Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಮನೆಯಲ್ಲಿ ಈ ಒಂದು ಮರ ನೆಟ್ಟರೆ ವಾಸ್ತು ದೋಷ ನಿವಾರಣೆ..! ರಾಹು-ಕೇತು ದೋಷವೂ ಅಂತ್ಯ..!
ಮನೆ ಕಟ್ಟುವಾಗ ವಾಸ್ತು ಪ್ರಕಾರವಾಗಿ ಕಟ್ಟಲಾಗುತ್ತದೆ, ವಾಸ್ತುಶಸ್ತ್ರದಲ್ಲಿ ಹಾಗೂ ಸಂಖ್ಯಾಶಾಸ್ತ್ರಗಳ ಕೆಲವು ನಿಯಮಗಳ ಅನ್ವಯ ಮನೆಯ ಅಡಿಪಾಯದಿಂದ ಹಿಡಿದು ಎಲ್ಲಾ ಪ್ರಕ್ರಿಯೆಗಳು ನಡೆಯುತ್ತವೆ. ಏಕೆಂದರೆ ವಾಸ್ತುವಿನಲ್ಲಿ ಹೇಳುವಂತೆ, ದೋಷಯುಕ್ತ ಮನೆ ನಿರ್ಮಾಣವು ಇಡೀ ಮನೆಯ ಶಾಂತಿ ಹಾಳು ಮಾಡುತ್ತದೆ.
ಆದರೆ ಮನೆಯನ್ನು ಬಿಟ್ಟು ಮನೆಯ ಸದಸ್ಯೆಲ್ಲೇ ಕೆಲವು ದೋಷಗಳು ಕಾಣಿಸಿಕೊಳ್ಳುತ್ತವೆ. ಹೌದು ಸದಸ್ಯರ ಪೈಕಿ ಯಾರಿಗಾದರು ಶನಿ ದೋಷ, ರಾಹು ಕೇತು ದೋಷವಿರುವುದು ನಾನು ನೋಡಬಹುದು. ರಾಹು-ಕೇತು ಹಾಗೂ ಶನಿ ದೋಷದ ಕಾರಣಕ್ಕೆ ಅವರಲ್ಲಿ ಹಲವಾರು ಸಮಸ್ಯೆಗಳು ಕಂಡುಬರುತ್ತದೆ. ಅವರಲ್ಲಿ ಅನಾರೋಗ್ಯ ಸಮಸ್ಯೆ ಆರ್ಥಿಕ ಸಮಸ್ಯೆಗಳಂತಹ ಗಂಭೀತ ಸ್ವರೂಪದ ಸಮಸ್ಯೆಗೆ ಈ ರಾಹು, ಶನಿ ಕಾರಣ ಎಂದು ಹೇಳಲಾಗುತ್ತದೆ.

ಕೆಲವರು ಈ ದೋಷಗಳ ನಿವಾರಣೆಗೆ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ. ಸ್ವಾಮೀಜಿ, ಮಂತ್ರವಾದಿಗಳ ಮೊರೆ ಹೋಗಿ ಪೂಜೆ, ಹೋಮ, ವ್ರತ ಹೀಗೆ ಎಲ್ಲಾ ರೀತಿಯ ಕಸರತ್ತು ಮಾಡುತ್ತಾರೆ, ಆದರೆ ಇಷ್ಟು ಮಾಡಿದರೂ ಅವರ ದೋಷಗಳು ನಿವಾರಣೆಯಾಗಿರುವುದಿಲ್ಲ. ಹೀಗಾಗಿ ಜೀವನದಲ್ಲಿ ಅವರು ಜಿಗುಪ್ಸೆಗೆ ಒಳಗಾಗಿರುತ್ತಾರೆ.
