂತರ ಪೂಜೆ ಸಲ್ಲಿಸಿ ಕಟ್ಟುವುದು ಉತ್ತಮ.
ನಿಂಬೆ-ಹಸಿಮೆಣಸು ಇರಬೇಕಾದ ಸ್ಥಾನ
ನಿಂಬೆ ಹಾಗೂ ಹಸಿ ಮೆಣಸನ್ನು ಹೇಗೆ ಬೇಕಾದರೂ ಹಾಗೆ ಕಟ್ಟಿ ನೇತು ಹಾಕಬಾರದಂತೆ. ಮೊದಲಿಗೆ 2 ಹಸಿ ಮೆಣಸು ಸುರಿದು ನಂತರ ನಿಂಬೆ ಹಣ್ಣು ಮಧ್ಯದಲ್ಲಿರುವಂತೆ ಹಾಕಿ ಮೇಲೆ ಮತ್ತೆ 2 ಹಸಿ ಮೆಣಸನ್ನು ಸುರಿದುಕೊಳ್ಳಬೇಕು. ಹಾಗೆ ಬೆಸ ಸಂಖ್ಯೆಯೂ ಬರುವಂತೆ ನೋಡಿಕೊಳ್ಳಬೇಕು.
ಕೆಂಪು ಬಣ್ಣದ ಹೂವು ಬಳಸಬೇಡಿ
ಈ ನಿಂಬೆ-ಹಸಿ ಮೆಣಸಿನ ಹಾರವನ್ನು ಪೂಜೆ ಸಲ್ಲಿಸಿ ಕಟ್ಟಿದ ಬಳಿಕ ಅದಕ್ಕೊಂದು ಹೂವನ್ನು ಇಡುತ್ತಾರೆ. ಆದ್ರೆ ಕೆಂಪು ಬಣ್ಣದಿಂದ ಕೂಡಿರುವ ಹೂವನ್ನು ಇಡಬಾರದು ಎನ್ನಲಾಗುತ್ತದೆ. ಅಲ್ಲಿ ಹಳದಿ, ಬಿಳಿ ಬಣ್ಣದ ಹೂವು ಇಟ್ಟರೆ ಒಳಿತಂತೆ. ಹಾಗೆ ಹಸಿ ಮೆಣಸಿನ ಕಾಯಿಯ ತೊಟ್ಟು ತೆಗೆದಿರಬಾರದು. ಕೆಲವರು ತೊಟ್ಟು ತೆಗೆದು ಈ ಹಾರ ಮಾಡುತ್ತಾರೆ. ಹಾಗೆ ಮಾಡಬಾರದು ಎನ್ನಲಾಗುತ್ತದೆ.
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಹಾಗೂ ಅಂತರ್ಜಾಲದಲ್ಲಿ ನೀಡಲಾಗಿರುವ ಮಾಹಿತಿಯನ್ನು ಆಧರಿಸಿದೆ. ಬೋಲ್ಡ್ ಸ್ಕೈ ಕನ್ನಡ ಹಾಗೂ ಲೇಖಕರಿಗೂ ಈ ಮಾಹಿತಿಗೂ ಸಂಬಂಧವಿಲ್ಲ. ನೀವು ಇದನ್ನು ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗುತ್ತದೆ)



Click it and Unblock the Notifications
