Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಕ್ವೇರಿಯಂಗೆ ಫಿಲ್ಟರ್ ಅಳವಡಿಸಬೇಕೆ?

ಅಕ್ವೇರಿಯಂಗೆ ಉತ್ತಮವಾದ ಫಿಲ್ಟರ್ ಆಯ್ಕೆ ಮಾಡುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ.
1. ಅಕ್ವೇರಿಯಂನಲ್ಲಿ ಗುಳ್ಳೆಗಳು: 3-4 ಮೀನಿರುವ ಸಣ್ಣ ಅಕ್ವೇರಿಯಂನಲ್ಲಿ ಎಲೆಕ್ಟ್ರಾನಿಕ್ ವಿಧಾನದಿಂದ ಆಮ್ಲಜನಕ ಪೂರೈಕೆ ಮಾಡುವ ಅವಶ್ಯಕತೆ ಇಲ್ಲ. ಅಕ್ವೇರಿಯಂನ ತಳಭಾಗದಲ್ಲಿ ನೀರಿನ ಗುಳ್ಳೆಗಳು ಬರುತ್ತಿದ್ದರೆ ಮೀನುಗಳಿಗೆ ಆಮ್ಲಜನಕದ ಪೂರೈಕೆಯಾಗುತ್ತದೆ.
2. ಪಂಪ್ ಮಾಡುವ ಫಿಲ್ಟರ್: ತುಂಬಾ ಮೀನು ಇರುವ ದೊಡ್ಡ ಅಕ್ವೇರಿಯಂನಲ್ಲಿ ಉತ್ತಮವಾದ ಅಕ್ವೇರಿಯಂ ಫಿಲ್ಟರ್ ಬೇಕಾಗುತ್ತದೆ. ಅಕ್ವೇರಿಯಂಯನ್ನು ಆಗಾಗ ತೊಳೆಯಲು ಇಷ್ಟಪಡದವರು ನೀರು ಪಂಪ್ ಮಾಡುವ ಫಿಲ್ಟರ್ ಜೋಡಿಸಿದರೆ ಮೀನುಗಳಿರುವ ನೀರು ಶುದ್ಧವಾಗಿದ್ದು ಅವುಗಳಿಗೆ ಉತ್ತಮವಾದ ಆಮ್ಲಜನಕ ಕೂಡ ಪೂರೈಕೆಯಾಗುತ್ತದೆ.
3. ನೀರಿನ ಉಷ್ಣತೆ: ಫಿಲ್ಟರ್ ಅಳವಡಿಸುವುದರಿಂದ ನೀರಿಗೆ ಆಮ್ಲಜನಕ ಪೂರೈಕೆ ಮಾಡುವುದಷ್ಟೆ ಅಲ್ಲ ನೀರಿನ ಉಷ್ಣತೆಯನ್ನು ಕಾಪಾಡುತ್ತದೆ. ಟ್ರೋಪಿಕಲ್‌ನಂತಹ ಮೀನುಗಳು ತುಂಬಾ ತಣ್ಣನೆಯ ನೀರಿನಲ್ಲಿ ಬದುಕುವುದಿಲ್ಲ. ಅಂತಹ ಮೀನನ್ನು ಸಾಕುವುದಾದರೆ ಫಿಲ್ಟರ್ ಅವಶ್ಯಕ.
ಈ ರೀತಿ ನೀರಿನ ಪಂಪ್ ಅನ್ನು ಸಾಧಾರಣ ವೇಗದಲ್ಲಿ ಇಡಬೇಕು. ತುಂಬಾ ವೇಗವಾಗಿ ಪಂಪ್ ಮಾಡಿದರೆ ಮೀನುಗಳಿಗೆ ಓಡಾಡಲು ಕಷ್ಟವಾಗುತ್ತದೆ.
4. ಉಸಿರಾಟ: ಅಕ್ವೇರಿಯಂನಲ್ಲಿ ಮೀನು ಮೇಲ್ಭಾಗದಲ್ಲಿ ಈಜಾಡುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ಅವುಗಳಿಗೆ ಆಮ್ಲನಜನಕದ ಪೂರೈಕೆ ಸರಿಯಾಗಿ ಆಗದಿದ್ದಾಗ ಉಸಿರಾಟಕ್ಕಾಗಿ ಅವು ಅಕ್ವೇರಿಯಂನ ಮೇಲ್ಭಾಗಕ್ಕೆ ಬಂದಿರುತ್ತವೆ. ಈ ರೀತಿ ಕಂಡು ಬಂದರೆ ಅವುಗಳಿಗೆ ಆಮ್ಲಜನಕ ಸುಲಭವಾಗಿ ಸಿಗುವಂತೆ ಸೌಕರ್ಯ ಒದಗಿಸಿ ಕೊಡಬೇಕು.



Click it and Unblock the Notifications