ಆದರೆ ಇಷ್ಟೆಲ್ಲಾ ಪ್ರಯತ್ನದ ನಡುವೆ ಕೆಲವು ಸಣ್ಣ ಪುಟ್ಟ ಪ್ರಯತ್ನವನ್ನೂ ಸೇರಿಸುವುದು ಈ ದೋಷಗಳ ನಿವಾರಣೆಗೆ ದಾರಿಯಾಗುತ್ತದೆ. ಹೌದು ಈ ದೋಷಗಳ ನಿವಾರಣೆಗೆ ವಾಸ್ತು ಶಾಸ್ತ್ರದಲ್ಲಿಯೇ ಪರಿಹಾರ ಸಹ ನೀಡಲಾಗಿದೆ. ಹಾಗಾದ್ರೆ ಯಾವುದೂ ಈ ಪರಿಹಾರಗಳು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರಾಹು-ಕೇತು ಶನಿ ದೋಷಕ್ಕೆ ಬೇವಿನ ಮರದಲ್ಲಿ ಪರಿಹಾರವಿದೆಯಂತೆ. ಹೌದು ಬೇವಿನ ಮರ ಎಂದ ಕ್ಷಣ ನಮಗೆ ಅದರ ಆರೋಗ್ಯಕರ ಲಾಭಗಳ ಕುರಿತು ನೆನಪಾಗಬಹುದು. ಆದರೆ ವಾಸ್ತುಶಾಸ್ತ್ರದ ಪ್ರಕಾರ ಬೇವಿನ ಮರ ನೆಡುವುದು ರಾಹು-ಕೇತು ಹಾಗೂ ಶನಿ ಸಮಸ್ಯೆಗೆ ಪರಿಹಾರವಿದೆ. ಬೇವಿನ ಮರಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯ ಇರುವುದು ನಾವು ಗಮನಿಸಿದ್ದೇವೆ. ಅದರಂತೆ ಬೇವಿನ ಮರ ನೆಡುವುದು ಸಹ ಹಲವು ಪ್ರಯೋಜನಗಳಿಗೆ ದಾರಿಯಾಗಿದೆ.
ವಿಶೇಷವಾದ ಆರೋಗ್ಯ ಅಂಶ ಹೊಂದಿರುವ ಬೇವಿನ ಮರವು ಧಾರ್ಮಿಕ ನಂಬಿಕೆಗಳಲ್ಲಿ ತನ್ನ ಪ್ರಮುಖ ಪಾತ್ರ ಉಳಿಸಿಕೊಂಡಿದೆ. ಅಂದರೆ ಬೇವಿನ ಸೊಪ್ಪಿನ ಬಳಕೆಯಿಂದ ಶನಿ ಮತ್ತು ಮಂಗಳ ದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯು ಕೇತುವಿನಿಂದ ಪ್ರಭಾವಕ್ಕೆ ಒಳಗಾಗಿದ್ದರೆ ನೀರಿನಲ್ಲಿ ಬೇವಿನ ಎಲೆಗಳ ಹಾಕಿಕೊಂಡು ಸ್ನಾನ ಮಾಡುವುದರಿಂದ ಕೇತುವಿನ ಪ್ರಭಾವವು ದೂರವಾಗುತ್ತದೆ. ಬೇವಿನ ಮರದಿಂದ ಮಾಡಿದ ಜಪಮಾಲೆಯನ್ನು ಧರಿಸುವುದರಿಂದ ಕುಷ್ಠರೋಗ ನಿವಾರಣೆಯಾಗುತ್ತದೆ. ಅಲ್ಲದೇ ಮನೆಯ ಸುತ್ತ ಬೇವಿನ ಸೊಪ್ಪನ್ನು ನೇತು ಹಾಕಿದರೆ ಯಾವುದೇ ನಕಾರಾತ್ಮಕ ಶಕ್ತಿ ಮನೆಗೆ ಬರುವುದಿಲ್ಲ ಎಂದು ನಂಬಲಾಗಿದೆ.
ಮನೆಯ ಭಾಗ ದಿಕ್ಕಿನಲ್ಲಿ ಬೇವಿನ ಮರ ನೆಡಬೇಕು? ಯಾವಾಗ ಪೂಜೆ ಮಾಡಬೇಕು?
ವಾಸ್ತು ಶಾಸ್ತ್ರದಲ್ಲಿ ಬೇವಿನ ಮರ ನೆಡಲು ಸಹ ನಿಯಮವಿದೆ. ಬೇವಿನ ಮರವನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಡಬೇಕಂತೆ. ಇದರಿಂದ ಶನಿ ದೋಷ, ಮಂಗಳ ದೋಷ ನಿವಾರಣೆಯಾಗಲಿದೆ ಎಂದು ನಂಬಲಾಗಿದೆ. ಬೇವಿನ ಮರವು ಶನಿ ಮತ್ತು ಕೇತುವನ್ನು ಒಲಿಸುವ ಶಕ್ತಿ ಹೊಂದಿದೆ. ವಾಯುವ್ಯ ಮೂಲೆಯಲ್ಲಿ ಬೇವಿನ ಮರವನ್ನು ನೆಟ್ಟರೆ ಹಣ ಮತ್ತು ಶತ್ರುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತವೆ. ಮಕರ ಮತ್ತು ಕುಂಭ ರಾಶಿಯವರು ಬೇವಿನ ಮರವನ್ನು ನೆಟ್ಟರೆ ಅದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಅಲ್ಲದೆ ಬೇವಿನ ಮರಕ್ಕೆ ಶನಿವಾರ ಪೂಜೆ ಸಲ್ಲಿಸಬೇಕು ಎಂದು ಸಹ ಹೇಳಲಾಗಿದೆ.



Click it and Unblock the Notifications